ವಲಸೆ ನಿಯಮ ಸಡಿಲಿಸಿದ ನ್ಯೂಜಿಲ್ಯಾಂಡ್ ಸರಕಾರ; ಭಾರತೀಯರಿಗೆ ಹೆಚ್ಚಿನ ಅವಕಾಶ ಸಾಧ್ಯತೆ
Team Udayavani, Jan 6, 2025, 7:40 AM IST
ಹೊಸದಿಲ್ಲಿ: ಕಾರ್ಮಿಕರ ಕೊರತೆ ಎದುರಿಸುತ್ತಿರುವ ನ್ಯೂಜಿಲೆಂಡ್ ಇದೀಗ ವೀಸಾ ನಿಯಮ ಸಡಿಲ ಗೊಳಿಸಿ ವಲಸಿಗರಿಗೆ ದಾರಿ ಸುಗಮಗೊಳಿಸುತ್ತಿದೆ. ನ್ಯೂಜಿಲ್ಯಾಂಡ್‌ನಲ್ಲಿ ಉದ್ಯೋಗ ಪಡೆಯುವವರಿಗೂ ಹಾಗೂ ಉದ್ಯೋಗ ನೀಡುತ್ತಿರುವ ವರಿಗೆ ಪ್ರಕ್ರಿಯೆಗಳು ಸುಲಭವಾಗ ಬೇಕು ಎಂಬ ಗುರಿಯೊಂದಿಗೆ ಈ ಬದಲಾವಣೆಗಳನ್ನು ಮಾಡಲಾಗಿದೆ.
ಕೆಲಸದ ಅನುಭವ, ವೇತನ ಹಾಗೂ ವೀಸಾ ಅವಧಿಗಳಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಲಾ ಗಿದೆ. ಉದ್ಯೋಗ ಅರಸಿ ವಲಸೆ ಬರುವ ವರಿಗೆ ಕನಿಷ್ಠ 3 ವರ್ಷದ ಅನುಭವ ಇರಬೇಕೆಂಬ ನಿಯಮ ಈ ಹಿಂದೆ ಇತ್ತು. ಇದೀಗ ಅದನ್ನು 2 ವರ್ಷಕ್ಕೆ ಇಳಿಸಲಾಗಿದೆ. ಜತೆಗೆ ತಾತ್ಕಾಲಿಕವಾಗಿ ಕಾರ್ಯನಿರ್ವಹಿಸುವ ಅನುಭವವುಳ್ಳ ಉದ್ಯೋಗಿಗಳಿಗೆ 3 ವರ್ಷಗಳವರೆಗಿನ “ಮಲ್ಟಿ ಎಂಟ್ರಿ ವೀಸಾ’ ಹಾಗೂ ಕಡಿಮೆ ಕೌಶಲವುಳ್ಳ ಉದ್ಯೋಗಿಗಳಿಗೆ 7 ತಿಂಗಳ “ಸಿಂಗಲ್ ಎಂಟ್ರಿ ವೀಸಾ’ ನೀಡಲಾಗುವುದು.
“ಅಕ್ರೆಡೇಟೆಡ್ ಎಂಪ್ಲಾಯರ್ ವರ್ಕ್ ವೀಸಾ(ಎಇಡಬ್ಲ್ಯುವಿ)’, “ಸ್ಪೆಸಿಫಿಕ್ ಪರ್ಪಸ್ ವರ್ಕ್ ವೀಸಾ(ಎಸ್ಪಿಡಬ್ಲ್ಯುವಿ)’ಗೆ ಇರುವ ಸರಾಸರಿ ವೇತನ ಮಾನದಂಡವನ್ನು ತೆಗೆದುಹಾಕಿದೆ. ಇದು ಭಾರತೀಯ ವಲಸಿಗರಿಗೆ ಅನುಕೂಲವಾಗುವ ನಿರೀಕ್ಷೆಯಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ayodhya: ಕನ್ನಡಕದಲ್ಲಿ ರಹಸ್ಯ ಕ್ಯಾಮರಾ ಬಳಸಿ ರಾಮಮಂದಿರದ ಒಳದೃಶ್ಯಗಳ ಸೆರೆಹಿಡಿದ ಯುವಕ!
Girl Trapped: 24 ಗಂಟೆಗಳ ಕಾಲ 540 ಅಡಿ ಆಳದ ಕೊಳವೆ ಬಾವಿಯಲ್ಲಿ ಸಿಲುಕಿದ್ದ ಯುವತಿ ಮೃತ್ಯು
Hunger Strike: ಹದಗೆಟ್ಟ ಅರೋಗ್ಯ… ಪ್ರಶಾಂತ್ ಕಿಶೋರ್ ಆಸ್ಪತ್ರೆಗೆ ದಾಖಲು
Delhi Election 2025: ದೆಹಲಿ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆ; ಬಿಜೆಪಿ V/s AAP
Asaram Bapu: ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಸಾರಾಂ ಬಾಪುಗೆ ಮಧ್ಯಂತರ ಜಾಮೀನು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಮಾದಕ ವಸ್ತು ಸೇವನೆ ಆರೋಪ: ಯುವಕ ವಶಕ್ಕೆ
Writer’s audition: ಬರಹಗಾರರಾಗುವ ನಿಮ್ಮ ಕನಸನ್ನು ನನಸಾಗಿಸಲು ಇಲ್ಲಿದೆ ಉತ್ತಮ ವೇದಿಕೆ
Malpe: ಹೊಡೆದಾಟ ಪ್ರಕರಣ: ತಲೆ ಮರೆಸಿಕೊಂಡಿದ್ದ ಆರೋಪಿ ಬಂಧನ
Ayodhya: ಕನ್ನಡಕದಲ್ಲಿ ರಹಸ್ಯ ಕ್ಯಾಮರಾ ಬಳಸಿ ರಾಮಮಂದಿರದ ಒಳದೃಶ್ಯಗಳ ಸೆರೆಹಿಡಿದ ಯುವಕ!
Bidar: ಗುತ್ತಿಗೆದಾರರ ಬಿಲ್ ಬಾಕಿ ಉಳಿಯಲು ಬಿಜೆಪಿ ಕಾರಣ, ಗ್ಯಾರಂಟಿಯಲ್ಲ: ಜಾರಕಿಹೊಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.