ವಂದೇ ಮಾತರಂ ನಾಡಿಗೆ ಎಲ್ಲರೂ ಒಂದೇ: ಪ್ರಧಾನಿ ನರೇಂದ್ರ ಮೋದಿ
ಟಿಎಂಸಿ ಆಡಳಿತ ಸಂಪೂರ್ಣವಾಗಿ ಅನುದಾನ ಕಡಿತ, ಸುಲಿಗೆ, ಭ್ರಷ್ಟಾಚಾರಗಳನ್ನೇ ನಡೆಸುತ್ತಿದೆ
Team Udayavani, Mar 25, 2021, 11:40 AM IST
ಕಾಂಥಿ: “ವಂದೇ ಮಾತರಂ’ ಮೂಲಕ ದೇಶದ ಜನರನ್ನು ಒಗ್ಗೂಡಿಸಿದ ನೆಲ ಬಂಗಾಳ. ಆದರೆ, ಈ ನೆಲದಲ್ಲೇ ಮಮತಾ ದೀದಿ “ಹೊರಗಿನವರು’ ಎಂಬ ಹಣೆ ಪಟ್ಟಿ ಅಂಟಿಸುತ್ತಿದ್ದಾರೆ. ಬಂಗಾಳದಲ್ಲಿ ಯಾರೂ ಹೊರಗಿನವರಿಲ್ಲ. ಎಲ್ಲರೂ ಭಾರತ ಮಾತೆಯ ಪುತ್ರರು…’- ಪ. ಬಂಗಾಳದ ಕಾಂಥಿಯಲ್ಲಿ ನಿಂತು ಪ್ರಧಾನಿ ನರೇಂದ್ರ ಮೋದಿ ಬುಧವಾರ ದೀದಿಯ ಟೀಕೆಗಳನ್ನು ಸಾಲು ಸಾಲಾಗಿ ಪುಡಿಗಟ್ಟಿದರು.
ಇದನ್ನೂ ಓದಿ:ಹೆದ್ದಾರಿಯಲ್ಲಿ ಹಠಾತ್ ಬ್ರೇಕ್ ಹಾಕಿದ ಕಾರು: ಡಿವೈಡರ್ ಗೆ ಬಡಿದು ಉರುಳಿದ ಮಿನಿ ಟೆಂಪೋ!
“ನಮ್ಮನ್ನು ದಿಲ್ಲಿಯವರು, ಗುಜರಾತಿಗಳು, ಟೂರಿಸ್ಟ್ ಗಳು ಅಂತೆಲ್ಲ ಪ್ರತ್ಯೇಕಿಸಿ ತಮಾಷೆ ಮಾಡುತ್ತಾ, ಅಪಮಾನಿಸುತ್ತಿದ್ದಾರೆ. ದೀದಿ, ನೆನಪಿರಲಿ… ರವೀಂದ್ರ ನಾಥ ಟ್ಯಾಗೋರರ ಬಂಗಾಳದ ಜನ ಯಾರನ್ನೂ ಹೊರಗಿನವರು ಎಂದು ಭಾವಿಸೋದಿಲ್ಲ’ ಎಂದು ಹೇಳಿದರು.
ಹಿಂಸೆಗೆ ಫುಲ್ ಸ್ಟಾ ಪ್: ಹಿಂಸಾ ಚಾರ, ಬಾಂಬ್ ಬ್ಲಾಸ್ಟ್ ಗಳು ಬಂಗಾಳದಲ್ಲಿ ನಿತ್ಯದ ಸಂಗತಿಗಳಾಗಿವೆ. ಸಂಪೂರ್ಣ ಮನೆಗಳೂ ಇಲ್ಲಿ ಸ್ಫೋಟಕ್ಕೆ ತುತ್ತಾಗಿವೆ.
ಈ ಸ್ಥಿತಿ ಬದಲಾಗಬೇಕು. ಬಂಗಾಳದ ಜನ ಶಾಂತಿಗಾಗಿ ಹಾತೊರೆದಿದ್ದಾ ರೆ. ಬಾಂಬ್, ಬಂದೂಕು, ಹಿಂಸಾಚಾ ರಗಳಿಂದ ಮುಕ್ತಿ ಬಯಸಿದ್ದಾ ರೆ. ಸೋನಾರ್ ಬಾಂಗ್ಲಾ ಮೂಲಕ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರ ಖಂಡಿತಾ ಇದನ್ನು ಸಾಧಿಸಲಿದೆ’ ಎಂದು ವಿಶ್ವಾಸವ್ಯಕ್ತಪಡಿಸಿದರು.
“ಆಟ ಶುರು’ವಿಗೆ ತಿರುಗೇಟು: “ಖೇಲಾ ಹೋಬ್ (ಆಟ ಶುರು ) ಎಂದು ಟಿಎಂಸಿ ಎಲ್ಲೆಡೆ ಹೇಳಿ ಕೊಂಡು ಬರು ತ್ತಿದೆ. ದೀದಿ… ನೀವು ಆಟ ಆಡ್ತಾನೆ ಇರಿ…ನಾವು ಜನ ತೆಯ ಸೇವೆ ಮಾಡುತ್ತಿರುತ್ತೇವೆ’ ಎಂದು ಟಿಎಂಸಿ ಘೋಷವಾಕ್ಯಕ್ಕೆ ತಿರು ಗೇಟು ನೀಡಿದರು. “ನಿಮ್ಮ ಪಕ್ಕದ ರಾಜ್ಯ ಅಸ್ಸಾಂನತ್ತ ಒಮ್ಮೆ ನೋಡಿ. ಎನ್ ಡಿಎ ಆಡಳಿತದ ಆ ನಾಡಿನಲ್ಲಿ 5 ವರ್ಷಗಳಿಂದ ಶಾಂತಿ, ಸುವ್ಯವಸ್ಥೆಗೆ ಯಾವುದೇ ಭಂಗವಿಲ್ಲ. ಬಂಗಾಳಕ್ಕೂ ಅಂಥ ಶಾಂತಿಯ ಅಗತ್ಯವಿದೆ’ ಎಂದರು.
ಅಳಿಯನಿಂದ ಲೂಟಿ: “ಅಂಫಾನ್ ಸಂತ್ರಸ್ತ ರ ಸಂಕಟ ನೋಡಲಾಗದೆ ನಾವು ಕೇಂದ್ರದಿಂದ ನೆರವು ರವಾನಿಸಿದರೆ, ಆ ನಿಧಿಯನ್ನೆಲ್ಲ ಇಲ್ಲಿನ ನಾಯಕಿಯ ಅಳಿಯ ಲೂಟಿ ಹೊಡೆದರು. ಟಿಎಂಸಿ ಆಡಳಿತ ಸಂಪೂರ್ಣವಾಗಿ ಅನುದಾನ ಕಡಿತ, ಸುಲಿಗೆ, ಭ್ರಷ್ಟಾಚಾರಗಳನ್ನೇ ನಡೆಸುತ್ತಿದೆ. ಇದನ್ನೆಲ್ಲ ಸೂಕ್ಷ್ಮವಾಗಿ ನೋಡುತ್ತಿರುವ ಜನತೆ ಮೇ2ರಂದು ದೀದಿಗೆ ಮನೆ ಬಾಗಿಲು ತೋರಿಸಲಿದ್ದಾರೆ’ ಎಂದು ಎಚ್ಚರಿಸಿದರು.
ಕಾಂಗ್ರೆಸ್‌ಗೆ ನೇತಾರನೂ ಇಲ್ಲ, ನಿಯತ್ತೂ ಇಲ್ಲ
*ಕಾಂಗ್ರೆ ಸ್ ಅನ್ನು ಮುನ್ನಡೆಸಲು ಸರಿಯಾದ ನೇತಾ ಇಲ್ಲ. ಆ ಪಕ್ಷಕ್ಕೆ ಜನ ಸೇವೆ ಮಾಡುವ ನಿಯತ್ತೂ ಉಳಿದಿಲ್ಲ.
*ಕಾಂಗ್ರೆಸ್ ಆಡಳಿತದ ದಿನಗಳಲ್ಲಿ ಬಡವರಿಗೆ ನೀಡಲಾಗುತ್ತಿದ್ದ ಪಡಿತರವನ್ನೂ ಯಾರ್ಯಾರೋ ಕಬಳಿಸುತ್ತಿ ದ್ದರು. ಈಗ ಬಡವರಿಗೆ ನೀಡುವ ರೇಶನ್ಕಾರ್ಡ್ ಕೂಡ ಡಿಜಿ ಟಲೀಕರಣಗೊಂಡಿದೆ. ಲೂಟಿ ಮಾಡೋದು ನಿಂತಿದ್ದು, ಬಡ ವರ ಹಸಿವು ನೀಗುತ್ತಿದೆ.
*ಸುಳ್ಳು, ಗೊಂದಲ ಹಬ್ಬಿಸುವುದು, ಹೇಗಾದರೂ ಮಾಡಿ ಗದ್ದುಗೆ ಹಿಡಿಯುವುದೇ ಕಾಂಗ್ರೆಸ್‌ನ ಪಾಲಿಸಿ. ಜನತೆ ಕಾಂಗ್ರೆಸ್ ಬಗ್ಗೆ ಬಹಳ ಎಚ್ಚರದಿಂದ ಇರಬೇಕು.
*ಅಸ್ಸಾಂನ ಸಿಫಾಝರ್, ಬಿಹುರಿಯಾದ ಸಾರ್ವಜನಿಕ ಸಮಾವೇಶಗಳ ಲ್ಲಿ ಭಾಗಿಯಾಗಿದ್ದ ಪ್ರಧಾನಿ ಮೋದಿ, ಕಾಂಗ್ರೆಸ್ ವಿರುದ್ಧ ಮತ್ತೆ ಟೀಕೆಗಳ ಮಳೆಗರೆದರು.
*ಅಸ್ಸಾಂನ ಲ್ಲಿನ ಕಾಂಗ್ರೆಸ್ ಮೈತ್ರಿ, “ಮಹಾಜೂತ್’ (ಮೈತ್ರಿ) ಅಲ್ಲ… ಅದೊಂದು ಮಹಾ “ಜೂಟ್’!
*ಗುವಾಹಟಿ ಸಮೀಪ 150ಕ್ಕಿಂತ ಹೆಚ್ಚು ಕಿ.ಮೀ. ದೂರದ ಕೈಗಾರಿಕಾ ಕಾರಿಡಾರ್ ನಿರ್ಮಾಣವಾಗುತ್ತಿದೆ. ಮುಂದಿನ ದಿನಗಳಲ್ಲಿ ಥೀಮ್ಯಾ ಟಿಕ್, ಆಹಾರ ಮತ್ತು ಬಂಬೂ ಪಾರ್ಕ್ ಗ ಳನ್ನೂ ನಿರ್ಮಿಸಲಿದ್ದೇವೆ. ಇದರಿಂದ ರೈತರಿಗೆ ಲಾಭವಾಗ ಲಿದೆ.
ಟೀಕೆಗೆ ತುತ್ತಾದ ಬರ್ಮುಡಾ!
ಮಮತಾ ಬ್ಯಾನರ್ಜಿ ಅವರ ವ್ಹೀಲ್ ಚೇರ್ ರ್ಯಾಲಿಯನ್ನು ಖಂಡಿಸುವ ಭರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಟೀಕೆಗೆ ಗುರಿಯಾಗಿದ್ದಾ ರೆ. “ಜನತೆಗೆ ಮುಖ ತೋರಿಸಲು ಸಾಧ್ಯವಾಗದೆ, ಮಮತಾ ಕಾಲು ತೋರಿಸುತ್ತಿದ್ದಾರೆ. ಅವರು ಉಡುವ ಸೀರೆಯಿಂದ ಗಾಯಗೊಂಡ ಕಾಲು ಕಾಣಿಸಲು ಹೇಗೆ ಸಾಧ್ಯ? ಬರ್ಮುಡಾ ಧರಿಸಿದರೆ ಕಾಲು ಕಾಣಿ ಸುತ್ತದೆ’ ಎಂದಿದ್ದ ರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಉ. ಪ್ರದೇಶದ ಬಾಲಿಯಖೇರಿ ಬ್ಲಾಕ್ ನ ಸ್ವೀಪರ್ ಪತ್ನಿಯೇ ಬ್ಲಾಕ್ ನ ಮುಖ್ಯಸ್ಥೆಯಾಗಿ ಅಧಿಕಾರ
ಮಂಜೇಶ್ವರ ವಿಧಾನಸಭಾ ಕ್ಷೇತ್ರ : ಜಿದ್ದಾಜಿದ್ದಿನ ತ್ರಿಕೋನ ಸ್ಪರ್ಧೆ
ಕಾಸರಗೋಡು ವಿಧಾನಸಭಾ ಕ್ಷೇತ್ರ ಮುಸ್ಲಿಂಲೀಗ್‌ನ ಭದ್ರಕೋಟೆ: ಈ ಬಾರಿ ತ್ರಿಕೋನ ಸ್ಪರ್ಧೆ
ಕೇರಳ ಅಖಾಡ: ಕೋನ್ನಿ ಕ್ಷೇತ್ರ-ಐಕ್ಯರಂಗ, ಎಡರಂಗ ಕೋಟೆಯೊಳಗೆ ಕಮಲ ಅರಳುತ್ತಾ?
ಕೇರಳ ಅಖಾಡ: ಸೋಲಿಲ್ಲದ ಸರದಾರ…12ನೇ ಬಾರಿಯೂ ಚಾಂಡಿ ದಾಖಲೆಯ ಜಯ ಸಾಧಿಸುತ್ತಾರಾ?
MUST WATCH
ಹೊಸ ಸೇರ್ಪಡೆ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.