ಸಾವಿನ ಮನೆಯ ಪಕ್ಕದಲ್ಲಿದ್ದರೂ ಕ್ಷೇಮ; ಕೋಟೆಯೂರಿನಲ್ಲಿ ಕೋವಿಡ್-19 ಇಲ್ಲ

ಇದು ಸ್ಪೇನ್‌ನ ಒಂದು ಹಳ್ಳಿ ಕಥೆ

Team Udayavani, Apr 7, 2020, 11:55 AM IST

ಕೋಟೆಯೂರಿನಲ್ಲಿ ಕೋವಿಡ್-19 ಇಲ್ಲ

ಸ್ಪೇನ್‌: ಝಹಾರ ಡೆ ಲಾ ಸಿಯೆರಾ, ಸ್ಪೇನ್‌ನ ದಕ್ಷಿಣ ಭಾಗದಲ್ಲಿರುವ ಗುಡ್ಡದ ಮೇಲಿನ ಒಂದು ಊರು. ಇಲ್ಲೊಂದು ಕೋಟೆ ಇದೆ. ಹಾಗಾಗಿ ಇದು ಕೋಟೆ ಇರುವ ಊರು. ಈ ಭದ್ರ ಕೋಟೆಯನ್ನು ಪಡೆಯಲು ಮಧ್ಯಕಾಲೀನ ಯುಗದಲ್ಲಿ ಮೂರ್ಷ್‌ ಮತ್ತು ಕ್ರಿಶ್ಚಿಯನ್ನರ ಮಧ್ಯೆ ಹೋರಾಟ ನಡೆದಿತ್ತು. ಆದರೆ ಇಬ್ಬರ ಜಗಳ ಮೂರನೆಯವರಿಗೆ ಲಾಭ ಎನ್ನುವಂತೆ 1812ರಲ್ಲಿ ಫ್ರೆಂಚ್‌ ಇದನ್ನು ವಶಪಡಿಸಿಕೊಂಡಿತು. ಪ್ರಸ್ತುತ ಅದ್ಬುತ ಪ್ರವಾಸಿ ತಾಣಗಳಲ್ಲಿ ಒಂದು ಈ ಸಿಯೆರಾ.

ಇರುವುದು ಸ್ಪೇನ್‌ನಲ್ಲೇ. ಈಗ ಸ್ಪೇನ್‌ ಯಾಕೆ ಪ್ರಸಿದ್ಧವಾಗಿದೆ ಎಂಬುದು ಗೊತ್ತು. ಕೋವಿಡ್-19 ವೈರಸ್‌ನ ಆಕ್ರಮಣಕ್ಕೆ ಸಿಕ್ಕು ನಲುಗಿದೆ. ಹೆಚ್ಚು ಸಾವು ನೋವು ಘಟಿಸಿದೆ. ಇದೆಲ್ಲದರ ಮಧ್ಯೆಯೇ ಈ ಕೋಟೆಯೂರಿನಲ್ಲಿ ಒಂದೇ ಒಂದು ಕೋವಿಡ್-19 ಸೋಂಕು ಪ್ರಕರಣ ಪತ್ತೆಯಾಗಿಲ್ಲ. ಇದು ಬರೀ ಸ್ಪೇನ್‌ಗಲ್ಲ, ಇಡೀ ಜಗತ್ತಿಗೇ ಅಚ್ಚರಿಯ ಸಂಗತಿ. ಆದರೆ, ಇದರ ಹಿಂದಿನ ಶ್ರಮ ಮತ್ತು ಸಕಾಲಿಕ ತೀರ್ಮಾನದಿಂದ ಸಾಧ್ಯವಾದದ್ದು.

ಸಂಪರ್ಕ ಕಡಿದುಕೊಂಡಿತು
ಅಪಾಯಕಾರಿ ಕೋವಿಡ್-19 ಸೋಂಕು ನಿಯಂತ್ರಣಕ್ಕಾಗಿ ಸ್ಪೇನ್‌ದಾದ್ಯಂತ ಮಾರ್ಚ್‌ 14ರಂದು ಲಾಕ್‌ಡೌನ್‌ ಘೋಷಿಸಿತು. ಆದರೆ ಕೋಟೆಯೂರಿನ ಮೇಯರ್‌ ಸ್ಯಾಂಟಿಯಾಗೊ ಗಾಲ್ವಿನ್‌(40) ಮತ್ತೂಂದು ಹೆಜ್ಜೆ ಮುಂದೆ ಹೋಗಿ ಲಾಕ್‌ಡೌನ್‌ಗಿಂತ ಕಠಿಣ ನಿರ್ಧಾರ ಪ್ರಕಟಿಸಿದರು. ಸ್ವಯಂ ಪ್ರೇರಣೆಯೊಂದಿಗೆ ಹೊರಗಿನ ಪ್ರಪಂಚದಿಂದ ಸಂಪೂರ್ಣವಾಗಿ ಸಂಪರ್ಕವನ್ನು ಕಡಿದುಕೊಳ್ಳಲು ನಿರ್ಧರಿಸಿದರು. ಪಟ್ಟಣದ 5 ಪ್ರವೇಶ ದ್ವಾರಗಳ ಪೈಕಿ ನಾಲ್ಕನ್ನು ಮುಚ್ಚಿಬಿಟ್ಟರು. ಒಂದು ಮಾತ್ರ ಓಡಾಟಕ್ಕೆ, ಅದೂ ನಿರ್ಬಂಧಗಳನ್ನು ಅಧರಿಸಿ.

ಈ ಹಿನ್ನೆಲೆಯಲ್ಲಿ ಎರಡು ವಾರಗಳಿಂದ ಜಗತ್ತಿನ ಯಾವ ಪ್ರದೇಶದೊಂದಿಗೂ ಸಂಪರ್ಕವನ್ನು ಇಟ್ಟುಕೊಳ್ಳದೇ ಸುಮಾರು 1,400 ಕುಟುಂಬಗಳ ಕೋಟೆಯೂರು ಬದುಕು ತ್ತಿದೆ. ಇಲ್ಲಿಯವರೆಗೂ ಒಂದು ಕೋವಿಡ್-19 ಸೋಂಕು ಪ್ರಕರಣವಾಗಲೀ, ಶಂಕಿತ ಪ್ರಕರಣವಾಗಲೀ ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿ ಬರಲೂ ಬಿಡುವುದಿಲ್ಲ. ಇದಲ್ಲದೇ ಇನ್ನಿತರ ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿದ್ದೇವೆ ಎನ್ನುತ್ತಾರೆ ಗಾಲ್ವಿನ್‌. ಈ ಬಗ್ಗೆ ಸಿಎನ್‌ಎನ್‌ ವಿಶೇಷ ವರದಿ ಪ್ರಕಟಿಸಿದೆ.

ಮೇಯರ್‌ನ ನಿರ್ಧಾರಕ್ಕೆ ತಲೆ ಬಾಗಿದ ಜನರು
ಕಾಲ ಬುಡದಲ್ಲಿಯೇ ಕೋವಿಡ್-19 ಅಟ್ಟಹಾಸವನ್ನು ನೋಡಿದ್ದು, ಹತ್ತಿರದ ಪಟ್ಟಣಗಳು ಮತ್ತು ಹಳ್ಳಿಗಳ ದುಂರತ ಸ್ಥಿತಿಯನ್ನು ಕಂಡಿದ್ದೇನೆ. ನನ್ನ ಪ್ರದೇಶದಲ್ಲಿ ಈ ಸ್ಥಿತಿ ನಿರ್ಮಾಣವಾಗಬಾರದು. ಅದರಲ್ಲೂ ಝಹಾರಾದ ಒಟ್ಟು ಜನಸಂಖ್ಯೆ ಪೈಕಿ ಕಾಲು ಭಾಗ 65 ವರ್ಷ ಮೇಲ್ಪಟ್ಟವರಿದ್ದು, ಅವರ ಅರೋಗ್ಯ ಕಾಳಜಿ ಮುಖ್ಯ. ಅವರನ್ನು ಕಳೆದುಕೊಳ್ಳಲು ಊರಿಗೆ ಇಷ್ಟವಿಲ್ಲ. ಹಾಗಾಗಿಯೇ ಕಠಿನ ನಿಯಮ ಜಾರಿ ಮಾಡಲಾಗಿದೆ ಎನ್ನುತ್ತಾರೆ ಮೇಯರ್‌. ಇವರ ನಿರ್ಧಾರವನ್ನು ಸ್ವಯಂ ಪ್ರೇರಿತರಾಗಿ ಬೆಂಬಲಿಸಿ ಜನರು ಗೃಹ ಬಂಧಿ ಗಳಾಗಿದ್ದಾರೆ.

ಊರನ್ನ ಪ್ರವೇಶಿಸಲು ಇರುವ ಒಂದು ದ್ವಾರದಲ್ಲಿ ಓರ್ವ ಪೊಲೀಸ್‌ ಅಧಿಕಾರಿ ಹಾಗೂ ಇಬ್ಬರು ಸ್ವಚ್ಛತಾ ಕೆಲಸಗಾರರನ್ನು ನಿಯೋಜಿಸಲಾಗಿದೆ. ಚೆಕ್‌ಪೋಸ್ಟ್‌ ದಾಟಿ ಹೋಗುವ ಪ್ರತಿ ವಾಹನಗಳ ಮೇಲೆ ಕ್ರಿಮಿ ನಾಶಕ ನಾಶಪಡಿಸುವ ನೀರು ಸಿಂಪಡಿಸಲಾಗುತ್ತಿದೆ. ಈ ಮೂಲಕ ಸೋಂಕು ಹರಡುವುದನ್ನು ತಡೆಗಟ್ಟುತ್ತಿದ್ದು, ವಾಹನಗಳ ಚಕ್ರಗಳನ್ನೂ ತಪಾಸಣೆಗೊಳಿಸುವ ತಂತ್ರಗಾರಿಕೆ ಅಳವಡಿಸಲಾಗಿದೆ. ಆದರೆ ಅಚ್ಚರಿಯ ವಿಷಯವೆಂದರೆ ಇಲ್ಲಿಯವರೆಗೂ ಒಂದೂ ವಾಹನ ಬಂದಿಲ್ಲ ಎನ್ನುತ್ತಾರೆ ಗ್ವಾಲಿಯರ್‌.

ಊರಿನಲ್ಲಿ ನೈರ್ಮಲ್ಯ ಕಾಪಾಡಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರತಿ ಸೋಮವಾರ ಮತ್ತು ಗುರುವಾರ ಸಂಜೆ 5: 30 ಕ್ಕೆ ಪಟ್ಟಣದ ಎಲ್ಲಾ ಬೀದಿಗಳಿಗೆ, ಅಂಗಡಿ-ಮಗ್ಗಟ್ಟುಗಳಿಗೆ, ಮನೆಯ ಹೊರಾಂಗಣ ಪ್ರದೇಶಗಳಿಗೆ ಸೋಂಕು ನಿವಾರಕವನ್ನು ಸಿಂಪಡಿಸಲಾಗುತ್ತದೆ. ವಿಶೇಷವೆಂದರೆ ಸ್ಥಳೀಯ ಹತ್ತು ಜನರ ಗುಂಪು ಸ್ವಯಂ ಪ್ರೇರಿತವಾಗಿ ಈ ಕಾರ್ಯವನ್ನು ನಿರ್ವಹಿಸುತ್ತಿದೆ.
ಸಹಾಯಕ್ಕೆ ನಿಂತ ಮಹಿಳಾ ಸಂಘ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ದಿನಸಿ ಮತ್ತು ಅಗತ್ಯ ವೈದ್ಯಕೀಯ ವಸ್ತುಗಳ ಪೂರೈಕೆಗೆ ಇಬ್ಬರು ಮಹಿಳೆಯರು ಕಾರ್ಯ ನಿರ್ವಹಿಸುತ್ತಿದ್ದಾರೆ.

ಯಾವುದೇ ವಸ್ತು ಬೇಕಿದ್ದರೂ ಕರೆ ಮಾಡಿ ತಿಳಿಸಿದರೆ ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ. ಸಾಮಗ್ರಿಗಳ ವಿತರಣಾ ಸೇವೆಯೊಂದಿಗೆ ಇಲ್ಲಿನ ಮಹಿಳಾ ಸಂಘದ ಸದಸ್ಯೆಯರು ಅಡುಗೆ ಮಾಡಲು ಸಾಧ್ಯವಾಗದ ವಯಸ್ಸಾದವರಿಗೆ ಆಹಾರ ಪೂರೈಕೆಯನ್ನು (ಆಹಾರವನ್ನು ಅವರ ಮನೆ ಮುಂಭಾಗದಲ್ಲಿ ಇಡಲಾಗುತ್ತದೆ) ಮಾಡುವುದಲ್ಲದೇ ನಿತ್ಯ ಬಳಕೆಯ ಮೂಲ ವಸ್ತುಗಳನ್ನೂ ಪೂರೈಸುವ ವ್ಯವಸ್ಥೆಯನ್ನು ಮಾಡುತ್ತಿದೆ.

ಪ್ರಜೆಗಳ ಹಿತಕ್ಕಾಗಿ ಫೇಸ್‌ಬುಕ್‌ ಪೇಜ್‌
ತಮ್ಮ ಪ್ರದೇಶದ ನಿವಾಸಿಗಳಿಗೆ ಏಕಾಂತ ಕಾಡಬಾರದೆಂದು ಫೇಸ್‌ಬುಕ್‌ ಪುಟವನ್ನೂ ರಚಿಸಿದ್ದು, ಅದರಲ್ಲಿ ಅವರ ಹಳೆಯ ಛಾಯಾಚಿತ್ರಗಳನ್ನು , ಅನುಭವವಗಳನ್ನು ಪ್ರಕಟಿಸಲು ಅವಕಾಶ ನೀಡಲಾಗಿದೆ. ಈ ಯೋಜನೆಯನ್ನು ರೂಪಿಸಿರುವ ಲೂಯಿಸಾ ರೂಯಿಜ್‌ ಲೂನಾ ಇದು ಜನರಲ್ಲಿನ ಒಂಟಿತನದ ಭಾವನೆಯನ್ನು ದೂರ ಮಾಡಿ, ವಿದೇಶದಲ್ಲಿ ವಾಸಿಸುತ್ತಿರುವ ಸ್ನೇಹಿತರೊಂದಿಗೆ ಸಂವಹನ ನಡೆಸಲು ಸೂಕ್ತವಾದುದು ಎಂದು ಹೇಳಿದ್ದಾರೆ ಮಾಧ್ಯಮಕ್ಕೆ. ಇದರ ಜತೆಗೆ ಮಕ್ಕಳ ಖುಷಿಗಾಗಿ 2 ಕಾರುಗಳನ್ನು ದೀಪದಿಂದ ಅಲಂಕಾರ ಮಾಡಿದ್ದು, ಅದರಲ್ಲಿ ಸಂಗೀತದ ವ್ಯವಸ್ಥೆ ಇದೆ. ಮಕ್ಕಳು ತಮ್ಮ ಮನೆಯ ಬಾಲ್ಕನಿಗಳಿಗೆ ಬಂದು ಅವುಗಳನ್ನು ಆನಂದಿಸಬಹುದು ಎಂದು ಹೇಳುತ್ತಾರೆ ಗಾಲ್ವಿನ್‌. ಜನರ ಅಭಿಪ್ರಾಯವೇನು ?
ಗಾಲ್ವಿನ್‌ ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡ 48 ವರ್ಷದ ಆಕ್ಸಿ ರಾಸ್ಕನ್‌, ನಾಗರಿಕರ ಪ್ರತಿಕ್ರಿಯೆ ಅದ್ಭುತ ಎಂದು ತಿಳಿಸಿದ್ದಾರೆ. ಸೋಂಕಿನ ವಿರುದ್ಧ ಹೋರಾಡಿ ಗೆಲುತ್ತೇವೆ ಎಂಬ ಆತ್ಮವಿಶ್ವಾಸ ಮೂಡಿದೆ ಎಂದು ಅವರು ಹೇಳಿದ್ದಾರೆ.

 ಸುಶ್ಮಿತಾ ಜೈನ್‌

ಟಾಪ್ ನ್ಯೂಸ್

K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

Shiva Rajkumar: ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!

Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

Earthquake…! ರೋಡ್‌ ರೋಲರ್‌ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು

Earthquake…! ರೋಡ್‌ ರೋಲರ್‌ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು

WTC 25; India’s Test Championship finals road gets tough; Here’s the calculation

WTC 25; ಕಠಿಣವಾಯ್ತು ಭಾರತದ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಹಾದಿ; ಹೀಗಿದೆ ಲೆಕ್ಕಾಚಾರ

Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ

Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

Earthquake…! ರೋಡ್‌ ರೋಲರ್‌ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು

Earthquake…! ರೋಡ್‌ ರೋಲರ್‌ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

1-lasike

Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ

Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!

Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Battery theft at Dharwad District Collector’s Office

Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ

K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

Shiva Rajkumar: ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!

Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.