40 ಮಿಲಿಯನ್ ಡಾಲರ್ ಮೌಲ್ಯದ ಕ್ಲೀಯರ್ ಟ್ರಿಪ್ ಫ್ಲಿಪ್ ಕಾರ್ಟ್ ತೆಕ್ಕೆಗೆ..?
Team Udayavani, Apr 19, 2021, 12:43 PM IST
ನವ ದೆಹಲಿ : 40 ಮಿಲಿಯನ್ ಡಾಲರ್ ಮೌಲ್ಯದ ಕ್ಲೀಯರ್ ಟ್ರಿಪ್ ಅನ್ನು ವಾಲ್ ಮಾರ್ಟ್ ಒಡೆತನದ ಭಾರತದ ಪ್ರಮುಖ ಇ-ಕಾಮರ್ಸ್ ಮಾರುಕಟ್ಟೆಯಾದ ಫ್ಲಿಪ್ ಕಾರ್ಟ್ ತನ್ನ ಬ್ಯುಸಿನೆಸ್ ಅಂಗಳಕ್ಕೆ ಸೇರಿಸಿಕೊಳ್ಳಲು ಮುಂದಾಗಿದ್ದು, ಈ ವ್ಯವಹಾರವು ನಗದು-ಕಮ್-ಇಕ್ವಿಟಿ ಒಪ್ಪಂದವಾಗಿದೆ ಎಂಬ ವರದಿಯಾಗಿದೆ.
ಮುಂಬೈನಲ್ಲಿ 2006 ರಲ್ಲಿ ಪ್ರಾರಂಭವಾದ ಕ್ಲಿಯರ್ ಟ್ರಿಪ್ 15 ವರ್ಷದ ತನ್ನ ಪಯಣದಲ್ಲಿ ಸಾಕಷ್ಟು ಯಶಸ್ಸನ್ನು ತನ್ನ ಮುಡಿಗೇರಿಸಿಕೊಂಡಿದೆ.
ಕ್ಲೀಯರ್ ಟ್ರಿಪ್ ಶೀಘ್ರವೇ ತನ್ನ ಎಲ್ಲಾ ವ್ಯವಹಾರವನ್ನು ನಿಲ್ಲಿಸಿ ಕಂಪನಿಯನ್ನು ಮುಚ್ಚುವ ಹಂತದಲ್ಲಿತ್ತು. ಆದರೆ ಈಗ ಫ್ಲಿಪ್ ಕಾರ್ಟ್ ಮೂಲಕ ಟ್ರಾವೆಲ್ಲಿಂಗ್ ಮತ್ತು ಆತಿಥ್ಯ ಸೇವೆಯನ್ನು ಮುಂದುವರೆಸುವ ಹೊಸ ಬೆಳೆವಣಿಗೆಯ ಬಗ್ಗೆ ಒಪ್ಪಂದ ಮಾಡಿಕೊಳ್ಳುವುದಾಗಿ ವರದಿ ತಿಳಿಸಿದೆ.
ಓದಿ : ಕೋವಿಡ್ 2ನೇ ಅಲೆ: ಭಾರತದಲ್ಲಿ 24 ಗಂಟೆಗಳಲ್ಲಿ 2.73 ಲಕ್ಷ ಪ್ರಕರಣ ಪತ್ತೆ
ಉಭಯ ಕಂಪೆನಿಗಳೊಂದಿಗೆ ಸಮಾಲೋಚನೆ ನಡೆಯುತ್ತಿದ್ದು, ಅತಿ ಶೀಘ್ರದಲ್ಲಿ ಒಪ್ಪಂದಕ್ಕೆ ಉಭಯ ಸಂಸ್ಥಗಳು ಸಹಿ ಹಾಕುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ ಎಂದು ವರದಿ ತಿಳಿಸಿದೆ.
ಇನ್ನು, ಭಾರತದ ಹೊರತಾಗಿ ಯುಎಇ, ಸೌದಿ ಅರೇಬಿಯಾ ಮತ್ತು ಈಜಿಪ್ಟ್‌ನಲ್ಲಿ ಕ್ಲಿಯರ್ ಟ್ರಿಪ್ ಕಾರ್ಯನಿರ್ವಹಿಸುತ್ತದೆ.
ಇದರ ಪ್ರಮುಖ ಹೂಡಿಕೆದಾರರು ಕಾನ್ ಕೂರ್ ಟೆಕ್ನಾಲಜೀಸ್, ಡಿಎಜಿ ವೆಂಚರ್ಸ್ ಮತ್ತು ಗುಂಡ್ ಇನ್ವೆಸ್ಟ್ ಮೆಂಟ್ ಕಾರ್ಪೊರೇಶನ್. ಸಂಸ್ಥೆಯ ಸಂಸ್ಥಾಪಕ ಮತ್ತು ಸಿಇಒ ಸ್ಟುವರ್ಟ್ ಕ್ರೈಟನ್ 2006 ರಲ್ಲಿ ಕ್ಲಿಯರ್ ಟ್ರಿಪ್ ಅನ್ನು ಸ್ಥಾಪಿಸಿದ್ದರು.
ಇಲ್ಲಿಯವರೆಗೆ ಕ್ಲೀಯರ್ಟ್ರಿಪ್ ಸುಮಾರು 70 ಮಿಲಿಯನ್ ಹೂಡಿಕೆದಾರರ ಬಂಡವಾಳವನ್ನು ಸಂಗ್ರಹಿಸಿದೆ.
ಫ್ಲಿಪ್ ಕಾರ್ಟ್, ಅಮೆಜಾನ್ ಮತ್ತು ಪೇಟಿಎಂ ನಂತಹ ದೈತ್ಯ ಕಂಪನಿಗಳು ಸೂಪರ್-ಆ್ಯಪ್ ತಂತ್ರದ ಮೂಲಕ ಚಿಲ್ಲರೆ ವ್ಯಾಪಾರ, ಆಹಾರ ವಿತರಣೆ, ಪಾವತಿ ಸೇವೆಗಳು ಮತ್ತು ಪ್ರಯಾಣದಂತಹ ಪ್ರತಿಯೊಂದು ವ್ಯಾಪಾರ ವಿಭಾಗದಲ್ಲೂ ತಮ್ಮ ಅಸ್ತಿತ್ವವನ್ನು ಹೊಂದಿವೆ. ಅಮೆಜಾನ್ ಮತ್ತು ಪೇಟಿಎಂ ಸಹ ಆನ್ ಲೈನ್ ಪ್ರಯಾಣ ವಿಭಾಗದಲ್ಲಿವೆ. ಮೇ 2019 ರಲ್ಲಿ, ಅಮೆಜಾನ್ ಇಂಡಿಯಾ ತನ್ನ ಪಾವತಿ ಸೇವೆಯಾದ ಅಮೆಜಾನ್ ಪೇ ಗೆ ಫ್ಲೈಟ್ ಬುಕಿಂಗ್ ಆಯ್ಕೆಯನ್ನು ಸೇರಿಸಲು ಕ್ಲಿಯರ್ ಟ್ರಿಪ್ ನೊಂದಿಗೆ ಒಪ್ಪಂದ ಮಾಡಿಕೊಂಡಿದೆ.
ಓದಿ : ಮಿತಿಮೀರಿ ಹೆಚ್ಚಳವಾಗುತ್ತಿರುವ ಕೋವಿಡ್: ಪರಿಸ್ಥಿತಿ ನಿಭಾಯಿಸಲು ಸಭೆ ಕರೆದ ಪ್ರಧಾನಿ ಮೋದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್ ಸಿಇಒ ಸುಂದರ್ ಪಿಚೈ
RBI:ಸಾಲ ಮನ್ನಾ ಸೇರಿ ಉಚಿತ ಕೊಡುಗೆ ಆತಂಕಕಾರಿ- ಆರ್‌ಬಿಐ
Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು
Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ
ರಾಷ್ಟ್ರಾದ್ಯಂತ ಶೈಕ್ಷಣಿಕ ಪಠ್ಯಗಳ ಪೂರೈಕೆಗೆ ಫ್ಲಿಪ್ ಕಾರ್ಟ್ ಮತ್ತು NCERT ಒಪ್ಪಂದ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.