Naroda case: ನರೋಡಾ ಗಮ್ ದಂಗೆ ಪ್ರಕರಣ: ಎಲ್ಲ 67 ಮಂದಿ ಖುಲಾಸೆ
Team Udayavani, Apr 21, 2023, 8:10 AM IST
ಅಹ್ಮದಾಬಾದ್: ಗುಜರಾತ್‌ನಲ್ಲಿ 2002ರಲ್ಲಿ ನಡೆದಿದ್ದ ಗಲಭೆ ಅವಧಿಯಲ್ಲಿ ನಡೆದಿದ್ದ ನರೋಡಾ ಗಮ್ ದಂಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ 67 ಮಂದಿಯನ್ನು ಖುಲಾಸೆ ಮಾಡಲಾಗಿದೆ. ಅವರ ಪೈಕಿ ಬಿಜೆಪಿಯ ಹಿರಿಯ ನಾಯಕಿ, ಮಾಜಿ ಸಚಿವೆ ಮಾಯಾ ಕೊಡ್ನಾನಿ, ಬಜರಂಗ ದಳದ ಹಿರಿಯ ನಾಯಕ ಬಾಬು ಬಜರಂಗಿ ಪ್ರಮುಖರಾಗಿದ್ದಾರೆ.
ಅಹ್ಮದಾ ಬಾದ್‌ನಲ್ಲಿ ಇರುವ ವಿಶೇಷ ಕೋರ್ಟ್ ಗುರುವಾರ ಈ ಮಹತ್ವದ ತೀರ್ಪು ನೀಡಿದೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಅರ್ಜಿದಾರರ ಪರ ನ್ಯಾಯವಾದಿ ಸಂಶಾದ್ ಪಠಾಣ್ ತೀರ್ಪಿನ ವಿರುದ್ಧ ಗುಜರಾತ್ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದ್ದಾರೆ. ಗುಜರಾತ್ ಗಲಭೆಯ ಅವಧಿಯಲ್ಲಿ ಅಂದರೆ 2002, ಫೆ.28ರಂದು ನಡೆದಿದ್ದ ಈ ಪ್ರಕರಣದಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ 11 ಮಂದಿ ಅಸುನೀಗಿದ್ದರು. ಒಟ್ಟು 86 ಮಂದಿಯ ವಿರುದ್ಧ ಕೇಸು ದಾಖಲಿ ಸಲಾಗಿತ್ತು. ಈ ಪೈಕಿ 18 ಮಂದಿ ತನಿಖೆ ಮತ್ತು ವಿಚಾರಣೆ ಪ್ರಗತಿಯಲ್ಲಿ ಇರು ವಾಗಲೇ ಅಸು ನೀಗಿದ್ದರು.
ಅವರೆಲ್ಲರ ವಿರುದ್ಧ ಕೊಲೆ, ಕ್ರಿಮಿನಲ್ ಸಂಚು, ನಿಯಮ ಮೀರಿ ಗುಂಪು ಸೇರುವುದು ಸೇರಿದಂತೆ ಹಲವು ಆರೋಪ ಗಳನ್ನು ಹೊರಿಸಲಾಗಿತ್ತು. 2010ರಲ್ಲಿ ಶುರುವಾಗಿದ್ದ ನ್ಯಾಯಾಂಗ ಕಲಾಪಗಳು 13 ವರ್ಷಗಳ ಕಾಲ ನಡೆದಿದ್ದವು.
ಸಾಕ್ಷ್ಯ ನುಡಿದಿದ್ದ ಅಮಿತ್ ಶಾ: ಮಾಜಿ ಸಚಿವೆ ಮಾಯಾ ಕೊಡ್ನಾನಿ ಪರವಾಗಿ ಸದ್ಯ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾಗಿರುವ ಅಮಿತ್ ಶಾ ಅವರು 2017ರ ಸೆಪ್ಟೆಂಬರ್‌ನಲ್ಲಿ ಸಾಕ್ಷ್ಯ ನುಡಿದಿ ದ್ದರು. ಈ ಪ್ರಕರಣದಲ್ಲಿ ಕೊಡ್ನಾನಿಗೆ 28 ವರ್ಷಗಳ ಜೈಲು ಶಿಕ್ಷೆಯಾಗಿತ್ತು. ಅ ನಂತರ ಗುಜರಾತ್ ಹೈಕೋರ್ಟ್ ಅವರನ್ನು ದೋಷಮುಕ್ತಿಗೊಳಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election: ಬೂತ್ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ
Hospitalised: ಚಂದ್ರಬಾಬು ನಾಯ್ಡು ಅವರ ಸಹೋದರನ ಆರೋಗ್ಯ ಸ್ಥಿತಿ ಗಂಭೀರ, ಆಸ್ಪತ್ರೆಗೆ ದಾಖಲು
Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
MUST WATCH
ಹೊಸ ಸೇರ್ಪಡೆ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Maharashtra Election: ಬೂತ್ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ
Koppala ಗವಿಮಠ ಜಾತ್ರೆಗೆ ನಟ ಅಮಿತಾಬ್ ಬಚ್ಚನ್?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.