ಚುನಾವಣೆ ಬಹಿಷ್ಕಾರಕ್ಕೆ ರಾ.ಹೆ. ಸಂತ್ರಸ್ತರ ನಿರ್ಧಾರ
Team Udayavani, Apr 27, 2023, 7:05 AM IST
ಮಂಗಳೂರು: ರಾಷ್ಟ್ರೀಯ ಹೆದ್ದಾರಿ 169ರ ವಿಸ್ತರಣೆಗಾಗಿ ಜಾಗ ಕಳೆದುಕೊಳ್ಳುತ್ತಿರುವ ಸಂತ್ರಸ್ತರು ನ್ಯಾಯಯುತ ಪರಿಹಾರ ಒದಗಿಸಿಕೊಡುವಲ್ಲಿ ಜನಪ್ರತಿನಿಧಿಗಳು ವಿಮುಖರಾಗಿರುವುದನ್ನು ಖಂಡಿಸಿ ವಿಧಾನಸಭಾ ಚುನಾವಣೆಯಲ್ಲಿ ಮತಹಾಕದಿರಲು ತೀರ್ಮಾನ ಕೈಗೊಂಡಿದ್ದಾರೆ.
ಬುಧವಾರ ರಾ.ಹೆ. ಭೂಮಾಲಕರ ಹೋರಾಟ ಸಮಿತಿಯ ಸದಸ್ಯರು ಸಭೆ ಸೇರಿ ಈ ನಿರ್ಣಯ ಕೈಗೊಂಡರು. ಸಮಿತಿ ಅಧ್ಯಕ್ಷೆ ಮರಿಯಮ್ಮ ಥಾಮಸ್ ಅಧ್ಯಕ್ಷತೆ ವಹಿಸಿದ್ದರು.
ಚತುಷ್ಪಥ ಯೋಜನೆಗೊಳ ಪಡುವ ಕುಲಶೇಖರದಿಂದ ಸಾಣೂರು ವರೆಗಿನ ಭೂಮಾಲಕರು ಹೈಕೋರ್ಟ್‌ನ ನ್ಯಾಯೋಚಿತವಾದ ಪರಿಹಾರವನ್ನು ವಿತರಿಸುವುದಕ್ಕೆ ಆದೇಶ ಬಂದರೂ ಅಧಿಕಾರಿಗಳು ಗಣನೆಗೆ ತೆಗೆದುಕೊಂಡಿಲ್ಲ. ಇನ್ನೊಂದೆಡೆ ಜನಪ್ರತಿನಿಧಿಗಳು ಈ ಬಗ್ಗೆ ದಿವ್ಯನಿರ್ಲಕ್ಷ್ಯ ತಾಳಿದ್ದಾರೆ. ಇದನ್ನು ಖಂಡಿಸಿ ಮೇ 10ರ ಚುನಾವಣೆ ಬಹಿಷ್ಕರಿಸಲು ತೀರ್ಮಾನಿಸಲಾಗಿದೆ.
ಎ. 27ರಂದು ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಮತದಾನ ಬಹಿಷ್ಕಾರದ ಬಗ್ಗೆ ತಿಳಿಸುವ ಹಾಗೂ ಬೇಡಿಕೆಗಳ ಕುರಿತು ಮನವಿಯನ್ನು ಸಲ್ಲಿಸುವ ನಿರ್ಣಯವನ್ನು ಕೈಗೊಳ್ಳಲಾಯಿತು.
ಉಪಾಧ್ಯಕ್ಷ ಮನೋಹರ್ ಭಟ್ ಕುಡುಪು, ಸಂಚಾಲಕ ಪ್ರಕಾಶ್ಚಂದ್ರ, ಕಾರ್ಯದರ್ಶಿ ವಿಶ್ವಜಿತ್, ಖಜಾಂಚಿ ರತ್ನಾಕರ್ ಶೆಟ್ಟಿ, ಜಯರಾಮ ಪೂಜಾರಿ, ಬೃಜೇಶ್ ಶೆಟ್ಟಿ ಮಿಜಾರು, ಕಿರಣ್ ಕ್ಯಾಸ್ಟಲಿನೋ , ನಾಗೇಶ್ ಕಾಮತ್ ಹಾಗೂ ಭೂ ಮಾಲಕರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.