Man of The Hole…ಅಮೆಜಾನ್ ಕಾಡಿನಲ್ಲಿ ವಾಸವಾಗಿದ್ದ ಬುಡಕಟ್ಟು ಜನಾಂಗದ ಕೊನೆಯ ವ್ಯಕ್ತಿ ನಿಧನ
ಟಾನಾರು ಸ್ಥಳೀಯ ಪ್ರದೇಶದಲ್ಲಿ ವಾಸಿಸುತ್ತಿದ್ದ ಏಕೈಕ ಬುಡಕಟ್ಟು ವ್ಯಕ್ತಿಯಾಗಿದ್ದಾನೆ
Team Udayavani, Aug 30, 2022, 1:54 PM IST
ಬ್ರೆಜಿಲ್: ವಿಶ್ವದ ಏಕಾಂಗಿ ವ್ಯಕ್ತಿ ಎಂದೇ ಕರೆಯಲ್ಪಡುತ್ತಿದ್ದ “ಅಮೆಜಾನ್ ಬುಡಕಟ್ಟು” ವ್ಯಕ್ತಿ ಅಮೆಜಾನ್ ದಟ್ಟಾರಣ್ಯದಲ್ಲಿ ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಈತ ಬ್ರೆಜಿಲ್ ನ ಅಮೆಜಾನ್ ಕಾಡಿನಲ್ಲಿ ಕಳೆದ 26 ವರ್ಷಗಳಿಂದ ಒಂಟಿಯಾಗಿ ವಾಸಿಸುತ್ತಿದ್ದ.
ಇದನ್ನೂ ಓದಿ:ಅಬಕಾರಿ ನೀತಿ ಹಗರಣ: ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಜೈಲು ಖಚಿತ; ಪ್ರಹ್ಲಾದ್ ಜೋಶಿ
ದಿ ಗಾರ್ಡಿಯನ್ ವರದಿ ಪ್ರಕಾರ, ಈ ನಿಗೂಢ ವ್ಯಕ್ತಿ ಬ್ರೆಜಿಲ್ ನ ಅಜ್ಞಾತ ಬುಡಕಟ್ಟು ಜನಾಂಗದ ಕೊನೆಯ ವ್ಯಕ್ತಿಯಾಗಿದ್ದಾನೆ ಎಂದು ತಿಳಿಸಿದೆ. ಈತ ನೆಲದಲ್ಲಿ ಗುಹೆಯನ್ನು(ಮ್ಯಾನ್ ಆಫ್ ದಿ ಹೋಲ್) ತೋಡಿ ಅದರೊಳಗೆ ಹೆಚ್ಚಿನ ಸಮಯ ಕಳೆಯುತ್ತಿರುವುದಾಗಿ ವರದಿ ವಿವರಿಸಿದೆ.
ಬುಡಕಟ್ಟು ವ್ಯಕ್ತಿಯ ಮೇಲ್ವಿಚಾರಣೆ ನಡೆಸುತ್ತ, ಮಾಹಿತಿ ಕಲೆ ಹಾಕುತ್ತಿದ್ದ ಬ್ರೆಜಿಲ್ ನ ಸ್ಥಳೀಯ ವ್ಯವಹಾರಗಳ ಸಂಸ್ಥೆ(ಫುನೈ) ನೀಡಿರುವ ಮಾಹಿತಿ ಪ್ರಕಾರ, ಆಗಸ್ಟ್ 23ರಂದು ಒಣಹುಲ್ಲಿನ ಗುಡಿಸಲಿನ ಹೊರಭಾಗದಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ ಎಂದು ತಿಳಿಸಿದೆ.
ಈ ಪ್ರದೇಶದಲ್ಲಿ ಯಾವುದೇ ಹಿಂಸಾಚಾರ ನಡೆದ ಕುರುಹುಗಳು ಪತ್ತೆಯಾಗಿಲ್ಲ. ವಯೋ ಸಹಜ ಅನಾರೋಗ್ಯದಿಂದ ಈತ ಸಾವನ್ನಪ್ಪಿರಬಹುದು ಎಂದು ತಜ್ಞರು ಶಂಕಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಬುಡಕಟ್ಟು ವ್ಯಕ್ತಿಗೆ ಅಂದಾಜು 60 ವರ್ಷವಾಗಿರಬಹುದು ಎಂದು ಅಂದಾಜಿಸಲಾಗಿದೆ. ಬೊಲಿವಿಯಾ ಗಡಿಯಲ್ಲಿರುವ ರೊಂಡೋನಿಯಾ ರಾಜ್ಯದ ಟಾನಾರು ಸ್ಥಳೀಯ ಪ್ರದೇಶದಲ್ಲಿ ವಾಸಿಸುತ್ತಿದ್ದ ಏಕೈಕ ಬುಡಕಟ್ಟು ವ್ಯಕ್ತಿಯಾಗಿದ್ದಾನೆ ಎಂದು ಬಿಬಿಸಿ ವರದಿ ಮಾಡಿದೆ.
ಈತನನ್ನು ಸಂಪರ್ಕಿಸಬೇಕೆಂಬ ಎಲ್ಲಾ ಪ್ರಯತ್ನಗಳನ್ನು ಬುಡಕಟ್ಟು ವ್ಯಕ್ತಿ ನಿರಾಕರಿಸಿದ್ದ. ಈ ವ್ಯಕ್ತಿ ಯಾರನ್ನೂ ನಂಬುತ್ತಿರಲಿಲ್ಲವಂತೆ. ಹೀಗಾಗಿ ಎರಡು ದಶಕಕ್ಕಿಂತಲೂ ಹೆಚ್ಚಿನ ಕಾಲ ಒಬ್ಬಂಟಿಯಾಗಿಯೇ ಅಮೆಜಾನ್ ಕಾಡಿನಲ್ಲಿ ವಾಸ್ತವ್ಯ ಹೂಡಿದ್ದ. ಈತ ಯಾರನ್ನೂ ಸಂಪರ್ಕಿಸದಿರುವುದು ಯಾವ ಕಾರಣಕ್ಕೆ ಎಂಬುದು ಇಂದಿಗೂ ನಿಗೂಢವಾಗಿದೆ ಎಂದು ಬ್ರೆಜಿಲ್ ನ ಸಾಮಾಜಿಕ ಕಾರ್ಯಕರ್ತರ ಗುಂಪು ತಿಳಿಸಿದೆ.
ಬ್ರೆಜಿಲ್ ಫೆಡರಲ್ ಪೊಲೀಸರು ಬುಡಕಟ್ಟು ವ್ಯಕ್ತಿಯ ಶವವನ್ನು ಮರಣೋತ್ತರ ಪರೀಕ್ಷೆ ಕಳುಹಿಸಿದ್ದು, ನಂತರ ಸಾವಿನ ಕುರಿತ ಕಾರಣದ ವರದಿಯನ್ನು ನೀಡಲಿದ್ದಾರೆ ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.