ಸುಬ್ರಹ್ಮಣ್ಯದಲ್ಲಿ ನರೇಗಾ ದಿವಸ್ ಆಚರಣೆ: ಶಾಶ್ವತ ಕೆಲಸಕ್ಕೆ ಆದ್ಯತೆ ನೀಡಿ: ಡಾ| ಕುಮಾರ್
Team Udayavani, Feb 3, 2022, 6:05 AM IST
ಸುಬ್ರಹ್ಮಣ್ಯ: ಉದ್ಯೋಗ ಖಾತರಿ ಯೋಜನೆಯಡಿ ನಡೆಸಲಾಗುವ ಕೆಲಸಗಳು ಗ್ರಾಮದ ಜನರ ಮನಸ್ಸಲ್ಲಿ ಉಳಿಯುವಂತಿರಬೇಕು. ಗುರಿ ಸಾಧನೆಯ ಜತೆಗೆ ಗ್ರಾಮದ ಅಭಿವೃದ್ಧಿಯಲ್ಲಿ ಶಾಶ್ವತವಾಗಿರುವ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಕುಮಾರ್ ಹೇಳಿದರು.
ಕರ್ನಾಟಕ ರಾಜ್ಯ ಮಾಹಾತ್ಮಾ ಗಾಂಧಿ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘ, ದ.ಕ. ಜಿಲ್ಲಾ ಘಟಕ ಮಂಗಳೂರು ವತಿಯಿಂದ ಸುಬ್ರಹ್ಮಣ್ಯದ ಕುಮಾರಧಾರಾ ಸ್ನಾನ ಘಟ್ಟದಲ್ಲಿ ಆಚರಿಸಲಾದ ನರೇಗಾ ದಿವಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರಕಾರ ಜಾರಿಗೆ ತಂದ ಯಾವುದೇ ಯೋಜನೆ ಯಶಸ್ವಿಯಾಗುವಲ್ಲಿ ಸಮರ್ಥ ಕಾರ್ಯಪಡೆಯ ಪಾತ್ರ ಬಹುಮುಖ್ಯ. ಸರಕಾರಿ ವ್ಯವಸ್ಥೆಯಲ್ಲಿ ಯೋಜನೆಗಳ ಯಶಸ್ಸಿಗೆ ಸರಕಾರಿ ಅಧಿಕಾರಿಗಳು, ನೌಕರರ ಜತೆಗೆ ಆಯಾ ಯೋಜನೆಯ ಸಿಬಂದಿಯ ಸಹಕಾರ ಬೇಕಾಗಿರುತ್ತದೆ. ಅದು ನಮಗೆ ಉತ್ತಮ ರೀತಿಯಲ್ಲಿ ಸಿಗುತ್ತಿದೆ ಎಂದರು.
70 ಕೋಟಿ ರೂ.ಗೂ ಅಧಿಕ ಕಾಮಗಾರಿ
ಜಿಲ್ಲೆಯಲ್ಲಿ 16 ಲಕ್ಷ ಮಾನವ ದಿನಗಳನ್ನು ಹಾಕಿಕೊಂಡಿದ್ದೇವೆ. ವರ್ಷಕ್ಕೆ ಸುಮಾರು 70 ಕೋಟಿ ರೂ.ಗೂ ಅಧಿಕ ವೆಚ್ಚದ ಕಾಮಗಾರಿಗಳನ್ನು ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಡಾ| ನಿಂಗಯ್ಯ, ಸುಳ್ಯ, ಪುತ್ತೂರು, ಬೆಳ್ತಂಗಡಿ ಮತ್ತು ಮಂಗಳೂರು ತಾ.ಪಂ.ಗಳ ಕಾರ್ಯನಿರ್ವಹಣಾಧಿಕಾರಿಗಳಾದ ಭವಾನಿಶಂಕರ, ನವೀನ್ ಕುಮಾರ್ ಭಂಡಾರಿ, ಕುಸುಮಾಧರ ಬಿ., ಎನ್.ಜಿ. ನಾಗರಾಜ, ದ.ಕ. ಜಿ.ಪಂ. ಅಭಿವೃದ್ಧಿ ಅಧಿಕಾರಿಗಳ ಸಂಘದ ಅಧ್ಯಕ್ಷ ಶ್ರೀನಾಗೇಶ್, ಪುತ್ತೂರು ತಾಲೂಕು ನರೇಗಾ ಸಹಾಯಕ ನಿರ್ದೇಶಕಿ ಶೈಲಜಾ ಭಟ್, ಸುಬ್ರಹ್ಮಣ್ಯ ಗ್ರಾ.ಪಂ. ಅಧ್ಯಕ್ಷೆ ಲಲಿತಾ ಗುಂಡಡ್ಕ, ಉಪಾಧ್ಯಕ್ಷೆ ಸವಿತಾ ಭಟ್, ಸುಬ್ರಹ್ಮಣ್ಯ ಪಿಡಿಒ ಯು.ಡಿ. ಶೇಖರ್ ವೇದಿಕೆಯಲ್ಲಿದ್ದರು.
ಮಹಾತ್ಮಾ ಗಾಂಧಿ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘದ ದ.ಕ.ಜಿಲ್ಲಾ ಘಟಕದ ಅಧ್ಯಕ್ಷ ಕಿಶನ್ ಸ್ವಾಗತಿಸಿ, ಖಜಾಂಚಿ ವಿನೋದ್ ವಂದಿಸಿದರು. ನರೇಗಾ ಜಿಲ್ಲಾ ಐಇಸಿ ಸುನೀತಾ ಕಾರ್ಯಕ್ರಮ ನಿರೂಪಿಸಿದರು.
ಇದನ್ನೂ ಓದಿ:ಸುಗಮ ಕಲಾಪಕ್ಕೆ ಸಂಸದರು ನೆರವು ನೀಡಲಿ: ರಾಜ್ಯಸಭೆ ಸಭಾಪತಿ
ಸಮ್ಮಾನ
ನರೇಗಾ ಯೋಜನೆಯಡಿ 100 ದಿವಸ ಕೆಲಸ ಮಾಡಿದವರನ್ನು ಗೌರವಿಸಲಾಯಿತು. ಸ್ವಚ್ಛ ಗ್ರಾಮ ಮಾಡುವ ಸಲುವಾಗಿ ಕಸದ ಬುಟ್ಟಿಗಳನ್ನು ವಿತರಿಸಲಾಯಿತು. ದ.ಕ. ಜಿಲ್ಲಾ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘದ ಕ್ಯಾಲೆಂಡರ್ ಮತ್ತು ಡೈರಿ ಬಿಡುಗಡೆ ಮಾಡಲಾಯಿತು. ಸಭೆಯ ಬಳಿಕ ಕುಮಾರಧಾರಾ ಸ್ನಾನಘಟ್ಟ ಶುಚಿಗೊಳಿಸಲಾಯಿತು.
ಹಕ್ಲಾಡಿ ಶಾಲೆಯಲ್ಲಿ ಉಡುಪಿ
ಜಿಲ್ಲಾ ಮಟ್ಟದ ನರೇಗೋತ್ಸವ
ಕುಂದಾಪುರ: ನರೇಗಾ ದಿವಸ್ ಅಂಗವಾಗಿ ಉಡುಪಿ ಜಿಲ್ಲಾ ಮಟ್ಟದ ನರೇಗೋತ್ಸವವನ್ನು ಬುಧವಾರ ಹಕ್ಲಾಡಿ ಗ್ರಾಮದ ಸರಕಾರಿ ಮಾದರಿ ಹಿ.ಪ್ರಾ. ಶಾಲೆಯಲ್ಲಿ ಆಚರಿಸಲಾಯಿತು.
ಜಿ.ಪಂ. ಉಪ ಕಾರ್ಯದರ್ಶಿ ಕಿರಣ್ ಪಡೆ°àಕರ್ ಹಾಗೂ ಹಕ್ಲಾಡಿ ಗ್ರಾ.ಪಂ. ಅಧ್ಯಕ್ಷ ಚೇತನ್ ಉದ್ಘಾಟಿಸಿದರು. ಜಿ.ಪಂ. ಯೋಜನಾ ನಿರ್ದೇಶಕ ಬಾಬು ಎಂ. ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ತುಬಚಿ- ಬಬಲೇಶ್ವರ ಏತ ನೀರಾವರಿ: 3,048 ಎಕರೆ ಸ್ವಾಧೀನ, ಹಣ ಬಿಡುಗಡೆಗೆ ಎಂ.ಬಿ.ಪಾಟೀಲ ಸೂಚನೆ
Vijayapura; ಕಾರ್ಮಿಕರ ಕೂಡಿ ಹಾಕಿ ರಾಕ್ಷಸಿ ಕೃತ್ಯ: ಎಲ್ಲ 5 ಆರೋಪಿಗಳ ಬಂಧನ
Tarikere: ತಂದೆ ಸಾವಿನ ವಿಷಯ ಗೊತ್ತಿಲ್ಲದೆ ಹಸೆಮಣೆ ಏರಿದ ಮಗಳು!
Padubidri: ಸ್ಕೂಟಿಗೆ ಈಚರ್ ವಾಹನ ಢಿಕ್ಕಿ; ಸವಾರನಿಗೆ ಗಾಯ
BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.