ತೈಲ ಬೆಲೆ ಸದ್ಯ ಇಳಿಯದು! ಜೀವ ಉಳಿಸುವ ಔಷಧಗಳಿಗೆ ಜಿಎಸ್‌ಟಿ ಕಡಿತ
Team Udayavani, Sep 18, 2021, 7:30 AM IST
ಲಕ್ನೋ : ತೈಲೋತ್ಪನ್ನಗಳು ಜಿಎಸ್‌ಟಿ ವ್ಯಾಪ್ತಿಗೆ ಬರಲಿವೆ, ಈ ಮೂಲಕ ಪೆಟ್ರೋಲ್-ಡೀಸೆಲ್ ದರ ಇಳಿಕೆಯಾಗಲಿದೆ ಎಂಬ ನಿರೀಕ್ಷೆ ಸುಳ್ಳಾಗಿದೆ.
ಶುಕ್ರವಾರ ಲಕ್ನೋದಲ್ಲಿ ನಡೆದ 45ನೇ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲು ಸಾಕಷ್ಟು ವಿರೋಧ ವ್ಯಕ್ತವಾಯಿತು. ರಾಜ್ಯ ಸರಕಾರಗಳು ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ ಎನ್ನಲಾಗಿದೆ.
ತೈಲೋತ್ಪನ್ನಗಳನ್ನು ಜಿಎಸ್‌ಟಿ ಅಡಿಗೆ ತರಲು ರಾಜ್ಯಗಳು ಒಪ್ಪಲಿಲ್ಲ ಎಂದು ಸಭೆಯ ಅನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು. ಆದರೆ ಬಯೋಡೀಸೆಲ್ ಮೇಲಿನ ಜಿಎಸ್‌ಟಿ
ಯನ್ನು ಶೇ. 12ರಿಂದ ಶೇ. 5ಕ್ಕೆ ಇಳಿಕೆ ಮಾಡಲಾಗಿದೆ ಎಂದು ವಿವರಿಸಿದರು.
ಹಲವು ಔಷಧ ಅಗ್ಗ
ಜಿಎಸ್‌ಟಿ ಮಂಡಳಿ ಸಭೆಯ ಪ್ರಮುಖ ನಿರ್ಧಾರವೆಂದರೆ, ಕೆಲವು ಔಷಧಗಳ ಜಿಎಸ್‌ಟಿ ಇಳಿಕೆ. ಕ್ಯಾನ್ಸರ್ ಔಷಧಗಳ ಮೇಲಿನ ತೆರಿಗೆಯನ್ನು ಶೇ. 12ರಿಂದ ಶೇ. 5ಕ್ಕೆ ತಗ್ಗಿಸಲಾಗಿದೆ. ಕೊರೊನಾ ಸಂಬಂಧಿ ಔಷಧಗಳಿಗೆ ಜಿಎಸ್ ಟಿ ವಿನಾಯಿತಿಯನ್ನು ಡಿಸೆಂಬರ್ ಅಂತ್ಯದ ವರೆಗೆ ವಿಸ್ತರಿಸಲಾಗಿದೆ. ಅತ್ಯಂತ ದುಬಾರಿ ಔಷಧಗಳಾದ ಝೋಲ್ಗೆನ್‌ಸ್ಮಾ ಮತ್ತು ವಿಟೋಪ್ ಸೊ ಗಳಿಗೆ ಜಿಎಸ್‌ಟಿ ವಿನಾಯಿತಿ ನೀಡಲಾಗಿದೆ.
ಆಹಾರ ಬಟವಾಡೆ ಆ್ಯಪ್‌ಗೆ ಜಿಎಸ್‌ಟಿ
ಝೋಮ್ಯಾಟೋ ಮತ್ತು ಸ್ವಿಗ್ಗಿಯಂತಹ ಆನ್ ಲೈನ್ ಆಹಾರ ಬಟವಾಡೆ ಆ್ಯಪ್ ಗಳ ಮೇಲೆ ಜಿಎಸ್‌ಟಿ ವಿಧಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಹಿಂದೆ ರೆಸ್ಟೋರೆಂಟ್ ಗಳಿಂದ ಈ ತೆರಿಗೆ ವಸೂಲಿ ಮಾಡಲಾಗುತ್ತಿತ್ತು. ಇನ್ನು ಮುಂದೆ ಇದನ್ನು ಆ್ಯಪ್ ಗಳೇ ಪಾವತಿಸಬೇಕು.
ಪರಿಹಾರಕ್ಕಾಗಿ ಜಿಒಎಂ
2022ರ ಅನಂತರವೂ ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರ ನೀಡುವ ಸಂಬಂಧ ಪರಿಶೀಲನೆಗಾಗಿ ಸಚಿವರ ಸಮಿತಿ ರಚಿಸಲಾಗಿದೆ. ಈ ಸಮಿತಿಯು 2 ತಿಂಗಳುಗಳ ಒಳಗೆ ತನ್ನ ವರದಿ ಸಲ್ಲಿಸಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.