ಮೋದಿಗೆ ಖರ್ಗೆ ಛಾಟಿ, ಈಶ್ವರಪ್ಪಗೆ ಸಿದ್ದು ಧಮ್ಕಿ
ಮೋದಿಗೆ ಖರ್ಗೆ ಛಾಟಿ, ಈಶ್ವರಪ್ಪಗೆ ಸಿದ್ದು ಧಮ್ಕಿ
Team Udayavani, May 13, 2019, 3:10 AM IST
ಆಡಳಿತಾರೂಢ ಮೈತ್ರಿ ಪಕ್ಷಗಳು ಹಾಗೂ ಪ್ರತಿಪಕ್ಷ ಬಿಜೆಪಿ ಪಾಲಿಗೆ ಪ್ರತಿಷ್ಠೆಯ ಕಣವಾಗಿರುವ ಕುಂದಗೋಳ ಹಾಗೂ ಚಿಂಚೋಳಿ ಕ್ಷೇತ್ರಗಳಲ್ಲಿ ಪ್ರಚಾರದ ಭರಾಟೆ ಜೋರಾಗಿದ್ದು, ರಾಜಕೀಯ ನಾಯಕರು ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ.
ಈ ಮಧ್ಯೆ, ಚಿಂಚೋಳಿಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಮೋದಿ ವಿರುದ್ಧ ಏಕವಚನದಲ್ಲೇ ಟೀಕಾಪ್ರಹಾರ ನಡೆಸಿದರೆ, ಸಿದ್ದರಾಮಯ್ಯನವರು ತಾಕತ್ತಿದ್ದರೆ ತಾವು ಸಿಎಂ ಆಗ್ತೀನೆ ಎಂದು ಬಹಿರಂಗವಾಗಿ ಹೇಳಲಿ ಎಂದು ಈಶ್ವರಪ್ಪನವರಿಗೆ ಸವಾಲು ಹಾಕಿದ್ದಾರೆ. ಇದೇ ವೇಳೆ, ಬಿಜೆಪಿ ನಾಯಕರೂ ಕಾಂಗ್ರೆಸ್ ವಿರುದ್ಧ ಟೀಕೆಗಳ ಸುರಿಮಳೆ ಸುರಿಸಿದ್ದಾರೆ. ಉಭಯ ಕ್ಷೇತ್ರಗಳಲ್ಲಿ ಭಾನುವಾರ ನಡೆದ ರಾಜಕೀಯ ವಾಕ್ಸಮರದ ಸಣ್ಣ ಝಲಕ್ ಇಲ್ಲಿದೆ.
ಕಾಂಗ್ರೆಸ್ 40ಕ್ಕೂ ಅ ಧಿಕ ಸೀಟು ಗೆದ್ದರೆ ಮೋದಿ ನೇಣು ಹಾಕಿಕೊಳ್ತಾನಾ?:
ಚಿಂಚೋಳಿ: “ಅಬ್ ಏಕ್ ಬಾರ್ ಮೋದಿ ಸರ್ಕಾರ್” ಎಂದು ತನಗೆ ತಾನೇ ಹೇಳಿಕೊಳ್ಳುವ ಮೋದಿ, ಕಾಂಗ್ರೆಸ್ ಪಕ್ಷ 40 ಸೀಟು ಗೆಲ್ಲುತ್ತದೆಯೇ ಎಂದು ಟೀಕಿಸುತ್ತಾನೆ. ಒಂದು ವೇಳೆ, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಅದಕ್ಕಿಂತ ಜಾಸ್ತಿ ಸೀಟು ಬಂದರೆ ದಿಲ್ಲಿಯ ವಿಜಯಾ ಚೌಕ್‌ನಲ್ಲಿ ಮೋದಿ ನೇಣು ಹಾಕಿಕೊಳ್ಳುತ್ತಾನಾ?’. ಇದು ಸಂಸದ ಡಾ| ಮಲ್ಲಿಕಾರ್ಜುನ ಖರ್ಗೆಯವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದ ಪರಿಯಿದು.
ಕಾಳಗಿ ತಾಲೂಕಿನ ಕೊಡದೂರ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಮೋದಿ ವಿರುದ್ಧ ಏಕವಚನದಲ್ಲೇ ಟೀಕಾಪ್ರಹಾರ ನಡೆಸಿದರು. “ದೇಶದ ಸ್ವಾತಂತ್ರಕ್ಕಾಗಿ ಹೋರಾಡಿದ ಕಾಂಗ್ರೆಸ್ ಪಕ್ಷದ ಕುರಿತು ಟೀಕಿಸುತ್ತಿರುವ ಮೋದಿ ಸ್ವಾತಂತ್ರ ಬಂದಾಗ ಇನ್ನೂ ಹುಟ್ಟೇ ಇರಲಿಲ್ಲ. “ಅಬ್ ಏಕ್ ಬಾರ್ ಮೋದಿ ಸರ್ಕಾರ್’ ಎಂದು ತನಗೆ ತಾನೇ ಹೇಳಿಕೊಳ್ಳುವ ಮೋದಿ, ಕಾಂಗ್ರೆಸ್ ಪಕ್ಷ 40 ಸೀಟು ಗೆಲ್ಲುತ್ತದೆಯೇ ಎಂದು ಟೀಕಿಸುತ್ತಾನೆ. ಒಂದು ವೇಳೆ, ಅದಕ್ಕಿಂತ ಜಾಸ್ತಿ ಸೀಟು ಬಂದರೆ ದಿಲ್ಲಿಯ ವಿಜಯಾ ಚೌಕ್‌ನಲ್ಲಿ ಮೋದಿ ನೇಣು ಹಾಕಿಕೊಳ್ಳುತ್ತಾನಾ?’ ಎಂದು ಕಿಡಿ ಕಾರಿದರು.
“ದೇಶ ಕಟ್ಟಿದ್ದು ಕಾಂಗ್ರೆಸ್. ನಾವು ಕಟ್ಟಿದ ಮನೆಯಲ್ಲಿ ಬಂದು ಕುಳಿತು ನಮಗೇ, “ತುಮ್ ಕೌನ್ ಹೈ’ ಎಂದು ಕೇಳುತ್ತಿದ್ದಾನೆ. ಈಗ ಮತ್ತೂಂದು ಯೋಜನೆ ತಂದಿದ್ದಾನೆ. ರೈತರಿಗೆ ವಾರ್ಷಿಕ 6000 ರೂ.ನೀಡುತ್ತಾನಂತೆ, ಇದು ಒಂದು ದಿನಕ್ಕೆ 16 ರೂ.ಆಗುತ್ತದೆ. ಇದರಿಂದ ರೈತರಿಗೆ ಏನು ಉಪಯೋಗ. ಮೋದಿಗೆ ಕಾಂಗ್ರೆಸ್ ಪಕ್ಷಕ್ಕೆ ಬೈಯ್ಯುವುದೇ ಕೆಲಸ. ರಾಜೀವ್‌ಗಾಂ ಧಿ ಸತ್ತು 30 ವರ್ಷವಾಗಿದೆ. ಅವರ ಬೂದಿ ಎಲ್ಲಾ ಕಡೆ ಚೆಲ್ಲಿಯಾಗಿದೆ. ಈಗ ಆ ಬೂದಿಯಲ್ಲಿ ಮೋದಿ, ಹುಳು ಹುಡುಕುತ್ತಿದ್ದಾನೆ’ ಎಂದು ಹರಿಹಾಯ್ದರು.
ಬಿಜೆಪಿಗೆ ಸೇಲ್ ಆದ ಜಾಧವ: ಇದೇ ವೇಳೆ, ಜಾಧವ ವಿರುದ್ಧವೂ ಏಕವಚನದಲ್ಲೇ ಟೀಕಾಪ್ರಹಾರ ನಡೆಸಿದ ಖರ್ಗೆ, “ಇಂತಹ ಮೋದಿಯ ಪಕ್ಷಕ್ಕೆ ಜಾಧವ ಸೇರಿದ್ದಾನೆ. ಅವನು ಸೇಲ್ ಆಗಿ ಓಡಿ ಹೋಗಿದ್ದಾನೆ. “ನನ್ನ ರಕ್ತದ ಪ್ರತಿಯೊಂದು ಕಣದಲ್ಲಿಯೂ ಕಾಂಗ್ರೆಸ್‌ನ ರಕ್ತ ಹರಿಯುತ್ತಿದೆ. ನಮ್ಮ ಕುಟುಂಬವೇ ಕಾಂಗ್ರೆಸ್. ನಾವು ಎಂದಿಗೂ ಕಾಂಗ್ರೆಸ್ ಪಕ್ಷ ಬಿಡುವುದಿಲ್ಲ ಎಂದು ಸೇವಾಲಾಲ ಮಹಾರಾಜರ ಮೇಲೆ ಆಣೆ, ಪ್ರಮಾಣ ಮಾಡಿ, ಕಾಂಗ್ರೆಸ್ ಪಕ್ಷ ಬಿಟ್ಟು ಬಿಜೆಪಿಗೆ ಓಡಿ ಹೋದ.
ಕಾಂಗ್ರೆಸ್ ಪಕ್ಷದಿಂದ ನಿನಗೇನು ಅನ್ಯಾಯ ಆಗಿದೆ?. ಏನಾದರೂ ತೊಂದರೆ ಇದ್ದರೆ ಪಕ್ಷದ ವರಿಷ್ಠರ ಎದುರು, ಇಲ್ಲವೇ ನನ್ನ ಹತ್ತಿರ ಹೇಳಿಕೊಳ್ಳಬಹುದಿತ್ತಲ್ಲ. ಕಾಂಗ್ರೆಸ್ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ತನ್ನನ್ನು ತಾನು ಬಿಜೆಪಿಗೆ ಮಾರಾಟ ಮಾಡಿಕೊಂಡ ಉಮೇಶ ಜಾಧವ ಚಿಂಚೋಳಿ ಮತದಾರರ ಸ್ವಾಭಿಮಾನಕ್ಕೆ ಧಕ್ಕೆ ತಂದಿದ್ದಾನೆ. ಈಗ ಅವನ ಮಗನನ್ನು ಉಪಚುನಾವಣೆಗೆ ನಿಲ್ಲಿಸಿದ್ದಾನೆ. ಈತನಿಗೆ ತಕ್ಕ ಪಾಠ ಕಲಿಸಬೇಕಾದರೆ ಸೋಲಿನ ರುಚಿ ಉಣಿಸಿ’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
Ambedkar Row: ಕಾಂಗ್ರೆಸ್ ಎಂದರೆ ಫೇಕ್ ಗಾಂಧಿಗಳ ಪಕ್ಷ: ಛಲವಾದಿ ನಾರಾಯಣಸ್ವಾಮಿ
Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್
Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ
Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್ ಆಕ್ರೋಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kasaragodu: ಸ್ಲೀಪರ್ ಸೆಲ್ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್‌ಶೇಖ್
Ayodhya: ರಾಮಮಂದಿರಕ್ಕೆ 1 ವರ್ಷ: ಜ.11ರಿಂದ 3 ದಿನ ಪೂಜೆ
ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
Pope Francis; ಗಾಜಾಪಟ್ಟಿ ಮೇಲೆ ನಡೆದದ್ದು ಯುದ್ಧವಲ್ಲ, ಕ್ರೌರ್ಯ
Horoscope: ಈ ರಾಶಿಯವರಿಗೆ ಧೈರ್ಯ ಮತ್ತು ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.