Naxals Surrender: ಶರಣಾದ ನಕ್ಸಲರ ಪ್ರಕರಣಗಳಿಗೆ ತ್ವರಿತ ನ್ಯಾಯಾಲಯ: ಸಿಎಂ ಸಿದ್ದರಾಮಯ್ಯ

ಶರಣಾದವರಿಗೆ ಶೀಘ್ರ ನ್ಯಾಯ ಕೊಡಿಸುವ ಕೆಲಸ ಮಾಡುತ್ತೇವೆ, ಸಚಿವ ಸಂಪುಟದಲ್ಲಿ ಬೇಡಿಕೆಗಳ ಕುರಿತು ಚರ್ಚಿಸಿ ತೀರ್ಮಾನ

Team Udayavani, Jan 9, 2025, 7:45 AM IST

Naxals-CM-Office

ಬೆಂಗಳೂರು: ಶರಣಾದ 6 ಮಂದಿ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಕೊಡಿಸುವ ಕೆಲಸ ಮಾಡುತ್ತೇವೆ. ತ್ವರಿತ ನ್ಯಾಯಾಲಯ ಮಾಡಿ ಅವರ ಮೇಲೆ ಇರುವ ಮೊಕದ್ದಮೆ ಇತ್ಯರ್ಥವಾಗುವ ರೀತಿಯಲ್ಲಿ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಬುಧವಾರ 6 ನಕ್ಸಲರು ಶರಣಾದ ಬೆನ್ನಲ್ಲೇ ಸುದ್ದಿಗಾರರ ಜೊತೆಗೆ ಈ ಕುರಿತು ಮಾತನಾಡಿ, ಶರಣಾಗಿರುವ ನಕ್ಸಲರ ಎಲ್ಲ ಒತ್ತಾಯ ಗಳನ್ನೂ ಸಹ ಸಹಾನುಭೂತಿಯಿಂದ ಸರ್ಕಾರ ಪರಿಗಣಿಸುತ್ತದೆ. ಶರಣಾದ 6 ಮಂದಿ ನಕ್ಸಲರ ಪೈಕಿ ಕೇರಳ ಹಾಗೂ ತಮಿಳುನಾಡಿನ ಇಬ್ಬರು ಸೇರಿದ್ದು, ಈ ಬಗ್ಗೆ ತಮಿಳುನಾಡು ಹಾಗೂ ಕೇರಳ ಮುಖ್ಯಮಂತ್ರಿಗಳ ಜೊತೆಗೂ ಈ ವಿಚಾರ ಚರ್ಚಿಸಲಾಗುವುದು.

ಈಗಾಗಲೇ ಶರಣಾಗಿರುವ ನಕ್ಸಲರ ಬೇಡಿಕೆ ಈಡೇರದಿದ್ದರೆ ಅದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ನಕ್ಸಲರ ಬೇಡಿಕೆಗಳ ಬಗ್ಗೆ ಸಚಿವ ಸಂಪುಟದಲ್ಲಿ ನಕ್ಸಲರ ಬೇಡಿಕೆಗಳ ಕುರಿತು ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು. ಅನ್ಯಾಯದ ವಿರುದ್ಧ, ಶೋಷಣೆ, ದೌರ್ಜನನ್ಯದ ವಿರುದ್ಧ ನ್ಯಾಯಕ್ಕಾಗಿ ಹೋರಾಡುವುದು ತಪ್ಪಲ್ಲ. ವ್ಯವಸ್ಥೆ ಬದಲಾವಣೆಗೆ ಹೋರಾಟ ಮಾಡಲು ಸಂವಿಧಾನದಲ್ಲಿ ಅವಕಾಶವಿದೆ. ಆದರೆ, ಹೋರಾಟ ಶಾಂತಿ ಯುತವಾಗಿ, ನ್ಯಾಯಯುತವಾಗಿ ಮಾಡಬೇಕು.

ನಕ್ಸಲಿಸಂ, ಶಸ್ತ್ರಾಸ್ತ್ರ ಹೋರಾಟಕ್ಕೆ ಸಂವಿಧಾನದಲ್ಲಿ, ಪ್ರಜಾಪ್ರಭತ್ವ ವ್ಯವಸ್ಥೆಯಲ್ಲಿ ಅವಕಾಶವಿಲ್ಲ. ಈ ಹಿಂದೆಯೂ ಬಹಳ ನಕ್ಸಲೀಯರು ಶಸ್ತ್ರಾಸ್ತ ತ್ಯಜಿಸಿ ಮುಖ್ಯವಾಹಿನಿಗೆ ಬಂದಿದ್ದಾರೆ. ಇವರ ಪುನರ್ವಸತಿಗೆ ಸರ್ಕಾರ ನೆರವು ಒದಗಿಸಿದೆ. ಶಾಂತಿಗಾಗಿ ನಾಗರಿಕ ವೇದಿಕೆಯವರು ನನ್ನನ್ನು ಭೇಟಿ ಮಾಡಿ ನಕ್ಸಲಿಯರ ಮನವೊಲಿಸುವ ಬಗ್ಗೆ ತಿಳಿಸಿದ್ದರು. ಆ ಸಂದರ್ಭದಲ್ಲಿ ನಕ್ಸಲಿಸಂ ತ್ಯಜಿಸಿ ಮುಖ್ಯವಾಹಿನಿಗೆ ಬರಲು ಸರ್ಕಾರ ಎಲ್ಲಾ ನೆರವು ನೀಡಲಿದೆ ಎಂದು ಹೇಳಿದ್ದೆ.

ತ್ವರಿತ ನ್ಯಾಯಾಲಯ
ತ್ವರಿತ ನ್ಯಾಯಾಲಯ ಮಾಡಿ ಅವರ ಮೇಲೆ ಇರುವ ಮೊಕದ್ದಮೆ ಇತ್ಯರ್ಥವಾಗುವ ರೀತಿಯಲ್ಲಿ ಮಾಡುತ್ತೇವೆ ಎಂದು ಸಿಎಂ ತಿಳಿಸಿದ್ದಾರೆ. ಶರಣಾಗಿರುವ ನಕ್ಸಲರ ಎಲ್ಲ ಒತ್ತಾಯಗಳನ್ನೂ ಸಹ ಸಹಾನುಭೂತಿಯಿಂದ ಸರಕಾರ ಪರಿಗಣಿಸುತ್ತದೆ. 6 ಮಂದಿ ನಕ್ಸಲರ ಪೈಕಿ ಕೇರಳ ಹಾಗೂ ತಮಿಳುನಾಡಿನ ಇಬ್ಬರು ಸೇರಿದ್ದು, ಈ ಬಗ್ಗೆ ತಮಿಳುನಾಡು ಹಾಗೂ ಕೇರಳ ಮುಖ್ಯಮಂತ್ರಿಗಳ ಜತೆಗೂ ಈ ವಿಚಾರ ಚರ್ಚಿಸಲಾಗುವುದು ಎಂದರು.

ರಾಜ್ಯ ನಕ್ಸಲ್‌ ಮುಕ್ತ ಆಗಿದೆ: ಡಿಕೆಶಿ
ನಕ್ಸಲರು ಶರಣಾಗುವುದರ ಮೂಲಕ ಕರ್ನಾ ಟಕವು ಕಾಂಗ್ರೆಸ್‌ ಸರ್ಕಾ ರದ ಆಡಳಿತದಲ್ಲಿ ನಕ್ಸಲ್‌ ಮುಕ್ತವಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿ ದರು. ಸರ್ಕಾರ, ಪೊಲೀಸ್‌ ಅಧಿಕಾರಿಗಳ ಹಾಗೂ ಸರ್ಕಾರ ರಚಿಸಿದ್ದ ಶಾಂತಿ ಪಾಲನ ಸಮಿತಿ ಫ‌ಲದಿಂದ ಈ ಕಾರ್ಯ ಯಶಸ್ವಿಯಾಗಿದೆ. ಅವರು ಒಂದಷ್ಟು ಬೇಡಿಕೆಗಳನ್ನು ಮುಂದಿಟ್ಟು ಶರಣಾಗಿರುವುದು ಸಂತಸ ತಂದಿದೆ. ಎಲ್ಲರ ಪರಿಶ್ರಮದಿಂದ ಅವರೆಲ್ಲಾ  ಮುಂದೆ ಬಂದು ಶರಣಾಗಿದ್ದಾರೆ. ನಾವು ಶರಣಾದ ನಕ್ಸಲರ ಎಲ್ಲ ಬೇಡಿಕೆಗಳನ್ನು ಗೌರವಿಸುತ್ತೇವೆ ಎಂದರು.

ವಿಕ್ರಂ ಎನ್‌ಕೌಂಟರ್‌ ತನಿಖೆ ಮಾಡಿ
ನಕ್ಸಲ್‌ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ವಿಚಾರಕ್ಕೆ ಸಂಬಂಧಿ ಸಿದಂತೆ ಕೆಲವೊಂದು ಬೇಡಿಕೆಗಳನ್ನು ಸರ್ಕಾರದ ಮುಂದಿಡಲಾಗಿದೆ.

– ವಿಕ್ರಮ್‌ ಗೌಡ ಅವರನ್ನು ಮನೆಯವರ ಸಹಾಯದಿಂದ ಮನೆ ಒಳಗೆ ಕೈಗೆಟಕುವ ಅಂತರದಲ್ಲಿ ಎಎನ್‌ಎಫ್ ಪಡೆ ಕ್ರೂರ ವಾಗಿ ಗುಂಡಿನ ಸುರಿಮಳೆಗರೆದು ಹತ್ಯೆಗೈದಿದ್ದಾರೆ. ಇದರ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು.

– 3 ರಾಜ್ಯಗಳ ಜೈಲಿನಲ್ಲಿರುವ ನಮ್ಮ ಎಲ್ಲ ಕಾಮ್ರೆಡ್‌ಗಳ ಕೇಸುಗಳನ್ನು ಶೀಘ್ರವಾಗಿ ಮುಗಿಸಬೇಕು. ಅವರನ್ನು ಬಿಡುಗಡೆಗೊಳಿಸಬೇಕು.

– ಆದಿವಾಸಿ ಮುಗ್ಧ ಮಹಿಳೆಯರಾದ ಶೋಭಾ, ಕನ್ಯಾಕುಮಾರಿ, ಸಾವಿತ್ರಿ, ಶ್ರೀಮತಿ ಇವರ ಮೇಲಿನ ಕೇಸುಗಳನ್ನು ಶೀಘ್ರವೇ ಮುಗಿಸಿ ಅವರಿಗೂ ನಕ್ಸಲ್‌ ಪ್ಯಾಕೇಜಿನಡಿಯಲ್ಲಿ ಪುನರ್ವಸತಿ ಮತ್ತು ಸಹಾಯಧನವನ್ನು ಕಲ್ಪಿಸಬೇಕು.

– ಮುಖ್ಯ ವಾಹಿನಿಗೆ ಬಂದು 15 ದಿನಗಳೊಳಗೆ ನಮ್ಮ ಎಲ್ಲ ಕಾಮ್ರೇಡ್‌ಗಳ ಆರೋಗ್ಯ ಸಮಸ್ಯೆಗಳಿಗೆ ಸೂಕ್ತ ರೀತಿಯ ಚಿಕಿತ್ಸೆ ಕೊಡಿಸಬೇಕು.

ಕಿಗ್ಗಾ ಮೂಲದ ರವೀಂದ್ರ ಶರಣಾಗತಿ ಮಾತ್ರ ಬಾಕಿ
6 ನಕ್ಸಲರು ಶರಣಾಗತರಾಗಿದ್ದು ಕಿಗ್ಗಾ ಮೂಲದ ರವೀಂದ್ರ ಮಾತ್ರ ಇದರಿಂದ ಹೊರಗುಳಿದಿ ದ್ದಾನೆ. ಈತನನ್ನು ಮುಖ್ಯವಾಹಿನಿಗೆ ಕರೆತರುವ ನಿಟ್ಟಿನಲ್ಲಿ ಕಮಿಟಿ ಪ್ರಯತ್ನಿಸಿದರೂ ಸಂಪರ್ಕಕ್ಕೆ ಸಿಗದ ಕಾರಣ ಬುಧವಾರ ಶರಣಾಗಬೇಕಿದ್ದ ಈತ ಹೊರಗುಳಿದಿದ್ದಾನೆ. ಈತನು ಕೂಡ ಶೀಘ್ರದಲ್ಲಿಯೇ ಮುಖ್ಯವಾಹಿನಿಗೆ ಮರಳಲಿದ್ದಾ ನೆಂದು ತಿಳಿದು ಬಂದಿದ್ದು ಈ ಸಂಬಂಧ ಆತನನ್ನು ಸಂಪರ್ಕಿಸುವ ಕಾರ್ಯ ಮುಂದುವರಿಯಲಿದೆ ಎಂದು ತಿಳಿದು ಬಂದಿದೆ.

ಯಾರ ಮೇಲೆ ಎಷ್ಟು ಕೇಸ್‌?

ಮುಂಡಗಾರು ಲತಾ - 85

ಸುಂದರಿ ಕುತ್ಲೂರು – 71

ವನಜಾಕ್ಷಿ ಬಾಳೆಹೊಳೆ – 29

ಮಾರೆಪ್ಪ ಅರೋಲಿ (ಜಯಣ್ಣ) – 50

ತಮಿಳುನಾಡಿನ ವಸಂತ – 8

ಕೇರಳದ ಜಿಷಾ-  17

ಅರ್ಧ ಹಣ ಶಾಲೆಗೆ
ನಾನು ಮುಖ್ಯವಾಹಿನಿಗೆ ಬರಲು ನಾಗರಿಕ ಹಕ್ಕು ವೇದಿಕೆ, ಪುನರ್ವಸತಿ ಒಕ್ಕೂಟದ ಶ್ರಮ ಕಾರಣ. ನಮ್ಮ ಬೇಡಿಕೆಗಳನ್ನು ಈಡೇರಿಸಲು ಒಪ್ಪಿ, ಸಿಎಂ ಜತೆ ಚರ್ಚೆಗೆ ಮುಂದಾಗಿರುವುದಕ್ಕೆ ನಾವು ಶರಣಾಗತಿ ಆಗುತ್ತಿದ್ದೇವೆ. ಪುನರ್ವಸತಿ ಪ್ಯಾಕೇಜ್‌ನ ಅರ್ಧ ಹಣವನ್ನು ಹುಟ್ಟೂರಿನ ಶಾಲೆಗೆ ವರ್ಗಾಯಿಸಬೇಕು.
– ಮಾರೆಪ್ಪ ಆರೋಲಿ, ಶರಣಾದ ನಕ್ಸಲ್‌

ಕೇಸು ಶೀಘ್ರ ಇತ್ಯರ್ಥಗೊಳಿಸಿ
ಮುಂಡಗಾರು ಲತಾ ಮುಖ್ಯವಾಹಿನಿಗೆ ಬರುತ್ತಿರುವುದು ಸಂತೋಷ ತಂದಿದೆ. ಆಕೆಯ ಮೇಲಿರುವ ಕೇಸುಗಳನ್ನು ಸರ್ಕಾರ ತಕ್ಷಣ ಇತ್ಯರ್ಥಗೊಳಿಸಬೇಕು. ಬೇಡಿಕೆಗಳನ್ನು ಈಡೇರಿಸಬೇಕು. ಮುಂದಿನ ದಿನಗಳನ್ನು ಲತಾ ಒಟ್ಟಿಗೆ ಇಡೀ ಕುಟುಂಬ ಸಂತೋಷದಿಂದ ಕಳೆಯುತ್ತೇವೆ.
ಶೇಷೇಗೌಡ, ಲತಾ ಹಿರಿಯ ಸಹೋದರ

ನಾವು ಮುಖವನ್ನೇ ನೋಡಿಲ್ಲ
ಕೆಲಸದ ಸಂದರ್ಶನಕ್ಕಾಗಿ ಕೊಯ ಮತ್ತೂರಿಗೆ ಹೋಗಿ ಬರುವುದಾಗಿ ತಿಳಿಸಿ ಹೋದವನು ಮನೆಗೆ ಮರಳಲಿಲ್ಲ. ಹೋರಾಟಕ್ಕೆ ಇಳಿದಿದ್ದಾನೆಂದು ತಿಳಿಯಿತು. ಅಲ್ಲಿಂದ ಇಲ್ಲಿಯವರೆಗೂ ನಾವು ಅವನ ಮುಖ ನೋಡಿಲ್ಲ. ಮುಖ್ಯವಾಹಿನಿಗೆ ಬರುತ್ತಾನೆಂದು ತಿಳಿದು ತಮಿಳುನಾಡಿನಿಂದ ಬಂದಿದ್ದೇವೆ.
ತಮಿಳ್‌ ಸೆಲ್ವಿ, ಕೆ.ವಸಂತ ತಾಯಿ

ಸಂವಿಧಾನ ಬದ್ಧ ಹೋರಾಟ
ನಾನೇನು ನಕ್ಸಲ್‌ ಹೋರಾಟದಲ್ಲಿ ಭಾಗಿಯಾಗಿಲ್ಲ. ಸಂವಿಧಾನ ಬದ್ಧವಾದ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಶಸ್ತ್ರ ಹೋರಾಟ ತ್ಯಜಿಸಿ ಸಮಾಜದ ಮುಖ್ಯವಾಹಿನಿಗೆ ಬರುತ್ತಿರುವುದು ಖುಷಿ ತಂದಿದೆ. ಸಂವಿಧಾನ ಬದ್ಧ ಹೋರಾಟಗಳನ್ನು ಮಾಡೋಣ. -ಯಶೋಧಾ, ವನಜಾಕ್ಷಿ ಸಂಬಂಧಿ ಸಹೋದರಿ

ಜೈಲಿಂದ ಶೀಘ್ರ ಹೊರಬರಲಿ
ನಕ್ಸಲರ ಬೇಡಿಕೆಗಳನ್ನು ಈಡೇರಿಸುವುದಾಗಿ ಸರ್ಕಾರ ಭರವಸೆ ನೀಡಿದೆ. ಆ ಭರವಸೆಗಳನ್ನು ಈಡೇರಿಸಬೇಕು. ಅವರ ಮೇಲಿರುವ ಕೇಸುಗಳನ್ನು ಹಿಂಪಡೆದು ಜೈಲಿನಿಂದ ಶೀಘ್ರವೇ ಹೊರಬರುವಂತೆ ನೋಡಿಕೊಳ್ಳಬೇಕು. – ಅಂಬಣ್ಣ ಅರೋಲಿ, ಮಾರೆಪ್ಪ ಆರೋಲಿ(ಜಯಣ್ಣ) ಸಹೋದರ

ಕೊನೇ ಕ್ಷಣ ಬೆಂಗಳೂರಿಗೆ
ಚಿಕ್ಕಮಗಳೂರು: ನಕ್ಸಲರು ಶರಣಾಗುವ ಪ್ರಕ್ರಿಯೆ ಎಲ್ಲ ಸಿದ್ಧತೆಗಳ ನಡುವೆಯೂ ಕೊನೆ ಕ್ಷಣದಲ್ಲಿ ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಸ್ಥಳಾಂತರಗೊಂಡಿತು. ನಕ್ಸಲರು ಸಮಾಜದ ಮುಖ್ಯವಾಹಿನಿಗೆ ಸೇರ್ಪಡೆಯಾಗುವ ನಿಟ್ಟಿನಲ್ಲಿ ಬುಧವಾರ ಜಿಲ್ಲಾಡಳಿತ, ಪೊಲೀಸ್‌ ಇಲಾಖೆ ಸಿದ್ಧತೆ ಮಾಡಿಕೊಂಡಿತ್ತು. ಆದರೆ ದಿಢೀರ್‌ ಬೆಳವಣಿಗೆ ಹಿನ್ನೆಲೆಯಲ್ಲಿ ಅವರನ್ನು ಬಿಗಿ ಪೊಲೀಸ್‌ ಭದ್ರತೆಯಲ್ಲಿ ಬೆಂಗಳೂರಿಗೆ ಕರೆದೊಯ್ಯಲಾಯಿತು.

ಬುಧವಾರ ನಕ್ಸಲರು ಮೊದಲು ಪ್ರವಾಸಿಮಂದಿರಕ್ಕೆ ಆಗಮಿಸಿ ನಂತರ ಜಿಲ್ಲಾಡಳಿತದ ಮುಂದೆ ಶರಣಾಗಲಿ ದ್ದಾರೆ ಎಂದು ತಿಳಿದ ಪೊಲೀಸರು ಪ್ರವಾಸಿಮಂದಿರ ಹಾಗೂ ಜಿಲ್ಲಾ ಧಿಕಾರಿ ಕಚೇರಿ ಸುತ್ತಮುತ್ತ ಬಿಗಿ ಭದ್ರತೆ ಕಲ್ಪಿಸಿದ್ದರು. ಮಲೆನಾಡಿನ ಅರಣ್ಯ ಪ್ರದೇಶದಿಂದ ಕಮಿಟಿ ಸದಸ್ಯರ ಜತೆ ಪೊಲೀಸ್‌ ಭದ್ರತೆಯಲ್ಲಿ ನಕ್ಸಲರು ಚಿಕ್ಕಮಗಳೂರು ನಗರ ಪ್ರವೇಶಿಸಿದ್ದರು.

ನಕ್ಸಲರ ಸಂಬಂಧಿಕರು, ಸಂಘಟಕರು, ಮಾಜಿ ನಕ್ಸಲರು ಅನೇಕರು ಪ್ರವಾಸಿ ಮಂದಿರದಲ್ಲಿ ಜಮಾವಣೆ ಗೊಂಡು ಕಾಯುತ್ತಿದ್ದರು. ಈ ವೇಳೆ ದಿಢೀರ್‌ ಬೆಳವಣಿಗೆ ನಡೆಯಿತು. ಶಾಂತಿಗಾಗಿ ನಾಗರಿಕ ವೇದಿಕೆ ಮುಖಂಡ ಕೆ.ಎಲ್‌.ಅಶೋಕ್‌, ಕೊನೆಯ ಕ್ಷಣದ ಬದಲಾವಣೆ ಯಿಂದ ಈ ಆರು ಮಂದಿ ಬೆಂಗಳೂರಿನಲ್ಲಿ ಸಿಎಂ ಸಮ್ಮುಖದಲ್ಲೇ ಶರಣಾಗಲಿದ್ದಾರೆ ಎಂದು ಘೋಷಿಸಿದರು.

ಟಾಪ್ ನ್ಯೂಸ್

arrested

Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ

KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!

KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!

1-frrr

L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!

1-naxal

NIA ವಿಶೇಷ ನ್ಯಾಯಾಲಯ; ಶರಣಾದ ಆರು ನಕ್ಸಲರಿಗೆ ಜ.31ರವರೆಗೆ ನ್ಯಾಯಾಂಗ ಬಂಧನ

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!

parameshwara

Naxal; ರಾಜ್ಯದಲ್ಲಿ 99 % ನಕ್ಸಲಿಸಂ ಅಂತ್ಯಗೊಂಡಿದೆ: ಡಾ.ಜಿ.ಪರಮೇಶ್ವರ್

SS Rajamouli: ʼಮಹಾಭಾರತʼ ಕಥೆಗೆ ರಾಜಮೌಳಿ ಆ್ಯಕ್ಷನ್ ಕಟ್; ಯಾವಾಗ ಪ್ರಾಜೆಕ್ಟ್‌ ಶುರು?

SS Rajamouli: ʼಮಹಾಭಾರತʼ ಕಥೆಗೆ ರಾಜಮೌಳಿ ಆ್ಯಕ್ಷನ್ ಕಟ್; ಯಾವಾಗ ಪ್ರಾಜೆಕ್ಟ್‌ ಶುರು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-naxal

NIA ವಿಶೇಷ ನ್ಯಾಯಾಲಯ; ಶರಣಾದ ಆರು ನಕ್ಸಲರಿಗೆ ಜ.31ರವರೆಗೆ ನ್ಯಾಯಾಂಗ ಬಂಧನ

parameshwara

Naxal; ರಾಜ್ಯದಲ್ಲಿ 99 % ನಕ್ಸಲಿಸಂ ಅಂತ್ಯಗೊಂಡಿದೆ: ಡಾ.ಜಿ.ಪರಮೇಶ್ವರ್

Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್

Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್

Anjani, the female tiger, passed away at Tyavarekoppa sanctuary

Shimoga: ತ್ಯಾವರೆಕೊಪ್ಪ ಧಾಮದಲ್ಲಿ ಮೃತಪಟ್ಟ ಹೆಣ್ಣು ಹುಲಿ ಅಂಜನಿ

Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ

Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

arrested

Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ

ಹಂಚಿಕಟ್ಟೆ: ಆ್ಯಂಬುಲೆನ್ಸ್‌ಗೆ ಕೆಎಸ್‌ಆರ್‌ಟಿಸಿ ಬಸ್‌ ಢಿಕ್ಕಿ

Hanchikatte: ಆ್ಯಂಬುಲೆನ್ಸ್‌ಗೆ ಕೆಎಸ್‌ಆರ್‌ಟಿಸಿ ಬಸ್‌ ಢಿಕ್ಕಿ

KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!

KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!

Mulki: Biker seriously injured after being hit by bus

Mulki: ಬಸ್‌ ಢಿಕ್ಕಿ ಹೊಡೆದು ಬೈಕ್‌ ಸವಾರ ಗಂಭೀರ

Sullia: Airavata bus stopped

Sullia: ಕೆಟ್ಟು ನಿಂತ ಐರಾವತ ಬಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.