ನವಜೋತ್‌ ಸಿಂಗ್‌ ಸಿಧು ಜನಪ್ರಿಯ, ಆದರೆ ಚರಣ್‌ಜಿತ್‌ ಸಿಂಗ್‌ ಚನ್ನಿ ಮತಪ್ರಿಯ


Team Udayavani, Feb 10, 2022, 6:45 AM IST

ನವಜೋತ್‌ ಸಿಂಗ್‌ ಸಿಧು ಜನಪ್ರಿಯ, ಆದರೆ ಚರಣ್‌ಜಿತ್‌ ಸಿಂಗ್‌ ಚನ್ನಿ ಮತಪ್ರಿಯ

ಪಂಜಾಬ್‌ನ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿಗೆ ಈಗ 58 ವರ್ಷ. ಮುಂದೊಮ್ಮೆ ಪಂಜಾಬ್‌ ಮುಖ್ಯಮಂತ್ರಿಯಾಗಲೇಬೇಕೆಂದು ಪಣ ತೊಟ್ಟಿರುವ ನವಜೋತ್‌ ಸಿಂಗ್‌ ಸಿಧುಗೂ 58 ವರ್ಷ. ಇವರಿಬ್ಬರ ಸ್ಥಾನಮಾನ ನಿರ್ಧರಿಸುವ ಸ್ಥಿತಿಯಲ್ಲಿರುವ ಕಾಂಗ್ರೆಸ್‌ನ ಅಗ್ರನಾಯಕ ರಾಹುಲ್‌ ಗಾಂಧಿಗೆ 51 ವರ್ಷ!

ಉಳಿದಿಬ್ಬರಿಗೆ ಹೋಲಿಸಿದರೆ ರಾಹುಲ್‌ಗೆ ಸ್ವಲ್ಪ ಸಮಯ ಜಾಸ್ತಿಯಿದೆ, ದೇಶವನ್ನು ಮುನ್ನಡೆಸಲು ಇನ್ನಷ್ಟು ಕಾಯಬಹುದು. ನವಜೋತ್‌ ಸಿಂಗ್‌ ಸಿಧುಗೆ ಅಷ್ಟು ಸಮಯ ಬಾಕಿಯಿಲ್ಲ. ಹಾಗಾಗಿಯೆ ಅವರು ಪಂಜಾಬ್‌ನಲ್ಲಿ ಕಾಂಗ್ರೆಸ್‌ನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಕರೆಸಿಕೊಳ್ಳಲು ತನ್ನಿಂದ ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಿದ್ದರು. ಆದರೆ ರಾಹುಲ್‌ ಮಾತ್ರ ತಣ್ಣಗೆ ಪ್ರಸ್ತುತ ಮುಖ್ಯಮಂತ್ರಿಯಾಗಿರುವ ಚನ್ನಿಯನ್ನೇ ಫೆ.20ರ ಚುನಾವಣೆಗೂ ಮುಖ್ಯಮಂತ್ರಿ ಅಭ್ಯ ರ್ಥಿ ಎಂದು ಘೋಷಿಸಿದ್ದಾರೆ.

ಸಿಧು ಮಾಜಿ ಕ್ರಿಕೆಟಿಗ, ಬಹಳ ಜನಪ್ರಿಯ, ಪಂಜಾಬ್‌ನಲ್ಲಿ ಎಲ್ಲರಿಗೂ ಗೊತ್ತಿರುವ ಹೆಸರು, ಅತ್ಯುತ್ತಮ ಮಾತುಗಾರ. ಲಕ್ಷಾಂತರ ಜನ ಸೇರಿದ್ದರೂ ಎಲ್ಲರೂ ತಲೆದೂಗುವಂತೆ ಮಾಡಬಲ್ಲರು. ಕಾಂಗ್ರೆಸ್‌ನಲ್ಲಿ ಕ್ಯಾಪ್ಟನ್‌ ಎಂದೇ ಕರೆಸಿಕೊಂಡಿದ್ದ ಅಮರೀಂದರ್‌ ಸಿಂಗ್‌ರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಕ್ಕಿಳಿಸಲು ನವಜೋತ್‌ ಹೋರಾಟವೇ ಮುಖ್ಯ ಕಾರಣ. ಸಿಧು ನೇರವಾಗಿ ಅಮರೀಂದರ್‌ ವಿರುದ್ಧ ತಿರುಗಿಬಿದ್ದಿದ್ದರು. 79 ವರ್ಷವಾಗಿದ್ದರೂ ಅಮರೀಂದರ್‌ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಲು ತಯಾರಿರಲಿಲ್ಲ. ಕಾಂಗ್ರೆಸ್‌ಗೆ ಪರ್ಯಾಯ ನಾಯಕತ್ವ ಅನಿವಾರ್ಯವಾಗಿತ್ತು. ಇಂತಹ ಹೊತ್ತಿನಲ್ಲಿ ಕೈಹಿಡಿದ ಸಿಧು ಅಮರೀಂದರ್‌ ವಿರುದ್ಧ ತಿರುಗಿಬಿದ್ದರು. ಅದರ ಫ‌ಲವಾಗಿ ಅಮರೀಂದರ್‌ ಅಧಿಕಾರದಲ್ಲಿದ್ದಾಗಲೇ ಪಂಜಾಬ್‌ ಕಾಂಗ್ರೆಸ್‌ ಅಧ್ಯಕ್ಷರೂ ಆದರು.

ಕಳೆದ ವರ್ಷ ಸೆಪ್ಟಂಬರ್‌ನಲ್ಲಿ ಅಮರೀಂದರ್‌ ಮುಖ್ಯಮಂತ್ರಿ ಸ್ಥಾನದಿಂದ ಅನಿವಾ ರ್ಯವಾಗಿ ಕೆಳಕ್ಕಿಳಿದರು. ಆಗ ಲೆಕ್ಕಾಚಾರದ ಪ್ರಕಾರ ಸಿಧು ಮುಖ್ಯಮಂತ್ರಿಯಾಗಬೇಕಿತ್ತು. ದಿಢೀರನೆ ಚರಣ್‌ಜಿತ್‌ ಸಿಂಗ್‌ ಚನ್ನಿ ಆ ಪಟ್ಟ ಪಡೆದರು. ಇದು ತೀರಾ ಅನಿರೀಕ್ಷಿತ ಹೆಸರು! ಅಲ್ಲೇ ಕಾಂಗ್ರೆಸ್‌ ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಮುನ್ನಡೆಸುವ ವ್ಯಕ್ತಿ ಯಾರೆಂದು ಸೂಚಿಸಿಯಾಗಿತ್ತು. ಮೊನ್ನೆ ರವಿವಾರ ಚನ್ನಿಯೇ ನಾಯಕ ಎಂದು ರಾಹುಲ್‌ ಮತ್ತೂಮ್ಮೆ ಹೇಳಿದ್ದು ಒಂದು ಔಪಚಾರಿಕತೆ ಎನ್ನದೇ ವಿಧಿಯಿಲ್ಲ. ಆದರೆ ಒಳಗೊಳಗೇ ಆ ಸ್ಥಾನಕ್ಕಾಗಿ ಸಿಧು ತೀವ್ರ ಹೋರಾಟ ಮಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ.

ಸಿಧು ಜನಪ್ರಿಯ, ಮಾತುಗಾರ, ಮೇಲಾಗಿ ಸಿಕ್ಖ್ ಜನಾಂಗಕ್ಕೇ ಸೇರಿದ್ದಾರೆ. ಹೀಗಿದ್ದರೂ ಚರಣ್‌ಜಿತ್‌ ಚ‌ನ್ನಿಯನ್ನೇ ಕಾಂಗ್ರೆಸ್‌ ಅಭ್ಯರ್ಥಿ ಎಂದು ಘೋಷಿಸಿದ್ದೇಕೆ? ಇದಕ್ಕೆ ಹಲವು ಕಾರಣಗಳಿವೆ. ಚನ್ನಿ ಅಪರಿಚಿತ ಇರಬಹುದು, ಆದರೆ ಪಂಜಾಬ್‌ನಲ್ಲಿ ಶೇ.32ರಷ್ಟಿರುವ ದಲಿತ ಸಮುದಾಯಕ್ಕೆ ಸೇರಿದವರು. ಅವರು ಮಾಝಿº ಸಮುದಾಯ ವನ್ನು ಪ್ರತಿನಿಧಿಸುತ್ತಾರೆ. ಪ್ರಸ್ತುತ ಕಾಂಗ್ರೆಸ್‌ನ ಪ್ರಮುಖ ಎದುರಾಳಿಯಾಗಿರುವ ಶಿರೋಮಣಿ ಅಕಾಲಿದಳ, ಬಿಎಸ್ಪಿ ಜತೆ ಮೈತ್ರಿ ಮಾಡಿಕೊಂಡು ದಲಿತರ ಮತಗಳನ್ನು ಸೆಳೆಯಲು ಹೊರಟಿದೆ. ಅದಕ್ಕೆ ಕಾಂಗ್ರೆಸ್‌ ಕಡಿವಾಣ ಹಾಕಬೇಕಿದೆ. ಹಾಗೆಯೇ ಪಂಜಾಬ್‌ ಮಾತ್ರ ವ ಲ್ಲದೇ ಉತ್ತರಪ್ರದೇಶದಲ್ಲೂ ಚುನಾವಣೆ ಇದೆ. ಇಲ್ಲೂ ದಲಿತರು ನಿರ್ಣಾಯಕ ಮತದಾರರು. ಈ ನಡೆಯ ಮೂಲಕ ಉತ್ತರಪ್ರದೇಶದಲ್ಲೂ ದಲಿತರನ್ನು ಸೆಳೆಯುವ ಲೆಕ್ಕಾಚಾರವಿದೆ, ಮಾತ್ರವಲ್ಲ ಇಡೀ ದೇಶದಲ್ಲಿ ದಲಿತರ ಸಹಾನುಭೂತಿಯನ್ನು ಗಳಿಸಿಕೊಳ್ಳಬೇಕಿದೆ. ಲೋಕಸಭಾ ಚುನಾವಣೆಗೂ ಹಂತಹಂತವಾಗಿ ರಾಹುಲ್‌ ಸಜ್ಜಾಗಬೇಕಿದೆ. ಚನ್ನಿ ಹೆಸರಿನ ಘೋಷಣೆಯ ಹಿಂದೆ ಇಷ್ಟು ತರ್ಕಗಳು ಅಡಗಿವೆ!

ಎಲ್ಲಕ್ಕಿಂತ ಮುಖ್ಯಮಂತ್ರಿ ಚರಣ್‌ ಶುದ್ಧಹಸ್ತ. ಹಾಗೆಯೇ ಮೃದು ಸ್ವಭಾವದವರು. ಎಲ್ಲರನ್ನೂ ಜತೆಗೊಯ್ಯುವ ಶಕ್ತಿ ಹೊಂದಿದ್ದಾರೆ. ಸಿಧು ಮಾತುಗಾರ ಎನ್ನುವುದೇನೋ ಸತ್ಯ. ಆದರೆ ಎಡವಟ್ಟು ಹೇಳಿಕೆಗಳನ್ನು ಬೇಕಾಬಿಟ್ಟಿ ನೀಡಿದ್ದಾರೆ. ಅವರ ನಡೆಗಳು ಕಾಂಗ್ರೆಸನ್ನು ಹಲವು ಬಾರಿ ಇಕ್ಕಟ್ಟಿಗೆ ಸಿಲುಕಿಸಿವೆ. ಇವನ್ನೆಲ್ಲ ನೋಡಿದಾಗ ಕಾಂಗ್ರೆಸ್‌ ಸುರಕ್ಷಿತ ಆಯ್ಕೆಯಾದ ಚರಣ್‌ಜಿತ್‌ ಕಡೆಗೆ ವಾಲಿದ್ದು ಅಚ್ಚರಿಯ ವಿಚಾರವಲ್ಲ.

ಟಾಪ್ ನ್ಯೂಸ್

1-IFFI

IFFI 2024; ಟಾಕ್ಸಿಕ್‌ ಗೆ ಅತ್ಯುತ್ತಮ ಪ್ರಶಸ್ತಿ, ವಿಕ್ರಾಂತ್‌ ಮಸ್ಸೆಗೆ ವಾರ್ಷಿಕ ಪುರಸ್ಕಾರ

bidar

Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ

1-s-v

Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ

congress

Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

Vijayapura: ಬಿಚ್ಚಿಟ್ಟರೆ ಬಣ್ಣ ಬಯಲು, ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು: ಯತ್ನಾಳ್

ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು, ಇಲ್ಲದಿದ್ದರೆ.. ಸ್ವಪಕ್ಷೀಯರ ವಿರುದ್ಧವೇ ಯತ್ನಾಳ್ ಕಿಡಿ

fir

Karnataka ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿರುದ್ಧ ಲೈಂಗಿ*ಕ ದೌರ್ಜನ್ಯ ಪ್ರಕರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

congress

Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

1-ajmir

Ajmer dargah ಶಿವ ದೇವಾಲಯ?; ಕೋಮು ಸೌಹಾರ್ದತೆಗೆ ಭಂಗ ತರುವ ಕುತಂತ್ರ: ಖಾದಿಮರ ಮನವಿ

1-JMM

Jharkhand; ಸಿಎಂ ಆಗಿ ಹೇಮಂತ್ ಸೊರೇನ್ ಪ್ರಮಾಣ ವಚನ ಸ್ವೀಕಾರ

Delhi: ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಸ್ಫೋಟ… ಪೊಲೀಸ್, ಅಗ್ನಿಶಾಮಕ ದಳ ದೌಡು

Delhi: ಒಂದು ತಿಂಗಳ ಅಂತರದಲ್ಲಿ ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಎರಡನೇ ಸ್ಫೋಟ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

1-IFFI

IFFI 2024; ಟಾಕ್ಸಿಕ್‌ ಗೆ ಅತ್ಯುತ್ತಮ ಪ್ರಶಸ್ತಿ, ವಿಕ್ರಾಂತ್‌ ಮಸ್ಸೆಗೆ ವಾರ್ಷಿಕ ಪುರಸ್ಕಾರ

4

Kasaragod: ಕಾರು ಢಿಕ್ಕಿ ಹೊಡೆಸಿ ವ್ಯಾಪಾರಿಯ 2 ಕೆಜಿ ಚಿನ್ನ ದರೋಡೆ

Untitled-5

Kasaragod: ನಗ-ನಗದು ಕಳವು; ಆರೋಪಿ ಬಂಧನ

4

Punjalkatte: ರಾಯಿ; ಯುವಕ ನೇಣು ಬಿಗಿದು ಆತ್ಮಹತ್ಯೆ

Untitled-5

Puttur: ಮಾದಕ ಪದಾರ್ಥ ಸಹಿತ ಆರೋಪಿ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.