ದಾದಾ-ದ್ರಾವಿಡ್ ಟೆಸ್ಟ್ ಪ್ರವೇಶಕ್ಕೆ ಬೆಳ್ಳಿ ಮೆರುಗು
1996ರ ಐತಿಹಾಸಿಕ ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಒಟ್ಟಿಗೇ ಪದಾರ್ಪಣೆ
Team Udayavani, Jun 21, 2020, 6:40 AM IST
ಹೊಸದಿಲ್ಲಿ: ಜೂನ್ 20 ಎನ್ನುವುದು ಭಾರತೀಯ ಕ್ರಿಕೆಟ್‌ನಲ್ಲಿ ಅಚ್ಚಳಿಯದೇ ಉಳಿಯುವ ದಿನಾಂಕ. ಈ ದಿನದಂದು ಇಬ್ಬರಲ್ಲ, ಮೂವರು ಕ್ರಿಕೆಟಿಗರು ಟೆಸ್ಟ್ ಪದಾರ್ಪಣೆ ಮಾಡಿ ದರು ಮತ್ತು ಮೂವರೂ ಜಾಗತಿಕ ಕ್ರಿಕೆಟಿನ ಮಹಾನ್ ಆಟಗಾರರಾಗಿ ಮೂಡಿ ಬಂದರು.
ಇದರಲ್ಲಿ ಮೊದಲಿಬ್ಬರೆಂದರೆ ಸೌರವ್ ಗಂಗೂಲಿ ಮತ್ತು ರಾಹುಲ್ ದ್ರಾವಿಡ್. ಇವರಿಬ್ಬರೂ 1996ರ ಇಂಗ್ಲೆಂಡ್ ಪ್ರವಾಸದ ವೇಳೆ ಐತಿಹಾಸಿಕ ಲಾರ್ಡ್ಸ್ ಅಂಗಳದಲ್ಲಿ ಒಟ್ಟಿಗೇ ಟೆಸ್ಟ್‌ಕ್ಯಾಪ್ ಧರಿಸಿದರು. ಸರಿಯಾಗಿ 15 ವರ್ಷಗಳ ಬಳಿಕ, 2011ರ ಜೂ. 20ರಂದು ವೆಸ್ಟ್ ಇಂಡೀಸ್ ವಿರುದ್ಧ ಕಿಂಗ್‌ಸ್ಟನ್‌ನಲ್ಲಿ ವಿರಾಟ್ ಕೊಹ್ಲಿ ಟೆಸ್ಟ್ ಆಡಲಿಳಿದರು. ಈಗ ಅವರು “ಕ್ರಿಕೆಟ್ ಕಿಂಗ್’ ಆಗಿ ಮೆರೆಯುತ್ತಿದ್ದಾರೆ. ದ್ರಾವಿಡ್ ಮತ್ತು ಗಂಗೂಲಿ ಅವರನ್ನು ಈ ದಿನದಂದು ನೆನೆಯಲು ವಿಶೇಷ ಕಾರಣವಿದೆ. ಇವರಿಬ್ಬರ ಟೆಸ್ಟ್ ಪ್ರವೇಶಕ್ಕೆ ಶನಿವಾರ 24 ವರ್ಷ ಪೂರ್ತಿಗೊಂಡಿದೆ.
ಮುಂದಿನದು ರಜತ ಸಂಭ್ರಮದ ವರ್ಷ!
ಕ್ರಿಕೆಟ್ ವೈಭವಕ್ಕೆ ಮುನ್ನುಡಿ ಅದು ಇಂಗ್ಲೆಂಡ್ ಪ್ರವಾಸದ ದ್ವಿತೀಯ ಟೆಸ್ಟ್. ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಮೊದಲ ಪಂದ್ಯವನ್ನು 8 ವಿಕೆಟ್‌ಗಳಿಂದ ಸೋತಿದ್ದ ಅಜರುದ್ದೀನ್ ಪಡೆ 0-1 ಹಿನ್ನಡೆಯಲ್ಲಿತ್ತು. ಲಾರ್ಡ್ಸ್ ಟೆಸ್ಟ್ ವೇಳೆ 2 ಪ್ರಮುಖ ಬದಲಾವಣೆಗಳೊಂದಿಗೆ ಭಾರತ ತಂಡ ಕಣಕ್ಕಿಳಿಯಿತು. ಸಂಜಯ್ ಮಾಂಜ್ರೆàಕರ್ ಮತ್ತು ಸುನೀಲ್ ಜೋಶಿ ಬದಲು ಗಂಗೂಲಿ ಮತ್ತು ದ್ರಾವಿಡ್ ಅವರನ್ನು ಸೇರಿಸಿಕೊಳ್ಳಲಾಯಿತು. ಯುವ ಆಟಗಾರರಿಬ್ಬರೂ ಈ ಅವಕಾಶವನ್ನು ಸಮರ್ಥ ರೀತಿಯಲ್ಲಿ ಬಳಸಿಕೊಂಡರು. ಭಾರತೀಯ ಕ್ರಿಕೆಟಿನ ವೈಭವದ ದಿನಗಳಿಗೆ ಮುನ್ನುಡಿ ಬರೆದದ್ದು, ಮುಂದೆ “ಫ್ಯಾಬ್ ಫೈವ್’ ಪಟ್ಟಿ ಅಲಂಕರಿಸಿದ್ದು ಇತಿಹಾಸ.
ದ್ರಾವಿಡ್ ಕೆಳ ಕ್ರಮಾಂಕ
ಅಂದು ಗಂಗೂಲಿ ವನ್‌ಡೌನ್‌ನಲ್ಲಿ ಕ್ರೀಸ್ ಇಳಿದು ಭರ್ಜರಿ 131 ರನ್ ಬಾರಿಸಿ “ಕ್ರಿಕೆಟ್ ಕಾಶಿ’ಯಲ್ಲಿ ಮೆರೆದಾಡಿದರು. ಚೊಚ್ಚಲ ಟೆಸ್ಟ್ ನಲ್ಲೇ ಸೆಂಚುರಿ ಹೊಡೆದ ಭಾರತದ 10ನೇ ಕ್ರಿಕೆಟಿಗನೆಂಬ ಹೆಗ್ಗಳಿಕೆ ಇವರದಾಗಿತ್ತು. ಆದರೆ ದ್ರಾವಿಡ್ ಶತಕದ ಅವಕಾಶವನ್ನು ಕೇವಲ 5 ರನ್ನಿನಿಂದ ಕಳೆದುಕೊಂಡು ನಿರಾಸೆ ಅನುಭವಿಸಬೇಕಾಯಿತು. ಮುಂದೆ “ಗೋಡೆ’ಯಾಗಿ ನಿಂತು ಭಾರತೀಯ ಕ್ರಿಕೆಟನ್ನು ಗಟ್ಟಿಗೊಳಿಸಿದ ದ್ರಾವಿಡ್ ಅಂದು ಬ್ಯಾಟ್ ಹಿಡಿದು ಬಂದದ್ದು 7ನೇ ಕ್ರಮಾಂಕದಲ್ಲಿ ಎಂಬುದನ್ನು ಮರೆಯಬಾರದು!
ಟೆಸ್ಟ್ ಶೈಲಿಯ ಬ್ಯಾಟ್ಸ್‌ಮನ್‌ಗಳ ಅಭಾವದ ಈ ದಿನಗಳಲ್ಲಿ ದ್ರಾವಿಡ್, ಗಂಗೂಲಿ ಅವರಂಥ ಅಸಾಮಾನ್ಯ ಆಟಗಾರರು ಸದಾ ನೆನಪಿನಂಗಳದಲ್ಲಿ ಉಳಿಯುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Vijay Hazare Trophy: ಮಯಾಂಕ್ ಅಗರ್ವಾಲ್ ಶತಕದಾಟ; ಪಂಜಾಬ್ ಕೈನಿಂದ ಜಯ ಕಸಿದ ಕರ್ನಾಟಕ
M Chinnaswamy Stadium; ಶಾಂತಾ ಹೆಸರಿಡಲು ಸಮಸ್ಯೆಯೇನಿದೆ? ಕೆಎಸ್‌ಸಿಎ ತಾರತಮ್ಯವೇಕೆ?
PV Sindhu: ವಿಮಾನದಲ್ಲಿ ಶುರುವಾಯ್ತು ಸಿಂಧು-ದತ್ತಾ ಲವ್ ಸ್ಟೋರಿ
INDvAUS: ಯುವ ಆಟಗಾರನ ಕೆಣಕಿ ತಪ್ಪು ಮಾಡಿದರೆ ಕೊಹ್ಲಿ? ಶಿಕ್ಷೆ ಗ್ಯಾರಂಟಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.