ನಾನು ನನ್ನ ಕನಸು: ಬ್ರೇಕ್ ಕೊಡುವ ಸಿನಿಮಾ ʼಓ ಮೈ ಲವ್ʼ
Team Udayavani, Jul 15, 2022, 5:54 PM IST
ಆರಂಭದಿಂದಲೂ ಸದ್ದು ಮಾಡುತ್ತಲೇ ಬರುತ್ತಿರುವ ಶಶಿಕುಮಾರ್ ಪುತ್ರ ಅಕ್ಷಿತ್ ನಾಯಕರಾಗಿ ನಟಿಸಿರುವ “ಓ ಮೈ ಲವ್’ ಚಿತ್ರ ಇಂದು ತೆರೆಕಾಣುತ್ತಿದೆ. ಈ ಮೂಲಕ ಔಟ್ ಅಂಡ್ ಔಟ್ ಲವ್ ಕಂ ಫ್ಯಾಮಿಲಿ ಡ್ರಾಮಾ ತೆರೆ ಮೇಲೆ ಬಂದಂತಾಗುತ್ತದೆ. ಸ್ಮೈಲ್ ಶ್ರೀನು ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ, “ಓ ಮೈ ಲವ್’ ಚಿತ್ರಕ್ಕೆ ಜಿ. ರಾಮಾಂಜಿನಿ ಕಥೆ ಬರೆದು, “ಜಿಸಿಬಿ ಪ್ರೊಡಕ್ಷನ್ಸ್’ ಬ್ಯಾನರ್‌ನಲ್ಲಿ ಬಂಡವಾಳ ಹೂಡಿ ನಿರ್ಮಿಸಿದ್ದಾರೆ.
ಚಿತ್ರದ ಎಲ್ಲಾ ಹಾಡುಗಳಿಗೆ ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯವಿದ್ದು,ಚರಣ್ ಅರ್ಜುನ್ ಸಂಗೀತವಿದೆ. “ಓ ಮೈ ಲವ್’ ಚಿತ್ರದಲ್ಲಿ ನಾಯಕ ಅಕ್ಷಿತ್ ಶಶಿಕುಮಾರ್ ಮತ್ತು ನಾಯಕಿಯಾಗಿ ಕೀರ್ತಿ ಕಲ್ಕೆರೆ ತೆರೆಮೇಲೆ ಜೋಡಿಯಾಗಿ ಅಭಿನಯಿಸಿದ್ದಾರೆ.
“ಸಿನಿಮಾದಲ್ಲಿ ಮನಮುಟ್ಟುವಂಥ ಒಳ್ಳೆಯ ಪಾತ್ರಗಳಿದ್ದು, ಇಡೀ ಚಿತ್ರತಂಡದ ಪ್ರಯತ್ನದಿಂದ ಸಿನಿಮಾ ತುಂಬ ಚೆನ್ನಾಗಿ ಮೂಡಿಬಂದಿ ದೆ ಎನ್ನುವುದು ನಿರ್ದೇಶಕರ ಮಾತು. ಒಂದೇ ಸಿನಿಮಾಕ್ಕೆ ಸೋತು ಸುಣ್ಣ ವಾಗುವ ಈ ಕಾಲದಲ್ಲಿ ಒಂದರ ಹಿಂದೊಂದರಂತೆ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾ ನಂತರ ದೊಡ್ಡ ದೊಡ್ಡ ಪ್ರಾಜೆಕ್ಟ್ಗೆ ಕೈ ಹಾಕುವ ಯೋಜನೆ ಶ್ರೀನು ಅವರಿಗಿದೆ.
ಚಿತ್ರದ ಬಗ್ಗೆ ಮಾತನಾಡುವ ಶ್ರೀನು, “ಸಾಕಷ್ಟು ವರ್ಷಗಳಿಂದ ಇಂಥದ್ದೊಂದು ಸಿನಿಮಾ ಮಾಡುವ ಕನಸಿತ್ತು. ಓ ಮೈ ಲವ್ ಸಿನಿಮಾ ಮೂಲಕ ಅದು ಕೈಗೂಡಿದೆ. ಇದು ಪಕ್ಕಾ ಫ್ಯಾಮಿಲಿ ಎಂಟರ್‌ಟೈನ್ಮೆಂಟ್ ಇರುವ ನೀಟ್ ಸಿನಿಮಾ. ಚಿಕ್ಕವರಿಂದ ದೊಡ್ಡವರವರೆಗೂ ಯಾವುದೇ ಮುಜುಗರ ವಿಲ್ಲದೇ ನೋಡಬಹುದಾದ ಸಿನಿಮಾ. ತಾರಾಗಣ, ತಾಂತ್ರಿಕ ಬಳಗ ಸೇರಿದಂತೆ ಎಲ್ಲರಿಗೂ ಬ್ರೇಕ್ ಕೊಡುವಂಥ ತಾಕತ್ತು ಈ ಸಿನಿಮಾಗಿದೆ. ಖಂಡಿತಾ ಇದು ಆಗೇ ಆಗುತ್ತೆ ಎಂಬ ಭರವಸೆಯಿದೆ’ ಅಂತಾರೆ ಸ್ಮೈಲ್ ಶ್ರೀನು.
ಇನ್ನು “ಓ ಮೈ ಲವ್’ ಸಿನಿಮಾ ದಲ್ಲಿ ಬಹುಭಾಷಾ ನಟ ದೇವ ಗಿಲ್ ಖಳನಟನಾಗಿ ಕಾಣಿಸಿ ಕೊಂಡಿದ್ದಾರೆ. ಉಳಿದಂತೆ ಎಸ್. ನಾರಾಯಣ್, ದೇವಗಿಲ್, ಸಾಧು ಕೋಕಿಲ, ಪವಿತ್ರಾ ಲೋಕೇಶ್ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.