3ರಿಂದ 6 ಅಡಿ ಅಂತರವೂ ಸಾಕಾಗದು?
Team Udayavani, Mar 29, 2020, 11:30 AM IST
ಲಂಡನ್, ಮಾ. 28: ಈ ಹೊತ್ತಿನವರೆಗೂ ನಾವು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಎಷ್ಟು ಅಡಿ ಎಂಬುದರ ಗೊಂದಲದಲ್ಲೇ ಮುಳುಗಿದ್ದೆವು. ಕೊನೆಗೂ ಮೂರು ದಿನಗಳಿಂದ ಮೂರು ಅಡಿ ಎಂದು ಕೆಲವರು, ಇನ್ನು ಕೆಲವರು ಎರಡೇ ಅಡಿ ಎಂದು ಅನುಸರಿಸುತ್ತಿದ್ದಾರೆ. ಇನ್ನೂ ಕೆಲವೆಡೆ ಆರು ಅಡಿ ಎಂಬ ಮಾತು ಕೇಳಿಬರುತ್ತಿದೆ. ಈ ಲೆಕ್ಕಾಚಾರದಲ್ಲೇ ಮುಳುಗಿರುವ ಹೊತ್ತಿನಲ್ಲಿ ವಿದ್ಯಾಸಂಸ್ಥೆ ಎಂಐಟಿ ಅಧ್ಯಯನವೊಂದು ಘಂಟಾಘೋಷವಾಗಿ ಹೇಳಿರುವುದು ಏನೆಂದರೆ, “ನೀವೆಲ್ಲಾ ಮಾಡುತ್ತಿರುವುದು ತಪ್ಪು’.
ಹಾಗಾದರೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಬೇಡವೇ ಎಂದು ಕೇಳಬೇಡಿ. ಖಂಡಿತಾ ಕಾಯ್ದುಕೊಳ್ಳಬೇಕು. ಕಾಲೇಜಿನ ಅಧ್ಯಯನ ಪ್ರಕಾರ ನಾವೀಗ ಕಾಯ್ದುಕೊಳ್ಳುವ ಅಂತರ ಏನೇನೂ ಸಾಲದು. ಅದು ಅಪಾಯದಿಂದ ನಮ್ಮನ್ನು ರಕ್ಷಿಸುವುದಿಲ್ಲವಂತೆ. ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರ ಅಳತೆಯಲ್ಲಿ ಈ ಅಂತರವನ್ನು ಕಾಯ್ದುಕೊಳ್ಳಲಾಗುತ್ತಿದೆ.
ನಮ್ಮಲ್ಲಿ ಹೆಚ್ಚೆಂದರೆ ಮೂರು ಅಡಿ. ಯುರೋಪನ್‌ಲ್ಲಿ ಹತ್ತಿರ ಹತ್ತಿರ ಐದು ಅಡಿ. ಇನ್ನು ಕೆಲವೆಡೆ ಎರಡು ಅಡಿ. ಇವೆಲ್ಲವನ್ನೂ ಸಾರಾಸಗಟಾಗಿ ತಳ್ಳಿ ಹಾಕಿರುವ ಅಧ್ಯಯನ, ಈಗ ಎಷ್ಟು ಕಾಯ್ದುಕೊಳ್ಳುತ್ತಿದ್ದೀರಿ ಅದರ ಮೂರು ಅಥವಾ ನಾಲ್ಕರಷ್ಟು ಹೆಚ್ಚು ಅಂತರ ಕಾಯ್ದುಕೊಳ್ಳಬೇಕು ಎಂದು ಸಲಹೆ ನೀಡಿದೆ. ಅಲ್ಲಿಗೆ ನಮ್ಮ ಊರಿನ ಲೆಕ್ಕದಲ್ಲಿ 12 ಅಡಿಗೆ ಒಬ್ಬರಂತೆ ನಿಲ್ಲಬೇಕು. ಲಾಕ್‌ಡೌನ್ ಸಂದರ್ಭದಲ್ಲಿ ಮನೆಯೊಳಗೇ ಇರುವವರು ಅಗತ್ಯ ವಸ್ತುಗಳಿಗಾಗಿ ಮಾರುಕಟ್ಟೆಗೆ ಬಂದಾಗ ಪರಸ್ಪರ ಸಾಮಾಜಿಕಅಂತರ ಕಾದುಕೊಳ್ಳಲು ಸೂಚಿಸಲಾಗಿದೆ.
ರೋಗಪೀಡಿತ ವ್ಯಕ್ತಿ ಸೀನಿದಾಗ, ಕೆಮ್ಮಿದಾಗ ಹೊರಬೀಳುವ ಬಾಷ್ಪಕಣಗಳಲ್ಲಿರುವ ವೈರಸ್ ಇನ್ನೊಬ್ಬನ ದೇಹ ಸೇರುವ ಮೂಲಕ ರೋಗ ಪ್ರಸರಣವಾಗುತ್ತದೆ. ಇದನ್ನು ತಡೆಯಲು ಹಾಲಿ ಶಿಫಾರಸು ಮಾಡಿರುವ ಅಂತರವು ಈ ಬಾಷ್ಪಕಣಗಳು ಗಾಳಿಯ ಜತೆಗೆ ಸಾಗುವ ವೇಗ ಮತ್ತು ಕೆಮ್ಮಿದ ಅಥವಾ ಸೀನಿದ ಸನ್ನಿವೇಶದಲ್ಲಿ ಎಷ್ಟು ಕಣಗಳು ವಾತಾವರಣ ಸೇರಿವೆ, ರೋಗಿಯಿಂದ ಹೊರಬಿದ್ದು ಬಾಷ್ಪಕಣಗಳಲ್ಲಿ ಇರುವ ವೈರಾಣುಗಳ ಪ್ರಮಾಣ ಎಷ್ಟು ಎಂಬುದನ್ನು ಗಣನೆಗೆ ತೆಗೆದುಕೊಂಡಿಲ್ಲ. ರೋಗಪೀಡಿತ ವ್ಯಕ್ತಿ ತುಂಬಾ ಬಲವಾಗಿ ಕೆಮ್ಮಿದ ಯಾ ಸೀನಿದ್ದಾಗ ಅಥವಾ ಫ್ಯಾನ್ ಗಾಳಿ/ ಸಹಜ ಗಾಳಿ ವೇಗವಾಗಿದ್ದರೆ ಮೂರರಿಂದ ಆರು ಅಡಿ ಅಂತರ ಸಾಕಾಗದು ಎನ್ನುತ್ತಿವೆ ಅಧ್ಯಯನಗಳು.
ನಮ್ಮೂರುಗಳಲ್ಲಿ ಪುಟ್ಟ ಮಕ್ಕಳು ಬೆದರಿ ಕಿರುಚಿಕೊಳ್ಳುವಷ್ಟು ಘನಘೋರವಾಗಿ ಆಕ್ಷೀ———— ಮಾಡುವ ಮಹಾನುಭಾವರಿರುವುದನ್ನು ಇದಕ್ಕೆ ಸಂವಾದಿಯಾಗಿ ನೆನಪಿಸಿಕೊಳ್ಳಬಹುದು! ಇಷ್ಟು ಮಾತ್ರವಲ್ಲದೆ, ವಾತಾವರಣದಲ್ಲಿ ಇರುವ ತೇವಾಂಶವೂ ವೈರಸ್‌ಗಳ ಜೀವಿತಾವಧಿಯನ್ನು ಹೆಚ್ಚಿಸುತ್ತದೆ. ಹೀಗಾಗಿ ಆದ್ರತೆ ಕಡಿಮೆ ಇರುವಲ್ಲಿ ಇರುವ ಅಂತರ ಹೆಚ್ಚು ಆದ್ರìತೆ ಇರುವಲ್ಲಿ ಕೆಲಸಕ್ಕೆ ಬಾರದು ಎಂಬ ಅಭಿಪ್ರಾಯವೂ ಇದೆ.
ಆದ್ದರಿಂದಲೇ ಮುನ್ನೆಚ್ಚರಿಕೆಯಾಗಿ ಎಲ್ಲ ಸಾರ್ವಜನಿಕರೂ ಪರಸ್ಪರ ಸಾಕಷ್ಟು ಅಂತರ ಕಾಯ್ದುಕೊಳ್ಳುವುದು ಉತ್ತಮ. ಜತೆಗೆ ಶಂಕಿತ ರೋಗ ಲಕ್ಷಣಗಳುಳ್ಳವರ ಜತೆಗೆ ವ್ಯವಹರಿಸುವ ಆರೋಗ್ಯ ಸೇವಾ ಸಿಬಂದಿ ಸಾಕಷ್ಟುಅಂತರ ಕಾಯ್ದುಕೊಳ್ಳುವ ಜತೆಗೆ ಮೈಯೆಲ್ಲ ಮುಚ್ಚುವಂತಹ ಸೋಂಕು ರಕ್ಷಕ ಮೇಲುಡುಗೆ ಧರಿಸುವುದು ಕ್ಷೇಮಕರ.
ಹೆಚ್ಚು ಉಷ್ಣತೆಯಲ್ಲೂ ಕೋವಿಡ್ 19 ವೈರಸ್ ಬದುಕಬಲ್ಲುದು : ಇದುವರೆಗೆ ಕೋವಿಡ್ 19 ವೈರಸ್ ಅಧಿಕ ತಾಪಮಾನದಲ್ಲಿ ಬೇಗನೆ ಸಾವನ್ನಪ್ಪುತ್ತದೆ ಎಂದು ಹೇಳಲಾಗಿತ್ತು. ಆದರೆ ಇದು ಕೂಡ ಬಹುತೇಕ ಸುಳ್ಳು ಎಂದು ಸಾಬೀತಾಗಿದೆ. ಚೀನದ ನ್ಯಾನ್‌ಜಿಂಗ್ ಮೆಡಿಕಲ್ ಯುನಿವರ್ಸಿಟಿ ನಡೆಸಿದ ಅಧ್ಯಯನದ ಪ್ರಕಾರ 25 ಡಿಗ್ರಿ ಸೆ.ಯಿಂದ 41 ಡಿಗ್ರಿ ಸೆ.ವರೆಗಿನ ತಾಪ; ಶೇ.60ರಷ್ಟು ತೇವಾಂಶವಿರುವ ಈಜುಕೊಳದ ವಾತಾವರಣದಲ್ಲಿ ಕೊರೊನಾ ವೈರಸ್ ದೀರ್ಘಕಾಲ ಬದುಕಬಲ್ಲ ಸಾಮರ್ಥ್ಯ ಪ್ರದರ್ಶಿಸಿರುವುದು ಗೊತ್ತಾಗಿದೆ. ಇಲ್ಲೂ ವಾತಾವರಣದ ಆರ್ದ್ರತೆ ಪ್ರಮುಖ ಪಾತ್ರ ವಹಿಸಿರುವುದು ಸಂಭಾವ್ಯ. ಬೇಸಗೆಯ ಉಗ್ರ ತಾಪಮಾನ ಕೊರೊನಾ ನಿಗ್ರಹಿಸುವಲ್ಲಿ ಪ್ರಮುಖ ಪಾತ್ರ ವಹಿಸಬಲ್ಲುದು ಎಂದೇ ಇದುವರೆಗೆ ಭಾವಿಸಲಾಗಿತ್ತು. ಆದರೆ ಈಗ ಇದು ಸಾಮಾನ್ಯ ಫೂ ಉಂಟುಮಾಡುವ ವೈರಸ್‌ಗಳಿಗಷ್ಟೇ ಮಾರಕ ವಿನಾ ಕೋವಿಡ್-19ಗಲ್ಲ ಎಂಬುದು ತಿಳಿದುಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ
Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ
ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ
ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.