ಕಾಶ್ಮೀರ ಬಿಟ್ಟು ಉಗ್ರತ್ವ ನಿಯಂತ್ರಣಕ್ಕೆ ತರಲಿ ಹೊಸ ಪ್ರಧಾನಿ


Team Udayavani, Apr 13, 2022, 6:00 AM IST

ಕಾಶ್ಮೀರ ಬಿಟ್ಟು ಉಗ್ರತ್ವ ನಿಯಂತ್ರಣಕ್ಕೆ ತರಲಿ ಹೊಸ ಪ್ರಧಾನಿ

ನೆರೆಯ ರಾಷ್ಟ್ರ ಪಾಕಿಸ್ಥಾನದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆಗಳು ನಡೆದಿವೆ. ಪಾಕಿಸ್ಥಾನ ಮುಸ್ಲಿಂ ಲೀಗ್‌- ನವಾಜ್‌ನ ಮುಖಂಡ ಶಹಬಾಜ್‌ ಷರೀಫ್ ನೇತೃತ್ವದಲ್ಲಿ ವಿಪಕ್ಷಗಳ ಒಕ್ಕೂಟ ಸರಕಾರ‌ ಅಧಿಕಾರಕ್ಕೆ ಬಂದಿದೆ. ಅಲ್ಲಿ ಯಾವುದೇ ರೀತಿಯ ಸರಕಾರ‌ ಬಂದರೂ ಇದರಿಂದ ಭಾರತಕ್ಕೆ ಧನಾತ್ಮಕ ಪರಿಣಾಮವನ್ನಾಗಲಿ, ಉಗ್ರ ಕೃತ್ಯಗಳಿಗೆ ನಿಯಂತ್ರಣ ಹೇರುವ ಯಾವುದೇ ಪ್ರಯತ್ನವನ್ನಾಗಲೀ ಪಾಕಿಸ್ಥಾನ ಮಾಡಲಾರದು. ಹಾಗೆಯೇ ಪಾಕಿಸ್ಥಾನದಲ್ಲಿ ಸರಕಾರ‌ದ ನೇತೃತ್ವದ ವಹಿಸುವವರಿಗೆ ಕಾಶ್ಮೀರ ವಿವಾದದ ಬಗ್ಗೆ ಮಾತನಾಡದೆ ಕುರ್ಚಿ ಏರಲು ಆಗುವುದೇ ಇಲ್ಲ. ಅದಕ್ಕೆ ಹೊಸ ಪ್ರಧಾನಿಯೂ ಹೊರತಲ್ಲ. ಶಹಬಾಜ್‌ ಷರೀಫ್ ಅವರು ಮಾತನಾಡುತ್ತಾ “ಭಾರತದ ಜತೆಗೆ ಪಾಕಿಸ್ಥಾನ ಶಾಂತಿಯನ್ನು ಬಯಸುತ್ತದೆ. ಆದರೆ ಮೊದಲಿಗೆ ಕಾಶ್ಮೀರ ವಿಚಾರ ಇತ್ಯರ್ಥವಾಗಬೇಕು’ ಎಂದು ಹೇಳಿದ್ದಾರೆ. ಜಮ್ಮು ಮತ್ತು ಕಾಶ್ಮೀರ ವಿಚಾರದಲ್ಲಿ ಭಾರತ ಸರಕಾರದ ನಿಲುವು ಏನು ಎನ್ನುವುದು ಈಗಾಗಲೇ 75 ವರ್ಷಗಳಿಂದ ಜಗತ್ತಿಗೆ ಸಾರಿ ಸಾರಿ ಹೇಳಲಾಗಿದೆ.

ಪಾಕಿಸ್ಥಾನದ ಹೊಸ ಸರಕಾರ‌ ಮೊದಲಾಗಿ ತನ್ನ ದೇಶದಲ್ಲಿಯೇ ನಾರುತ್ತಿರುವ ಕೊಳೆಯನ್ನು ತೊಳೆಯಲು ಮುಂದಾಗಲಿ. “ಕಾಶ್ಮೀರ’ ಎಂಬ ಪದ ಮುಂದಿಟ್ಟುಕೊಂಡು ಸ್ಥಾನ ಭದ್ರಗೊಳಿಸುವ ಯಾವ ಕೆಲಸವನ್ನೂ ಹೊಸ ಪ್ರಧಾನಿ ಮಾಡುವುದು ಬೇಡ. ಆ ದೇಶದ ಸರಕಾರ‌ದ  ಚುಕ್ಕಾಣಿ ಹಿಡಿದವರು ಕಾಶ್ಮೀರ ವಿಚಾರ ಮುಂದಿಟ್ಟು ಕೊಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾತನಾಡಿದವರು, ಅದರ ನೆಪದಲ್ಲಿ ದೇಶದ ಮೇಲೆ ದಂಡೆತ್ತಿ ಬಂದವರು ಏನಾಗಿದ್ದಾರೆ ಎಂಬ ಬಗ್ಗೆ ಶಹಬಾಜ್‌  ಇತಿಹಾಸದ ದಿನಗಳ ಬಗ್ಗೆ ಓದಿ ತಿಳಿದುಕೊಳ್ಳಲಿ.

ಹೊಸ ಪ್ರಧಾನಿ, ಭಾರತದ ಜತೆಗೆ ನಿಷ್ಕಲ್ಮಷ ಹೃದಯದಿಂದ ಉತ್ತಮ ಹಾಗೂ ಸೌಹಾರ್ದಯುತ ಬಾಂಧವ್ಯ ಬಯಸುವುದೇ ಆಗಿದ್ದಲ್ಲಿ, ತಮ್ಮ ದೇಶದ ಸೇನಾ ಮುಖ್ಯಸ್ಥರಿಗೆ, ಭಾರತವೂ ಸೇರಿದಂತೆ ಇತರ ದೇಶಗಳಲ್ಲಿ ಕಿಡಿಗೇಡಿತನ ಮಾಡಲು ತರಬೇತಿ ಮತ್ತು ಕುಮ್ಮಕ್ಕು ನೀಡುವ ಗುಪ್ತಚರ ಸಂಸ್ಥೆ ಐಎಸ್‌ಐ ಚಟುವಟಿಕೆಗಳ ಮೇಲೆ ನಿಯಂತ್ರಣ ಹೇರಲಿ. ಈಗಾಗಲೇ ಕಾಶ್ಮೀರ ಭಾರತಕ್ಕೆ ಸೇರಿಯಾಗಿದೆ. ಈ ವಿಷಯ ಬಿಟ್ಟು ಇನ್ನಾದರೂ ಅಭಿವೃದ್ಧಿ ಕುರಿತ ವಿಚಾರಗಳನ್ನು ಇರಿಸಿಕೊಂಡು ಮುಂದೆ ಹೋಗೋಣ ಎಂಬ ಗಟ್ಟಿ ನಿರ್ಧಾರವನ್ನು ಶಹಬಾಜ್‌ ತೆಗೆದುಕೊಳ್ಳಲಿ.

ಹೊಸ ಸರಕಾರ‌ದ ಮುಖ್ಯಸ್ಥರು ಪ್ರಧಾನವಾಗಿ ಮಾಡಬೇಕಾದ ಮತ್ತೂಂದು ಕೆಲಸವೆಂದರೆ ಪಾಕಿಸ್ಥಾನ ಆಕ್ರಮಿತ ಪ್ರದೇಶವನ್ನು ಬಾಯಿಮುಚ್ಚಿ ನಮ್ಮ ದೇಶಕ್ಕೆ ಒಪ್ಪಿಸಬೇಕು. ಜತೆಗೆ ಅಲ್ಲಿ ಇರುವ ಉಗ್ರ ಶಿಬಿರವನ್ನು ಧ್ವಂಸಗೊಳಿಸುವ ನಿಟ್ಟಿನಲ್ಲಿ ಶಹಬಾಜ್‌ ಷರೀಫ್ ನೇತೃತ್ವದ ಸರಕಾರ‌ವೇ ಆದೇಶ ಕೊಟ್ಟರೆ ಅತ್ಯುತ್ತಮ ಕೆಲಸವೇ ಆದೀತು.

ಷರೀಫ್ ಅವರು ತಮ್ಮ ದೇಶದಲ್ಲಿ ಬೃಹದಾಕಾರವಾಗಿ ಶೇಖರಿಸಿ ನಿಂತಿರುವ ಉಗ್ರತ್ವದ ಕೊಳೆ ತೊಳೆಯಲಿ. ಪಾಕಿಸ್ಥಾನದಾದ್ಯಂತ ಮನೆ ಮಾಡಿರುವ ಉಗ್ರರ ಬೇರುಗಳನ್ನು ಹೊಸಕಿ ಹಾಕಲಿ. ಹಾಗೆಯೇ ಜಾಗತಿಕ ಮಟ್ಟದಲ್ಲಿಯೂ ಉಗ್ರರ ಆಶ್ರಯದಾತ ಎಂಬ ಪಟ್ಟವನ್ನು ಕಳೆದುಕೊಳ್ಳಲಿ. ಜತೆಗೆ ತಮ್ಮ ಮನೆ ಬಾಗಿಲು ಭದ್ರಪಡಿಸುವ ಕೆಲಸ ಬಿಟ್ಟು, ಇನ್ನೊಬ್ಬರ ಮನೆ ಬಾಗಿಲು ಗಟ್ಟಿಯಾಗಿಲ್ಲ ಎಂಬ ಬೋಧನೆ ನಿಲ್ಲಿಸಿದರೆ ಅವರಿಗೇ ಒಳ್ಳೆಯದು. ಪಾಕಿಸ್ಥಾನದ ಮಟ್ಟಿಗೆ ಅಂಥ ನಿರೀಕ್ಷೆ ಮಾಡುವುದು ಸಾಧುವಲ್ಲ. ಏಕೆಂದರೆ, ಪಾಕಿಸ್ತಾನ ಹೇಳುವುದೊಂದು, ಮಾಡುವುದು ಮತ್ತೂಂದು ಎಂಬುದು ಭಾರತಕ್ಕೆ ಹಿಂದಿನಿಂದಲೂ ಅರಿವಾಗಿದೆ.

 

ಟಾಪ್ ನ್ಯೂಸ್

Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು

Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು

ಇದು ಸಿ.ಟಿ.ರವಿ ಅವರನ್ನು ಸದೆಬಡಿಯುವ ಪ್ರಯತ್ನ;ಶಾಸಕ ಚನ್ನಬಸಪ್ಪ

Shimoga; ಇದು ಸಿ.ಟಿ.ರವಿ ಅವರನ್ನು ಸದೆಬಡಿಯುವ ಪ್ರಯತ್ನ;ಶಾಸಕ ಚನ್ನಬಸಪ್ಪ

egg

Video: ಮೊಟ್ಟೆ ಕದ್ದು ಸಿಕ್ಕಿಬಿದ್ದರೇ ಶಾಲೆಯ ಪ್ರಾಂಶುಪಾಲರು…? ಇಲಾಖೆಯಿಂದ ನೊಟೀಸ್

CT Ravi case:ಬೆಳಗಾವಿ ಕೋರ್ಟ್‌ ನಲ್ಲಿ Bailಗಾಗಿ ವಾದ ಮಂಡನೆ-ವಿಚಾರಣೆ 3ಗಂಟೆಗೆ ಮುಂದೂಡಿಕೆ

CT Ravi case:ಬೆಳಗಾವಿ ಕೋರ್ಟ್‌ ನಲ್ಲಿ Bailಗಾಗಿ ವಾದ ಮಂಡನೆ-ವಿಚಾರಣೆ 3ಗಂಟೆಗೆ ಮುಂದೂಡಿಕೆ

Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್‌ ಅನಿಸಿತು…

Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್‌ ಅನಿಸಿತು…

22-hunsur

Hunsur: ಒಂದೆಡೆ ಚಿರತೆ ಸೆರೆ, ಮತ್ತೊಂದೆಡೆ ಅಪಘಾತ

CDS ಬಿಪಿನ್‌ ರಾವತ್‌ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಪತನಕ್ಕೆ ಮಾನವ ಲೋಪವೇ ಕಾರಣ: ವರದಿ

Human Error: ಮಾನವ ಲೋಪದಿಂದಲೇ CDS ರಾವತ್‌ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಪತನ: ವರದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

17-gdp

GDP ಕುಸಿತ: ಆರ್ಥಿಕ ಹಿಂಜರಿತದತ್ತ ನ್ಯೂಜಿಲ್ಯಾಂಡ್‌

14-

Afghanistan: 2 ಅಪಘಾತ: 50 ಸಾವು, 76 ಮಂದಿಗೆ ಗಾಯ

11-missile

Missile Development: ಕ್ಷಿಪಣಿ ನಿರ್ಮಾಣ ಆರೋಪ: ಪಾಕ್‌ಗೆ ಅಮೆರಿಕ ನಿರ್ಬಂಧ

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

5

Mangaluru: ಮಳೆ ನೀರು ಹರಿಯುವ ಕಾಲುವೆಗೆ ಪೈಪ್‌!

Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು

Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು

4

Kinnigoli: ಘನ ವಾಹನ ನಿರ್ಬಂಧ; ಜನ ಪರದಾಟ

ಇದು ಸಿ.ಟಿ.ರವಿ ಅವರನ್ನು ಸದೆಬಡಿಯುವ ಪ್ರಯತ್ನ;ಶಾಸಕ ಚನ್ನಬಸಪ್ಪ

Shimoga; ಇದು ಸಿ.ಟಿ.ರವಿ ಅವರನ್ನು ಸದೆಬಡಿಯುವ ಪ್ರಯತ್ನ;ಶಾಸಕ ಚನ್ನಬಸಪ್ಪ

3

Mangaluru: ಕೊಕ್ಕಡದ ʼಸಾಂತಾ ಕ್ಲಾಸ್‌ʼ ವಿನ್ಸೆಂಟ್‌ ಕ್ರಿಸ್ಮಸ್‌ ತಿರುಗಾಟಕ್ಕೆ 25 ವರ್ಷ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.