ಹೈದರಾಬಾದ್‌ನಲ್ಲೊಂದು ಫಾರ್ಮಾ ಸಿಟಿ! ದೇಶದಲ್ಲಿಯೇ ಕಚ್ಚಾ ವಸ್ತು ಸಿದ್ಧಪಡಿಸಲು ಸಿದ್ಧತೆ
ಔಷಧ ಕ್ಷೇತ್ರದಲ್ಲಿ ಚೀನ ಪ್ರಾಬಲ್ಯ ತಗ್ಗಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ
Team Udayavani, Apr 13, 2022, 8:20 AM IST
ಹೈದರಾಬಾದ್: ಔಷಧೋದ್ಯಮದಲ್ಲಿ ಚೀನ ಪ್ರಾಬಲ್ಯವನ್ನು ತಗ್ಗಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಮಹತ್ವದ ಹೆಜ್ಜೆಯಿಟ್ಟಿದೆ.
ಹೈದರಾಬಾದ್‌ನ ಹೊರ ವಲಯದಲ್ಲಿ 14 ಸಾವಿರ ಫುಟ್ಬಾಲ್ ಕ್ರೀಡಾಂಗಣಗಳಷ್ಟು ವಿಸ್ತಾರವಾದ ಖಾಲಿ ಜಾಗದಲ್ಲಿ “ಫಾರ್ಮಾ ಸಿಟಿ’ ನಿರ್ಮಿಸಲು ಸರಕಾರ ಚಿಂತನೆ ನಡೆಸಿದೆ. ಔಷಧ ಉದ್ಯಮಕ್ಕೆ ಬೇಕಾದ ಕಚ್ಚಾ ವಸ್ತುಗಳನ್ನು ತಯಾರಿಸುವುದು ಸರಕಾರದ ಪ್ಲ್ಯಾನ್ .
ಭಾರತದ ಫಾರ್ಮಾ ಕಂಪೆನಿಗಳಿಗೆ ಔಷಧ ತಯಾರಿಸಲು ಬೇಕಾದ ಶೇ.70ರಷ್ಟು ಕಚ್ಚಾವಸ್ತುಗಳನ್ನು ಪ್ರಸ್ತುತ ಚೀನದಿಂದಲೇ ಆಮದು ಮಾಡಿಕೊಳ್ಳಲಾಗುತ್ತಿದೆ. 2 ವರ್ಷಗಳ ಹಿಂದೆ ಜಗತ್ತಿಗೆ ಕೊರೊನಾ ದಾಂಗುಡಿಯಿ ಟ್ಟಾಗ, ಚೀನದ ಹ್ಯುಬೆ ಪ್ರಾಂತ್ಯದಲ್ಲಿ ಲಾಕ್‌ಡೌನ್ ಘೋಷಿಸಲಾಗಿತ್ತು. ಹಾಗಾಗಿ ಅಲ್ಲಿಂದ ಕಚ್ಚಾವಸ್ತುಗಳು ಬರದೇ ಭಾರತದ ಕಂಪೆನಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದವು. ಚೀನದ ಮೇಲಿನ ಈ ರೀತಿಯ ಅವಲಂಬನೆ ತಗ್ಗಿಸುವ ಸಲುವಾಗಿಯೇ ಸರಕಾರ ಫಾರ್ಮಾ ಸಿಟಿ ನಿರ್ಮಾಣಕ್ಕೆ ಮುಂದಾಗಿದೆ.
ಉದ್ಯೋಗ ಸೃಷ್ಟಿ, ವೆಚ್ಚ ಇಳಿಕೆ: ಎಲ್ಲವೂ ಅಂದುಕೊಂಡಂತೆ ನಡೆದರೆ ಈ ಫಾರ್ಮಾ ಸಿಟಿಯಲ್ಲೇ ಪೆನ್ಸಿಲಿನ್, ಇಬುಪ್ರೊಫೆನ್, ಮಲೇರಿಯಾ ನಿಗ್ರಹ ಔಷಧಗಳಿಗೆ ಅಗತ್ಯವಾದ ಕಚ್ಚಾ ವಸ್ತುಗಳು ತಯಾರಾಗಲಿದೆ. ಇದರಿಂದ ಕಂಪೆನಿಗಳ ವೆಚ್ಚ ಇಳಿಕೆಯಾಗಿ, ಚೀನ ಮೇಲಿನ ಅವಲಂಬನೆ ತಗ್ಗಲಿದೆ. ಈ ಸಿಟಿಗೆ 8.4 ಬಿಲಿ ಯನ್ ಡಾಲರ್ ಮೊತ್ತದ ಹೂಡಿಕೆ ನಿರೀಕ್ಷಿಸಲಾಗುತ್ತಿದೆ ಮತ್ತು ಒಂದು ಬಾರಿ ಉತ್ಪಾದನೆ ಶುರುವಾದರೆ 5.60 ಲಕ್ಷ ಮಂದಿಗೆ ಉದ್ಯೋಗವೂ ಸಿಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
iPhone: ಕೈತಪ್ಪಿ ಕಾಣಿಕೆ ಹುಂಡಿಗೆ ಬಿದ್ದ ಐಫೋನ್… ಇದು ದೇವರ ಸೊತ್ತು ಎಂದ ಸಿಬಂದಿ
Parliament Session: 26 ದಿನಗಳಲ್ಲಿ 7 ಮಸೂದೆಗಳಿಗೆ ಅನುಮೋದನೆ, 65 ಗಂಟೆ ನಷ್ಟ!
Parliament Session: ವಿಪಕ್ಷಗಳ ಕೋಲಾಹಲ ನಡುವೆ ಏಕ ಚುನಾವಣೆ ಮಸೂದೆ ಜೆಪಿಸಿಗೆ
ಜೋಡೋ ಯಾತ್ರೆಯಲ್ಲಿ”ನಗರ ನಕ್ಸಲರು’: ಮಹಾರಾಷ್ಟ್ರ ಸಿಎಂ ಫಡ್ನವೀಸ್
PM Modi: ಇಂದಿನಿಂದ ಮೋದಿ ಕುವೈತ್ ಭೇಟಿ…: 43 ವರ್ಷಗಳ ಬಳಿಕ ಭಾರತದ ಪ್ರಧಾನಿ ಭೇಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.