ಕೋವಿಡ್ 19 ವೈರಸ್ ಸೋಂಕಿನ ಹೊಸ ಲಕ್ಷಣಗಳು ಪತ್ತೆ
Team Udayavani, Apr 2, 2020, 5:37 AM IST
ದಿನೇ ದಿನೆ ಕೋವಿಡ್ 19 ವೈರಸ್ ಪೀಡಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವಂತೆಯೇ, ನನಗೂ ವೈರಸ್ ತಗುಲಿರಬಹುದು, ನನ್ನ ಸುತ್ತಮುತ್ತಲಿರುವವರೂ ಸೋಂಕಿತರೇ ಎಂಬಂಥ ಪ್ರಶ್ನೆಗಳು, ಗೊಂದಲಗಳು ಎಲ್ಲರನ್ನೂ ಕಾಡುತ್ತಿವೆ. ಈ ಆತಂಕಗಳ ನಡುವೆಯೇ ಸಂಶೋಧಕರು ಕೋವಿಡ್ 19 ವೈರಸ್ ಸೋಂಕಿಗೆ ಸಂಬಂಧಿಸಿದ ಇನ್ನಷ್ಟು ರೋಗಲಕ್ಷಣಗಳನ್ನು ಗುರುತಿಸಿದ್ದಾರೆ. ಹೊಸದಾಗಿ ಗುರುತಿಸಲಾದ 5 ಕೋವಿಡ್ 19 ವೈರಸ್ ಲಕ್ಷಣಗಳು ಇಂತಿವೆ
1. ನಾಲಗೆಗೆ ರುಚಿ ಹತ್ತದೇ ಇರುವುದು ಮತ್ತು ಮೂಗಿಗೆ ವಾಸನೆ ಅರಿಯದೇ ಇರುವುದು- ಈ ಲಕ್ಷಣವನ್ನು ಕ್ರಮವಾಗಿ ಅನಾಸ್ಮಿಯಾ ಮತ್ತು ಡಿಸ್ಗಾಸಿಯಾ ಎನ್ನುತ್ತಾರೆ. ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಸೋಂಕಿತರಿಗೆ ಈ ಲಕ್ಷಣವೂ ಕಂಡುಬಂದಿರುವ ಕಾರಣ, ಇವುಗಳನ್ನು ಕೋವಿಡ್ ಸೋಂಕಿನ ಲಕ್ಷಣ ಎಂದು ಪರಿಗಣಿಸಲಾಗಿದೆ.
2. ಜೀರ್ಣಕ್ರಿಯೆ ಸಮಸ್ಯೆ- ಕೋವಿಡ್ 19 ವೈರಸ್ ರೋಗಿಗಳಲ್ಲಿ ಬೇಧಿ ಅಥವಾ ಅತಿಸಾರ ಸಮಸ್ಯೆಯೂ ಕಂಡುಬರುತ್ತದೆ. ಚೀನದ ವುಹಾನ್ ನಲ್ಲೂ ಅನೇಕ ಸೋಂಕಿತರಿಗೆ ಅತಿಸಾರ ಇದ್ದಿದ್ದು ಸಾಬೀತಾಗಿದೆ.
3. ಗುಲಾಬಿ ಕಣ್ಣು – ಕಣ್ಣುಗಳು ಗುಲಾಬಿ ಬಣ್ಣಕ್ಕೆ ತಿರುಗುವುದು ಕೂಡ ಕೋವಿಡ್ 19 ವೈರಸ್ ಸೋಂಕಿನ ಹೊಸ ಲಕ್ಷಣ. ಶೇ.1ರಿಂದ 3ರಷ್ಟು ರೋಗಿಗಳಲ್ಲಿ ಈ ಲಕ್ಷಣ ಗೋಚರಿಸುತ್ತದೆ ಎಂದು ಅಧ್ಯಯನದಲ್ಲಿ ತಿಳಿದುಬಂದಿದೆ.
4. ಗೊಂದಲ ಮತ್ತು ಬಳಲಿಕೆ- ಕೋವಿಡ್ 19 ವೈರಸ್ ಸೋಂಕಿತರಲ್ಲಿ ಅತಿಯಾದ ಮಾನಸಿಕ ಗೊಂದಲಗಳು ಹಾಗೂ ತೀವ್ರ ಬಳಲಿಕೆಯೂ ಉಂಟಾಗುತ್ತದೆ. ಹಾಗಂತ ಈ ಸಮಸ್ಯೆ ಇದ್ದವರೆಲ್ಲ ಸೋಂಕಿತರಲ್ಲ. ಲಾಕ್ ಡೌನ್ ನಿಂದಾಗಿ ಮನೆಯಲ್ಲೇ ಕುಳಿತ ಅನೇಕರಲ್ಲೂ ಇಂಥ ಗೊಂದಲ, ಮಾನಸಿಕ ಒತ್ತಡ ಕಂಡುಬರುವುದು ಸಾಮಾನ್ಯ.
5. ತಲೆನೋವು- ಜ್ವರ, ಅಲರ್ಜಿ ಅಥವಾ ನೆಗಡಿ ಇದ್ದವರಿಗೆ ಸಾಮಾನ್ಯವಾಗಿ ತಲೆನೋವು ಕಾಣಿಸಿಕೊಳ್ಳುತ್ತದೆ. ಆದರೆ, ಕೋವಿಡ್ 19 ವೈರಸ್ ಸೋಂಕಿತರಲ್ಲೂ ಈ ಲಕ್ಷಣ ಕಂಡುಬಂದಿರುವ ಉದಾಹರಣೆಗಳು ಸಿಕ್ಕಿವೆ. ಸೋಂಕಿನ ಪರಿಣಾಮ ಉಸಿರಾಟದ ಸಮಸ್ಯೆ ಉಂಟಾಗುವ ಕಾರಣ, ಅಂದರೆ ಶ್ವಾಸಕೋಶದ ಸೋಂಕು ಕಾಣಿಸಿಕೊಳ್ಳುವುದರಿಂದ ತಲೆನೋವು ಆರಂಭವಾಗಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ
Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ
ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ
ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ
MUST WATCH
ಹೊಸ ಸೇರ್ಪಡೆ
NIA: ರಾಮೇಶ್ವರಂ ಕೆಫೆ ಸ್ಫೋಟ ಉಗ್ರ ಪಾಕ್‌ನಲ್ಲಿ: ಎನ್‌ಐಎಗೆ ಸುಳಿವು
Himachal Pradesh; ಸಿಎಂಗೆ ತಂದಿದ್ದ ಸಮೋಸಾ ಮಾಯ: ಸಿಐಡಿ ತನಿಖೆ?
Minister Sudhakar: ಸೀಟ್ ಬ್ಲಾಕಿಂಗ್ ದಂಧೆ ವಿರುದ್ಧ ಕ್ರಿಮಿನಲ್ ಕೇಸ್ ಅಸ್ತ್ರ
Trump ಗೆಲ್ಲುತ್ತಿದ್ದಂತೆ ಅಮೆರಿಕ ತೊರೆಯಲು ಜನರಿಂದ ಭರದ ಸಿದ್ಧತೆ
Yogi ‘ಬಟೇಂಗೆ’ಹೇಳಿಕೆ ಒಪ್ಪಲ್ಲ ಎಂದ ಅಜಿತ್: ಮಹಾಯುತೀಲಿ ಬಿರುಕು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.