New District: “ಮಹಾ ಕುಂಭಮೇಳ’ ಈಗ ಉತ್ತರಪ್ರದೇಶದ ಹೊಸ ಜಿಲ್ಲೆ!
ಕುಂಭಮೇಳ ಆಚರಣೆಗಾಗಿ ಹೊಸ ಜಿಲ್ಲೆ ರಚಿಸಿದ ರಾಜ್ಯ ಸರ್ಕಾರ
Team Udayavani, Dec 3, 2024, 7:50 AM IST
ಲಕ್ನೋ: ವಿಶ್ವ ಪಾರಂಪರಿಕ ಧಾರ್ಮಿಕ ಸಮಾರಂಭ ಎಂದೇ ಖ್ಯಾತಿ ಗಳಿಸಿರುವ ” ಮಹಾ ಕುಂಭಮೇಳ’ವನ್ನು ಅದ್ಧೂರಿ ಹಾಗೂ ವ್ಯವಸ್ಥಿತವಾಗಿ ನಡೆಸಲು ಉತ್ತರ ಪ್ರದೇಶ ಸರ್ಕಾರ ಮಹತ್ವದ ನಿರ್ಣಯ ಕೈಗೊಂಡಿದೆ.
ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭಮೇಳ ನಡೆಯುವ ಪ್ರದೇಶವನ್ನೇ ಹೊಸ ಜಿಲ್ಲೆಯಾಗಿ ರಚಿಸಲಾಗಿದ್ದು, “ಮಹಾ ಕುಂಭ ಮೇಳ’ ಎಂದೇ ಆ ಜಿಲ್ಲೆಗೆ ಅಧಿಕೃತ ಹೆಸರನ್ನು ಇರಿಸಿದೆ. ಇದರೊಂದಿಗೆ ಉತ್ತರ ಪ್ರದೇಶದಲ್ಲಿನ ಜಿಲ್ಲೆಗಳ ಸಂಖ್ಯೆ 75ರಿಂದ ಇದೀಗ 76ಕ್ಕೆ ಏರಿಕೆಯಾದಂತಾಗಿದೆ. ಅದರಂತೆ, ಹೊಸ ಜಿಲ್ಲೆಯಲ್ಲಿನ ಕುಂಭ ಮೇಳ ಅಧಿಕಾರಿಗೆ ಇನ್ನು ಮುಂದೆ ಜಿಲ್ಲಾಧಿಕಾರಿಗಿರುವ ಎಲ್ಲ ಅಧಿಕಾರವಿರುತ್ತದೆ ಎಂದು ಸರ್ಕಾರದ ಆದೇಶ ತಿಳಿಸಿದೆ.
2025ರ ಜನವರಿಯಲ್ಲಿ ನಡೆ ಯುವ ಮಹಾ ಕುಂಭಮೇಳಕ್ಕೆ ಬರುವ ದೇಶ-ವಿದೇಶಗಳ ಯಾತ್ರಿಕರಿಗೆ ಉತ್ತಮ ವ್ಯವಸ್ಥೆ ಕಲ್ಪಿಸಲು ಆಡಳಿತದೊಂದಿಗೆ ಉತ್ತಮ ಸಮನ್ವಯತೆ ಅಗತ್ಯವಾಗಿದ್ದು, ಅದಕ್ಕೆ ಈ ಹೊಸ ಜಿಲ್ಲೆ ರಚನೆಯ ಕಾರ್ಯತಂತ್ರ ಸಹಕಾರಿಯಾಗಲಿದೆ ಎಂದು ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.
ಐಷಾರಾಮಿ ಟೆಂಟ್ ಸಿಟಿ
ಯಾತ್ರಾರ್ಥಿಗಳ ಸಂಚಾರಕ್ಕೆ ಅನುವಾಗಲು ಹಾಗೂ ಪರಿಸರ ಸ್ನೇಹಿ ಪ್ರಯಾಣ ಖಚಿತಕ್ಕಾಗಿ ಆ್ಯಪ್ ಆಧಾರಿತ ಇ- ರಿಕ್ಷಾ ಸೇವೆಯನ್ನು ಸರ್ಕಾರ ಒದಗಿಸುತ್ತಿದೆ. ಯಾತ್ರಾರ್ಥಿಗಳಿಗಾಗಿ ಟೆಂಟ್ ಸಿಟಿ ನಿರ್ಮಿಸಲಾಗುತ್ತಿದೆ. ವಿಲ್ಲಾ, ಮಹಾರಾಜ, ಸ್ವಿಜ್ ಕಾಟೇಜ್, ಡಾರ್ಮೆಟ್ರಿ ಎಂಬ 4 ವಿಧಗಳ ಟೆಂಟ್ ಇರಲಿದ್ದು, ಐಷಾರಾಮಿ ಸೇವೆಯ 2000 ಸ್ವಿಜ್ ಕಾಟೇಜ್‌ಗಳನ್ನೂ ನಿರ್ಮಿಸಲಾಗುತ್ತಿದೆ ಎಂದು ಸರ್ಕಾರ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tamil Nadu: ಗೋ ಮಾಂಸ ತಿನ್ನೋದು ಸರಿ ಎಂದಾದರೆ ಮೂತ್ರ ಯಾಕೆ ಬೇಡ: ಬಿಜೆಪಿ
Delhi Polls: ದಿಲ್ಲಿ ವಿಧಾನಸಭೆಯ 70 ಸ್ಥಾನಕ್ಕೆ ಬರೋಬ್ಬರಿ 699 ಅಭ್ಯರ್ಥಿಗಳು ಸ್ಪರ್ಧೆ!
Supreme Court: ಟೆಕಿ ಅತುಲ್ ಪುತ್ರನನ್ನು ಅಜ್ಜಿ ಸುಪರ್ದಿಗೆ ನೀಡಲು ಸುಪ್ರೀಂ ನಕಾರ
NRI: ಸಂಸತ್ತಿನಲ್ಲಿ ಎನ್‌ಆರ್‌ಐ ಪ್ರಾತಿನಿಧ್ಯ: ಸ್ಥಾಯಿ ಸಮಿತಿ ಸಭೇಲಿ ಚರ್ಚೆ
Dog’s Revenge: ತನಗೆ ಡಿಕ್ಕಿ ಹೊಡೆದ ಕಾರಿನ ಮೇಲೆ ಸೇಡು ತೀರಿಸಿಕೊಂಡ ಶ್ವಾನ…