Navy Day: ಜನರ ಹಿತಾಸಕ್ತಿ ಬದಿಗಿಟ್ಟು ಪಾಕ್‌ನಿಂದ ಶಸ್ತ್ರಾಸ್ತ್ರ ಆಯ್ಕೆ:ನೌಕಾಪಡೆ ಮುಖ್ಯಸ್ಥ
ನಮಗೆ ಎಲ್ಲವೂ ಗೊತ್ತಾಗುತ್ತಿದೆ: ಪಾಕಿಸ್ಥಾನ, ಚೀನಕ್ಕೆ ಪರೋಕ್ಷ ಎಚ್ಚರಿಕೆ
Team Udayavani, Dec 3, 2024, 7:15 AM IST
ಹೊಸದಿಲ್ಲಿ: “ಪಾಕಿಸ್ಥಾನ ತನ್ನ ಜನರ ಹಿತಾಸಕ್ತಿಯನ್ನು ಬಿಟ್ಟು, ಶಸ್ತ್ರಾಸ್ತ್ರವನ್ನೇ ಬಯಸುತ್ತಿದೆ. ನೆರೆ ದೇಶಗಳಿಂದ ಬರುವ ಯಾವುದೇ ಆಪತ್ತುಗಳನ್ನು ಹಿಮ್ಮೆಟ್ಟಿಸಲು ನಾವು ಸನ್ನದ್ಧರಾಗಿದ್ದೇವೆ’ ಎಂದು ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ.ತ್ರಿಪಾಠಿ ಹೇಳಿದ್ದಾರೆ. ಹಿಂದೂ ಮಹಾಸಾಗರದಲ್ಲಿ ಪಾಕ್, ಚೀನ ನೌಕೆಗಳು ಕಾಣಿಸಿಕೊಂಡ ಬೆನ್ನಲ್ಲೇ ಅವರ ಹೇಳಿಕೆ ಮಹತ್ವ ಪಡೆದಿದೆ.
ನೌಕಾದಿನದ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, “ಪಾಕ್ ನೌಕಾಪಡೆಯು ಇದ್ದಕ್ಕಿದ್ದಂತೆ ಬಲವರ್ಧಿಸಿಕೊಳ್ಳುತ್ತಿರುವುದು ಗೊತ್ತು. 50 ನೌಕೆಗಳ ಪಡೆಯಾಗಲು ಪಾಕ್ ಉದ್ದೇಶಿಸಿದೆ. ಆದರೆ ಅವರ ಆರ್ಥಿಕ ಸ್ಥಿತಿ ನೋಡಿದರೆ ಇದು ಹೇಗೆ ಸಾಧ್ಯ ಎಂಬ ಅಚ್ಚರಿಯೂ ಆಗುತ್ತಿದೆ. ಚೀನ ಬೆಂಬಲ ದೊಂದಿಗೆ ಪಾಕ್ ಯುದ್ಧ ನೌಕೆ ನಿರ್ಮಿಸುತ್ತಿರುವುದು, ಯಾರು ಏನು ಮಾಡುತ್ತಿದ್ದಾರೆ ಎಂಬುದೂ ನಮಗೆ ಗೊತ್ತಿದೆ ಎಂದು ಪರೋಕ್ಷವಾಗಿಯೇ ಎಚ್ಚರಿಕೆ ನೀಡಿದ್ದಾರೆ.
ನೌಕಾಪಡೆಗೆ 26 ರಫೇಲ್ ಬಲ:
ನಮ್ಮ ನೌಕಾಪಡೆಗೆ 26 ರಫೇಲ್‌ಗಳ ಖರೀದಿಗೆ ಶೀಘ್ರ ಒಪ್ಪಂದ ಮಾಡಿಕೊಳ್ಳುವ ನಿರೀಕ್ಷೆ ಇದೆ. ಅಣ್ವಸ್ತ್ರ ಸಜ್ಜಿತವಾದ 2 ದೇಶೀಯ ಜಲಾಂತರ್ಗಾಮಿಗಳ ನಿರ್ಮಾಣಕ್ಕೂ ಭದ್ರತೆ ಸಂಬಂಧಿಸಿದ ಸಂಪುಟ ಸಮಿತಿ ಒಪ್ಪಿಗೆ ನೀಡಿದೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tamil Nadu: ಗೋ ಮಾಂಸ ತಿನ್ನೋದು ಸರಿ ಎಂದಾದರೆ ಮೂತ್ರ ಯಾಕೆ ಬೇಡ: ಬಿಜೆಪಿ
Delhi Polls: ದಿಲ್ಲಿ ವಿಧಾನಸಭೆಯ 70 ಸ್ಥಾನಕ್ಕೆ ಬರೋಬ್ಬರಿ 699 ಅಭ್ಯರ್ಥಿಗಳು ಸ್ಪರ್ಧೆ!
Supreme Court: ಟೆಕಿ ಅತುಲ್ ಪುತ್ರನನ್ನು ಅಜ್ಜಿ ಸುಪರ್ದಿಗೆ ನೀಡಲು ಸುಪ್ರೀಂ ನಕಾರ
NRI: ಸಂಸತ್ತಿನಲ್ಲಿ ಎನ್‌ಆರ್‌ಐ ಪ್ರಾತಿನಿಧ್ಯ: ಸ್ಥಾಯಿ ಸಮಿತಿ ಸಭೇಲಿ ಚರ್ಚೆ
Dog’s Revenge: ತನಗೆ ಡಿಕ್ಕಿ ಹೊಡೆದ ಕಾರಿನ ಮೇಲೆ ಸೇಡು ತೀರಿಸಿಕೊಂಡ ಶ್ವಾನ…