ಜೀವವಾಯುವಿಗಾಗಿ ಹಾಹಾಕಾರ : ಕೋವಿಡ್ ಎರಡನೇ ಅಲೆ ವೇಳೆ ಹೆಚ್ಚಿದ ಬೇಡಿಕೆ


Team Udayavani, Apr 22, 2021, 6:40 AM IST

oxygen

ವೈದ್ಯಕೀಯ ಆಮ್ಲಜನಕ ತಯಾರಿಕೆ ಹೇಗೆ?
ಕೋವಿಡ್‌ನ‌ 2ನೇ ಅಲೆಯು ದೇಶದಲ್ಲಿ ಹೆಚ್ಚಾಗುತ್ತಿದೆ. ಆಸ್ಪತ್ರೆ ಗಳಲ್ಲಿ ಹಾಸಿಗೆ ಇಲ್ಲದೇ ರೋಗಿಗಳಿಗೆ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿಲ್ಲ. ಔಷಧಗಳನ್ನು ಪಡೆಯುವುದಕ್ಕಿಂತ ಹೆಚ್ಚಾಗಿ ರೋಗಿಗಳು ಆಮ್ಲಜನಕವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಪರಿಸ್ಥಿತಿ ಎಷ್ಟು ಗಂಭೀರವಾಗಿದೆ ಎಂದರೆ 50,000 ಮೆಟ್ರಿಕ್‌ ಟನ್‌ ಆಮ್ಲಜನಕವನ್ನು ಖರೀದಿಸಲು ಸರಕಾರ ಜಾಗತಿಕ ಮಾರು ಕಟ್ಟೆಯ ಮೊರೆಹೋಗಿದೆ. ಹಾಗಾದರೆ ಏನಿದು ವೈದ್ಯಕೀಯ ಆಮ್ಲಜನಕ? ನಾವೆಲ್ಲರೂ ಪರಿಸರದಲ್ಲಿರುವ ಗಾಳಿಯನ್ನು ಉಸಿರಾಡುತ್ತೇವೆ. ಇದನ್ನು ಸಿಲಿಂಡರ್‌ನಲ್ಲಿ ಯಾಕೆ ತುಂಬಲಾಗುತ್ತದೆ? ಈ ಎಲ್ಲ ಗೊಂದಲಗಳು ಉದ್ಭವಿಸುವುದು ಸಹಜ. ಹಾಗಾದರೆ ಏನಿದು ವೈದ್ಯಕೀಯ ಆಮ್ಲಜನಕ? ಅದನ್ನು ಹೇಗೆ ತಯಾರಿಸಲಾಗುತ್ತದೆ? ಇಲ್ಲಿದೆ ಮಾಹಿತಿ.

ವೈದ್ಯಕೀಯ ಆಮ್ಲಜನಕ ಎಂದರೇನು?
2015ರಲ್ಲಿ ಬಿಡುಗಡೆಯಾದ ದೇಶದ ಅಗತ್ಯ ಔಷಧಗಳ ಪಟ್ಟಿಯಲ್ಲಿ ಆಮ್ಲಜನಕವೂ ಸೇರಿದೆ. ಪ್ರಾಥಮಿಕ, ದ್ವಿತೀಯ ಮತ್ತು ತೃತೀಯ ಈ ಮೂರು ಹಂತದ ಆರೋಗ್ಯ ರಕ್ಷಣೆಗೆ ಇದು ಅಗತ್ಯವೆಂದು ಘೋಷಿಸಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಅಗತ್ಯ ಔಷಧಗಳ ಪಟ್ಟಿಯಲ್ಲಿಯೂ ಇದನ್ನು ಸೇರಿಸಲಾಗಿದೆ. ವೈದ್ಯಕೀಯ ಆಮ್ಲಜನಕ ಎಂದರೆ ಶೇ. 98ರಷ್ಟು ಶುದ್ಧ ಆಮ್ಲಜನಕ, ತೇವಾಂಶ, ಧೂಳು ಅಥವಾ ಇತರ ಅನಿಲಗಳಲ್ಲಿ ಇರುವಂತಹ ಯಾವುದೇ ಕಲ್ಮಶಗಳಿಲ್ಲ.

ನಮ್ಮ ಸುತ್ತಲಿರುವ ಆಮ್ಲಜನಕ ಯಾವುದು?
ವಾತಾವರಣದಲ್ಲಿರುವ ಗಾಳಿಯನ್ನು ನಾವು ಉಸಿರಾಡುತ್ತೇವೆ. ಈ ಗಾಳಿಯಲ್ಲಿ ಕೇವಲ ಶೇ. 21ರಷ್ಟು ಆಮ್ಲಜನಕವಿರುತ್ತದೆ. ಇದು ಆರೋಗ್ಯವಂತ ವ್ಯಕ್ತಿಗೆ ಸಾಕಾಗುವಷ್ಟು ಆಮ್ಲಜನಕವನ್ನು ಒದಗಿಸುತ್ತದೆ. ಆದರೆ ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ಇದನ್ನು ಬಳಸಲಾಗುವುದಿಲ್ಲ. ಹೀಗಾಗಿ ವೈದ್ಯಕೀಯ ಆಮ್ಲಜನಕವನ್ನು ವಿಶೇಷ ಪ್ಲಾಂಟ್‌ ಮೂಲಕ ವೈಜ್ಞಾನಿಕ ರೀತಿಯಲ್ಲಿ ತಯಾರಿಸಲಾಗುತ್ತದೆ. ಅದೂ ದ್ರವರೂಪದ ಆಮ್ಲಜನಕ.

ಆಮ್ಲಜನಕವನ್ನು ಹೇಗೆ ತಯಾರಿಸಲಾಗುತ್ತದೆ?
ನಮ್ಮ ಸುತ್ತಲಿನ ಗಾಳಿಯಿಂದ ಶುದ್ಧ ಆಮ್ಲಜನಕವನ್ನು ವೈಜ್ಞಾನಿಕವಾದ ವಿಧಾನದಿಂದ ಬೇರ್ಪಡಿಸುವ ಮೂಲಕ ವೈದ್ಯಕೀಯ ಆಮ್ಲಜನಕವನ್ನು ತಯಾರಿಸಲಾಗುತ್ತದೆ. ವಾತಾವರಣದಲ್ಲಿರುವ ಗಾಳಿಯು ಶೇ. 78ರಷ್ಟು ಸಾರಜನಕ, ಶೇ. 21ರಷ್ಟು ಆಮ್ಲಜನಕ ಮತ್ತು ಉಳಿದ ಶೇ. 1ರಷ್ಟು ಅನಿಲಗಳಾದ ಆರ್ಗಾನ್‌, ಹೀಲಿಯಂ, ನಿಯಾನ್‌, ಕ್ರಿಪಾನ್‌, ಜಿನೋನ್‌ ಅನ್ನು ಹೊಂದಿರುತ್ತದೆ. ಈ ಎಲ್ಲ ಅನಿಲಗಳ ಕುದಿಯುವ ಹಂತವು ತೀರಾ ಕಡಿಮೆ ಮತ್ತು ವಿಭಿನ್ನವಾಗಿರುತ್ತದೆ. ನಾವು ಗಾಳಿಯನ್ನು ಸಂಗ್ರಹಿಸಿ ತಣ್ಣಗಾಗಿಸಿದರೆ, ಜಿನಾನ್‌ ಅನಿಲ -108 ಡಿಗ್ರಿಗಳಲ್ಲಿ ದ್ರವವಾಗಿ ಬದಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನಾವು ಅದನ್ನು ಗಾಳಿಯಿಂದ ಬೇರ್ಪಡಿಸಬಹುದು. ಅಂತೆಯೇ -153.2 ಡಿಗ್ರಿಗಳಲ್ಲಿ ಕ್ರಿಪಾನ್‌, -183 ಡಿಗ್ರಿಗಳಲ್ಲಿ ಆಮ್ಲಜನಕ ದ್ರವವಾಗುತ್ತವೆ.

ಕ್ರಯೋಜೆನಿಕ್‌ ತಂತ್ರ
ಗಾಳಿಯಿಂದ ಅನಿಲಗಳನ್ನು ಬೇರ್ಪಡಿಸುವ ಈ ತಂತ್ರವನ್ನು “ಕ್ರಯೋಜೆನಿಕ್‌ ತಂತ್ರ’ ಎಂದು ಕರೆಯಲಾಗುತ್ತದೆ. ಈ ರೀತಿಯಲ್ಲಿ ತಯಾರಿಸಿದ ದ್ರವ ಆಮ್ಲಜನಕವನ್ನು ಶೇ. 99.5ರ ವರೆಗೆ ಶುದ್ಧೀಕರಿಸಲಾಗುತ್ತದೆ. ಈ ಸಂಪೂರ್ಣ ಪ್ರಕ್ರಿಯೆಯು ಹೆಚ್ಚಿನ ಒತ್ತಡದಲ್ಲಿ ( high pressure) ಪೂರ್ಣಗೊಳ್ಳುತ್ತದೆ. ಇದರಿಂದ ಅನಿಲಗಳ ಕುದಿಯುವ ಹಂತವು ಹೆಚ್ಚಾಗುತ್ತದೆ. ಅಂದರೆ ಹೆಚ್ಚು ತಂಪಾ  ಗಿಸದೆ, ಅನಿಲವು ದ್ರವವಾಗಿ ಬದಲಾಗುತ್ತದೆ. ಈ ಪ್ರಕ್ರಿ  ಯೆಯು ಮೊದಲು ಗಾಳಿಯನ್ನು ತಂಪಾಗಿಸಲಾಗುತ್ತದೆ ಮತ್ತು ತೇವಾಂಶ ಮತ್ತು ಶೋಧಕಗಳ ಮೂಲಕ ಧೂಳು ಮತ್ತು ತೈಲ ಮತ್ತು ಇತರ ಕಲ್ಮಶಗಳನ್ನು ಅದರಿಂದ ತೆಗೆದುಹಾಕಲಾಗುತ್ತದೆ.

ದ್ರವ ಆಮ್ಲಜನಕ ಆಸ್ಪತ್ರೆಗಳನ್ನು ಹೇಗೆ ತಲುಪುತ್ತದೆೆ?
ತಯಾರಕರು ಈ ದ್ರವ ಆಮ್ಲಜನಕವನ್ನು ದೊಡ್ಡ ಟ್ಯಾಂಕರ್‌ಗಳಲ್ಲಿ ಸಂಗ್ರಹಿಸುತ್ತಾರೆ. ಇಲ್ಲಿಂದ ಅತ್ಯಂತ ಶೀತಲವಾಗಿರುವ ಕ್ರಯೋಜೆನಿಕ್‌ ಟ್ಯಾಂಕರ್‌ಗಳಲ್ಲಿ ಇದನ್ನು ವಿತರಕರಿಗೆ ಕಳುಹಿಸುತ್ತಾರೆ. ವಿತರಕರು ಅದರ ಒತ್ತಡ(ಪ್ರಶರ್‌)ವನ್ನು ಕಡಿಮೆ ಮಾಡುತ್ತಾರೆ. ಬಳಿಕ ಅದನ್ನು ಅನಿಲ ರೂಪದಲ್ಲಿ ವಿವಿಧ ರೀತಿಯ ಸಿಲಿಂಡರ್‌ಗಳಿಗೆ ತುಂಬಲಾಗುತ್ತದೆ. ಈ ಸಿಲಿಂಡರ್‌ಗಳನ್ನು ನೇರವಾಗಿ ಆಸ್ಪತ್ರೆಗಳಿಗೆ ಅಥವಾ ಸಣ್ಣ ಪೂರೈಕೆದಾರರಿಗೆ ತಲುಪಿಸಲಾಗುತ್ತದೆ. ಕೆಲವು ದೊಡ್ಡ ಆಸ್ಪತ್ರೆಗಳು ತಮ್ಮದೇ ಆದ ಸಣ್ಣ ಆಮ್ಲಜನಕ ಉತ್ಪಾದನ ಕೇಂದ್ರಗಳು(ಆಕ್ಸಿಜನ್‌ ಪ್ಲಾಂಟ್‌)ಗಳನ್ನು ಹೊಂದಿವೆ.

ಒಬ್ಬ ವ್ಯಕ್ತಿಗೆ ಎಷ್ಟು ಆಮ್ಲಜನಕ ಬೇಕು?
ವಯಸ್ಕನು ಯಾವುದೇ ಕೆಲಸವನ್ನು ಮಾಡದಿದ್ದಾಗ ಉಸಿರಾಡಲು ಪ್ರತೀ ನಿಮಿಷಕ್ಕೆ 7ರಿಂದ 8 ಲೀಟರ್‌ ಗಾಳಿಯ ಅಗತ್ಯವಿದೆ. ಅಂದರೆ ಪ್ರತೀದಿನ ಸುಮಾರು 11,000 ಲೀಟರ್‌ ಗಾಳಿ. ಉಸಿರಾಟದ ಮೂಲಕ ಶ್ವಾಸಕೋಶಕ್ಕೆ ಹೋಗುವ ಗಾಳಿಯು ಶೇ. 20ರಷ್ಟು ಆಮ್ಲಜನಕವನ್ನು ಹೊಂದಿದ್ದರೆ, ಹೊರಹೋಗುವ ಉಸಿರಾಟವು ಶೇ. 15ರಷ್ಟು ಹೊಂದಿರುತ್ತದೆ. ಅಂದರೆ ಉಸಿರಾಟದಲ್ಲಿ ಶೇ. 5ರಷ್ಟು ಆಮ್ಲಜನಕವನ್ನು ಮಾತ್ರ ಬಳಸಲಾಗುತ್ತದೆ. ಒಬ್ಬ ವ್ಯಕ್ತಿಗೆ 24 ಗಂಟೆಗಳಲ್ಲಿ ಸುಮಾರು 550 ಲೀಟರ್‌ ಶುದ್ಧ ಆಮ್ಲಜನಕ ಬೇಕಾಗುತ್ತದೆ. ಕಷ್ಟಪಟ್ಟು ಕೆಲಸ ಮಾಡುವಾಗ ಅಥವಾ ವ್ಯಾಯಾಮ ಮಾಡುವಾಗ ಹೆಚ್ಚಿನ ಪ್ರಮಾಣದ ಆಮ್ಲಜನಕದ ಅಗತ್ಯವಿರುತ್ತದೆ.

ಸಿಲಿಂಡರ್‌ ಗಾತ್ರ, ಸಾಮರ್ಥ್ಯ ಎಷ್ಟು?
ಆಸ್ಪತ್ರೆಗಳು ಸಾಮಾನ್ಯವಾಗಿ 7 ಘನ ಮೀಟರ್‌ ಸಾಮರ್ಥ್ಯದ ಆಮ್ಲಜನಕ ಸಿಲಿಂಡರ್‌ಗಳನ್ನು ಬಳಸುತ್ತವೆ. ಇದರ ಎತ್ತರವು ಸುಮಾರು 4 ಅಡಿ 6 ಇಂಚುಗಳು. ಇದರ ಸಾಮರ್ಥ್ಯ ಕೇವಲ 47 ಲೀಟರ್‌, ಆದರೆ ಸುಮಾರು 7,000 ಲೀಟರ್‌ ಆಮ್ಲಜನಕವನ್ನು ಒತ್ತಡದಿಂದ ತುಂಬಿಸಲಾಗುತ್ತದೆ. 7 ಘನ ಮೀಟರ್‌ ಸಿಲಿಂಡರ್‌ನಲ್ಲಿರುವ ಆಮ್ಲಜನಕವನ್ನು ರೋಗಿಯೊಬ್ಬನಿಗೆ ನಿರಂತರವಾಗಿ ಸುಮಾರು 20 ಗಂಟೆಗಳವರೆಗೆ ನೀಡಬಹುದಾಗಿದೆ.

ಟಾಪ್ ನ್ಯೂಸ್

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada-Sahitya-Sammelana-2024

Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

Kallabete

Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

Ambedkar Remarks: ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌ ಶಾ

Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ

Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ

ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್‌

ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್‌

Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ

Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ

Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 30 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು

Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada-Sahitya-Sammelana-2024

Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

Kallabete

Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

Fake-Gold

Mangaluru: ನಕಲಿ ಚಿನ್ನ ಅಡವಿಟ್ಟು ವಂಚನೆ; 7ನೇ ಸಲ ಬಂದಾಗ ಸಿಕ್ಕಿಬಿದ್ದ ಮಹಿಳೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.