ಒಲಿಂಪಿಕ್ಸ್ ಸಾಧನೆ: ಭಾರತದ ಕ್ರೀಡಾ ಕ್ಷೇತ್ರಗಳಲ್ಲಿನ ಸಾಧನೆಗೆ ಬಂದಿರುವ ತೊಡಕುಗಳೇನು?

ಇಂತಹ ಪರಿಸ್ಥಿತಿ ನಮ್ಮಲ್ಲಿ ಇದೆಯಾ ಅನ್ನುವುದನ್ನು ಆತ್ಮ ವಿಮರ್ಶೆಮಾಡಿಕೊಳ್ಳ ಬೇಕಾಗಿದೆ.

Team Udayavani, Aug 13, 2024, 6:24 PM IST

ಒಲಿಂಪಿಕ್ಸ್ ಸಾಧನೆ: ಭಾರತದ ಕ್ರೀಡಾ ಕ್ಷೇತ್ರಗಳಲ್ಲಿನ ಸಾಧನೆಗೆ ಬಂದಿರುವ ತೊಡಕುಗಳೇನು?

ಕ್ರೀಡೆಗಳಿಗೆ ಸಂಬಂಧಿಸಿ ಜಗತ್ತಿನ ಸಾಮರ್ಥ್ಯ ಅಳೆಯುವ ಏಕೈಕ ಪ್ರತಿಷ್ಠಿತ ಕ್ರೀಡಾ ಕೂಟವೆಂದರೆ ಅದು ಒಲಿಂಪಿಕ್ಸ್ ಕ್ರೀಡಾ ಕೂಟ.ಈ ಬಾರಿಯ 2024 ರ ಒಲಿಂಪಿಕ್ಸ್ ಕ್ರೀಡಾ ಕೂಟ ಪ್ರಾನ್ಸ್ ರಾಜಧಾನಿ ಪ್ಯಾರಿಸ್ ನಲ್ಲಿ ನಡೆದು ಮುಕ್ತಾಯಗೊಂಡಿದೆ. ಸುಮಾರು 206 ದೇಶಗಳು ಈ ಬಹು ಪ್ರತಿಷ್ಠಿತ ಕ್ರೀಡಾ ಕೂಟದಲ್ಲಿ ಭಾಗವಹಿಸಿರುವುದು ಒಂದು ವಿಶೇಷ ಸಂದರ್ಭವೂ ಹೌದು.ಇದರಲ್ಲಿ ಭೌಗೋಳಿಕತೆ ಜನಸಂಖ್ಯೆ ಮತ್ತು ಆಥಿ೯ಕವಾಗಿ ಶ್ರೀಮಂತ ದೇಶಗಳಿಂದ ಹಿಡಿದು ಅತಿ ಚಿಕ್ಕ ರಾಷ್ಟ್ರಗಳು ಕೂಡಾ ತಮ್ಮ ಕ್ರೀಡಾ ಸಾಮರ್ಥ್ಯವನ್ನು ಪ್ರದಶಿ೯ಸಲು ಮುಂದಾಗಿದ್ದವು.

ಒಟ್ಟಿನಲ್ಲಿಅಂತಿಮವಾಗಿ ಪ್ರಕಟಿತ ಕ್ರೀಡಾ ಪದಕಗಳ ಅಂಕೆ ಸಂಖ್ಯೆಗಳ ಫಲಿತಾಂಶ ನೇೂಡಿ ವಿಶ್ಲೇಷಿಸುವಾಗ ಕೆಲವೊಂದು ಪ್ರಮುಖ ಪ್ರಶ್ನೆಗಳು ನಮ್ಮ ಮನಸ್ಸಿನಲ್ಲಿ ಹುಟ್ಟಿ ಕೊಳ್ಳುವುದು ಸಹಜ. ಒಟ್ಟು ಪದಕಗಳಿಕೆಯಲ್ಲಿ ವಿಶ್ವದ ಅತೀ ಶ್ರೀಮಂತ ರಾಷ್ಟ್ರಗಳೇ ಮುಂದೆ ಇದ್ದಾವಾ?ಅಥವಾ ಚಿಕ್ಕ ಪುಟ್ಟ ರಾಷ್ಟ್ರಗಳ ಸಾಧನೆಯ ಪಟ್ಟಿಯೂ ಹೇಗಿದೆ? ಇಲ್ಲಿ ಬರೇ ಆರ್ಥಿಕ ಪರಿಸ್ಥಿತಿ ಒಂದೇ ದೇಶದ ಕ್ರೀಡಾ ಶಕ್ತಿಗೆ ಕಾರಣವಾಗಿದೆಯಾ? ಅಥವಾ ಅಲ್ಲಿನ ಪರಿಸರ ಪರಿಕರ ತರಬೇತಿ ಸವಲತ್ತುಗಳು ಪ್ರಮುಖ ಕಾರಣವಾಗಿರ ಬಹುದೇ ಅನ್ನುವುದನ್ನು ನಾವು ಆಳವಾಗಿ ಪರಿಶೀಲಿಸಬೇಕಾದ ಅನಿವಾರ್ಯತೆ ಭಾರತೀಯರ ಪಾಲಿಗೆ ಬಂದಿರುವುದಂತು ನಿಜ.

ಅದೇ ರೀತಿ ಈ ಬಾರಿಯ ಒಲಿಂಪಿಕ್ಸ್ ನಲ್ಲಿ ಭಾರತದ ಕ್ರೀಡಾ ಸಾಧನೆ ನಮಗೆ ತೃಪ್ತಿ ತಂದಿದೆಯಾ? ತೃಪ್ತಿ ತರದಿದ್ದರೆ ಈ ಸಾಧನೆಯ ಹಿನ್ನಡೆಗೆ ಕಾರಣಗಳೇನು?ಇದನ್ನು ಕೂಡಾ ಆತ್ಮಾವಲೇೂಕನಮಾಡಿಕೊಳ್ಳ ಬೇಕಾದ ಅನಿವಾರ್ಯತೆಯೂ ನಮ್ಮ ಮುಂದಿದೆ.
|ಒಟ್ಟಿನಲ್ಲಿ ಈ ಬಾರಿಯ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾ ಕೂಟದ ಒಟ್ಟಾರೆ ಪದಕಗಳಿಕೆಯ ಗರಿಷ್ಠ ಸಾಧನೆಯಲ್ಲಿ ಯು.ಎಸ್.ಎ.126; ಪದಕಗಳನ್ನು ಮೂಡಿಗೆರಿಸಿ ಕೊಳ್ಳುವುದರ ಮೂಲಕ ಮೊದಲ ಸ್ಥಾನದಲ್ಲಿ ನಿಂತಿದೆ ಅನ್ನುವುದು ಸ್ವಷ್ಟ.ಅದೇರೀತಿ ಚೀನಾ ಕೂಡಾ 91 ಪದಕಗಳನ್ನು ಗಳಿಸಿಕೊಂಡು ದ್ವಿತೀಯ ಸ್ಥಾನದಲ್ಲಿ ಬಂದು ನಿಂತಿದೆ.

ಅಮೇರಿಕಾ ಅಂದ ತಕ್ಷಣವೇ ನಮಗೆ ನೆನಪಿಗೆ ಬರುವುದು ಆ ದೇಶದ ಆಥಿ೯ಕತೆ ತಾಂತ್ರಿಕತೆಯಲ್ಲಿ ಮುಂದಿರುವ ದೇಶವಾದರೆ ದ್ವಿತೀಯ ಸ್ಥಾನದಲ್ಲಿರುವ ಚೀನಾ ಅಂದ ತಕ್ಷಣವೇ ನೆನಪಿಗೆ ಬರುವುದು ಅಲ್ಲಿನ ಜನಸಂಖ್ಯೆ ಪ್ರಮಾಣ ಮತ್ತು ಆಥಿ೯ಕತೆ ಜೊತೆಗೆ ತಾಂತ್ರಿಕತೆಯಲ್ಲೂಮುಂದುವರಿದ ದೇಶವೆಂದೇ ಬಿಂಬಿಸಲಾಗಿದೆ.ಆದರೆ ನಾವು ಇಲ್ಲಿ ಕ್ರೀಡಾ ಸಾಧನೆಯನ್ನು ಲೆಕ್ಕಾಚಾರ ಮಾಡುವಾಗ ಬರೇ ಆ ದೇಶಗಳಲ್ಲಿನಆಥಿ೯ಕ ವ್ಯವಸ್ಥೆಯಾಗಲಿ ಜನಸಂಖ್ಯೆಯಾಗಲಿ ಪ್ರಾಮುಖ್ಯವಾದ ಅಳತೆಗೇೂಲು ಅನ್ನಿಸುವುದಿಲ್ಲ.. ಇದಕ್ಕೆ ಕಾರಣವಿಷ್ಟೇ ಭೌಗೋಳಿಕವಾಗಿ; ಜನಸಂಖ್ಯೆಹಾಗೂ ಆರ್ಥಿಕವಾಗಿ ತೀರ ಹಿಂದುಳಿದ ರಾಷ್ಟ್ರ ಗಳು ಕೂಡಾ ಒಲಿಂಪಿಕ್ಸ್ ಕ್ರೀಡಾ ಸಾಧನೆಯಲ್ಲಿ ಸಾಕಷ್ಟು ಸಾಧನೆ ಮಾಡಿರುವ ಪಟ್ಟಿ ನಮ್ಮ ಮುಂದೆ ಇರುವುದನ್ನು ನಾವು ಗಮನಿಸ ಬಹುದು.

ಉದಾ:;ಇಟಲಿ 40;ನೆದರ್‌ಲ್ಯಾಂಡ್ಸ್ 34; ಇರಾನ್ ; ಯುಕ್ರೇನ್ 12..ಹೀಗೆ ವಿವಿಧ ರಾಷ್ಟ್ರಗಳ ಸಾಧನೆಯನ್ನು ನೇೂಡುವಾಗ ನಾವು ಗಮನಿಸ ಬೇಕಾದದ್ದು ಆಯಾಯ ರಾಷ್ಟ್ರಗಳ ಜನರ ದೈಹಿಕ ;ಮಾನಸಿಕ ಸಾಮಥ್ಯ೯ದ ಗುಣ ಮಟ್ಟದ ಜೊತೆಗೆ ಅನುಗುಣವಾಗಿ ಅವರಿಗೆ ಸಿಕ್ಕಿದ ಸವಲತ್ತುಗಳು ಪರಿಸರ ಪರಿಕರಗಳು ಮತ್ತು ತರಬೇತಿ.ಇದರ ಜೊತೆಗೆ ಆ ದೇಶದ ಜನರಲ್ಲಿ ಹುದುಗಿರುವ ಕ್ರೀಡಾಸಕ್ತಿ ಮತ್ತು ಸ್ಪೂರ್ತಿ. ಇದಕ್ಕೆಲ್ಲ ಪೂರಕವಾಗಿ ಅಲ್ಲಿನ ಸರ್ಕಾರ ಮತ್ತು ಸರಕಾರೇತರ ಸಂಸ್ಥೆಗಳ ಬೆಂಬಲ ಇದುಕೂಡಾ ಅಷ್ಟೇ ಪ್ರಮುಖ್ಯವಾದ ಪಾತ್ರವಹಿಸಿರುವುದಂತು ನಿಜ.ಅಮೇರಿಕಾದಂತಹ ದೇಶದಲ್ಲಿ ಶಿಕ್ಷಣ ಅಂದರೆ ಬರೇತರಗತಿಯ ಒಳಗಿನ ಪಠ್ಯ ಪ್ರವಚನ ಮಾತ್ರವಲ್ಲ ಒಂದು ಮಗು ತನ್ನ ಆಸಕ್ತಿಗೆ ಪೂರಕವಾಗಿ ಬೆಳೆಸಿಕೊಳ್ಳುವ ಯಾವುದೇ ಒಂದು ರಂಗದ ಪ್ರತಿಭೆಗೆ ಕೂಡಾ ಸರಿ ಸಮಾನವಾದ ಆದ್ಯತೆ ಅಲ್ಲಿನ ಶಿಕ್ಷಣ ವ್ಯವಸ್ಥೆಯಲ್ಲಿ ಅಳವಡಿಸಿಕೊಂಡಿರುತ್ತಾರೆ ಅನ್ನುವುದನ್ನು ಕೇಳಿದ್ದೇನೆ. ಅದಕ್ಕೆ ಪೂರಕವಾದ ಶಿಕ್ಷಣ ಸರ್ಕಾರ ಮತ್ತು ಸರಕಾರೇತರ ಸಂಸ್ಥೆಗಳಿಂದ ಸಿಗುವ ಕಾರಣ ಕ್ರೀಡಾ ಪ್ರತಿಭೆಗಳು ಆತ್ಮ ವಿಶ್ವಾಸದಲ್ಲಿ ಬೆಳೆಯಲು ಸಾಧ್ಯ.ಇಂತಹ ಪರಿಸ್ಥಿತಿ ನಮ್ಮಲ್ಲಿ ಇದೆಯಾ ಅನ್ನುವುದನ್ನು ಆತ್ಮ ವಿಮರ್ಶೆಮಾಡಿಕೊಳ್ಳ ಬೇಕಾಗಿದೆ.

2024ರ ಒಲಿಂಪಿಕ್ಸ್ ಕ್ರೀಡಾ ಕೂಟದಲ್ಲಿ ಭಾರತದ ಸಾಧನೆ ನಿರಾಶದಾಯಕವಾಗಿದೆ.ಇದಕ್ಕೇನು ಕಾರಣ ಅನ್ನುವುದನ್ನು ಕೂಡಾ ವಿಶ್ಲೇಷಣೆ ಮಾಡಲೇ ಬೇಕಾದ ಪರಿಸ್ಥಿತಿ ನಮ್ಮ ಮುಂದಿದೆ. ಈ ಬಾರಿಯ ಒಲಿಂಪಿಕ್ಸ್ ಕ್ರೀಡಾ ಕೂಟದಲ್ಲಿ ಭಾರತದಿಂದ 112 ಮಂದಿ ಕ್ರೀಡಾಳುಗಳು 16 ವಿಭಾಗಗಳಲ್ಲಿ ಭಾಗವಹಿಸಿದ್ದರು. ಅದರಲ್ಲಿ 6 ಪದಕಗಳನ್ನು ಗಳಿಸುವುದರಲ್ಲಿ ನಮ್ಮ ಕ್ರೀಡಾ ಪಟುಗಳು ಸಫಲರಾಗಿದ್ದರೂ ಅನ್ನುವುದು ನಮಗೂ ಹೆಮ್ಮೆ ಖಂಡಿತವಾಗಿಯೂ ನಮ್ಮ ಕ್ರೀಡಾ ..ಸಾಧಕರನ್ನು ಗೌರವಿಸಲೇ ಬೇಕು.ನಾವುಗಳಿಸಿರುವ ಒಟ್ಟು ಪದಕಗಳು ಕೇವಲ 6 ಅದರಲ್ಲಿ 5 ಕಂಚು 1ಬೆಳ್ಳಿ..ಕಳೆದ ಬಾರಿ ಟೇೂಕಿಯೆಾ ಒಲಿಂಪಿಕ್ಸ್ ನಲ್ಲಿ ಒಟ್ಟು 7 ಪದಕಗಳಜೊತೆಗೆ ಒಂದು ಚಿನ್ನದ ಪದಕ ನಮ್ಮ ಪಾಲಿಗೆ ಬಂದಿತ್ತು..ಆದರೆ ಈ ಬಾರಿ ಭಾರತೀಯರ ಪಾಲಿಗೆ ಚಿನ್ನ ತುಂಬಾ ದುಬಾರಿ ಎಂದೇ ಹೇಳ ಬಹುದು. ಒಲಿಂಪಿಕ್ಸ್ ಕ್ರೀಡಾ ಕೂಟಕ್ಕುಾ ಭಾರತಕ್ಕೆವಿರುವ ಸಂಬಂಧ ನೆನಪಿಸುವುದಾದರೆ 1952ರಲ್ಲಿಯೇ ಒಂದು ಕಂಚಿನ ಪದಕಗಳಿಸಿಕೊಂಡ ಹೆಗ್ಗಳಿಕೆ ನಮ್ಮಗಿದೆ.

ಬಹುಮುಖ್ಯವಾಗಿ ನಾವು ಇಲ್ಲಿ ಗಮನಿಸ ಬೇಕಾದದ್ದು ನಮ್ಮ ಕ್ರೀಡಾ ಪಟುಗಳು ಯಾವ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ ಅಂದರೆ ಕೆಲವೇ ಆಯ್ದ ಕ್ಷೇತ್ರಗಳಲ್ಲಿ ಮಾತ್ರ ಉದಾ: ಪಿಸ್ತೂಲ್ ; ರೈಫಲ್; ಶೂಟಿಂಗ್ ;ಜಾವಲೀನ್ ಪುರುಷರ ಹಾಕಿ…ಅಂದರೆ ಇನ್ನೂ ಹಲವಾರುಕ್ಷೇತ್ರಗಲ್ಲಿ ಇನ್ನೂ ನಾವು ಪಳಗಿಲ್ಲಅಥವಾ ಆಸಕ್ತಿಯನ್ನು ತೇೂರಿಸಿಲ್ಲವೊ; ತರಬೇತಿ ಸಾಲದೊ ಗೊತ್ತಿಲ್ಲ..ಓಟ ಜಿಗಿತದಂತಹ ರಂಗದಲ್ಲಿ ಅಮೇರಿಕಾ ಚೀನಾದಂತಹ ದೇಶಗಳು ಸಾಕಷ್ಟು ಮುಂದಿರುವ ಕಾರಣ ಅತೀ ಹೆಚ್ಚಿನ ಪದಕಗಳು ಅವರ ಪಾಲಾಗುತ್ತಿದೆ ಅನ್ನುವುದು ಮೇಲ್ನೋಟಕ್ಕೆ ಕಾಣುವ ಪದಕಗಳ ಪಟ್ಟಿಯೇ ಸಾರಿ ಹೇಳುತ್ತಿದೆ.

ಹಾಗಾದರೆ ನಮ್ಮ ದೇಶದ ಕ್ರೀಡಾ ಕ್ಷೇತ್ರಗಳಲ್ಲಿನ ಸಾಧನೆಗೆ ಬಂದಿರುವ ತೊಡಕುಗಳೇನು? ಅನ್ನುವ ಕುರಿತಾಗಿ ವಿಶೇಷ ಅಧ್ಯಯನ ಮತ್ತು ಕಾರ್ಯೋ ನ್ಮುಖರಾಗ ಬೇಕಾದ ಕಾಲಕೂಡಿ ಬಂದಿದೆ.

ನಮ್ಮೆಲ್ಲರ ಮನಸ್ಥಿತಿ ಹೇಗಿದೆ ಅಂದರೆ ಪ್ರತಿಯೊಬ್ಬರ ಮನಸ್ಸಿನಲ್ಲಿ ಕ್ರೀಡೆ ಅಂದರೆ ಎರಡನೆಯ ಸ್ಥಾನ. ಅಂಕಗಳಿಕೆಗೆ ಮೊದಲಿನ ಪ್ರಾಶಸ್ತ್ಯ .ಸರ್ಕಾರವು ಅಷ್ಟೇ ಹೆತ್ತವರು ಅಷ್ಟೇ ಶಾಲೆ ಕಾಲೇಜಿನಲ್ಲೂ ಅಷ್ಟೇ ಬಿಡುವುವಿದ್ದರೆ ಮಾತ್ರ ಆಟ..ಇಲ್ಲವಾದರೆ ಜೀವನಪೂರ್ತಿ ನಾಲ್ಕು ಗೇೂಡೆಯೊಳಗಿನ ಪಾಠ.ಅದೇಷ್ಟೊ ಇಂಗ್ಲೀಷ್ ಮೀಡಿಯಂ ಶಾಲೆಗಳಲ್ಲಿ ಇಂದಿಗೂ ಆಟದ ಮೈದಾನಗಳೇ ಇಲ್ಲ..ಸರಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮೈದಾನಗಳು ಎಕ್ರೆ ಗಟ್ಟಲೆ ಇದೆ ಆದರೆ ಮಕ್ಕಳಿಲ್ಲ ಅನ್ನುವುದು ಇನ್ನೊಂದು ಕೊರತೆ.ಒಂದು ಸಮೀಕ್ಷೆ ಪ್ರಕಾರ ಕ್ರೀಡಾ ಪ್ರತಿಭೆಗಳು ಹೆಚ್ಚು ಹುಟ್ಟಿ ಕೊಳ್ಳುತ್ತಿರುವುದು ನಮ್ಮ ಗ್ರಾಮೀಣ ಪ್ರದೇಶಗಳಲ್ಲಿ ಆದರೆ ಅಲ್ಲಿನ ಪ್ರತಿಭೆಗಳಿಗೆ ಸರಿಯಾದ ತರಬೇತಿಯುಾ ಇಲ್ಲ.ಸಹಾಯ ಹಸ್ತ ಇಲ್ಲದೆ ಗ್ರಾಮೀಣ ಕ್ರೀಡಾ ಪ್ರತಿಭೆಗಳು ಸೊರಗಿ ಹೇೂಗುವಂತಾಗಿದೆ..ಪ್ರತಿ ಶಾಲಾ ಕಾಲೇಜುಗಳಲ್ಲಿ ನುರಿತ ದೈಹಿಕ ಶಿಕ್ಷಕರೇ ಇಲ್ಲ..ಇದಕ್ಕೆ ಸರ್ಕಾರದ ಅಸಡ್ಡೆಯೂಕಾರಣ.

ನಮ್ಮ ಪರಿಸ್ಥಿತಿ ಯಾರೊ ಒಬ್ಬ ಅಪ್ಪಿತಪ್ಪಿ ಸಾಧನೆ ಮಾಡಿ ಬಂದ ಮೇಲೆ ಅವರಿಗೆ ಸ್ಥಾನ ಸಂಮಾನವೇನು ಪ್ರಚಾರವೇನು ಮುಖ್ಯ ಮಂತ್ರಿಗಳಿಂದ ಹಿಡಿದು ಪ್ರಧಾನ.ಮಂತ್ರಿಗಳ ತನಕ ಸೆಲ್ಪಿ ತೆಗೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಳ್ಳುವುದೇನು ಕಾಣ ಬೇಕು..ಇಂತಹ ಕ್ರೀಡಾ ಪ್ರತಿಭೆಗಳನ್ನು ಮೊಳಕೆಯಲ್ಲಿಯೇ ಗುರುತಿಸಿ ಗುಣಮಟ್ಟದ ತರಬೇತಿ ಹಣಕಾಸು ಉತ್ತಮ ಉದ್ಯೋಗ ನೀಡುವಲ್ಲಿ ಕೇಂದ್ರ ಸರ್ಕಾರವಾಗಲಿ ರಾಜ್ಯ ಸರಕಾರಗಳು ಎಷ್ಟು ಆಸಕ್ತಿವಹಿಸುತ್ತಿದ್ದಾವೆ ಅನ್ನುವುದು ಅಷ್ಟೇ ಮುಖ್ಯ. ಸಾಧನೆ ಮಾಡಿಬಂದ ಮೇಲೆ ಪ್ರೇೂತ್ಸಾಹಿಸುವುದು ಮುಖ್ಯವಲ್ಲ.ಕ್ರೀಡಾ ಪ್ರತಿಭೆಗಳಿಗೆ ಮೆಾಳಕೆಯಲ್ಲಿಯೇ ಗುರುತಿಸಿ ಪ್ರೇೂತ್ಸಾಹ ನೀಡ ಬೇಕಾದದ್ದು ಅತೀ ಮುಖ್ಯ.ನಮ್ಮೆಲ್ಲ ರಾಜ್ಯಗಳಲ್ಲಿ ಅದೆಷ್ಟೋ ಶ್ರೀಮಂತ ಕಂಪನಿಗಳು ಇದ್ದಾವೆ ಅವುಗಳು ಕೂಡಾ ಇಂತಹ ಪ್ರತಿಭೆಗಳನ್ನು ಗುರುತಿಸಿ ಬೆಳೆಸುವರೇ ಮುಂದಾಗ ಬೇಕು.ಸರ್ಕಾರ ಮತ್ತು ಸರಕಾರೇತರ ಸಂಸ್ಥೆಗಳ ಪ್ರತಿಭಾವಂತ ಕ್ರೀಡಾಗಳನ್ನು ಗುರುತಿಸಿ ಬೆಳಸ ಬೇಕಾದ ಜವಾಬ್ದಾರಿ ಇದೆ..ಸರ್ಕಾರ ಈ ನಿಟ್ಟಿನಲ್ಲಿ ಇಂತಹ ಕಂಪನಿಗಳಿಗೆ ಲೈಸೆನ್ಸ್ ನೀಡುವಾಗಲೇ ಷರತ್ತು ಹಾಕ ಬೇಕು.

ಇಂದಿನ ಜಾಗತಿಕರಣ ಯುಗದಲ್ಲಿ ಭಾರತ ಆಥಿ೯ಕವಾಗಿ ಮೂರನೇ ಸ್ಥಾನಕ್ಕೆ ಲಗ್ಗೆ ಹಾಕುತ್ತಿದ್ದೇವೆಅನ್ನುವ ಸಂದರ್ಭದಲ್ಲಿ ಭಾರತ ಕ್ರೀಡಾ ಕ್ಷೇತ್ರದಲ್ಲಿ 71ನೇ ಸ್ಥಾನದಲ್ಲಿ ತೃಪ್ತಿ ಪಡುವುದು ಅತ್ಯಂತ ಬೇಸರದ ಬೆಳವಣಿಗೆ ಎಂದೇ ಭಾವಿಸ ಬೇಕು.ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ರೀಡಾ ಕ್ಷೇತ್ರಕ್ಕೆ ಸಂಬಂಧಿಸಿದ ಹೊಸ ಕ್ರೀಡಾ ನೀತಿಯನ್ನು ರೂಪಿಸಿ ಅನುಷ್ಠಾನ ಗೊಳಿಸ ಬೇಕಾದ ಅನಿವಾರ್ಯತೆಯೂ ಬಂದಿದೆ.ಇನ್ನಾದರೂ ನಮ್ಮ ಸರಕಾರಗಳು ಕಣ್ಣು ತೆರೆದುನೇೂಡಲಿ ಅನ್ನುವುದು ನಮ್ಮೆಲ್ಲರ ಒತ್ತಾಸೆಯೂ ಹೌದು.

ಪ್ರೊ.ಕೊಕ್ಕಣೆ೯ ಸುರೇಂದ್ರ ನಾಥ ಶೆಟ್ಟಿ ಉಡುಪಿ.

ಟಾಪ್ ನ್ಯೂಸ್

AANE 2

Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು

ವಕ್ಫ್  ನೋಟಿಸ್‌ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ

ವಕ್ಫ್  ನೋಟಿಸ್‌ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ

Vijayapura-waqf

Waqf Notice: ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಹೋರಾತ್ರಿ ಧರಣಿ

Congress: ಸುಳ್ಳು ಗ್ಯಾರಂಟಿಗೆ 3 ರಾಜ್ಯ ನಾಶ: ಪ್ರಧಾನಿ ಮೋದಿ

Congress: ಸುಳ್ಳು ಗ್ಯಾರಂಟಿಗೆ 3 ರಾಜ್ಯ ನಾಶ: ಪ್ರಧಾನಿ ಮೋದಿ

PM Modi: ಜನರ ಸಮಸ್ಯೆ ವಿಷಯ ಮಾತಾಡಲಿ: ಮಲ್ಲಿಕಾರ್ಜುನ ಖರ್ಗೆ

PM Modi: ಜನರ ಸಮಸ್ಯೆ ವಿಷಯ ಮಾತಾಡಲಿ: ಮಲ್ಲಿಕಾರ್ಜುನ ಖರ್ಗೆ

Udupi-Dakshina Kannada: ಕರ್ನಾಟಕ ಜಾನಪದ ಪ್ರಶಸ್ತಿ ಪ್ರಕಟ

Udupi-Dakshina Kannada: ಕರ್ನಾಟಕ ಜಾನಪದ ಪ್ರಶಸ್ತಿ ಪ್ರಕಟ

OM BIrla

Waqf ಸಮಿತಿಯಿಂದ ದೂರ: ಇಂದು ಸ್ಪೀಕರ್‌ ಜತೆ ವಿಪಕ್ಷ ಚರ್ಚೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hockey

National Hockey; ಕರ್ನಾಟಕಕ್ಕೆ ಜಯ

1-wqqwewq

Australia ಗೆಲುವಿಗೆ ಕಮಿನ್ಸ್‌  ನೆರವು: ಪಾಕಿಸ್ಥಾನ 203; ಆಸೀಸ್‌  8 ವಿಕೆಟಿಗೆ 204

1-qwewqeqw

Pro Kabaddi;ಬೆಂಗಳೂರು ಬುಲ್ಸ್‌  ಜಯಭೇರಿ: ತಮಿಳ್‌ ತಲೈವಾಸ್‌ಗೆ 32-36 ಅಂಕಗಳ ಸೋಲು

1-football

Football ಮೈದಾನಕ್ಕೆ ಬಡಿದ ಸಿಡಿಲು; ಆಟಗಾರ ಮೃ*ತ್ಯು, ಹಲವರಿಗೆ ಗಾಯ

BGT Series: ಇಂಡಿಯಾ ಎ ಪಂದ್ಯಕ್ಕಾಗಿ ಆಸೀಸ್‌ ಗೆ ಹೊರಟ ಕೆಎಲ್‌ ರಾಹುಲ್‌, ಜುರೆಲ್

BGT Series: ಇಂಡಿಯಾ ಎ ಪಂದ್ಯಕ್ಕಾಗಿ ಆಸೀಸ್‌ ಗೆ ಹೊರಟ ಕೆಎಲ್‌ ರಾಹುಲ್‌, ಜುರೆಲ್

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

High-Court

Order: ಶಿರೂರು ಗುಡ್ಡ ಕುಸಿತ: 2 ತಿಂಗಳೊಳಗೆ 5 ಲ.ರೂ. ಪರಿಹಾರಕ್ಕೆ ಹೈಕೋರ್ಟ್‌ ಸೂಚನೆ

current

Power cut shock:ಅದಾನಿ ಕಂಪೆನಿಗೆ ಬಾಂಗ್ಲಾ ಪಾವತಿ ಶುರು

mob

WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್‌ ಅಧಿಕಾರಿ ದೂರು

AANE 2

Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು

ವಕ್ಫ್  ನೋಟಿಸ್‌ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ

ವಕ್ಫ್  ನೋಟಿಸ್‌ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.