ಐಪಿಎಲ್ ಪಂದ್ಯಾವಳಿಯನ್ನು ಅಕ್ಟೋಬರ್ 15ರ ವರೆಗೆ ವಿಸ್ತರಿಸಲು ಬಿಸಿಸಿಐ ಯೋಜನೆ
Team Udayavani, Jun 7, 2021, 9:25 PM IST
ನವದೆಹಲಿ: ಯುಎಇಯಲ್ಲಿ ಮುಂದುವರಿಯಲಿರುವ ಐಪಿಎಲ್ ಪಂದ್ಯಾವಳಿಯನ್ನು ಅ.15ರ ತನಕ ವಿಸ್ತರಿಸುವ ಯೋಜನೆಯೊಂದನ್ನು ಬಿಸಿಸಿಐ ಹಾಕಿಕೊಂಡಿದೆ. ಅರಬ್ ರಾಷ್ಟ್ರದಲ್ಲಿ ಸೆಪ್ಟಂಬರ್ ತಿಂಗಳ ವಿಪರೀತ ಬಿಸಿಲಿನ ವಾತಾವರಣದಲ್ಲಿ ಮಧ್ಯಾಹ್ನದ ಪಂದ್ಯಗಳನ್ನು ಆಡುವುದು ಕಷ್ಟವಾದ್ದರಿಂದ ಇಂಥದೊಂದು ಪರಿವರ್ತನೆಯಾಗಲಿದೆ ಎಂದು ಮಂಡಳಿಯ ಉನ್ನತ ಮೂಲವೊಂದು ಪಿಟಿಐಗೆ ತಿಳಿಸಿದೆ.
ಇದರಂತೆ ಪ್ರಕಾರ 5 ದಿನಗಳ ಕಾಲ ಐಪಿಎಲ್ ಪಂದ್ಯಗಳನ್ನು ವಿಸ್ತರಿಸುವ ಸಾಧ್ಯತೆ ಇದೆ. ಇದರಿಂದ ಅಕ್ಟೋಬರ್ 10ರ ಬದಲು 15ರ ತನಕ ಪಂದ್ಯಾವಳಿ ನಡೆಯಲಿದೆ.
ಇದನ್ನೂ ಓದಿ :2020ರ ಐಸಿಸಿ ಮಹಿಳಾ ಟಿ20 ವಿಶ್ವಕಪ್ ತಂಡಕ್ಕೆ ಹಣ ಬಿಡುಗಡೆ ಮಾಡಿದ ಬಿಸಿಸಿಐ
ಡಬಲ್ ಹೆಡರ್ ಸಂಖ್ಯೆ ಕಡಿಮೆ
ಬಿಸಿಸಿಐ 10 ಡಬಲ್ ಹೆಡರ್’ (ಒಂದೇ ದಿನ ಎರಡು ಪಂದ್ಯ) ಯೋಜನೆಯಲ್ಲಿತ್ತು. ಆದರೆ ಸೆಪ್ಟಂಬರ್ 3, 4ನೇ ವಾರದಲ್ಲಿ 10 ಡಬಲ್ ಹೆಡರ್ ಆಯೋಜಿಸುವುದು ಕಷ್ಟ. ಸುಡು ಬಿಸಿಲು ಆಟಗಾರರಿಗೆ ಸಮಸ್ಯೆ ತಂದೊಡ್ಡಬಹುದು. ಹೀಗಾಗಿ ಕೂಟವನ್ನು ಅ. 15ರ ತನಕ ವಿಸ್ತರಿಸಿ, ಡಬಲ್ ಹೆಡರ್ ಸಂಖ್ಯೆಯನ್ನು 10ರಿಂದ 5 ಅಥವಾ 6ಕ್ಕೆ ಇಳಿಸುವಂತೆ ಎಮಿರೇಟ್ಸ್ ಕ್ರಿಕೆಟ್ ಬೋರ್ಡ್ ಸಲಹೆ ನೀಡಿದೆ.
ಶುಕ್ರವಾರ ಫೈನಲ್:
ಅ.15 ಶುಕ್ರವಾರ ಬರಲಿದೆ. ಅಂದು ಯುಎಇಯಲ್ಲಿ ವಾರದ ರಜಾ ದಿನ. ಹೆಚ್ಚಿನ ಸಂಖ್ಯೆಯ ಕ್ರೀಡಾಭಿಮಾನಿಗಳು ಆಗಮಿಸಲು ಅನುಕೂಲ ವಾಗಲಿದೆ. ಭಾರತದಲ್ಲೂ ಅಂದು ವಿಜಯದಶಮಿ ರಜೆ ಇರುತ್ತದೆ. ಫೈನಲ್ ಪಂದ್ಯವನ್ನು ಎಲ್ಲರೂ ಖುಷಿಯಿಂದ ಆಸ್ವಾದಿಸಬಹುದು ಎಂಬ ಲೆಕ್ಕಾಚಾರವೂ ಇಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.