ಪ್ರಕೃತಿಯ ಅದ್ಭುತ ಕಲೆ Bryce Canyon -ಈ ರಂಗಸ್ಥಳಗಳಲ್ಲಿ ಹೂಡುಗಳೇ ಮುಖ್ಯ ಪಾತ್ರಧಾರಿಗಳು


Team Udayavani, Feb 24, 2024, 2:40 PM IST

ಪ್ರಕೃತಿಯ ಅದ್ಭುತ ಕಲೆ Bryce Canyon -ಈ ರಂಗಸ್ಥಳಗಳಲ್ಲಿ ಹೂಡುಗಳೇ ಮುಖ್ಯ ಪಾತ್ರಧಾರಿಗಳು

ಅಕಸ್ಮಾತ್ತಾಗಿ ಕಣ್ಣಿಗೆ ಬಿದ್ದ ಮನಸ್ಸಿನಲ್ಲಿ ಅದೆಷ್ಟು ಅಚ್ಚಾಗಿ ಉಳಿದು ಬಿಡುತ್ತದೆಯೆಂದರೆ ಅಲ್ಲಿಗೆ ಹೋಗಿ ಬಾರದ ಹೊರತು ಸಮಾಧಾನವಿಲ್ಲ. ಬಕೆಟ್‌ ಲಿಸ್ಟ್‌ನಲ್ಲಿ ಗಡದ್ದಾಗಿ ಕೂತು ಥಕಥೈ ಎಂದು ಕುಣಿಯುತ್ತ ಆಗಾಗ ಎಚ್ಚರಿಸುತ್ತಿರುತ್ತದೆ. ಇಂತಹ ಜಾಗ ನಿಜವಾಗಿಯೂ ಇರುವುದೇ ಅಥವಾ ಫೋಟೋಶಾಪ್‌ ಮಾಡಿ ಹಾಕಿದ್ದಾರೋ ಎನ್ನುವಷ್ಟು ಮನಮೋಹಕ. ಅಮೆರಿಕದಲ್ಲಿ ಒಟ್ಟು 64 ರಾಷ್ಟ್ರೀಯ ಉದ್ಯಾನವನಗಳಿವೆ. ಅದರಲ್ಲಿ ನಾವು ನೋಡಿದ್ದು ಹನ್ನೊಂದು. ಎಲ್ಲ ರಾಜ್ಯಗಳಲ್ಲಿ ಈ ಉದ್ಯಾನವನಗಳು ಹಂಚಿ ಹೋಗಿವೆ. ಒಂದು ವರ್ಷಕ್ಕೆ ಎರಡು ಅಂತ ಲೆಕ್ಕ ಹಿಡಿದರೂ ಎಲ್ಲವನ್ನು ನೋಡಿ ಮುಗಿಸಲು ಮೂವತ್ತೆರಡು ವರ್ಷಗಳು ಬೇಕು ! ನ

ಮ್ಮ ಕೈಲಾದಷ್ಟು ನೋಡೋಣ ಎಂದು ನಿರ್ಧರಿಸಿಕೊಂಡಿರುವ ನಮಗೆ ಯೆಲ್ಲೋ ಸ್ಟೋನ್‌ ನ್ಯಾಶನಲ್‌ ಪಾರ್ಕಿಗೆ ಹೋದಾಗ ಅಮೆರಿಕದ ರಾಷ್ಟ್ರೀಯ ಉದ್ಯಾನವನಗಳು ಮತ್ತು ಸ್ಮಾರಕಗಳ ಪೋಸ್ಟಕಾರ್ಡ್‌ಗಳಿರುವ ಒಂದು ಸಂಪುಟ ಸಿಕ್ಕಿತ್ತು. ಅದರೊಳಗೆ ಯಾವುದನ್ನೆಲ್ಲ ನೋಡಬಹುದು ಎಂದು ತಿರುವಿ ಹಾಕುತ್ತಿದ್ದಾಗ ಕಣ್ಣಿಗೆ ಬಿದ್ದದ್ದು ಈ ಸುಂದರವಾದ ಜಾಗ. ಬ್ರೈಸ್‌ ಕಾನ್ಯಿಯನ್‌ ನ್ಯಾಶನಲ್‌ ಪಾರ್ಕ್. ಯೂಟಾ ರಾಜ್ಯದಲ್ಲಿರುವ ಹತ್ತು ಹಲವಾರು ನೋಡಬಹುದಾದಂತಹ ತಾಣಗಳಲ್ಲಿ ಇದು ಸಹ ಒಂದು.‌

ಕ್ಯಾನಿಯನ್‌ ಅಂದರೆ ಆಳವಾದ ಕಮ್ಮರಿ. ಭೂಮಿಯೊಳಗೆ ಸೀಳುಗಳಾಗಿ ಬಗೆಬಗೆಯ ಆಕಾರಗಳನ್ನು ತಾಳಿ ಅಲ್ಲೊಂದು ಕಂದಕ ನಿರ್ಮಾಣವಾಗುತ್ತದೆ. ಕಂದಕ ಎಂದ ಕೂಡಲೇ ನಮ್ಮ ಕಲ್ಪನೆಗೆ ಒಂದು ಚಿಕ್ಕ ಜಾಗ ರೂಪುಗೊಳ್ಳುತ್ತದೆ. ಆದರೆ ಈ ಕ್ಯಾನಿಯನ್‌ಗಳು ಬಹಳ ವಿಸ್ತಾರವಾಗಿ ಮೈಲುಗಟ್ಟಲೇ ಹಬ್ಬಿರುತ್ತವೆ. ಒಂದೇ ಪಟ್ಟಿಗೆ ಅವುಗಳನ್ನು ನೋಡಲು ಆಗುವುದಿಲ್ಲ. ಇಷ್ಟು ದೊಡ್ಡ ಕಂದಕಗಳು ಅಲ್ಲಿರುವ ನಿರಂತರವಾದ ನೀರಿನ ಹರಿವಿನಿಂದ ರೂಪುಗೊಂಡಿರುತ್ತವೆ.

ಶತಮಾನಗಳ ಕಾಲ ಈ ರಚನೆಗಳಲ್ಲಿ ಬದಲಾಗುತ್ತ ವಿಶಿಷ್ಟ ಚೆಲುವನ್ನು ಪಡೆಯುತ್ತವೆ. ಮುಂದಿನ ದಶಕದಲ್ಲಿ ಇವುಗಳ ಆಕಾರ ಬೇರೆಯದ್ದೇ ಆಗಿರುತ್ತದೆ. ಹೀಗೆ ಮೈಲುಗಟ್ಟಲೇ ಹಬ್ಬಿರುವ ಅನೇಕ ಕ್ಯಾನಿಯನ್‌ಗಳಿಂದ ಹಲವಾರು ರಾಷ್ಟ್ರೀಯ ಉದ್ಯಾನವನಗಳು ಹುಟ್ಟಿಕೊಂಡಿವೆ. ಉದಾಹರಣೆಗೆ ಜನಪ್ರಿಯ ಗ್ರ್ಯಾಂಡ್‌ ಕ್ಯಾನಿಯನ್‌ ನ್ಯಾಶನಲ್‌ ಪಾರ್ಕ್‌. ಒಂದು ನದಿಯಿಂದ ಇಲ್ಲಿ ಈ ಮಟ್ಟಿಗೆ ಭೂಮಿಯ ರಚನೆಯಲ್ಲಿ ಬದಲಾವಣೆಯಾಗಿದೆ, ಭೂಮಿಯೊಳಗಿರುವ ಕಲ್ಲುಗಳಲ್ಲಿ ಕಲೆಯಂತಹ ವಿನ್ಯಾಸಗಳು ಮೂಡಿವೆ ಎಂದರೆ ನಂಬಲು ಆಗುವುದೇ ಇಲ್ಲ. ಮನುಷ್ಯನ ಕಲ್ಪನೆಗೆ ಎಟುಕದಂತಹ ಬೆರಗುಗಳನ್ನು ನಿಸರ್ಗ ಅನಾದಿ ಕಾಲದಿಂದ ಸೃಷ್ಟಿಸುತ್ತಲೇ ಬಂದಿದೆ.

ಈಗ ಹೇಳ ಹೊರಟಿರುವ ಬ್ರೈಸ್‌ ಕಾನ್ಯಿಯನ್‌ ಎಂಬ ಜಾಗದ ಹೆಸರಿನಲ್ಲಿ ಕಾನ್ಯಿಯನ್‌ ಎಂದಿದ್ದರೂ ಇದು ಕಂದಕ ಅಥವಾ ಕಮ್ಮರಿಯಂತಹ ರಚನೆ ಅಲ್ಲ. ಬದಲಾಗಿ ಇಲ್ಲಿ ಉದ್ದನೆಯ ಕಂಬಗಳಂತಹ ಹೂಡುಗಳಿವೆ. ಹೂಡು ಎಂದರೆ ಉದ್ದವಾದ, ತೆಳ್ಳನೆಯ ರಚನೆಗಳು ಭೂಸವೆತದಿಂದ ನಿರ್ಮಾಣವಾದಂತವು. ಅತೀ ಗಟ್ಟಿಯಲ್ಲದ, ತೀರಾ ಮೃದುವಲ್ಲದ ಕಲ್ಲಿನಿಂದ ಮಾಡಲ್ಪಟ್ಟಿರುತ್ತವೆ. ಪದರುಶಿಲೆ ಮತ್ತು ಜ್ವಾಲಾಮುಖೀಶಿಲೆಗಳಿಂದ ಹುಟ್ಟಿಕೊಂಡಿರುತ್ತವೆ. ಗಾತ್ರದಲ್ಲಿ ಸಣ್ಣ, ದೊಡ್ಡ, ಅತೀ ಎತ್ತರದ ಇಂತಹ ಕಂಬಗಳು ಎಕ್ರೆಗಟ್ಟಲೇ ಹಬ್ಬಿವೆ. ಕೆಂಪು, ಕೇಸರಿ ಮತ್ತು ಬಿಳಿಯ ಬಣ್ಣದಲ್ಲಿರುವ ಇವುಗಳನ್ನು ದೂರದಿಂದ ನೋಡಿದರೆ ಸಣ್ಣ ಸಣ್ಣ ಗೋಪುರಗಳಿರುವ ಪುಟ್ಟ ದೇವಸ್ಥಾನಗಳೇನೋ ಎಂದೆನ್ನಿಸುತ್ತದೆ.

ನೂರಾರು ಸಾವಿರಾರು ಹೂಡಾಗಳು ! ನಮಗಿಂತಲೂ ಎತ್ತರವಾದ ಹೂಡುಗಳು. ಕಣ್ಣು ಅಗಲಿಸಿದಷ್ಟು ಕಣ್ಣೊಳಗೆ ಮೂಡುತ್ತಲೇ ಹೋಗುವ, ಈ ವಿಸ್ಮಯಕ್ಕೆ ಅಂಕೆಯೇ ಇಲ್ಲವೆನೋ ಎಂಬಂತೆ ಹಬ್ಬಿರುವ ಈ ಹೂಡುಗಳು ರಂಗಸ್ಥಳದ ಮುಖ್ಯ ಪಾತ್ರಧಾರಿಗಳು ಎಂಬಂತೆ ಬಿಂಕದಲ್ಲಿ ಅಲ್ಲಾ ಡದೇ ನಿಂತಿರುತ್ತವೆ. ಎಲ್ಲೆಲ್ಲಿ ಹೂಡುಗಳ ಸಾಂದ್ರತೆ ಹೆಚ್ಚಿದೆಯೋ ಅವುಗಳನ್ನೆಲ್ಲ ಆಂಪಿಥೀಯೆಟರ್‌ ಎಂದು ಗುರುತಿಸುತ್ತಾರೆ. ಈ ತರಹದ ಹಲವಾರು ಆಂಪಿಥೀಯೆಟರ್‌ಗಳನ್ನು ಇಲ್ಲಿ ಕಾಣಬಹುದು. ಬೇಸಗೆಗಾಲದಲ್ಲಿ ಮಿರಿಮಿರಿ ಹೊಳೆಯುವ ಹೂಡುಗಳು, ಚಳಿಗಾಲದಲ್ಲಿ ಅಂದರೆ ಡಿಸೆಂಬರ್‌ನಿಂದ ಫೆಬ್ರವರಿಯವರೆಗೆ ಹಿಮದಿಂದ ಆವೃತವಾಗಿ ಹೊಸದಾದ ಬಗೆಯಲ್ಲಿ ಕಾಣಿಸುತ್ತವೆ. ಎತ್ತರದ ಜಾಗದಲ್ಲಿ ನಿಂತು ಕೆಳಗೆ ಭವ್ಯವಾಗಿ, ನೆಲದ ತುಂಬ ಹಬ್ಬಿಕೊಂಡಿರುವ ಹೂಡುಗಳನ್ನು ನೋಡುತ್ತಿದ್ದರೆ ಈ ಸೌಂದರ್ಯಕ್ಕೆ ಸರಿಸಾಟಿಯೇ ಇಲ್ಲ ಎನ್ನಿಸುತ್ತದೆ.

ಹೂಡುಗಳು ಬ್ರೈಸ್‌ ಕ್ಯಾನಿಯನ್‌ನ ಹೃದಯಭಾಗ. ಪ್ರತಿಯೊಂದು ಹೂಡು ತನ್ನದೇ ಆದ ವಿಶಿಷ್ಟ ವಿನ್ಯಾಸವನ್ನು ಹೊಂದಿದೆ. ಒಂದರ ಹಾಗೆ ಮತ್ತೊಂದಿಲ್ಲ. ಅಂದರೆ ಲಕ್ಷಗಟ್ಟಲೇ ವಿನ್ಯಾಸಗಳು. ಅದೂ ಕಲ್ಲಿನೊಳಗೇ ! ಶತಮಾನಗಳಿಂದ ನೀರಿನ ಚಲನೆ ಮತ್ತು ಗಾಳಿಯಿಂದ ನಿರ್ಮಿತವಾಗಿರುವ ಈ ಹೂಡುಗಳು ಈ ಜಗತ್ತನ್ನು ಕಾಯುತ್ತಿರುವ ಕಾವಲುಗಾರರಂತೆ ಗತಿಸುತ್ತಿರುವ ಕಾಲಮಾನಕ್ಕೆ ಸಾಕ್ಷಿಯಾಗಿ ಮತ್ತು ನಿಸರ್ಗದ ವಿಸ್ಮಯಕ್ಕೆ ಜೀವಂತ ಉದಾಹರಣೆಗಳಾಗಿ ನಿಂತಿವೆ. ಸಂಜೆಯ ಸೂರ್ಯಾಸ್ತದ ಸಮಯದಲ್ಲಂತೂ ಇಲ್ಲಿ ಕಾಣಿಸುವ ಸೌಂದರ್ಯವನ್ನು ಇಡೀಯಾಗಿ ದಕ್ಕಿಸಿಕೊಳ್ಳಲು ಯತ್ನಿಸಿ, ಆಗದೇ ಸೋತಿದ್ದೇನೆ ನಾನು.

ಎರಡೇ ಕಣ್ಣುಗಳಲ್ಲಿ ಉಕ್ಕಿ ಹರಿಯುವ ಈ ರೂಪರಾಶಿಯನ್ನು ಹೇಗೆ ಒಂದೇ ಗುಕ್ಕಿನಲ್ಲಿ ಇಂಗಿಸಿಕೊಳ್ಳಲು ಸಾಧ್ಯ? ಒಂದೊಂದು ಹೂಡುವಿನ ಮೇಲೆ ಬೇರೆ ಬೇರೆ ಕೋನಗಳಲ್ಲಿ ಸೂರ್ಯನ ಕಿರಣ ಬಿದ್ದಾಗ ಅಲ್ಲಿ ಹುಟ್ಟುವ ಹೊಸದೊಂದು ಬಣ್ಣವನ್ನು ನೋಡಿದಾಗ ನಾನು ಯಾವುದೋ ಬೇರೆಯದ್ದೇ ಗ್ರಹದಲ್ಲಿ ಇ¨ªೆನೇನೋ ಎನ್ನಿಸುವಂತೆ ಮಾಡುತ್ತವೆ. ಇನ್ನು ರಾತ್ರಿಯ ಆಗಸವಂತೂ ಇನ್ನೂ ಚೆನ್ನ. ನಗರದ ಥಳಕು ಬೆಳಕಿನಿಂದ ದೂರವಿರುವ ಈ ಜಾಗದಲ್ಲಿ ಲಕ್ಷಾಂತರ ಹೊಳೆಯುವ ನಕ್ಷತ್ರಗಳನ್ನು ಕಾಣಬಹುದು. ಇಲ್ಲಿ ಆಕಾಶಗಂಗೆ ಅಂದರೆ ಮಿಲ್ಕಿವೇ ಸ್ವರ್ಗಕ್ಕೆ ರಹದಾರಿ ಮಾಡಿಕೊಡುತ್ತಿದೆಯೇನೋ ಎಂಬಂತೆ ಶೋಭಿಸುತ್ತ ಬ್ರಹ್ಮಾಂಡದ ಅಗಾಧತೆಯ ಬಗ್ಗೆ ಸೋಜಿಗವನ್ನು, ಅಚ್ಚರಿಯನ್ನು ಏಕಕಾಲದಲ್ಲಿ ಮೂಡಿಸುತ್ತದೆ.

ಇಡೀ ಬ್ರೈಸ್‌ ಕ್ಯಾನಿಯನ್‌ ಅನ್ನು ಕಾಲ್ನಡಿಗೆಯಲ್ಲಿ ನೋಡಬಹುದು. ಹಲವಾರು ಟ್ರೇಲ್‌ ಅಂದರೆ ಕಾಲುದಾರಿಗಳು ಈ ಹೂಡುಗಳ ಮಧ್ಯದಿಂದಲೇ ಹಾದು ಹೋಗುತ್ತವೆ. ದೂರ ನಿಂತು ನೋಡಿದಾಗ ತೆಳ್ಳಗೆ ಕಂಬದ ಹಾಗೆ ಕಾಣುವ ಹೂಡು ಅದರ ಹತ್ತಿರಕ್ಕೆ ಹೋದಾಗ ದಪ್ಪಗೆ, ಬಲಿಷ್ಟವಾಗಿ ಕಾಣಿಸುತ್ತದೆ. ನವಾಹೋ ಲೂಪ್‌ ಎಂಬ ಹೆಸರಿನ ಒಂದು ಹೈಕ್‌ನಲ್ಲಿ ಒಂದು ಸುತ್ತು ಹಾಕಿಕೊಂಡು ಬಂದರೆ ಯಾವುದೋ ಸಿನೆಮಾದ ಸೆಟ್‌ ನೊಳಗೆ ಸಾಗಿ ಬಂದೆವೆನೋ ಎನ್ನಿಸುತ್ತದೆ. ಕ್ವೀನ್ಸ್‌ ಗಾರ್ಡನ್‌ ಟ್ರೇಲ್‌ , ರಿಮ್‌ ಟ್ರೇಲ್‌ಗ‌ಳು ಸಹ ಇಲ್ಲಿರುವ ನೋಡಲೇಬೇಕಾದ ಸ್ಥಳಗಳು. ಬಹಳಷ್ಟು ಜನ ಇಲ್ಲಿಗೆ ಸೂರ್ಯೋದಯ ಮತ್ತು ಸೂರ್ಯಾಸ್ತಗಳನ್ನು ನೋಡಲು ಬರುತ್ತಾರೆ.

ಬಂಗಾರದಂತಹ ಸೂರ್ಯನ ಬಣ್ಣ ಹೂಡುಗಳ ಮೇಲೆ ಬಿದ್ದಾಗ ಮನಸೆಳೆಯುವಂತಹ, ಆಹ್ಲಾದವೆನ್ನಿಸುವಂತಹ ಪರಿಸರ ಸೃಷ್ಟಿಯಾಗುತ್ತದೆ. ಇಡೀ ಯೂಟಾ ರಾಜ್ಯವೇ ಬೇಸಗೆಯಲ್ಲಿ ದಹದಹಿಸುತ್ತದೆಯಾದ್ದರಿಂದ ಹವಾಮಾನವನ್ನು ನೋಡಿಕೊಂಡು ಈ ಜಾಗಕ್ಕೆ ಹೋಗುವುದು ಒಳಿತು. ಫೋಟೋಗ್ರಫಿ ಮಾಡಲು ಈ ಜಾಗ ಬಹಳ ಸೂಕ್ತವಾದುದು. ನಮ್ಮ ಕಲ್ಪನೆಗೆ, ವಿಸ್ತಾರಕ್ಕೆ ಬೇಕಾದ ಎಲ್ಲ ಕೋನಗಳನ್ನು ಹೂಡಾಗಳು ಒದಗಿಸುತ್ತವೆ. ಇಲ್ಲಿ ತೆಗೆಯುವ ಚೆಂದನೆಯ ಫೋಟೋಗಳು ಪೈಪೋಟಿಯ ದರದಲ್ಲಿ ಮಾರಾಟವಾಗುತ್ತವೆ. ಇನ್‌ಸ್ಟಾಗ್ರಾಂ ಪ್ರಿಯರಿಗಂತೂ ಈ ಜಾಗ ಹೇಳಿ ಮಾಡಿಸಿದ ತಾಣ. ವಾವ್‌ ಎಂದು ಉದ್ಘರಿಸುವಂತಹ ರೀಲ್ಸ್‌ ಗಳನ್ನು, ಫೋಟೋಗಳನ್ನು ತೆಗೆಯಬಹುದು. ಒಮ್ಮೆ ಹೋಗಿ ಬಂದರೆ ಮನಸ್ಸು ತಣಿಯುವುದಿಲ್ಲ. ಮತ್ತೆ ಹೋಗಬೇಕು, ಆ ಸೌಂದರ್ಯವನ್ನು ಮತ್ತೊಮ್ಮೆ ಸವಿಯಬೇಕು ಎಂಬ ಬಯಕೆಯನ್ನು ಹುಟ್ಟಿಸುವಂತಹ ಜಾಗವಿದು. ಬಹುಶಃ ಅದು ಮಾತುಗಳಲ್ಲಿ ಹೇಳಿದರೆ, ಅಕ್ಷರಗಳಲ್ಲಿ ಕಟ್ಟಿಕೊಟ್ಟರೆ ಅನುಭವಕ್ಕೆ ಬರುವಂತಹುದಲ್ಲ. ಅಲ್ಲಿ ಹೋಗಿ ಆ ಸೌಂದರ್ಯವನ್ನು ಕಣ್ತುಂಬಿಕೊಂಡಾಗಲಷ್ಟೇ ಆ ಖುಷಿ ದೊರೆಯಲು ಸಾಧ್ಯ. ಇದನ್ನು ಅಲೌಕಿಕ ಅನುಭವವನ್ನು ನೀಡುವ ಜಾಗ ಎಂದು ಹೇಳಿದರೆ ಉತ್ಪ್ರೇಕ್ಷೆಯೇನಲ್ಲ.

ಸಂಜೋತಾ ಪುರೋಹಿತ್‌,ಸ್ಯಾನ್‌ ಫ್ರಾನ್ಸಿಸ್ಕೋ

ಟಾಪ್ ನ್ಯೂಸ್

KL Rahul and Athiya Shetty to welcome their first child in 2025

Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್‌ – ಅಥಿಯಾ ಶೆಟ್ಟಿ

supreem

Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್

BGT Series: Indians Should not forget the battle of Pujara at the Gabba

BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?

Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ

Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ

ಹೋಟೆಲ್ ಕೊಠಡಿಯಲ್ಲೇ ಹಿರಿಯ ವೈದ್ಯ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Cricket: ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ

Cricket: ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ

Aligarh ಮುಸ್ಲಿಮ್‌ ವಿವಿ  ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ

Aligarh ಮುಸ್ಲಿಮ್‌ ವಿವಿ  ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-

Desiswara: ನ್ಯೂಯಾರ್ಕ್‌ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ

11-1

Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…

10-

Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ

9-desi

Kannada Alphanbets: “ಕ’ ಕಾರದಲ್ಲಿನ ವಿಶೇಷ:‌ ಕನ್ನಡ ಅಕ್ಷರಮಾಲೆಯಲ್ಲಿನ “ಕ’ ಕಾರ ವೈಭವ

8-

ನ.9: ವಿಶ್ವ ಕನ್ನಡ ಹಬ್ಬ: ಈ ಬಾರಿ ಸಿಂಗಾಪುರದಲ್ಲಿ ರಂಗೇರಲಿರುವ ಸಂಭ್ರಮ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

KL Rahul and Athiya Shetty to welcome their first child in 2025

Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್‌ – ಅಥಿಯಾ ಶೆಟ್ಟಿ

ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ

ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ

supreem

Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್

sirsi

Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ

Yathanaa

Waqf Property: ಸಚಿವ ಜಮೀರ್‌ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.