ಕಲ್ಲಡ್ಕದಲ್ಲಿ ಮೇಲ್ಸೇತುವೆ ಎಂದವರೇ ನಾಪತ್ತೆ!ಕಾಮಗಾರಿ ಆರಂಭವಾಗಿ ಎರಡು ವರ್ಷಗಳಾಗಬೇಕಿತ್ತು
Team Udayavani, Mar 10, 2021, 5:10 AM IST
ಕಲ್ಲಡ್ಕದಲ್ಲಿ ಮೇಲ್ಸೇತುವೆ ನಿರ್ಮಿಸಲಾಗುತ್ತದೆ ಎಂದು ಕೇಳಿಯೇ ಜನರು ಬೆಚ್ಚಿಬಿದ್ದಿದ್ದಾರೆ. ಇದಕ್ಕೆ ಕಾರಣವೇನೆಂದರೆ ಮೇಲ್ಸೇತುವೆ ಬರಬಾರದೆಂದಲ್ಲ. ಆದರೆ ಬಿ.ಸಿ.ರೋಡ್ ನಲ್ಲಿ ನಿರ್ಮಿಸಿದ ರೀತಿಯ ಅತ್ಯಂತ ಕೆಟ್ಟ ಮೇಲ್ಸೇತುವೆ ನಿರ್ಮಿಸಿದರೆ ಏನು ಮಾಡುವುದು ಎಂಬ ಆತಂಕ. ಮೊದಲೇ ಕಲ್ಲಡ್ಕ ಜಂಕ್ಷನ್‌ನಲ್ಲಿ ವಾಹನಗಳು ಸಾಗುವುದೇ ಕಷ್ಟ. ಅಂತದ್ದರಲ್ಲಿ ಅವೈಜ್ಞಾನಿಕ ಮೇಲ್ಸೇತುವೆ ಬಂದರೆ ದೇವರೇ ನಮ್ಮನ್ನು ಕಾಪಾಡಬೇಕು ಎನ್ನುತ್ತಾರೆ ಜನರು.
ಕಲ್ಲಡ್ಕ: ಬಿ.ಸಿ.ರೋಡ್ ಮೇಲ್ಸೇತುವೆಯಿಂದ ಅನುಕೂಲ ಆಗುವುದಕ್ಕಿಂತ ಅನನುಕೂಲ ಆಗಿದ್ದೇ ಹೆಚ್ಚು ಎಂಬುದು ಜನರ ಅಭಿಪ್ರಾಯ. ಇಂಥದ್ದರ ಮಧ್ಯೆ ಕಲ್ಲಡ್ಕದಲ್ಲೂ ಒಂದು ಮೇಲ್ಸೇತುವೆ ಬರುತ್ತದಂತೆ !
ಈ ಅಂತೆ ಕಂತೆಗಳು ಹರಿದಾಡುತ್ತಿರುವುದು ಸುಮಾರು ಎರಡು ವರ್ಷಗಳಿಂದ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಈ ಮೇಲ್ಸೇತುವೆ ಬರಲಿದೆ. ಈ ಹಿಂದೆ ಹೆದ್ದಾರಿ ಕಾಮಗಾರಿಗೂ ಮೇಲ್ಸೇತುವೆ ಕಾಮಗಾರಿಗೂ ಸಂಬಂಧವಿಲ್ಲ.
ಶೀಘ್ರವೇ ಕಲ್ಲಡ್ಕದ ಮೇಲ್ಸೇತುವೆ ಕಾಮಗಾರಿ ಆರಂಭವಾಗಲಿದೆ ಎಂದು ಹೆದ್ದಾರಿ ಪ್ರಾಧಿಕಾರ ಹೇಳಿತ್ತಾದರೂ, ಎರಡು ವರ್ಷಗಳಿಂದ ಯಾವುದೇ ಕಾಮಗಾರಿ ಆರಂಭವಾಗಿಲ್ಲ. ಹೀಗೆ ಪ್ರಕಟಿಸಿ ಹೋದವರ ಪತ್ತೆಯೂ ಇಲ್ಲ.
ಮತ್ತೆ ಅವ್ಯವಸ್ಥೆ ?
ಫ್ಲೈ ಓವರ್ ಕಾಮಗಾರಿ ವೇಳೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅವೈಜ್ಞಾನಿಕ ತೀರ್ಮಾನದಿಂದ ಏನೆಲ್ಲಾ ತೊಂದರೆಗೊಳಗಾಗಲಿವೆ? ಆ ಹೊತ್ತಿನಲ್ಲಿ ಸ್ಥಳೀಯಾಡಳಿತ, ಸಂಸದರು ಹಾಗೂ ಜಿಲ್ಲಾಡಳಿತ ಸುಮ್ಮನಿದ್ದಾರೆ ಎಷ್ಟೆಲ್ಲಾ ತೊಂದರೆ ಎದುರಾಗುತ್ತದೆ ಎಂಬುದು ಬಿ.ಸಿ.ರೋಡ್ ಮೇಲ್ಸೇತುವೆಯಿಂದ ತಿಳಿದಿದೆ. ಫ್ಲೈ ಓವರ್ ಬಳಿಕ ಸರ್ವೀಸ್ ರಸ್ತೆಯಲ್ಲಿ ಎಷ್ಟು ತೊಂದರೆಯಾಗಿತ್ತು ಎಂಬುದೂ ತಿಳಿದಿದೆ. ಇದರೊಂದಿಗೆ ಮತ್ತೂಂದು. ಮತ್ತೂಂದು ವಿಪರ್ಯಾಸವೆಂದರೆ ಭೂಸ್ವಾಧೀನ ಪ್ರಕ್ರಿಯೆ ನಡೆದು ಪರಿಹಾರ ಮೊತ್ತ ಸಿಕ್ಕಿದರೂ, ಕೆಲವು ಕಟ್ಟಡಗಳು ಇನ್ನೂ ತೆರವಾಗಿಲ್ಲ.
ಈ ಮಧ್ಯೆ ಕೆಲ ಸಮಯಗಳ ಹಿಂದೆ ಬಿ.ಸಿ.ರೋಡಿನ ಫ್ಲೈ ಓವರ್ ತೆಗೆಯಲಾಗುತ್ತದೆ ಎಂಬ ಮಾತುಗಳೂ ಕೇಳಿಬಂದಿದ್ದವು. ಭಾರತ್ ಮಾಲಾ ಯೋಜನೆಯ ಮೂಲಕ ಆರು ಪಥದ ಹೆದ್ದಾರಿ ನಿರ್ಮಾಣವಾಗಲಿದೆ ಎಂದು ಹೇಳಲಾಗಿತ್ತು ಆದರೆ ಇನ್ನೂ ಈ ಹೆದ್ದಾರಿಯನ್ನೇ ಪೂರ್ಣಗೊಳಿಸದ ಇಲಾಖೆ, 6 ಪಥದ ಕಾಮಗಾರಿ ನಡೆಸಲು ಸಾಧ್ಯವೇ ಎಂಬುದು ಸಾರ್ವಜನಿಕರ ಪ್ರಶ್ನೆ.
ಬಿ.ಸಿ.ರೋಡು-ಅಡ್ಡಹೊಳೆ ಕಾಮಗಾರಿಯ ವೇಳೆ ಕಲ್ಲಡ್ಲದಲ್ಲಿ ಹೆದ್ದಾರಿ ಹೇಗೆ ಸಾಗುತ್ತದೆ ಎಂಬ ಗೊಂದಲಗಳಿದ್ದವು. ಪ್ರಾರಂಭದಲ್ಲಿ ಪಾಣೆಮಂಗಳೂರು ಮೂಲಕ ಬೈಪಾಸ್ ಮಾಡಲಾಗುತ್ತದೆ ಎನ್ನಲಾಗಿತ್ತು. ಬಳಿಕ ಹೆದ್ದಾರಿಯನ್ನೇ ಚತುಷ್ಪಥಗೊಳಿಸುವುದಾಗಿ ತಿಳಿಸಲಾಯಿತು. ಇದರಿಂದ ಕಲ್ಲಡ್ಕ ಪೇಟೆ ಬಹುತೇಕ ತೆಗೆಯಬೇಕಾದೀತು ಮೇಲ್ಸೇತುವೆ ನಿರ್ಮಿಸಲು ನಿರ್ಧರಿಸಲಾಗಿತ್ತು. ಬಿ.ಸಿ.ರೋಡು ಭಾಗದಿಂದ ಕೆ.ಸಿ.ರೋಡ್ ಬಳಿ ಫ್ಲೆ$çಓವರ್ ಆರಂಭವಾಗಿ, ಕುದ್ರೆಬೆಟ್ಟು ಬಳಿ ಕೊನೆಗೊಳ್ಳುತ್ತದೆಂದು ಗುರುತನ್ನೂ ಹಾಕಲಾಗಿತ್ತು. ಈಗ ಆ ಗುರುತ್ತೇ ಅಳಿಸಿ ಹೋಗಿದ್ದರೂ ಕಾಮಗಾರಿ ಇನ್ನೂ ಆರಂಭವಾಗದಿರುವುದು ಜನರಿಗೆ ಬೇಸರ ತಂದಿದೆ. ಕನಿಷ್ಠ ಒಂದು ಗುಂಡಿಯನ್ನೂ ತೆಗೆದಿಲ್ಲ ಎಂಬುದು ಜನರ ಆಕ್ರೋಶದ ನುಡಿ.
ಕಲ್ಲಡ್ಕದಲ್ಲಿ ಫ್ಲೈ ಓವರ್ ನಿರ್ಮಿಸುವ ಕುರಿತು ಡಿಪಿಆರ್ ಅಂತಿಮ ಹಂತದಲ್ಲಿದ್ದು, ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡು ಏಳೆಂಟು ತಿಂಗಳಲ್ಲಿ ಕಾಮಗಾರಿ ಆರಂಭಗೊಳ್ಳುವ ಸಾಧ್ಯತೆ ಇದೆ ಎಂದು 2019ರ ಆಗಸ್ಟ್‌ನಲ್ಲಿ ಅಧಿಕಾರಿಗಳು ತಿಳಿಸಿದ್ದರು. ಅವರು ಹೇಳಿದ ಪ್ರಕಾರ 2020 ಮಾರ್ಚ್ ವೇಳೆ ಹೆದ್ದಾರಿ ಕಾಮಗಾರಿ ಆರಂಭವಾಗಬೇಕಿತ್ತು. ಇದುವರೆಗೂ ಕಾಮಗಾರಿಯ ಗುತ್ತಿಗೆಯನ್ನೂ ಕರೆದಿಲ್ಲ. ಪ್ರಸ್ತುತ ಭೂಸ್ವಾಧೀನ ಪ್ರಕ್ರಿಯೆ ಪ್ರಾರಂಭಗೊಂಡಿರುವುದಷ್ಟೇ ಸದ್ಯದ ಸಮಾಧಾನ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.