Naxal Vikram Gowda: ಮೂರು ಬಾರಿ ತಪ್ಪಿಸಿಕೊಂಡವ ಹುಟ್ಟೂರಲ್ಲೇ ಪ್ರಾಣ ತೆತ್ತ

21 ವರ್ಷಗಳಿಂದ ನಕ್ಸಲನಾಗಿದ್ದ ವಿಕ್ರಂ ಗೌಡ, ಸಾಕೇತ್‌ರಾಜನ್‌ ಸಾವಿನ ಪ್ರತೀಕಾರಕ್ಕೆ ಹೊಂಚು ಹಾಕುತ್ತಿದ್ದ !

Team Udayavani, Nov 20, 2024, 7:50 AM IST

Naxal-Postmartam

ಉಡುಪಿ: ನಕ್ಸಲ್‌ ನಿಗ್ರಹ ಪಡೆಯಿಂದ ಹತ್ಯೆಗೀಡಾದ ನಕ್ಸಲ್‌ ಮುಖಂಡ ವಿಕ್ರಂ ಗೌಡ ಹೆಬ್ರಿ ತಾಲೂಕಿನ ಕೂಡ್ಲು ಬಳಿಯ ನಾಡ್ಪಾಲು ಗ್ರಾಮದ ನಿವಾಸಿ. ಹೊಟೇಲ್‌ನಲ್ಲಿ ಕೆಲಸ ಮಾಡುತ್ತಿದ್ದ ಆತ ಕುದುರೆಮುಖ ಉದ್ಯಾನವನ ವಾಸಿಗಳನ್ನು ಒಕ್ಕೆಲೆಬ್ಬಿಸುವುದನ್ನು ವಿರೋಧಿಸಿ ಆರಂಭವಾದ ಹೋರಾಟದಲ್ಲಿ ಸಕ್ರಿಯನಾಗಿ ನಕ್ಸಲ್‌ ಚಳವಳಿಗೆ ಧುಮುಕಿದ್ದ.

ಕರ್ನಾಟಕ ಮಾತ್ರವಲ್ಲದೇ ಸಮೀಪದ ಕೇರಳ, ತಮಿಳುನಾಡಿನಲ್ಲಿ ನಕ್ಸಲ್‌ ಚಟುವಟಿಕೆಯಲ್ಲಿ ಸಕ್ರಿಯನಾಗಿದ್ದ. ಮೂರು ಬಾರಿ ಕರ್ನಾಟಕದ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿದ್ದ ಈತ ಸುಮಾರು 20 ಪ್ರಕರಣಗಳಲ್ಲಿ ದಿ ಮೋಸ್ಟ್‌ ವಾಂಟೆಡ್‌ ಆಗಿದ್ದ.

ಸಾಕೇತ್‌ ರಾಜನ್‌ನಿಂದ ತರಬೇತಿ, ತ್ರಿ-ಜಂಕ್ಷನ್‌ನಲ್ಲಿ ಓಡಾಡಿದ್ದ
ವಿಕ್ರಂ ಗೌಡ ಕಳೆದ 21 ವರ್ಷಗಳಿಂದ ನಕ್ಸಲೈಟ್‌ ಆಗಿ ಗುರುತಿಸಿಕೊಂಡು ಪೊಲೀಸರಿಗೆ ತಲೆ ನೋವಾ ಗಿದ್ದ. ಸಾಕೇತ್‌ ರಾಜನ್‌ನಿಂದ ನಕ್ಸಲರ ಕಾರ್ಯ ಚಟುವಟಿಕೆ ಕುರಿತಂತೆ ತರಬೇತಿ ಪಡೆದಿದ್ದ. ರಾಜ್ಯದೊಳಗೆ, ಅನ್ಯ ರಾಜ್ಯಗಳಲ್ಲಿ ತಲೆಮರೆಸಿ ಕೊಂಡು ಅಡ್ಡಾಡುತ್ತಿದ್ದ. 2016ರಲ್ಲಿ ಕೇರಳದ ನೀಲಾಂಬುರ್‌ ಅರಣ್ಯದಲ್ಲಿ ಅಲ್ಲಿನ ಪೊಲೀಸ್‌ ಇಲಾಖೆಯ “ಥಂಡರ್‌ ಬೋಲ್ಟ್’ ಪಡೆಯ ಜತೆಗೆ ನಕ್ಸಲರು ಗುಂಡಿನ ಚಕಮಕಿ ನಡೆಸಿದ್ದು, ಇಬ್ಬರು ನಕ್ಸಲರು ಹತರಾಗಿದ್ದರು. ವಿಕ್ರಂ ಗೌಡ ಮಾತ್ರ ತಲೆಮರೆಸಿಕೊಂಡಿದ್ದ.

ಕೇರಳದಲ್ಲಿ ಚಟುವಟಿಕೆಗಳನ್ನು ನಡೆಸಿದ್ದ ವಿಕ್ರಂಗೌಡ ಆ ಬಳಿಕ ಕರ್ನಾಟಕಕ್ಕೆ ಆಗಮಿಸಿ ತಳವೂರುವ ಪ್ರಯತ್ನ ನಡೆಸಿದ್ದ. ಪಶ್ಚಿಮ ಘಟ್ಟ ತಪ್ಪಲಿನ ಕೊಡಗು, ದ.ಕ., ಕೇರಳ ತ್ರಿಜಂಕ್ಷನ್‌ಗಳಲ್ಲಿ ಸಂಗಡಿಗರೊಂದಿಗೆ ನಿರಂತರ ಓಡಾಡುತ್ತಿದ್ದ. ನಾಲ್ಕು ತಿಂಗಳ ಹಿಂದೆ ದ.ಕ.-ಕೊಡಗು ಗಡಿಭಾಗದಲ್ಲಿ ಆಗಾಗ್ಗೆ ಕಾಣಿಸಿ ಕೊಂಡು ಚುರುಕಾಗಿದ್ದ. ಬಳಿಕದ ದಿನ ಗಳಲ್ಲಿ ಚಿಕ್ಕ ಮಗಳೂರು, ಉಡುಪಿಯ ಕಾಡಂಚಿನ ಭಾಗಗಳಲ್ಲಿ ಓಡಾಟ ನಡೆಸಿ ಸಂಚಲನ ಮೂಡಿಸಿದ್ದ.

ಗುರಿ ಸಾಧಿಸುವ ಮುನ್ನ ಪ್ರಾಣ ಬಿಟ್ಟ
ಸಾಕೇತ್‌ ರಾಜನ್‌ ಕಾಲದಲ್ಲಿ ನಕ್ಸಲ್‌ ಚಟುವಟಿಕೆಗಳು ಉತ್ತುಂಗದಲ್ಲಿದ್ದವು. 2005ರ ಫೆ. 5ರಂದು ಮೆಣಸಿನ ಹಾಡ್ಯದಲ್ಲಿ ಸಾಕೇತ್‌ನನ್ನು ಎಎನ್‌ಎಫ್ ಪಡೆಯವರು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಸಾಕೇತ್‌ ಜತೆಗಿದ್ದ ವಿಕ್ರಂ ಗೌಡ ತಪ್ಪಿಸಿಕೊಂಡಿದ್ದ. ಬಳಿಕ ವಿಕ್ರಂ ಸ್ವತಃ ತಂಡವನ್ನು ಮುನ್ನಡೆಸಿದ್ದ. ತನ್ನ ನಾಯಕನ ಸಾವಿಗೆ ಪ್ರತೀಕಾರ ತೀರಿಸುವ ಸಂಕಲ್ಪ ತೊಟ್ಟಿದ್ದ. ಕೇರಳ, ಕರ್ನಾಟಕದ ಕಾಡು-ಗುಡ್ಡಗಳಲ್ಲಿ ಅಲೆದಾಡುತ್ತ ಹೊಂಚುಹಾಕುತ್ತಿದ್ದ. ಆದರೆ ತನ್ನ ನಾಯಕನ ಹಾದಿಯಲ್ಲೇ ಸಾಗಿ ಆತನಂತೆಯೇ ಪೊಲೀಸರ ಬಂದೂಕಿಗೆ ಪ್ರಾಣ ತೆತ್ತಿದ್ದಾನೆ.

ಯಾವತ್ತಾದರೂ ಸಾಯಲೇಬೇಕು ಎಂದಿದ್ದ
ಮಾರ್ಚ್‌ನಲ್ಲಿ ದ.ಕ., ಕೊಡಗು ಭಾಗಕ್ಕೆ ನಕ್ಸಲರು ಭೇಟಿ ನೀಡಿದ್ದ ವೇಳೆ ಸುಬ್ರಹ್ಮಣ್ಯ ಸಮೀಪದ ಐನಕಿದುವಿನ ಪ್ರಗತಿಪರ ಕೃಷಿಕರ ಮನೆಗೆ ನಾಲ್ವರು ನಕ್ಸಲರು ಭೇಟಿ ನೀಡಿದ್ದರು. ಆಗ ಮನೆಯ ಯಜಮಾನನ ಜತೆ ಮೃದುವಾಗಿ ಮಾತನಾಡಿದ್ದ ವಿಕ್ರಂ ಗೌಡ ತನ್ನ ಹೋರಾಟದ ಉದ್ದೇಶಗಳನ್ನು ಹೇಳಿ ಮನವೊಲಿಸಲು ಪ್ರಯತ್ನಿಸಿದ್ದ. ಅನ್ಯಾಯದ ವಿರುದ್ಧದ ಹೋರಾಟ ನಮ್ಮದು. ಬಡವರಿಗೆ ನ್ಯಾಯ ಕೊಡಿಸಲು ಚಳವಳಿ ನಡೆಸುತ್ತಿದ್ದೇವೆ. ನಮ್ಮನ್ನು ಬೆಂಬಲಿಸಿ, ಯಾವತ್ತಾದರೂ ಸಾಯಲೇ ಬೇಕಲ್ಲವೇ ಎಂದಿದ್ದ. ಈ ಭಾಗಕ್ಕೆ ಭೇಟಿ ನೀಡಿದಾಗೆಲ್ಲ ಆತ ನಿರ್ಭೀತಿಯಿಂದ ಇರುತ್ತಿದ್ದ ಎನ್ನುತ್ತಾರೆ ಆತನನ್ನು ಕಂಡವರು.

ಎತ್ತ ಕಡೆ ತೆರಳಿರಬಹುದು?
ಎನ್‌ಕೌಂಟರ್‌ ಬಳಿಕ ಮೂವರು ನಕ್ಸಲರು ಕಾಡು ದಾರಿಯಲ್ಲಿ ಸುರಕ್ಷಿತ ಪ್ರದೇಶಗಳಿಗೆ ಪರಾರಿಯಾಗಿರುವ ಸಾಧ್ಯತೆಯಿದೆ. ಎನ್‌ಕೌಂಟರ್‌ ನಡೆದ ಸ್ಥಳದಿಂದ ಶೃಂಗೇರಿ, ಕುದುರೆಮುಖ ಮಾರ್ಗವಾಗಿ ಚಿಕ್ಕಮಗಳೂರು ಭಾಗಕ್ಕೆ, ಇನ್ನೊಂದು ಮಾರ್ಗ ಬೆಳ್ತಂಗಡಿ, ಶಿರಾಡಿ, ಗುಂಡ್ಯ ಮೂಲಕ ಸುಬ್ರಹ್ಮಣ್ಯ ಕಡೆ ತೆರಳಿ ಅಲ್ಲಿಂದ ಕೊಡಗು, ಕೇರಳ ಭಾಗಕ್ಕೆ ಪರಾರಿಯಾಗಲು ಅನುಕೂಲಕರವಾಗಿದೆ. ಈ ಮಾರ್ಗದಲ್ಲಿ ತೆರಳಿರುವ ಸಾಧ್ಯತೆಯಿದೆ.

ತಂಡದಲ್ಲಿ ನಾಲ್ವರು ಇದ್ದರು
ನ. 18ರ ರಾತ್ರಿ ಹೆಬ್ರಿಯ ಪೀತಬೈಲಿನಲ್ಲಿ ನಕ್ಸಲ್‌ ಕಮಾಂಡರ್‌ ವಿಕ್ರಂ ಗೌಡ ಹತ್ಯೆಯಾದ ವೇಳೆ ತಂಡದಲ್ಲಿ ನಾಲ್ವರು ನಕ್ಸಲರು ಇದ್ದ ಬಗ್ಗೆ ಪೊಲೀಸ್‌ ತನಿಖೆಯಲ್ಲಿ ಕಂಡುಬಂದಿದೆ. ಅವರಲ್ಲಿ ಸುಂದರಿ ಮತ್ತು ವನಜಾಕ್ಷಿ ಗಾಯ ಗೊಂಡಿದ್ದಾರೆ ಎನ್ನಲಾಗುತ್ತಿದ್ದು, ಇನ್ನೋರ್ವ ಕೇರಳ ಮೂಲದ ನಕ್ಸಲ್‌ ಜಯಣ್ಣ ಎಂದು ತಿಳಿದು ಬಂದಿದೆ. ವಿಕ್ರಂ ತಂಡದ ಮುಂಚೂಣಿ ನಾಯಕಿ ಲತಾ ಮುಂಡುಗಾರು ತಂಡದಲ್ಲಿದ್ದಳು ಎನ್ನಲಾಗಿತ್ತಾದರೂ ಅದಿನ್ನೂ ಖಚಿತವಾಗಿಲ್ಲ. ವಿಕ್ರಂನ ಅನಂತರದ ತಂಡದ ಪ್ರಭಾವಿ ನಕ್ಸಲ್‌ ನಾಯಕಿ ಲತಾ ಮುಂಡುಗಾರು ಕಾಯಿಲೆಯಿಂದಲೂ ಬಳಲುತ್ತಿದ್ದಾಳೆ.

ತಡರಾತ್ರಿವರೆಗೂ ನಡೆಯದ ಮರಣೋತ್ತರ ಪರೀಕ್ಷೆ
ಮಣಿಪಾಲ: ಹೆಬ್ರಿಯ ಕಾಡಿನಲ್ಲಿ ಪೊಲೀಸರ ಎನ್‌ಕೌಂಟರ್‌ನಲ್ಲಿ ಮೃತಪಟ್ಟ ನಕ್ಸಲ್‌ ನಾಯಕ ವಿಕ್ರಂ ಗೌಡನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಗಳವಾರ ಮಣಿಪಾಲದ ಕೆಎಂಸಿ ಶವ ಪರೀಕ್ಷಾಗಾರಕ್ಕೆ ತರಲಾಗಿದೆ. ತಡರಾತ್ರಿಯವರೆಗೂ ಮರಣೋತ್ತರ ಪರೀಕ್ಷೆ ನಡೆಯಲಿಲ್ಲ.

ಸಂಜೆ ಸುಮಾರು 5 ಗಂಟೆಯ ವೇಳೆ ಪೊಲೀಸ್‌ ಭದ್ರತೆಯಲ್ಲಿ ಆ್ಯಂಬುಲೆನ್ಸ್‌ನಲ್ಲಿ ಮೃತ ದೇಹ ವನ್ನು ತರಲಾಯಿತು. ಆದರೆ ಮೃತರ ಮನೆ ಮಂದಿ ಬಾರದ ಕಾರಣ ಪಂಚನಾಮೆ ನಡೆಸಲು ಸಾಧ್ಯವಾಗಿಲ್ಲ. ತಡರಾತ್ರಿಯವರೆಗೂ ಮೃತದೇಹ ವನ್ನು ಪೊಲೀಸರ ಭದ್ರತೆಯಲ್ಲಿ ಪರೀಕ್ಷಾ ಕೇಂದ್ರ ದೊಳಗೆ ಇರಿಸಲಾಗಿತ್ತು. ಬುಧವಾರ ಬೆಳಗ್ಗೆ ಮರಣೋ ತ್ತರ ಪರೀಕ್ಷೆ ನಡೆಯುವ ಸಾಧ್ಯತೆಗಳಿವೆ.

ಇಂದು ಪ್ರಣವ್‌ ಮೊಹಂತಿ ಭೇಟಿ
ಎನ್‌ಕೌಂಟರ್‌ ನಡೆದ ಸ್ಥಳಕ್ಕೆ ಬುಧವಾರ ಆಂತರಿಕ ಭದ್ರತ ವಿಭಾಗದ ಡಿಜಿಪಿ ಪ್ರಣವ್‌ ಮೊಹಂತಿ ಭೇಟಿ ನೀಡಲಿದ್ದಾರೆ. ಘಟನೆ ನಡೆದ ಪರಿಸರ ಹಾಗೂ ಹೆಬ್ರಿ ಭಾಗದಲ್ಲಿ ಮಂಗಳವಾರ ಹೆಚ್ಚುವರಿ ಪೊಲೀಸರು ಹಾಗೂ ಎಎನ್‌ಎಫ್ ಸಿಬಂದಿಯನ್ನು ನಿಯೋಜಿಸಲಾಗಿತ್ತು.

ಟಾಪ್ ನ್ಯೂಸ್

1-wqewqe

BBK11: ದೊಡ್ಮನೆಯಲ್ಲಿ ಸೆಡೆ ಜಗಳ.. ಬಿಗ್ ಬಾಸ್ ನಿಂದ ಅಚೆ ಬರಲು ರೆಡಿಯಾದ ಸುರೇಶ್

1-wewqewq

Raichur; ರಾತ್ರೋರಾತ್ರಿ ಸಿಎ ಸೈಟ್ ನಲ್ಲಿದ್ದ ಶಿವ, ಗಣೇಶ ದೇವಸ್ಥಾನ ತೆರವು

1-shaa

Success ನಿಮ್ಮನ್ನು ಪ್ರತ್ಯೇಕಿಸಲು ಮತ್ತು ವೈಫಲ್ಯಕ್ಕೆ ಕಾರಣವಾಗಬಹುದು: ಶಾರುಖ್ ಖಾನ್

Arecanut

Hike Price: ಮಾರುಕಟ್ಟೆಯಲ್ಲಿ ಡಬ್ಬಲ್‌ ಚೋಲ್‌ ಚಾಲಿ ಅಡಿಕೆ ಧಾರಣೆ ಏರಿಕೆ

ANF-Coombing

History: ನಕ್ಸಲ್‌ ಚಳವಳಿಯ ರಕ್ತಸಿಕ್ತ ಇತಿಹಾಸ; ಸಾವಿನೊಂದಿಗೆ ಪೊಲೀಸ್‌-ನಕ್ಸಲ್‌ ಮುಖಾಮುಖಿ

Tirupathi

TTD Resolution: ಇನ್ನು ಹಿಂದೂಯೇತರರಿಂದ ತಿರುಮಲ ತಿರುಪತಿ ದೇವಸ್ಥಾನ ಮುಕ್ತ!

Naxal-Postmartam

Naxal Vikram Gowda: ಮೂರು ಬಾರಿ ತಪ್ಪಿಸಿಕೊಂಡವ ಹುಟ್ಟೂರಲ್ಲೇ ಪ್ರಾಣ ತೆತ್ತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7

Udupi: ನಮ್ಮ ಶೌಚಾಲಯ ನಮ್ಮ ಗೌರವ ತಿಂಗಳ ಆಂದೋಲನಕ್ಕೆ ಚಾಲನೆ

13

Udupi: 10 ತಿಂಗಳಲ್ಲಿ 228 ಕಳವು ಕೇಸ್‌!

ANF-Coombing

History: ನಕ್ಸಲ್‌ ಚಳವಳಿಯ ರಕ್ತಸಿಕ್ತ ಇತಿಹಾಸ; ಸಾವಿನೊಂದಿಗೆ ಪೊಲೀಸ್‌-ನಕ್ಸಲ್‌ ಮುಖಾಮುಖಿ

Naxal-Vikram-Sister

Naxal Vikram Encounter: ಟಿವಿ ನೋಡಿ ವಿಷಯ ತಿಳಿಯಿತು, ನಮಗೆ ಯಾರೂ ಹೇಳಿಲ್ಲ: ಸಹೋದರಿ

Peetabail-Naxal-encounter-Vikram

Encounter: ನಕ್ಸಲ್‌ ವಿಕ್ರಂ ಗೌಡ ತಂಡದ ಬೇಟೆಗೆ ಎಎನ್‌ಎಫ್ ‘ಆಪರೇಷನ್‌ ಮಾರುವೇಷ’!

MUST WATCH

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

udayavani youtube

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

ಹೊಸ ಸೇರ್ಪಡೆ

de

Kulgeri: ಟ್ರ್ಯಾಕ್ಟರ್ ಹಿಂಬದಿಗೆ ಬೈಕ್ ಡಿಕ್ಕಿ; ಸವಾರ ಮೃತ್ಯು

1-wqewqe

BBK11: ದೊಡ್ಮನೆಯಲ್ಲಿ ಸೆಡೆ ಜಗಳ.. ಬಿಗ್ ಬಾಸ್ ನಿಂದ ಅಚೆ ಬರಲು ರೆಡಿಯಾದ ಸುರೇಶ್

7

Udupi: ನಮ್ಮ ಶೌಚಾಲಯ ನಮ್ಮ ಗೌರವ ತಿಂಗಳ ಆಂದೋಲನಕ್ಕೆ ಚಾಲನೆ

1-wewqewq

Raichur; ರಾತ್ರೋರಾತ್ರಿ ಸಿಎ ಸೈಟ್ ನಲ್ಲಿದ್ದ ಶಿವ, ಗಣೇಶ ದೇವಸ್ಥಾನ ತೆರವು

13

Udupi: 10 ತಿಂಗಳಲ್ಲಿ 228 ಕಳವು ಕೇಸ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.