On Camera: ರಿವರ್ಸ್ ಅವಾಂತರ-ಗೆಳೆಯನ ಕಣ್ಣೆದುರೇ ಕಾರು ಕಂದಕಕ್ಕೆ ಬಿದ್ದು ಗೆಳತಿ ಸಾವು
Team Udayavani, Jun 18, 2024, 12:27 PM IST
ಮಹಾರಾಷ್ಟ್ರ: ಯುವತಿಯೊಬ್ಬಳು ಕಾರನ್ನು ರಿವರ್ಸ್ ನಲ್ಲಿ ಓಡಿಸಿ 300 ಅಡಿ ಆಳದ ಕಂದಕಕ್ಕೆ ಬಿದ್ದು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಈಕೆ ಡ್ರೈವಿಂಗ್ ಕಲಿಯುತ್ತಿರುವುದನ್ನು ಯುವತಿಯ ಗೆಳೆಯ ವಿಡಿಯೋ ಮಾಡುತ್ತಿದ್ದು, ಆಕೆ ಪ್ರಪಾತಕ್ಕೆ ಬಿದ್ದ ದೃಶ್ಯ ಕೂಡಾ ಸೆರೆಯಾಗಿದೆ.
ಇದನ್ನೂ ಓದಿ:New Jersey: ಗುಂಡಿನ ದಾಳಿಗೆ ಪಂಜಾಬ್ ಮೂಲದ ಮಹಿಳೆ ಮೃತ್ಯು, ಮತ್ತೊಬ್ಬಾಕೆ ಚಿಂತಾಜನಕ
ಸೋಮವಾರ ಮಧ್ಯಾಹ್ನ ಗೆಳೆಯ ಸೂರಜ್ ಸಂಜು ಮುಲೆ (25ವರ್ಷ) ಜತೆ ಶ್ವೇತಾ ದೀಪಕ್ ಸುರ್ವಾಸೆ (23ವರ್ಷ) ಕಾರಿನಲ್ಲಿ ಔರಂಗಬಾದ್ ನಿಂದ ಸುಲಿಭಂಜನ್ ಬೆಟ್ಟಕ್ಕೆ ಪ್ರಯಾಣಿಸಿದ್ದರು ಎಂದು ವರದಿ ತಿಳಿಸಿದೆ.
ಮಧ್ಯಾಹ್ನ 2ಗಂಟೆ ಸುಮಾರಿಗೆ ಸುರ್ವಾಸೆ ಕಾರನ್ನು ನಿಧಾನಕ್ಕೆ ರಿವರ್ಸ್ ನಲ್ಲಿ ಚಲಾಯಿಸುತ್ತಿದ್ದು, ಈ ಸಂದರ್ಭದಲ್ಲಿ ಆಕೆ ಡ್ರೈವಿಂಗ್ ಮಾಡುತ್ತಿರುವುದನ್ನು ಗೆಳೆಯ ವಿಡಿಯೋ ಮಾಡುತ್ತಿದ್ದ. ಆಗ ಕಾರು ಏಕಾಏಕಿ ವೇಗದಲ್ಲಿ ಹಿಂದಕ್ಕೆ ಚಲಾಯಿಸಿದ್ದು, ಸೂರಜ್, ನಿಧಾನ, ನಿಧಾನ ಕ್ಲಚ್, ಕ್ಲಚ್ ಒತ್ತು ಎಂದು ಎಚ್ಚರಿಕೆ ನೀಡುತ್ತಿದ್ದ. ಆದರೆ ಅಷ್ಟರಲ್ಲಿ ಕಾರು 300 ಅಡಿ ಆಳದ ಪ್ರಪಾತಕ್ಕೆ ಬಿದ್ದ ಪರಿಣಾಮ ಸುರ್ವಾಸೆ ಕೊನೆಯುಸಿರೆಳೆದಿರುವುದಾಗಿ ವರದಿ ತಿಳಿಸಿದೆ.
On Camera, Woman Reverses Car Off #Maharashtra Cliff, Falls 300 Feet, Dies
Read Here: https://t.co/KRKKoWvbkh pic.twitter.com/lk2L3BtZHW
— NDTV (@ndtv) June 18, 2024
ಮಳೆಗಾಲವಾಗಿದ್ದರಿಂದ ಇಬ್ಬರು ಸುಲಿಭಂಜನ್ ಬೆಟ್ಟದಲ್ಲಿರುವ ದತ್ತಾತ್ರೇಯ ದೇವಾಲಯಕ್ಕೆ ಭೇಟಿ ನೀಡಲು ಆಗಮಿಸಿದ್ದರು. ಹಸಿರು ಬೆಟ್ಟದ ಸುಂದರ ದೃಶ್ಯ ಸೆರೆಹಿಡಿಯಲು ಅಪಾರ ಪ್ರಮಾಣದ ಪ್ರವಾಸಿಗರು ಈ ಬೆಟ್ಟಕ್ಕೆ ಭೇಟಿ ನೀಡುತ್ತಾರೆ ಎಂದು ವರದಿ ವಿವರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Video: ಮೊಟ್ಟೆ ಕದ್ದು ಸಿಕ್ಕಿಬಿದ್ದರೇ ಶಾಲೆಯ ಪ್ರಾಂಶುಪಾಲರು…? ಇಲಾಖೆಯಿಂದ ನೊಟೀಸ್
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
UP: ಫಸ್ಟ್ ನೈಟ್ ದಿನ ಬಿಯರ್, ಗಾಂಜಾ ತಂದು ಕೊಡಲು ಬೇಡಿಕೆ ಇಟ್ಟ ಪತ್ನಿ; ಪತಿ ಶಾಕ್.!
Mumbai Train; ಮಹಿಳಾ ಬೋಗಿಗೆ ಬೆ*ತ್ತಲೆ ಯಾಗಿ ನುಗ್ಗಿದ ಪುರುಷ!!: ವಿಡಿಯೋ ವೈರಲ್
Pakistan:ಅಕ್ರಮ ಶಸ್ತ್ರಾಸ್ತ್ರ, ಸಿಂಹದ ಮರಿ ಸಾಕಿದ್ದ ಪಾಕಿಸ್ತಾನಿ ಖ್ಯಾತ ಯೂಟ್ಯೂಬರ್ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.