ತ್ರಿವಿಕ್ರಮನಾಗಿ ಬೆಳೆದ ರಾಮಕುಂಜದ ವಾಮನಮೂರ್ತಿ: ಪೇಜಾವರ ಶ್ರೀಗಳ ಬಾಲ್ಯದ ದಿನಗಳು


Team Udayavani, Dec 29, 2019, 9:33 AM IST

pejavara

ಉಡುಪಿ: ಉಡುಪಿ ಅಷ್ಟಮಠದ ಪೇಜಾವರ ಮಠದ ಯತಿ ಪರಂಪರೆಯಲ್ಲಿ 32ನೇ ಪೀಠಾಧಿಪತಿಗಳಾದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಇಂದು ಕೃಷ್ಣೈಕ್ಯರಾಗಿದ್ದಾರೆ. 88ರ ಇಳಿವಯಸ್ಸಿನಲ್ಲೂ ಪಾದರಸದಂತೆ ಚುರುಕಿನಲ್ಲಿದ್ದ ಪೇಜಾವರ ಶ್ರೀಗಳು ಸದಾ ಹಿಂದೂ ಸಮಾಜದ ಕುರಿತು ಚಿಂತನೆ, ಬಡವರ ಬಗೆಗಿನ ಕಾಳಜಿ ಸಮಾಜಮುಖಿ ಚಿಂತನೆಗಳಿಂದಲೇ ಗಮನ ಸೆಳೆಯುತ್ತಿದ್ದರು.

ವಿಶ್ವದಾದ್ಯಂತ ಶಿಷ್ಯರನ್ನು, ಭಕ್ತರನ್ನು ಅಭಿಮಾನಿಗಳನ್ನು ಹೊಂದಿದ್ದ ಪೇಜಾವರ ಯತಿವರೇಣ್ಯರು ಇನ್ನು ನೆನೆಪು ಮಾತ್ರ. ಅವರ ಈ ಸುದೀರ್ಘ ಕೃಷ್ಣ ಸೇವೆಯ ಜೀವನದಲ್ಲಿ

ಹೇಗಿತ್ತು ಪೇಜಾವರ ಶ್ರೀಗಳ ಬಾಲ್ಯದ ಜೀವನ
ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ಸಮೀಪದ ರಾಮಕುಂಜ ಎಂಬ ಹಳ್ಳಿ ಪೇಜಾವರ ಶ್ರೀಗಳ ಜನ್ಮಸ್ಥಾನ. 1931ರ ಎಪ್ರಿಲ್ 21ರಂದು ಜನಿಸಿದವರು. ಇವರ ಪೂರ್ವಾಶ್ರಮದ ಹೆಸರು ವೆಂಕಟ ರಮಣ.

ನಾರಾಯಣಾಚಾರ್ಯ ಮತ್ತು ಕಮಲಮ್ಮ ದಂಪತಿಗಳ ಎರಡನೇ ಗಂಡುಮಗುವಾಗಿ ವೆಂಕಟರಮಣ ಜನಿಸಿದರು. ಪ್ರಜಾಪತಿ ಸಂವತ್ಷರದ ವೈಶಾಖ ಶುದ್ಧ ದಶಮಿಯ ಸೋಮವಾರದ ಪುಣ್ಯದಿನದಂದು ವೆಂಕಟರಮಣನ ಜನನ. ಪ್ರಾಥಮಿಕ ಶಾಲೆಯನ್ನು ಸ್ಥಳೀಯ ರಾಮಕುಂಜದ ಸಂಸ್ಕ್ರತ ಎಲೆಮೆಂಟರಿ ಶಾಲೆಯಲ್ಲಿ ಕಲಿತಿದ್ದರು. ಏಳನೇ ವರ್ಷದಲ್ಲಿ ಗಾಯತ್ರಿ ಉಪದೇಶವೂ ಆಗಿತ್ತು.

ರಾಮಕುಂಜದ ಬಾಲಕನಿಗೆ ಹಂಪೆಯಲ್ಲಿ ದೀಕ್ಷೆ
ಇನ್ನೂ ಆಟವಾಡುವ ವಯಸ್ಸಿನ ಬಾಲಕ ವೆಂಕಟರಮಣ ತನ್ನ ಆರನೇ ವಯಸ್ಸಿನಲ್ಲಿ ತಂದೆ ತಾಯಿಯ ಜೊತೆಗೆ ಉಡುಪಿಗೆ ಬಂದಿದ್ದರು. ಆಗ ಉಡುಪಿಯಲ್ಲಿ ಪೇಜಾವರ ಮಠದ ಪರ್ಯಾಯ ನಡೆಯುತ್ತಿತ್ತು. ಆ ಉಡುಪಿ ಭೇಟಿ ವೆಂಕಟರಮಣನ ಬದುಕನ್ನು ಬದಲಿಸಿದ ಭೇಟಿಯಾಗಿತ್ತು.

ಹೆತ್ತವರೊಂದಿಗೆ ತನ್ನನ್ನು ಭೇಟಿಯಾದ ಆ ಪುಟ್ಟ ಕಣ್ಣುಗಳ ಬಾಲಕನನ್ನು ಕಂಡು ಆಗಿನ ಪೇಜಾವರ ಮಠದ ಸ್ವಾಮಿಗಳಾಗಿದ್ದ ಶ್ರೀ ವಿಶ್ವಮಾನ್ಯ ತೀರ್ಥರಿಗೆ ಏನನ್ನಿಸಿತೋ ಏನೋ. ದೈವ ಪ್ರೇರಣೆಯೆಂಬಂತೆ ವಿಶ್ವಮಾನ್ಯ ತೀರ್ಥರು ಆ ಆರು ವರ್ಷದ ಪುಟ್ಟ ಬಾಲಕನಿಗೆ “ ನೀನು ನನ್ನಂತೆ ಸ್ವಾಮಿಯಾಗುತ್ತೀಯಾ? ಎಂದು ಕೇಳಿ ಬಿಟ್ಟರು. ಪುಟ್ಟ ಹುಡುಗ ವೆಂಕಟರಮಣನೂ ‘’ ಹ್ಞೂಂ’’ ಎಂದು ಎಂದಿದ್ದರು.

ಪರ್ಯಾಯದ ಅವಧಿಯ ನಂತರ ಶ್ರೀ ವಿಶ್ವಮಾನ್ಯ ತೀರ್ಥರು ಸಂಚಾರಕ್ಕೆ ಹೊರಟಿದ್ದರು. ಹೀಗೆ ಸಾಗುತ್ತಾ ವ್ಯಾಸ ತಪೋ ಭೂಮಿ ಹಂಪೆಗೆ ಸೇರಿದ ಅವರು ತನ್ನ ನಿರ್ಧಾರವನ್ನು ಗಟ್ಟಿಗೊಳಿಸಿದ್ದರು. ಅಲ್ಲಿಂದಲೇ ರಾಮಕುಂಜಕ್ಕೆ ಕರೆ ಕಳುಹಿಸಿ ಆಗ ತಾನೇ ಉಪವಿತನಾಗಿದ್ದ ವಟು ವೆಂಕಟರಮಣನ್ನು ಹಂಪೆಗೆ ಕರೆಸಲಾಯಿತು.

ಬಹುಧಾನ್ಯ ಸಂವತ್ಸರದ ಮಾರ್ಗಶಿರ ಶುದ್ಧ ಪಂಚಮಿ ಅಂದರೆ 1938 ಡಿಸೆಂಬರ್ ಮೂರರಂದು ವಟು ವೆಂಕಟರಮಣನಿಗೆ ಹಂಪಿಯ ಯಂತ್ರೋದ್ಧಾರ ಮುಖ್ಯಪ್ರಾಣನ ಸನ್ನಿಧಿಯಲ್ಲಿ ಯತಿ ದೀಕ್ಷೆ ನೀಡಲಾಯಿತು.
ಹೀಗೆ ಉಡುಪಿಯಿಂದ ಸುಮಾರರು 120 ಕಿ.ಮೀ ದೂರದ ರಾಮಕುಂಜವೆಂಬ ಹಳ್ಳಿಯ ವೆಂಕಟರಮಣನೆಂಬ ಬಾಲಕ ಪೇಜಾವರ ಅಧೋಕ್ಷಜ ಮಠದ 32ನೇ ಯತಿಯಾಗಿ ‘ವಿಶ್ವೇಶ ತೀರ್ಥ’ನೆಂಬ ನಾಮದಿಂದ ಮಧ್ವ ಪೀಠವನ್ನೇರಿದರು.

ಟಾಪ್ ನ್ಯೂಸ್

11-venur

Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ

9

Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ

governer

Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Explainer: HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ಅಂತ್ಯಕ್ರಿಯೆಗೆ ತಯಾರಿ ನಡೆಸಿದ್ದರು

Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್… ರಸ್ತೆಯಲ್ಲೇ ನಡೆಯಿತು ಪವಾಡ

Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?

Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ve-46

ರಾಜಕಾರಣ- ಭ್ರಷ್ಟಾಚಾರ- ಸ್ವರ್ಗ- ಪರಿಸರ- ಪುಣ್ಯ…

ve-44

ರಥಬೀದಿ, ಪೇಜಾವರ ಮಠದಲ್ಲಿ ನೀರವ ಮೌನ

ve-47

ರಾಮ-ವಿಠಲ, ಶ್ರೀಕೃಷ್ಣ, ರಾಮಲಲ್ಲಾ…

bg-68

ಪೇಜಾವರ ಶ್ರೀ ಬದುಕಿನ ಸಾರ

kolar-tdy-1

ದಲಿತ ಕೇರಿಗೆ ಭೇಟಿ ನೀಡಿದ್ದ ಪೇಜಾವರ ಶ್ರೀ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

11-venur

Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ

9

Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ

governer

Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ

Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.