ನಾರ್ವಿಚ್‌ನಲ್ಲಿ ವಾರಕ್ಕೆ 1.4 ಲಕ್ಷ ಜನರಿಗೆ ಸೋಂಕು ಪರೀಕ್ಷೆ
Team Udayavani, May 16, 2020, 7:45 PM IST
ಬ್ರಿಟನ್ : ಬ್ರಿಟನ್‌ನ ನಗರವೊಂದು ಉಪಾಯ ಲಾಕ್‌ಡೌನ್ ವಿಧಿಸದೇ ಸೋಂಕನ್ನು ತಡೆಗಟ್ಟಲು ಹೊಸ ಹಾದಿ ಹಿಡಿದಿದೆ. ಲಂಡನ್‌ನಿಂದ ಸುಮಾರು 100 ಮೈಲಿ ದೂರವಿರುವ ನಾರ್ವಿಚ್ ಪಟ್ಟಣದ ಜನರಿಗೆ ಲಾಕ್‌ಡೌನ್‌ನಿಂದ ಮುಕ್ತಿ ಸಿಕ್ಕಿದೆ. ಹಾಗಂತ ಜನರಿಗೆ ಸಂಪೂ ರ್ಣವಾಗಿ ಸ್ವಾತಂತ್ರ ನೀಡಿಲ್ಲ. ಲಾಕ್‌ಡೌನ್ ಬದಲಾಗಿ ಪ್ರತಿವಾರ 1.4 ಲಕ್ಷ ಜನರಿಗೆ ಕೋವಿಡ್?-19 ಪರೀಕ್ಷೆ ನಡೆಸಲಿದೆ.
ಪೌರ ಕಾರ್ಮಿಕರು, ಟ್ಯಾಕ್ಸಿ ಚಾಲಕರು ಹಾಗೂ ಪೊಲೀಸ್ ಮೀಸಲು ಪಡೆಯನ್ನು ಈ ಉದ್ದೇಶಕ್ಕೆ ಬಳಸಿಕೊಳ್ಳಲಿದೆ. ಇಂಥದ್ದೊಂದು ಕ್ರಮ ಕೈಗೊಳ್ಳಲಿರುವ ಬ್ರಿಟನ್ನಿನ ಮೊದಲ ನಗರ ಎಂಬ ಹೆಗ್ಗಳಿಕೆಗೆ ನಾರ್ವಿಚ್ ಪಾತ್ರವಾಗಿದೆ.
ಕೋವಿಡ್-19 ಕಾಯಿಲೆ ನಿಯಂತ್ರಕ್ಕೆ ಲಸಿಕೆ ದೊರೆಯುವವರೆಗೆ ಈ ವಿಧಾನವನ್ನು ಪಾಲಿಸಲು ನಿರ್ಧರಿಸಲಾಗಿದೆ. ಪ್ರತಿಯೊಬ್ಬರ ಗಂಟಲು ದ್ರವವನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತದೆ. ಒಂದು ವೇಳೆ ಸೋಂಕಿತರಾದರೆ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಿಕೊಂಡಿದೆ. ಮುಂಬರುವ ಮೂರು ತಿಂಗಳವರೆಗೆ ಪ್ರತಿವಾರ ಪ್ರತಿಯೊಬ್ಬರನ್ನೂ ಕೋವಿಡ್ ಟೆಸ್ಟ್ ಗೆ ಒಳಪಡಿಸಲಿದ್ದು, ಈ ಯೋಜನೆಗೆ 18 ಕೋಟಿ ರೂ. ಖರ್ಚಾಗಲಿದೆ ಎಂದು ಸರಕಾರ ಅಂದಾಜಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Award: ಪ್ರೊ.ತಾಳ್ತಜೆ ವಸಂತ ಕುಮಾರ್ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Covid Scam: ತನಿಖೆಗೆ ಎಸ್ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.