ಕೋವಿಡ್-19: ಕಣ್ಣಿಗೆ ಬೀಳದ ರಾಷ್ಟ್ರಗಳು
Team Udayavani, Apr 7, 2020, 4:45 PM IST
ಸೌದಿ: ಎರಡು ತಿಂಗಳುಗಳಿಂದ ಜಗತ್ತಿನಲ್ಲಿ ಕೋವಿಡ್-19 ವೈರಸ್‌ನದ್ದೇ ಮಾತುಗಳು, ಕತೆಗಳು. ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳ ಪೈಕಿ ಒಟ್ಟು 194 ದೇಶಗಳಲ್ಲಿ ಹೆಚ್ಚಿನ ಸೋಂಕುಗಳು ವರದಿಯಾಗಿವೆ. ಇದನ್ನು ನಿಭಾಯಿಸಲು ಕೆಲವರು ಯಶಸ್ವಿಯಾಗಿದ್ದಾರೆ. ಬಹುತೇಕರು ಇನ್ನೂ ಅಪಾಯದಲ್ಲೇ ಇದ್ದಾರೆ.
ಆದರೆ ವಿಶೇಷ ಎಂದರೆ ಒಟ್ಟು 18 ರಾಷ್ಟ್ರಗಳಲ್ಲಿ ಕೋವಿಡ್-19 ಸೋಂಕು ಇಲ್ಲ ಎಂದು ಬಿಬಿಸಿ ವರದಿ ಮಾಡಿದೆ. ಆ ದೇಶಗಳೆಂದರೆ: ಕೊಮೊರೊಸ್, ಕಿರಿಬಾಟಿ, ಲೆಸೊಥೊ, ಮಾರ್ಷಲ್ ದ್ವೀಪಗಳು, ಮೈಕ್ರೋನೇಶಿಯಾ, ನೌರು, ಉತ್ತರ ಕೊರಿಯಾ, ಪಲಾವ್, ಸಮೋವಾ, ಸಾವೊ ಟೋಮ್ ಮತ್ತು ಪ್ರಿನ್ಸಿಪಿ, ಸೊಲೊಮನ್ ದ್ವೀಪಗಳು, ದಕ್ಷಿಣ ಸುಡಾನ್, ತಜಿಕಿಸ್ತಾನ್, ಟೋಂಗಾ, ತುರ್ಕಮೆನಿಸ್ತಾನ್, ತುವಾಲು, ವನವಾಟು ಮತ್ತು ಯೆಮೆನ್.
ಎರಡು ಅರಬ್ ರಾಜ್ಯಗಳು
ಅರಬ್ ಲೀಗ್‌ನ ಪೂರ್ಣ ಪ್ರಮಾಣದ ಸದಸ್ಯರಾದ ಹಿಂದೂ ಮಹಾಸಾಗರದ ಪುಟ್ಟ ದ್ವೀಪ ರಾಷ್ಟ್ರವಾದ ಕೊಮೊರೊಸ್ ಕೋವಿಡ್-19 ದಾಳಿಗೆ ಸಿಲುಕದ ಅರಬ್ ಒಕ್ಕೂಟದ ಕೇವಲ ಎರಡು ರಾಷ್ಟ್ರಗಳ ಪೈಕಿ ಮೊದಲನೆಯದು. ಇನ್ನೊಂದು ಯುದ್ಧ ಪೀಡಿತ ಯೆಮೆನ್. ದಕ್ಷಿಣ ಭಾಗದಲ್ಲಿರುವ ಕೊಮೊರೊಸ್‌ನಲ್ಲಿ ಒಂದೂ ಕೊರೊನಾ ಪ್ರಕರಣ ಪತ್ತೆಯಾಗಿಲ್ಲ. ಉತ್ತರ ಕೊರಿಯಾ, ತಜಿಕಿಸ್ತಾನ್ ಮತ್ತು ತುರ್ಕಮೆನಿಸ್ತಾನ್ ನಲ್ಲೂ ಕೊರೊನಾ ಇಲ್ಲ. ಹೊರಗಿನ ಪ್ರಪಂಚಕ್ಕೆ ಅವರ ಸಂಪರ್ಕ ಸೀಮಿತವಾಗಿದೆ. ಅದೂ COVID 19 ಅನುಪಸ್ಥಿತಿಗೆ ಕಾರಣವಾಗಿರಬಹುದು.
ದ್ವೀಪಗಳೇ ಹೆಚ್ಚು
ಲೆಸೊಥೊ, ದಕ್ಷಿಣ ಸುಡಾನ್, ಮತ್ತು ಸಾವೊ ಟೋಮ್ ಮತ್ತು ಪ್ರಿನ್ಸಿಪಿ ಸಹ ಕೊರೊನಾದಿಂದ ಮುಕ್ತ. ಮುಖ್ಯವಾಗಿ ಅಲ್ಲಿಗೆ ತೆರಳುವವರು ತುಂಬಾ ಕಡಿಮೆ. ಕಿರಿಬಾಟಿ, ಮಾರ್ಷಲ್ ದ್ವೀಪಗಳು, ಮೈಕ್ರೋನೇಶಿಯಾ, ನೌರು, ಪಲಾವ್; ಸೊಲೊಮನ್ ದ್ವೀಪಗಳು, ತುವಾಲು, ಟೋಂಗಾ ಮತ್ತು ವನವಾಟು ದೂರದಿಂದ ಕೂಡಿದ್ದು, ಸಾಗರಗಳ ಮಧ್ಯಲ್ಲಿವೆ. ಜತೆಗೆ ಅಲ್ಲಿಗೆ ಪ್ರಯಾಣಿಸುವುದು ದುಬಾರಿಯೂ ಹೌದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Trump warns; ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ನರಕ…
Canada ಪ್ರಧಾನಿ ರೇಸ್‌ನಲ್ಲಿ ಭಾರತ ಮೂಲದ ಅನಿತಾ?
Pakistan; ಖರ್ಚು ಉಳಿಸಲು 6 ಸೋದರರಿಂದ 6 ಮಂದಿ ಸೋದರಿಯರ ವಿವಾಹ!
Saudi Arabia: ಮೆಕ್ಕಾ-ಮದೀನಾ ಸೇರಿ ಹಲವೆಡೆ ದಾಖಲೆಯ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ
Earthquakes: ಎವರೆಸ್ಟ್ ತಪ್ಪಲಲ್ಲಿ ಪ್ರಬಲ ಭೂಕಂಪ; ಮೃತರ ಸಂಖ್ಯೆ 126ಕ್ಕೆ ಏರಿಕೆ
MUST WATCH
ಹೊಸ ಸೇರ್ಪಡೆ
Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ
ನಕ್ಸಲರನ್ನು ಅಮಿತ್ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.