ನಭಕ್ಕೆ ಚಿಮ್ಮಲಿದೆ…ನಾಸಾದ 169 ಕೋಟಿ ವೆಚ್ಚದ ಬಾತ್‌ರೂಂ!
ಇದೇ ಮಾದರಿಯ ಬಾತ್‌ರೂಂಗಳನ್ನು ನಾಸಾ ಅಳವಡಿಸಲಿದೆ ಎಂದು ಸ್ಪೇಸ್.ಕಾಂ ವರದಿ ಮಾಡಿದೆ.
Team Udayavani, Sep 28, 2020, 12:08 PM IST
ವಾಷಿಂಗ್ಟನ್: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ169.50 ಕೋಟಿ ರೂ. ವೆಚ್ಚದ, ಸುಧಾರಿತ ಬಾತ್‌ರೂಂ ನಿರ್ಮಿಸಿದೆ. ಉಡಾವಣಾ ವಾಹಕ ಮೂಲಕ ಬಹುವೆಚ್ಚದ ಟಾಯ್ಲೆಟ್ ಒಳಗೊಂಡ ಸ್ನಾನಗೃಹವನ್ನು ಕೇಂದ್ರಕ್ಕೆ ರವಾನಿಸಲಿದೆ.
ಸೆ.29ರಂದು ವರ್ಜೀನಿಯಾದಲ್ಲಿನ ನಾಸಾದ ವ್ಯಾಲಾಪ್ಸ್ ಫ್ಲೈಟ್ ಫೆಸಿಲಿಟಿ ಕೇಂದ್ರದಿಂದ ರಾಕೆಟ್ ಮೂಲಕ ಬಾತ್‌ರೂಂ ನಭಕ್ಕೆ ಚಿಮ್ಮಲಿದೆ.
ಒಂದು ವೇಳೆ ಬಾಹ್ಯಾಕಾಶ ಕೇಂದ್ರದಲ್ಲಿ (ಐಎಸ್‌ಎಸ್) ಬಾತ್‌ರೂಂ ಬಳಕೆ ಸಫಲತೆ ಕಂಡರೆ, ಭವಿಷ್ಯದಲ್ಲಿ ಚಂದ್ರ ಮತ್ತು ಮಂಗಳಯಾನ ಯೋಜನೆಗಳಲ್ಲಿ
ಇದೇ ಮಾದರಿಯ ಬಾತ್‌ರೂಂಗಳನ್ನು ನಾಸಾ ಅಳವಡಿಸಲಿದೆ ಎಂದು ಸ್ಪೇಸ್.ಕಾಂ ವರದಿ ಮಾಡಿದೆ. ಪ್ರಸ್ತುತಐಎಸ್‌ಎಸ್‌ನಲ್ಲಿಬಳಕೆಯಾಗುತ್ತಿರುವ ಬಾತ್‌ರೂಂಗಿಂತ ಈ ಸುಧಾರಿತ ಮಾದರಿ ಗಾತ್ರದಲ್ಲಿ ಶೇ.65ರಷ್ಟು ಚಿಕ್ಕದು ಮತ್ತು ಶೇ.40ರಷ್ಟು ಹಗುರವಿದೆ.
ಇದನ್ನೂ ಓದಿ: ಎಂಚಿನ ಫೀಲ್ಡಿಂಗ್ ಮಾರ್ರೆ:ಪೂರನ್ ಫೀಲ್ಡಿಂಗ್ ಕಂಡು ತುಳು ಟ್ವೀಟ್ ಮಾಡಿದ ಸ್ಟಾರ್ ಸ್ಪೋರ್ಟ್ಸ್
ಚೀನಾದಲ್ಲಿ ಗಣಿ ದುರಂತ: 16 ಸಾವು
ಬೀಜಿಂಗ್: ಚೀನಾದ ನೈರುತ್ಯ ಭಾಗದಲ್ಲಿರುವ ಚಾಂಗ್‌ಕಿಂಗ್ ಮುನ್ಸಿಪಾಲಿಟಿ ವ್ಯಾಪ್ತಿಯ ಕಲ್ಲಿದ್ದಲು ಗಣಿಯೊಂದರಲ್ಲಿ ಇಂಗಾಲದ ಮೋನಾಕ್ಸೆ„ಡ್ ಪ್ರಮಾಣ ಹೆಚ್ಚಳವಾದ ಕಾರಣ 16ಕಾರ್ಮಿಕರು ಉಸಿರುಗಟ್ಟಿ ಸಾವಿಗೀಡಾದ ಘಟನೆ ಭಾನುವಾರ ನಡೆದಿದೆ.
ಗಣಿಯೊಳಗೆ 17 ಮಂದಿ ಕೆಲಸ ಮಾಡುತ್ತಿದ್ದರು. ಅಲ್ಲಿದ್ದ ಬೆಲ್ಟ್‌ಗಳಿಗೆ ಬೆಂಕಿ ಹಚ್ಚಿಕೊಂಡ ಪರಿಣಾಮ, ಇಂಗಾಲದ ಮೋನಾಕ್ಸೆ„ಡ್ ಹೊರಸೂಸುವಿಕೆ ಹೆಚ್ಚಳವಾಗಿ ಈ ದುರ್ಘಟನೆ ಸಂಭವಿಸಿದೆ.
ಇದನ್ನೂ ಓದಿ: ಪಾಕ್ ಸರ್ಕಾರದಿಂದ ಲೆಜೆಂಡರಿ ನಟರಾದ ರಾಜ್ ಕಪೂರ್, ದಿಲೀಪ್ ಕುಮಾರ್ ಪೂರ್ವಜರ ಮನೆ ಖರೀದಿ
75 ಸದಸ್ಯರ ರಕ್ಷಣಾ ತಂಡವು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ಕೈಗೊಂಡಿದೆ. ಆದರೆ, ಒಬ್ಬ ಕಾರ್ಮಿಕನನ್ನು ಮಾತ್ರ ರಕ್ಷಿಸಲು ಸಾಧ್ಯವಾಗಿದ್ದು, ಉಳಿದ 16 ಮಂದಿ ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.