Naxal Encounter: ಪೀತಬೈಲುವರೆಗೂ ದುರ್ಗಮ ಹಾದಿ: 8 ಕಿ.ಮೀ. ನಡೆದೇ ಸಾಗಬೇಕು

ತುರ್ತು ಆರೋಗ್ಯ ಸೇವೆ ಪಡೆಯಲೂ ಕೂಡ ಇಲ್ಲಿನ ಜನರಿಗೆ ಸಾಕಷ್ಟು ತೊಂದರೆ

Team Udayavani, Nov 20, 2024, 7:25 AM IST

ANF2

ಹೆಬ್ರಿ: ನಕ್ಸಲ್‌ ಎನ್‌ಕೌಂಟರ್‌ ನಡೆದ ಪೀತಬೈಲು ಗ್ರಾಮ ಮೂಲ ಸೌಕರ್ಯಗಳಿಂದ ವಂಚಿತವಾಗಿವೆ. ಕಬ್ಬಿನಾಲೆ ಮಾವಿನಕಟ್ಟೆಯಿಂದ ತಿಂಗಳಮಕ್ಕಿ, ಪೀತಬೈಲುವರೆಗೆ ದುರ್ಗಮ ರಸ್ತೆ ಇದೆ. ಈ ಪರಿಸರದಲ್ಲಿ ಕಾಡಿನ ಮಧ್ಯೆ ಅಲ್ಲಲ್ಲಿ ಒಂದೊಂದು ಮನೆಗಳು ಮಾತ್ರವಿವೆ. ವಿದ್ಯುತ್‌ ಸಂಪರ್ಕವೂ ಇಲ್ಲ. ಸಮರ್ಪಕವಾದ ರಸ್ತೆಯೂ ಇಲ್ಲ.

ಕಬ್ಬಿನಾಲೆ ಸಮೀಪದ ಮಾವಿನಕಟ್ಟೆಯವರೆಗೆ ರಸ್ತೆ ಸೌಕರ್ಯ ಇದೆ. ಅಲ್ಲಿಂದ ಎಂಟು ಕಿ.ಮೀ. ಹೊಂಡ, ಗುಂಡಿ, ಕಲ್ಲು ಮುಳ್ಳುಗಳಿಂದ ಕೂಡಿದ ಮಣ್ಣು ರಸ್ತೆಯಲ್ಲಿ ಸಾಗಿದರೆ ಎನ್‌ಕೌಂಟರ್‌ ಆಗಿರುವ ಪ್ರದೇಶ ಸಿಗುತ್ತದೆ. ಇಲ್ಲಿಗೆ ಜೀಪು ಹೋಗುತ್ತದೆ. ದ್ವಿಚಕ್ರ ವಾಹನ ಕಷ್ಟಪಟ್ಟು ಹೋಗುತ್ತದೆ. ಮಂಗಳವಾರ ಪತ್ರಕರ್ತರು ಕೂಡ ಈ ರಸ್ತೆಯಲ್ಲಿ ನಡೆದುಕೊಂಡೇ ಹೋಗಬೇಕಾಯಿತು.

ಕೃಷಿ, ಕೂಲಿಯೇ ಆಧಾರ
ಇಲ್ಲಿನ ನಿವಾಸಿ ಸ್ಥಳೀಯವಾಗಿ ಕೃಷಿ ಮತ್ತು ಕೃಷಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡಿಕೊಂಡಿದ್ದಾರೆ. ಆರೋಗ್ಯ, ಶಿಕ್ಷಣ, ಪಡಿತರಕ್ಕಾಗಿ ದೂರದ ಊರಿಗೆ ಕಾಲ್ನಡಿಗೆಯಲ್ಲಿಯೇ ತೆರಳಬೇಕು. ಇಲ್ಲಿನ ಬಹುತೇಕ ಮಕ್ಕಳಿಗೆ ಸರಕಾರಿ ವಸತಿ ಶಾಲೆಗಳಲ್ಲಿ ಶಿಕ್ಷಣಕ್ಕೆ ವ್ಯವಸ್ಥೆ ಮಾಡಲಾಗಿದೆ.

ತುರ್ತು ಆರೋಗ್ಯ ಸೇವೆ ಪಡೆಯಲು ಇಲ್ಲಿನ ಜನರು ಸಾಕಷ್ಟು ತೊಂದರೆ ಅನುಭವಿಸುತ್ತಾರೆ. ಅನಾರೋಗ್ಯ ಉಂಟಾದರೆ ಆಸ್ಪತ್ರೆಗೆ ಕರೆದೊಯ್ಯಲು ಸರಿಯಾದ ರಸ್ತೆಯೇ ಇಲ್ಲಿಲ್ಲ. ಮಳೆಗಾಲದಲ್ಲಿ ಇಲ್ಲಿನ ಸಂಚಾರ ಮತ್ತಷ್ಟು ಕಷ್ಟಕರ ಎಂದು ಸ್ಥಳೀಯರು ಹೇಳುತ್ತಾರೆ. ಸರಕಾರ, ಜಿಲ್ಲಾಡಳಿತ ಈ ಬಗ್ಗೆ ಮುತುವರ್ಜಿ ವಹಿಸಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.

ಹುತಾತ್ಮರ ದಿನ ಆಚರಣೆಗೆ ಬಂದಿದ್ದರೇ?
2003ರ ನ. 17ರಂದು ಈದುವಿನಲ್ಲಿ ರಾಜ್ಯದ ಮೊದಲ ನಕ್ಸಲ್‌ ಎನ್‌ಕೌಂಟರ್‌ ನಡೆದಿತ್ತು. ಇದರ 21ನೇ ವರ್ಷ ಕಳೆದು ಎರಡೇ ದಿನದಲ್ಲಿ ವಿಕ್ರಂ ಗೌಡನ ಎನ್‌ಕೌಂಟರ್‌ ನಡೆದಿರುವುದು ವಿಶೇಷವಾಗಿದೆ. ಸಾಮಾನ್ಯವಾಗಿ ನಕ್ಸಲ್‌ ಮೃತಪಟ್ಟ ದಿನ ಹತ್ಯೆಯಾದ ಸ್ಥಳಕ್ಕೆ ಇತರ ನಕ್ಸಲ್‌ ಮುಖಂಡರು ತೆರಳಿ ಗೌರವ ಸಲ್ಲಿಸಿ “ಹುತಾತ್ಮರ ದಿನ’ ಆಚರಿಸುವುದು ಅವರು ರೂಢಿಸಿಕೊಂಡಿರುವ ಕ್ರಮ.

ಅದರಂತೆ ಈ ಭಾಗಕ್ಕೆ ವಿಕ್ರಂ ಗೌಡ ಬಂದಿದ್ದನೋ ಅಥವಾ ಶರಣಾಗತಿ ಯೋಚನೆಯಲ್ಲಿ ಆಗಮಿಸಿದ್ದನೋ ಎನ್ನುವ ಬಗ್ಗೆ ಸಂಶಯಗಳಿವೆ. ಶರಣಾಗತಿ ಎಂಬುದು ನಕ್ಸಲ್‌ ಸಿದ್ಧಾಂತಕ್ಕೆ ವಿರುದ್ಧವಾದದ್ದು ಎಂದು ಆತ ನಂಬಿದ್ದ. ಆದ್ದರಿಂದ ಆತ ಶರಣಾಗತಿಗೆ ಆಗಮಿಸಿರುವ ಸಾಧ್ಯತೆ ವಿರಳ. ಇನೊ°ಂದೆಡೆ ಶರಣಾಗತಿ ವಿಚಾರದಲ್ಲಿ ತಂಡದ ಸದಸ್ಯರೊಳಗೆ ಪರ-ವಿರೋಧ ಅಭಿಪ್ರಾಯವಿತ್ತು ಎನ್ನಲಾಗಿದೆ.

ಜನರ ಓಡಾಟದ ಮೇಲೂ ನಿಗಾ
ನಕ್ಸಲ್‌ ಎನ್‌ಕೌಂಟರ್‌ ನಡೆದ ಸುತ್ತಲಿನ ಪ್ರದೇಶದ ಜನರ ಓಡಾಟದ ಮೇಲೂ ಪೊಲೀಸರು ಮತ್ತು ಎಎನ್‌ಎಫ್ ಸಿಬಂದಿ ನಿಗಾ ಇರಿಸಿದ್ದು ಕಂಡು ಬಂತು. ಕಬ್ಬಿನಾಲೆ, ಮಾವಿನಕಟ್ಟೆಗೆ ಬಂದಿಳಿಯುವ ಪ್ರತಿಯೊಬ್ಬರೂ ಎಲ್ಲಿಗೆ ಹೋಗುತ್ತಾರೆ ಮತ್ತು ಏನು ಮಾಡುತ್ತಾರೆ ಎಂಬುದರ ಮೇಲೆ ಕಣ್ಗಾವಲು ಇರಿಸಲಾಗಿತ್ತು.

ಮಾವಿನಕಟ್ಟೆಯಿಂದ ಎನ್‌ಕೌಂಟರ್‌ ನಡೆದ ಪೀತಬೈಲು ಪ್ರದೇಶಕ್ಕೆ ಖಾಸಗಿ ವಾಹನಗಳ ಸಂಚಾರವನ್ನು ತಡೆ ಹಿಡಿಯಲಾಗಿತ್ತು. ಹೆಬ್ರಿ ಸಮೀಪದ ಕೂಡ್ಲು
ಫಾಲ್ಸ್‌ಗೆ ಬರುವ ಚಾರಣಿಗರಿಗೆ ಪ್ರಸ್ತುತ ಪ್ರವೇಶ ನಿರ್ಬಂಧಿಸಲಾಗಿದೆ. ಎನ್‌ಕೌಂಟರ್‌ ವೇಳೆ ಕೆಲವು ನಕ್ಸಲರು ತಪ್ಪಿಸಿಕೊಂಡಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಈ ರೀತಿ ತಡೆಯೊಡ್ಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಟಾಪ್ ನ್ಯೂಸ್

1-bagalkote

Bagalkote: ಹೇರ್ ಡ್ರೈಯರ್ ಸ್ಪೋಟಗೊಂಡು ಮಹಿಳೆಯ ಎರಡು ಕೈ ತುಂಡು

Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್‌!

Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್‌!

Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್‌ 

Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್‌ 

1-supri

Crypto funds ಡೀಲ್ ಆಡಿಯೋ ಆರೋಪ: ನನ್ನ ಧ್ವನಿಯಲ್ಲ ಎಂದು ಕಿಡಿಯಾದ ಸುಪ್ರಿಯಾ ಸುಳೆ

1-leo

Football;ಕೇರಳದಲ್ಲಿ ಅಂತಾರಾಷ್ಟ್ರೀಯ ಪಂದ್ಯ ಆಡಲಿರುವ ದಿಗ್ಗಜ ಲಿಯೋನೆಲ್ ಮೆಸ್ಸಿ

delhi air

Delhi ಮಿತಿ ಮೀರಿದ ವಾಯು ಮಾಲಿನ್ಯ: ಸರಕಾರಿ ಕಚೇರಿಗಳ 50% ಸಿಬಂದಿಗಳಿಗೆ ಮನೆಯಿಂದಲೇ ಕೆಲಸ

1-wqewqe

BBK11: ದೊಡ್ಮನೆಯಲ್ಲಿ ಸೆಡೆ ಜಗಳ.. ಬಿಗ್ ಬಾಸ್ ನಿಂದ ಅಚೆ ಬರಲು ರೆಡಿಯಾದ ಸುರೇಶ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7

Udupi: ನಮ್ಮ ಶೌಚಾಲಯ ನಮ್ಮ ಗೌರವ ತಿಂಗಳ ಆಂದೋಲನಕ್ಕೆ ಚಾಲನೆ

13

Udupi: 10 ತಿಂಗಳಲ್ಲಿ 228 ಕಳವು ಕೇಸ್‌!

ANF-Coombing

History: ನಕ್ಸಲ್‌ ಚಳವಳಿಯ ರಕ್ತಸಿಕ್ತ ಇತಿಹಾಸ; ಸಾವಿನೊಂದಿಗೆ ಪೊಲೀಸ್‌-ನಕ್ಸಲ್‌ ಮುಖಾಮುಖಿ

Naxal-Postmartam

Naxal Vikram Gowda: ಮೂರು ಬಾರಿ ತಪ್ಪಿಸಿಕೊಂಡವ ಹುಟ್ಟೂರಲ್ಲೇ ಪ್ರಾಣ ತೆತ್ತ

Naxal-Vikram-Sister

Naxal Vikram Encounter: ಟಿವಿ ನೋಡಿ ವಿಷಯ ತಿಳಿಯಿತು, ನಮಗೆ ಯಾರೂ ಹೇಳಿಲ್ಲ: ಸಹೋದರಿ

MUST WATCH

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

udayavani youtube

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

ಹೊಸ ಸೇರ್ಪಡೆ

1-bagalkote

Bagalkote: ಹೇರ್ ಡ್ರೈಯರ್ ಸ್ಪೋಟಗೊಂಡು ಮಹಿಳೆಯ ಎರಡು ಕೈ ತುಂಡು

15

UV Fusion: ಬಣ್ಣದ ಛತ್ರಿ; ಇಲ್ಲೊಂದು ಕಥೆ

14

UV Fusion: ವಯೋಮಾನದ ಕಾಲಘಟ್ಟಕ್ಕೆ ಬದುಕಿನನುಭವದ ಸಾರ

13

UV Fusion: ಹಿರಿಜೀವಗಳ ಕಾಳಜಿ ವಹಿಸಿ

12

UV Fusion: ಇಂಗ್ಲೆಂಡ್‌ ಟು ಕೋಲ್ಕತಾ ಬಸ್‌ ಒಂದು ನೆನಪು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.