North Korea: ಬೈಬಲ್ ಜತೆ ಸಿಕ್ಕಿಬಿದ್ದ ಪೋಷಕರು & 2 ವರ್ಷದ ಮಗುವಿಗೆ ಜೀವಾವಧಿ ಶಿಕ್ಷೆ!
ಧಾರ್ಮಿಕ ನಂಬಿಕೆಯನ್ನು ಪ್ರಚಾರ ಮಾಡುವವರನ್ನು ಬಂಧಿಸಲಾಗುತ್ತಿದೆ
Team Udayavani, May 27, 2023, 6:04 PM IST
ವಾಷಿಂಗ್ಟನ್: ಬೈಬಲ್ ನೊಂದಿಗೆ ಸಿಕ್ಕಿ ಬೀಳುವ ಉತ್ತರ ಕೊರಿಯಾದ ಕ್ರಿಶ್ಚಿಯನ್ ರು ಮರಣ ದಂಡನೆ ಶಿಕ್ಷೆಯನ್ನು ಎದುರಿಸಬೇಕಾಗಲಿದೆ ಎಂಬುದನ್ನು ಪತ್ತೆ ಹಚ್ಚಿರುವುದಾಗಿ ಅಮೆರಿಕದ ವಿದೇಶಾಂಗ ಇಲಾಖೆ ವರದಿ ತಿಳಿಸಿದೆ.
ಇದನ್ನೂ ಓದಿ:“ನಾನು ಇಂಥ ಸಿನಿಮಾಗಳಿಗೆ..” The Kerala Story ಬಗ್ಗೆ ನಟ ಕಮಲ್ ಹಾಸನ್ ಹೇಳಿದ್ದೇನು?
ಬೈಬಲ್ ನೊಂದಿಗೆ ಸಿಕ್ಕಿಬೀಳುವ ಕ್ರಿಶ್ಚಿಯನ್ ರು ಅವರ ಕುಟುಂಬ ಸದಸ್ಯರು, ಮಕ್ಕಳು ಸೇರಿದಂತೆ ಎಲ್ಲರಿಗೂ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ ಎಂದು ವರದಿ ವಿವರಿಸಿದೆ.
ಅಮೆರಿಕ ಸ್ಟೇಟ್ ಡಿಪಾರ್ಟ್ ಮೆಂಟ್ ನ 2022ರ ಅಂತರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ವರದಿಯ ಪ್ರಕಾರ, ಉತ್ತರ ಕೊರಿಯಾದಲ್ಲಿ 70,000 ಸಾವಿರ ಕ್ರಿಶ್ಚಿಯನ್ ರನ್ನು ಬಂಧಿಸಲಾಗಿದೆ ಎಂದು ಅಂದಾಜಿಸಿದೆ.
ವರದಿಯ ಪ್ರಕಾರ, ಉತ್ತರ ಕೊರಿಯಾದಲ್ಲಿ ಬೈಬಲ್ ನೊಂದಿಗೆ ಸಿಕ್ಕಿಬಿದ್ದ ಪೋಷಕರು ಹಾಗೂ ಎರಡು ವರ್ಷದ ಮಗುವಿಗೆ ಜೀವಾವಧಿ ಶಿಕ್ಷೆ ವಿಧಿಸಿರುವುದಾಗಿ ತಿಳಿಸಿದೆ.
ಉತ್ತರ ಕೊರಿಯಾದಲ್ಲಿ ಬೇರೆ ಧರ್ಮದ ಧಾರ್ಮಿಕ ಆಚರಣೆಯನ್ನು ಅನುಸರಿಸುವುದಾಗಲಿ, ಧಾರ್ಮಿಕ ಗ್ರಂಥಗಳನ್ನು ಇಟ್ಟುಕೊಳ್ಳುವುದು, ಧಾರ್ಮಿಕ ನಂಬಿಕೆಯನ್ನು ಪ್ರಚಾರ ಮಾಡುವವರನ್ನು ಬಂಧಿಸಲಾಗುತ್ತಿದೆ ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.