ದರ ಏರಿಕೆ, ರೂಟ್‌ ಕಡಿತ, ಪ್ರಯಾಣಿಕರ ಕೊರತೆ : ಉಡುಪಿಯಲ್ಲಿ ನರ್ಮ್ ಬಸ್‌ ಕಲೆಕ್ಷನ್‌ ಕುಸಿತ

ವಿರಳ ಸಂಖ್ಯೆಯ ಬಸ್‌ಗಳು;

Team Udayavani, Mar 2, 2022, 11:34 AM IST

ದರ ಏರಿಕೆ, ರೂಟ್‌ ಕಡಿತ, ಪ್ರಯಾಣಿಕರ ಕೊರತೆ : ಉಡುಪಿಯಲ್ಲಿ ನರ್ಮ್ ಬಸ್‌ ಕಲೆಕ್ಷನ್‌ ಕುಸಿತ

ಉಡುಪಿ: ನಗರ ಸಾರಿಗೆ (ನರ್ಮ್ ಬಸ್‌) ದರ ಏರಿಕೆ, ಎಲ್ಲ ರೂಟ್‌ಗಳಿಗೆ ಬಸ್‌ ಸೇವೆ ಇಲ್ಲದಿರುವುದು, ಒಂದು ರೂಟ್‌ಗೆ ಒಂದೇ ಬಸ್‌ ಓಡುತ್ತಿರುವ ಕಾರಣ ಜನರು ನರ್ಮ್ ಬಸ್‌ ಪ್ರಯಾಣದಿಂದ ದೂರ ಉಳಿಯಲಾರಂಭಿಸಿದ್ದಾರೆ. ಇದರಿಂದಾಗಿ ಕೆಎಸ್‌ಆರ್‌ಟಿಸಿ ನರ್ಮ್ ಬಸ್‌ನಲ್ಲಿ ಶೇ.50 ರಷ್ಟು ಕಲೆಕ್ಷನ್‌ ಆದಾಯ ಕುಸಿತವಾಗಿದೆ ಎನ್ನಲಾಗುತ್ತಿದೆ. ಪರಿಸ್ಥಿತಿ ಹೀಗೆ ಮುಂದುವರಿದಲ್ಲಿ ಮುಂದಿನ ದಿನಗಳಲ್ಲಿ ನರ್ಮ್ ಬಸ್‌ ಸೌಲಭ್ಯ ಜನರಿಂದ ದೂರವಾಗುವ ಸಾಧ್ಯತೆಗಳಿವೆ.

ಒಂದು ತಿಂಗಳ ಹಿಂದೆ ಉಡುಪಿ, ಮಂಗಳೂರಿನಲ್ಲಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ದರ ಏರಿಕೆ ಮಾಡಿದೆ. ಸಾರ್ವಜನಿಕ ವಿರೋಧ ನಡುವೆಯೂ ದರ ಏರಿಕೆ ಮಾಡಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅಸಮಾಧಾನ ಭುಗಿಲೆದ್ದಿತ್ತು. ಇಡೀ ರಾಜ್ಯದಲ್ಲಿ ಎಲ್ಲಿಯೂ ದರ ಏರಿಸದೆ ಉಡುಪಿ (ಕುಂದಾಪುರ ಹೊರತುಪಡಿಸಿ), ಮಂಗಳೂರಿನಲ್ಲಿ ಮಾತ್ರ ದರ ಏರಿಸಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ. ನರ್ಮ್ ಬಸ್‌ ಆರಂಭಗೊಂಡ ಹಂತದಲ್ಲಿ 5 ರೂ., ದರವಿತ್ತು. ಅನಂತರ ಅದನ್ನು 8 ರೂ.,ಗೆ ಪರಿಷ್ಕರಿಸಲಾಯಿತು. ತಿಂಗಳ ಹಿಂದೆ ಸಾರಿಗೆ ಪ್ರಾಧಿಕಾರವು 2 ರೂ.ಗೆ ಪರಿಷ್ಕರಿಸಿ ಏರಿಕೆ ಮಾಡಿದ್ದು, ಇದೀಗ ನರ್ಮ್ ಬಸ್‌ ಪ್ರಯಾಣಕ್ಕೆ ಕನಿಷ್ಠ ಟಿಕೆಟ್‌ ದರ 10 ರೂ., ಇದೆ.

ನಗರದಲ್ಲಿ ಗರಡಿಮಜಲು, ಪಡುಕೆರೆ, ಕೆಮ್ಮಣ್ಣು ಹೂಡೆ, ಮರ್ಣೆ, ಅಲೆವೂರು, ತೊಟ್ಟಂ, ತೆಂಕನಿಡಿಯೂರು-ಹಂಪನಕಟ್ಟೆ ರೂಟ್‌ಗಳಲ್ಲಿ 10 ನರ್ಮ್ ಬಸ್‌ಗಳು ಓಡಾಡುತ್ತಿವೆ. ಬಡವರು, ಕೂಲಿ ಕಾರ್ಮಿಕರು ಸ್ಥಳೀಯವಾಗಿ ಸಾರಿಗೆ ಸೇವೆ ನೆಚ್ಚಿಕೊಂಡಿ¨ªಾರೆ. ಆದರೆ ಕೋವಿಡ್‌ ಮಹಾಮಾರಿಯಿಂದ ಎದುರಾದ ನಾನಾ ಸಂಕಷ್ಟಗಳ ನಡುವೆ ಬಸ್‌ ಪ್ರಯಾಣ ತುಟ್ಟಿಯಾಗಿರುವುದು ಕೆಳವರ್ಗದವರಿಗೆ ನುಂಗಲಾರದ ತುತ್ತಾಗಿದೆ. ಕೋವಿಡ್‌ ಪೂರ್ವ ನಗರದಲ್ಲಿ 15ಕ್ಕೂ ಹೆಚ್ಚು ನರ್ಮ್ ಬಸ್‌ ಓಡಾಡುತ್ತಿದ್ದರೆ ಬಳಿಕ ಪ್ರಯಾಣಿಕರ ಕೊರತೆ, ನಷ್ಟದ ನೆಪದಲ್ಲಿ ಒಂದೊಂದೇ ರೂಟ್‌ನಲ್ಲಿ ಬಸ್‌ ಸಂಚಾರ ಕಡಿತ ಮಾಡಲಾಗಿದೆ. ವ್ಯವಹಾರ ಹಿಂದಿನ ಸ್ಥಿತಿಗೆ ಬಂದರೂ, ಜನರ ಬೇಡಿಕೆಯಿದ್ದರೂ ಕೆಲವು ರೂಟ್‌ಗಳಲ್ಲಿ ಬಸ್‌ ಸಂಚಾರ ವಿರಳ ಎನ್ನುತ್ತಾರೆ ನಾಗರೀಕರು.

ಇದನ್ನೂ ಓದಿ : ಕಚ್ಚಾ ತೈಲಬೆಲೆ ಏರಿಕೆ ಪರಿಣಾಮ; ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 800ಕ್ಕೂ ಅಧಿಕ ಅಂಕ ಕುಸಿತ 

ಖಾಲಿ ಹೊಡೆಯುತ್ತಿರುವ ನಿಲ್ದಾಣ
ನಗರದ ಹೃದಯ ಭಾಗದಲ್ಲಿ 41 ಸೆಂಟ್ಸ್‌ ಜಾಗದಲ್ಲಿ 4 ಕೋ. ವೆಚ್ಚದಲ್ಲಿ ವ್ಯವಸ್ಥಿತವಾಗಿ ನಿರ್ಮಾಣಗೊಂಡಿರುವ ಈ ನಗರ ಸಾರಿಗೆ ಬಸ್‌ ನಿಲ್ದಾಣ ಸದ್ಯಕ್ಕೆ ವಿರಳ ಸಂಖ್ಯೆಯ ಬಸ್‌ಗಳು, ಪ್ರಯಾಣಿಕರ ಕೊರತೆಯಿಂದ ಖಾಲಿ ಹೊಡೆಯುತ್ತಿದೆ. ಸದಾ ಜನರಿಂದ ಗಿಜಿಗುಡುತ್ತಿರಬೇಕಾದ ಬಸ್‌ ನಿಲ್ದಾಣದಲ್ಲಿ ಬಿಕೋ ಎನ್ನುತ್ತಿದೆ. ಇಲ್ಲಿ ತೆರೆದಿರುವ ವಾಣಿಜ್ಯ ಮಳಿಗೆಗಳು ಬಾಗಿಲು ಮುಚ್ಚಿಕೊಂಡಿವೆ. ಕೋವಿಡ್‌ ಬಳಿಕ ಹೊಸ ಆಕಾಂಕ್ಷೆಗಳೊಂದಿಗೆ ವ್ಯಾಪಾರ ಆರಂಭಿಸಿದ್ದ ವ್ಯಾಪಾರಿಗಳಿಗೆ ಬರ ಸಿಡಿಲು ಬಡಿದಂತಾಗಿದೆ. ಕೆಲವೇ ತಿಂಗಳಲ್ಲಿ ವ್ಯಾಪಾರ ನಷ್ಟಗೊಂಡು ಬಾಗಿಲು ಮುಚ್ಚಿದ್ದಾರೆ.

ದರ ಪರಿಷ್ಕರಣೆ
ಈ ಹಿಂದೆ ಖಾಸಗಿ ಬಸ್‌ನಂತೆ ನರ್ಮ್ ಬಸ್‌ ದರವನ್ನು ಪರಿಷ್ಕರಿಸಿರಲಿಲ್ಲ. ಖಾಸಗಿ, ಸರಕಾರಿ ಬಸ್‌ ಪ್ರಯಾಣ ದರ ಪರಿಷ್ಕರಣೆ ಅಧಿಸೂಚನೆ ಒಂದೇ ಆಗಿದ್ದು, ಹಳೆ ಅಧಿಸೂಚನೆ ಪ್ರಕಾರವೇ ನರ್ಮ್ ಬಸ್‌ ಪ್ರಯಾಣ ದರವನ್ನು ಎಸ್‌ಪಿ, ಡಿಸಿ, ಆರ್‌ಟಿಒ ಅವರನ್ನು ಒಳಗೊಂಡ ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ಪರಿಷ್ಕರಿಸಿದೆ. -ಜೆ.ಪಿ. ಗಂಗಾಧರ,
ಆರ್‌ಟಿಒ, ಉಡುಪಿ ಜಿಲ್ಲೆ

ಜನರಿಗೆ ಹೊರೆ
ನರ್ಮ್ ಬಸ್‌ ದರವನ್ನು ಏರಿಕೆ ಮಾಡಿರುವ ನಡೆ ಸರಿಯಾಗಿಲ್ಲ. ಜನ ಸಾಮಾನ್ಯರಿಗೆ ಇದರಿಂದ ಹೊರೆಯಾಗ ಲಿದೆ. ಜಿಲ್ಲಾಧಿಕಾರಿ, ಸಾರಿಗೆ ಅಧಿಕಾರಿ ಗಳು ನರ್ಮ್ ಬಸ್‌ ದರವನ್ನು ಸಾರಿಗೆ ಪ್ರಾಧಿಕಾರದ ನಿಯಮದಂತೆ ಪರಿಷ್ಕರಿಸಬೇಕು.
-ಶಿವಕುಮಾರ್‌ ಶೆಟ್ಟಿಗಾರ್‌, ಮಣಿಪಾಲ

ಟಾಪ್ ನ್ಯೂಸ್

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ

Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ

Birds: ಸಿಲಿಕಾನ್‌ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

Birds: ಸಿಲಿಕಾನ್‌ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

Darshan; ಶೂಟಿಂಗ್‌ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?

Darshan; ಶೂಟಿಂಗ್‌ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?

Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್‌ ಹೆಸರಲ್ಲಿ ವಂಚನೆ!

Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್‌ ಹೆಸರಲ್ಲಿ ವಂಚನೆ!

hubli-fire-incident-at-ayyappa-camp-nine-devotees-seriously-injured

Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5

Udupi: ಸಾಲ ಮರುಪಾವತಿಸದೆ ನಕಲಿ ದಾಖಲೆ ಸೃಷ್ಟಿಸಿ ಮರು ಸಾಲ; ಪ್ರಕರಣ ದಾಖಲು

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

dw

Malpe: ಕಲ್ಮಾಡಿ; ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್‌

Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್‌

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

5

Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ

Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್‌ ಚಾಲಕನ ವಿರುದ್ಧ ದೂರು

Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್‌ ಚಾಲಕನ ವಿರುದ್ಧ ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.