National Champion: ಸ್ಕ್ವಾಷ್ ಆಟಗಾರ ರಾಜ್ ಮನ್‌ಚಂದ ಇನ್ನಿಲ್ಲ
Team Udayavani, Dec 4, 2024, 1:42 AM IST
ಹೊಸದಿಲ್ಲಿ: ಭಾರತದ ಖ್ಯಾತ ಸ್ಕ್ವಾಷ್ ಆಟಗಾರ ರಾಜ್ ಮನ್‌ಚಂದ (79) ಇನ್ನಿಲ್ಲ. ಅವರು ರವಿವಾರ ನಿಧನ ಹೊಂದಿದರು ಎಂಬುದಾಗಿ ಅವರ ಕುಟುಂಬದ ಸಮೀಪದವರು ಮಾಹಿತಿ ನೀಡಿದ್ದಾರೆ.
1977ರಿಂದ 1982ರ ತನಕ ಸತತ 6 ಸಲ ರಾಷ್ಟ್ರೀಯ ಚಾಂಪಿಯನ್ ಆಗಿದ್ದ ಮನ್‌ಚಂದ, 1983ರಲ್ಲಿ ಪ್ರತಿಷ್ಠಿತ ಅರ್ಜುನ ಪ್ರಶಸ್ತಿಯಿಂದ ಪುರಸ್ಕೃತರಾಗಿದ್ದರು. ಸರ್ವೀಸಸ್ ತಂಡಕ್ಕೆ 11 ಸಲ ಪ್ರಶಸ್ತಿ ತಂದುಕೊಡುವಲ್ಲಿ ಇವರ ಪಾತ್ರ ಮಹತ್ವದ್ದಾಗಿತ್ತು.
ಭಾರತೀಯ ಸೇನೆಯ ಇಎಂಇ ವಿಭಾಗದ ಕ್ಯಾಪ್ಟನ್ ಆಗಿದ್ದ ರಾಜ್ ಮನ್‌ಚಂದ, ತಮ್ಮ ಮೊದಲ ರಾಷ್ಟ್ರೀಯ ಪ್ರಶಸ್ತಿಯನ್ನು 33ನೇ ವರ್ಷದಲ್ಲಿ ಜಯಿಸಿದ್ದರು. 1981ರ ಕರಾಚಿ ಏಷ್ಯನ್ ಟೀಮ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ವಿಜೇತ ಭಾರತ ತಂಡದ ಸದಸ್ಯರೂ ಆಗಿದ್ದರು.
ಜೋರ್ಡನ್‌ನಲ್ಲಿ ನಡೆದ 1984ರ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಮನ್‌ಚಂದ್ ಭಾರತ ತಂಡದ ನಾಯಕರಾಗಿದ್ದರು. ಇಲ್ಲಿ ಭಾರತಕ್ಕೆ ಕಂಚಿನ ಪದಕ ಒಲಿದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ
ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ
60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಹೊಸ ಸೇರ್ಪಡೆ
Thekkatte: ಅವೈಜ್ಞಾನಿಕ ತಂಗುದಾಣದ ಕಿರಿಕಿರಿ; ತುರ್ತು ಕ್ರಮಕ್ಕೆ ಜನರ ಆಗ್ರಹ
Gadaga: ವದೆಗೋಳ ಗುಡ್ಡದಲ್ಲಿ ಬೋನಿಗೆ ಬಿದ್ದ ಚಿರತೆ
We don’t talk; ಧೋನಿ ಜತೆಗಿನ ಮುನಿಸಿನ ಬಗ್ಗೆ ಮಾತನಾಡಿದ ಭಜ್ಜಿ!
Tragedy: ವಾಕಿಂಗ್ ಮುಗಿಸಿ ಬರುವಷ್ಟರಲ್ಲಿ ತಂದೆ, ತಾಯಿ, ಸಹೋದರಿಯ ಬರ್ಬರ ಹತ್ಯೆ
Ballari: ದೌರ್ಜನ್ಯ, ಹಿಂಸಾಚಾರ ಖಂಡಿಸಿ ಬಳ್ಳಾರಿ ಬಂದ್ ಕರೆಗೆ ಮಿಶ್ರ ಪ್ರತಿಕ್ರಿಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.