ನವಲಗುಂದ ಪಟ್ಟಣ ಅಭಿವೃದ್ಧಿಗೆ ಪುರಸಭೆ ಪಣ
7 ದಿನ ಬದಲು 5 ದಿನಕ್ಕೊಮ್ಮೆ ನೀರು ಸರಬರಾಜು
Team Udayavani, Feb 8, 2023, 10:12 AM IST
– ಸುಸಜ್ಜಿತ ಸುಂದರ ಉದ್ಯಾನ ನಿರ್ಮಾಣ
– ಸಾರ್ವಜನಿಕರ ವಾಯುವಿಹಾರಕ್ಕೆ ಅನುಕೂಲ
– ಹಸಿ ಕಸ- ಒಣ ಕಸ ವಿಂಗಡಣೆಗೆ ಕಸದ ಬುಟ್ಟಿ ಉಚಿತವಾಗಿ ವಿತರಣೆ
ನವಲಗುಂದ ಶ್ರೀ ಜಗದ್ಗುರು ಅಜಾತ ನಾಗಲಿಂಗ ಅಜ್ಜನವರ ಪುಣ್ಯಕ್ಷೇತ್ರ. ಯಮನೂರ ಚಾಂಗದೇವ ರಾಜಾಭಾಗಸವಾರ್ ಸೇರಿದಂತೆ ಪವಾಡ ಪುರುಷರ ನಾಡು. ಇಂತಹ ನಾಡಿನ ಸರ್ವಾಂಗೀಣ ಅಭಿವೃದ್ಧಿಗೆ ಪುರಸಭೆ ಪಣ ತೊಟ್ಟಿದೆ.
ಸ್ವತ್ಛತೆ, ಬೀದಿದೀಪ, ಚರಂಡಿ, ಕಾಂಕ್ರೀಟ್ ರಸ್ತೆಗಳು, ಮನೆ ಮನೆಗೆ ನಲ್ಲಿ ಸಂಪರ್ಕ ಮುಂತಾದ ಮೂಲಭೂತ ಸೌಲಭ್ಯ ಕಲ್ಪಿಸಲು ಪುರಸಭೆ ಸರಕಾರದ ನಗರಾಭಿವೃದ್ಧಿ ಯೋಜನೆಯ 500-00 ಲಕ್ಷ ರೂ.ಅನುದಾನ ಬಳಸಲು ಯೋಜಿಸಿದೆ. ಪುರಸಭೆ ವ್ಯಾಪ್ತಿಯಲ್ಲಿ ಹಿಂದೆ ಇದ್ದ 7 ದಿನಗಳ ಬದಲಾಗಿ 5 ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ.
ಸ್ವತ್ಛತೆಗೆ ಹೆಚ್ಚು ಆದ್ಯತೆ ನೀಡಿದ್ದು, ಪಟ್ಟಣದ 23 ವಾರ್ಡ್‌ಗಳಲ್ಲಿ ಹಸಿ ಕಸ, ಒಣ ಕಸ ವಿಂಗಡಣೆಗಾಗಿ ಪುರಸಭೆ ಪ್ರತಿ ಮನೆಗಳಿಗೆ ಕಸದ ಬುಟ್ಟಿಗಳನ್ನು ಉಚಿತವಾಗಿ ವಿತರಿಸಿದೆ. ಘನತ್ಯಾಜ ವಸ್ತು ನಿರ್ವಹಣೆಯಲ್ಲಿ ಹಸಿ ಕಸ ಮತ್ತು ಒಣ ಕಸವನ್ನು ಬೇರ್ಪಡಿಸಿ ಸಂಗ್ರಹವಾದ ತ್ಯಾಜ್ಯದಿಂದ ಅಂದಾಜು 50 ಟನ್ ವರ್ಮಿ ಕಾಂಪೋಸ್ಟ್, ಗೊಬ್ಬರ ತಯಾರಿಸಲಾಗಿದೆ. ರೈತರಿಗೆ ಹಾಗೂ ಅರಣ್ಯ ಇಲಾಖೆಗೆ ಸದರಿ ಗೊಬ್ಬರ ಪೂರೈಸಲಾಗಿದೆ. ಪ್ರತಿ ವಾರ್ಡ್‌ಗಳಲ್ಲಿ ಕಸದ ವಾಹನ ಸಂಚರಿಸಿ ಸ್ವತ್ಛತೆಗೆ ಆದ್ಯತೆ ನೀಡಿದೆ. ಪುರಸಭೆ ವ್ಯಾಪ್ತಿಯಲ್ಲಿ ಸುಮಾರು 1500 ಸಸಿಗಳನ್ನು ನೆಡಲಾಗಿದೆ.
75 ನೇ ಸ್ವಾತಂತ್ರೊÂàತ್ಸವ ಅಂಗವಾಗಿ ಪುರಸಭೆಗೆ ಅಮೃತ ನಿರ್ಮೂಲನೆ ಯೋಜನೆಯಡಿ ಬಿಡುಗಡೆಯಾದ ಅನುದಾನದಲ್ಲಿ ಲಾಲಗುಡಿ ದೇವಸ್ಥಾನ ಹಿಂಭಾಗ, ಮುದಿಗೌಡರ ಪ್ಲಾಟ್, ಜೋಶಿ ಪ್ಲಾಟ್‌ನಲ್ಲಿ ಸುಸಜ್ಜಿತ ಸುಂದರ ಉದ್ಯಾನ ನಿರ್ಮಿಸಿ ಸಾರ್ವಜನಿಕರ ವಾಯುವಿಹಾರಕ್ಕೆ ಅನುಕೂಲ ಕಲ್ಪಿಸಲಾಗಿದೆ. 15ನೇ ಹಣಕಾಸು ಯೋಜನೆಯಡಿ 62ಲಕ್ಷ ರೂ. ಅನುದಾನದಲ್ಲಿ ನೀಲಮ್ಮನ ಕೆರೆಯಲ್ಲಿ ಪಾವಟಿಗೆ, ತಡೆಗೋಡೆ ಮತ್ತು ವ್ಯಾಯಾಮ ಕಟ್ಟೆಗಳನ್ನು ನಿರ್ಮಿಸಲಾಗಿದೆ.
ಮನೆ, ನಳ, ಜಾಗೆ, ಲೈಸನ್ಸ್ ಹಾಗೂ ಇತರೆ ಹಣ ಪಾವತಿಸಲು ಕಾಗದ ರಹಿತ ವ್ಯವಹಾರಕ್ಕಾಗಿ ಪುರಸಭೆ ಕ್ಯೂಆರ್‌ಕೋಡ್ ಇದ್ದು, ಸಾರ್ವಜನಿಕರು ಬ್ಯಾಂಕ್ ಅಥವಾ ಕ್ಯೂ ಆರ್ ಕೋಡ್ ಬಳಸಿ ಸುಲಭವಾಗಿ ಕರ ತುಂಬಬಹುದಾಗಿದೆ.
ಇನ್ನು ಪುರಸಭೆ ಪ್ರತಿವರ್ಷ ರೋಜಗಾರ ಮುಖಾಂತರ ಸಾಲ ಸೌಲಭ್ಯ ನೀಡುತ್ತಿದೆ. ಅಂಗವಿಕಲರಿಗೆ ವಾಹನ ಸೇರಿದಂತೆ ಬಡವರಿಗಾಗಿ ಅನೇಕ ಯೋಜನೆಗಳನ್ನು ಪುರಸಭೆ ವಾಹನ ಮುಖಾಂತರ ತಿಳಿಯಪಡಿಸಿ, ಸಾರ್ವಜನಿಕರಿಗೆ ತಲುಪಿಸುವ ಕಾರ್ಯ ಮಾಡುತ್ತಿದೆ.
ಹೃದಯಭಾಗದಲ್ಲಿರುವ ಇತಿಹಾಸ ಪ್ರಸಿದ್ಧ ನೀಲಮ್ಮನ ಕೆರೆ ಬರಿದಾಗಿದ್ದರಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯವರು ಹೂಳೆತ್ತುವ ಕಾರ್ಯ ಕೈಗೆತ್ತಿಕೊಂಡಿದೆ. ತಮ್ಮ ಸಂಸ್ಥೆಯ 17 ಲಕ್ಷ ರೂ. ಅನುದಾನದಲ್ಲಿ ನೀಲಮ್ಮನ ಕೆರೆ ಹೂಳೆತ್ತುವ ಕಾರ್ಯ ಪ್ರಗತಿಯಲ್ಲಿದೆ.
ಇತ್ತೀಚೆಗೆ ಸಚಿವರ ಮುತುವರ್ಜಿಯಿಂದ ನಗರಕ್ಕೆ 48 ಕೋಟಿ ರೂ. ಅನುದಾನದಲ್ಲಿ 24×7 ಕುಡಿಯುವ ನೀರಿನ ಯೋಜನೆಗೆ ಟೆಂಡರ್ ಪ್ರಕ್ರಿಯೆಯಲ್ಲಿರುತ್ತದೆ. ಪಟ್ಟಣಕ್ಕೆ ಅವಶ್ಯವಿರುವ ಒಳಚರಂಡಿ ಯೋಜನೆಗೂ ಸರಕಾರಕ್ಕೆ ಅನುಮೋದನೆಗೆ ಕಳುಹಿಸಿಕೊಡಲಾಗಿದೆ.
ಪುರಸಭೆ ಅಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರು, ಎಲ್ಲ ವಾರ್ಡ್ ಸದಸ್ಯರು, ಪುರಸಭೆ ಮುಖ್ಯಾ ಧಿಕಾರಿ ವೀರೇಶ ಹಸಬಿ ಹಾಗೂ ಸಿಬ್ಬಂದಿ ವರ್ಗದವರು ಪಟ್ಟಣದ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.
ಪುರಸಭೆ ಸಹಕಾರದೊಂದಿಗೆ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯವರು ನೀಲಮ್ಮನ ಕೆರೆ ಹೂಳೆತ್ತುವ ಕಾರ್ಯ ಕೈಗೊಂಡಿದ್ದು ಕೆಲಸ ಪ್ರಗತಿಯಲ್ಲಿದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
FIR Register: ಜಡ್ಜ್ ಹೆಸರಲ್ಲಿ ಲಂಚಕ್ಕೆ ಬೇಡಿಕೆಯ ಆರೋಪ: ವಕೀಲೆ ವಿರುದ್ಧ ದೂರು
Congress Session: “ಜೈ ಬಾಪು, ಜೈ ಭೀಮ, ಜೈ ಸಂವಿಧಾನ’ ಸಮಾವೇಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.