Desi Swara: ಓಝೀ ಎಂಬ “ಗೂಳಿ’- ಜನರ ಮನಗೆದ್ದ ಕಾಮನ್‌ವೆಲ್ತ್‌ನ ಲೋಹದ ಪ್ರತಿಮೆ

ಮ್ಯೂಸಿಕ್‌ ಬ್ಯಾಂಡ್‌ನ‌ ಮೂಲಕ ಅತ್ಯಂತ ಪ್ರಖ್ಯಾತನಾದ, ಕೋಟ್ಯಾಧಿಪತಿಯಾದ.

Team Udayavani, Jul 20, 2024, 1:10 PM IST

Desi Swara: ಓಝೀ ಎಂಬ “ಗೂಳಿ’- ಜನರ ಮನಗೆದ್ದ ಕಾಮನ್‌ವೆಲ್ತ್‌ನ ಲೋಹದ ಪ್ರತಿಮೆ

ಇಂಗ್ಲೆಂಡಿನ ಎರಡನೇ ದೊಡ್ಡ ನಗರ ಬರ್ಮಿಂಗ್‌ಹ್ಯಾಮ್‌. ಇಲ್ಲಿನ ಜನರ ಇಂಗ್ಲಿಷಿಗೆ ಅವರದೇ ಆದ ಬರ್ಮೀ ಧಾಟಿಯಿದೆ, ಸಂಸ್ಕೃತಿಯೂ ಇದೆ. 2022ರಲ್ಲಿ ಇಲ್ಲಿ ಕಾಮನ್‌ವೆಲ್ತ್‌ ಗೇಮ್ಸ್‌ ನಡೆಯಿತು. ಆಗ ಇಡೀ ನಗರವನ್ನು ಶೃಂಗರಿಸಿ ಸಜ್ಜುಗೊಳಿಸಲಾಯಿತು. ಲೋಹದ ಮೆಕ್ಯಾನಿಕಲ್‌ ಗೂಳಿಯೊಂದನ್ನು ಒಂದು ಆಕರ್ಷಣೆಯಾಗಿ ನಿರ್ಮಿಸಿ, ನಿಲ್ಲಿಸಲಾಗಿತ್ತು. “ರೇಜಿಂಗ್‌ ಬುಲ್‌’ ಎಂದು ಹೆಸರಿನ ಈ ಗೂಳಿ ಅತ್ಯಂತ ಜನಪ್ರಿಯವಾಯ್ತು. ಹತ್ತು ದಿನಗಳ ಕ್ರೀಡೆಯ ಸಮಯದಲ್ಲಿ ನೂರಾರು ಸಾವಿರ ಜನರು ಈ ಗೂಳಿಯ ಮುಂದೆ ನಿಂತು ಫೋಟೋ ತೆಗೆಸಿಕೊಂಡರು.

ಕಣ್ಣು ಕೆಂಪಗೆ ಮಾಡಿಕೊಂಡು, ತಲೆಯಲ್ಲಾಡಿಸಿ, ಗುಟುರುಹಾಕುತ್ತ, ಬಾಲವನ್ನು ಎತ್ತಿ ಆಡಿಸುವ ಈ ಗೂಳಿ ಎಲ್ಲರ ಮನಸ್ಸನ್ನು ಗೆದ್ದಿತು. ಅನಂತರವೂ ಸಾವಿರಾರು ಜನರು ಪ್ರತೀದಿನ ಈ ಗೂಳಿಯನ್ನು ನೋಡಲು ಬರತೊಡಗಿದರು. ಕಾಮನ್‌ವೆಲ್ತ್‌ ಗೇಮ್ಸ್‌ ಮುಗಿದು ಐದು ತಿಂಗಳಾದರೂ, ಜನರು ಗೂಳಿಯ ಬಗ್ಗೆ ಮಾತಾಡುವುದನ್ನು ನಿಲ್ಲಿಸದಾದರು. ಇದರ ಭಾಗಗಳನ್ನು ಬಿಚ್ಚಿ ಇಡಬೇಕೆಂದು ಹೊರಟಾಗ, ಜನರು ಅದನ್ನು ಗಂಟಾಘೋಷವಾಗಿ ವಿರೋಧಿಸಿದರು. ಅವರ ಕರೆಯನ್ನು ಮನ್ನಿಸಿದ ಮೇಯರ್‌, ಅದನ್ನು ಶಾಶ್ವತವಾಗಿ ಉಳಿಸಿಕೊಳ್ಳುವ ತೀರ್ಮಾನ ತೆಗೆದುಕೊಂಡರು. ಆದರೆ ಅದು ಬಹುಕಾಲ ಇರಬೇಕೆಂದಿದ್ದರೆ, ಅದನ್ನು ಮಾರ್ಪಾಡುಗೊಳಿಸಬೇಕಿತ್ತು. ಐವತ್ತು ಜನ ಕಲಾವಿದರು, ಅಭಿಯಂತರುಗಳು ಇದಕ್ಕಾಗಿ ಮತ್ತೆ ಕೆಲಸ ಮಾಡಿದರು. ಜುಲೈ 26, 2023ರಂದು ಅದನ್ನು ಬರ್ಮಿಂಗ್‌ಹ್ಯಾಮ್‌ನ ನ್ಯೂ ಸ್ಟ್ರೀಟ್‌ ರೈಲ್ವೇ ನಿಲ್ದಾಣದಲ್ಲಿ ಮರು ಉದ್ಘಾಟನೆ ಮಾಡಲಾಯಿತು.

ಹತ್ತು ಮೀಟರ್‌ (33 ಅಡಿ) ಎತ್ತರವಿರುವ, 2.5 ಟನ್‌ ತೂಕದ ಬೃಹತ್‌ ಗಾತ್ರದ ಈ ಗೂಳಿ ತೂರಿ ಬರುವಷ್ಟು ಎತ್ತರಕ್ಕೆ ನಿಲ್ದಾಣದ ಯಾವ ಬಾಗಿಲುಗಳೂ ಇಲ್ಲ. ಹಾಗಾಗಿ ಅದನ್ನು ಬಿಚ್ಚಿ ತಂದು ಮತ್ತೆ ನಿರ್ಮಿಸುವ ಕೆಲಸವನ್ನು ತೆರೆ-ಮರೆಯಲ್ಲಿ ನಿಲ್ದಾಣದ ಒಳಗೇ ನಡೆಸಲಾಯಿತು. ಅದರ ಸ್ವರೂಪ ಮತ್ತೂ ಆಕರ್ಷಕವಾಯಿತು.

ಅದಕ್ಕೊಂದು ಹೆಸರು ಬೇಕೆಂದಾಗ, ಬರ್ಮಿಂಗ್‌ಹ್ಯಾಮ್‌ ನಗರದ ಯಾವ ಪ್ರಸಿದ್ಧ ವ್ಯಕ್ತಿಯ ಹೆಸರನ್ನು ಇಡಬಹುದು ಎಂದು ಸೂಚಿಸಲು ಜನತೆಗೆ ಕರೆ ಮಾಡಲಾಗಿತ್ತು. ಜನರು ಸೂಚಿಸಿದ್ದು ಅದೇ ಊರಿನಲ್ಲಿ ಹುಟ್ಟಿ ಬೆಳೆದಿದ್ದ “ಬ್ಲಾಕ್‌ ಸಬ್ಬತ್‌’ ಬ್ಯಾಂಡ್‌ನ‌ ಮುಖ್ಯ ರಾಕ್‌ ಸ್ಟಾರ್‌ ಓಝೀ ಓಸ್ಬೋರ್ನ ನ ಹೆಸರನ್ನು ಆಯ್ಕೆ ಮಾಡಿದರು. ಹೀಗಾಗಿ “ಓಝೀ ಗೂ’ ಎಂಬ ಹೊಸ ಹೆಸರಿನಲ್ಲಿ, ನಗರದ ರೈಲ್ವೇ ನಿಲ್ದಾಣವನ್ನು ಇದು ತನ್ನ ಶಾಶ್ವತ ಮನೆಯನ್ನಾಗಿಸಿಕೊಂಡು ನಿಂತಿದೆ. ಪ್ರತೀ ದಿನ ಬೆಳಗ್ಗೆ 8.15ರಿಂದ ರಾತ್ರಿ 8.15ರ ವರೆಗೆ ಗಂಟೆಗೊಮ್ಮೆ ಇದು ಜೀವ ತಾಳುತ್ತದೆ. ತನ್ನ ತಲೆಯನ್ನು ಆಡಿಸಿ, ಬಾಲವನ್ನು ಬೀಸುತ್ತದೆ. ಆ ರೈಲ್ವೇ ನಿಲ್ದಾಣಕ್ಕೆ ಬರುವ ಜನರನ್ನು ಆದರದಿಂದ ಸ್ವಾಗತಿಸುತ್ತದೆ.

ಆದರೆ “ಓಝೀ’ ಎನ್ನುವ ಹೆಸರಿಗೆ ಮತ್ತೊಂದು ಕಥೆಯಿದೆ. ಸಾಮಾನ್ಯವಾಗಿ ಆಸ್ವಾಲ್ಡ್‌ ಅಥವಾ ಆಸ್ಕರ್‌ ಎನ್ನುವ ಹುಡುಗರ ಹೆಸರನ್ನು ಮೊಟಕುಗೊಳಿಸಿ ಓಝೀ ಎಂದು ಕರೆಯುವ ವಾಡಿಕೆ ಇಂಗ್ಲಿಷರಲ್ಲಿದೆ. ಆದರೆ ಈ ಪ್ರಸಿದ್ಧ ಗಾಯಕನ ಹೆಸರಲ್ಲಿ ಓಝೀ ಪದ ಸೇರಿದ್ದು ಒಂದು ವಿಶೇಷ. ಏಕೆಂದರೆ ಆತನ ಹೆಸರು ಆಸ್ವಾಲ್ಡ್‌ ಅಥವಾ ಆಸ್ಕರ್‌ ಎರಡೂ ಆಗಿರಲಿಲ್ಲ! ಓಝೀ ಹೆಸರಿನಿಂದ ಜಗದ್ವಿಖ್ಯಾತನಾದ ಓಝೀ ಓಸಬೋರ್ನನ ನಿಜವಾದ ಹೆಸರು, ಜಾನ್‌ ಮೈಕೇಲ್‌ ಓಸಬೋರ್ನ್. ಅವನ ಹೆಸರಿಸಲ್ಲಿ “ಓಝಿ’ ಎನ್ನುವ ಪದ ಸೇರಿದ್ದರ ಹಿಂದೆ ಒಂದು ವಿಷಾದವಿದೆ.

ಈತ 6 ಮಕ್ಕಳಲ್ಲಿ ಒಬ್ಬನಾಗಿದ್ದ. ಬಡತನವಿದ್ದ ಸಂಸಾರದ ಹುಡುಗನಿಗೆ ಡಿಸ್ಲೆಕ್ಸಿಯಾ (ಗ್ರಹಣ ದೋಷಗಳ)ದ ತೊಂದರೆಯಿತ್ತು. ಅವನನ್ನು ಚುಡಾಯಿಸುತ್ತಿದ್ದ ಇತರ ಮಕ್ಕಳು ಅವನನ್ನು ಆಡಿಕೊಂಡು “ಓಝೀ’ ಎಂದು ಗೇಲಿ ಮಾಡುತ್ತಿದ್ದರು. ಜಾನ್‌ ಎನ್ನುವ ಈ ಹುಡುಗ, ಅದನ್ನು ಸಹಿಸಿಕೊಂಡದ್ದೇ ಅಲ್ಲದೇ ಅದನ್ನೇ ತನ್ನ ಹೆಸರೆಂದು ಒಪ್ಪಿಕೊಂಡುಬಿಟ್ಟ. ಮುಂದೆ, ಆತ ತನ್ನ ತೊಂದರೆಯನ್ನು ಸಂಭಾಳಿಸಿಕೊಂಡು ಮುಂದೆ ಬಂದ. ತನ್ನದೇ ಮ್ಯೂಸಿಕ್‌ ಬ್ಯಾಂಡ್‌ನ‌ ಮೂಲಕ ಅತ್ಯಂತ ಪ್ರಖ್ಯಾತನಾದ, ಕೋಟ್ಯಾಧಿಪತಿಯಾದ.

ಎಲ್ಲರೂ ಆತನ ನಿಜವಾದ ಹೆಸರೇ ಓಝೀ ಓಸ್ಬೋರ್ನ ಎಂದುಕೊಳ್ಳುವ ಮಟ್ಟಕ್ಕೆ ಅದು ಜನಜನಿತವಾಗಿದೆ. ಜೀವನದ ಎಳೆಯ ಹಂತದಲ್ಲೇ ಆತನ ಮೇಲೆ ನಡೆದ ಬುಲ್ಲಿಯಿಂಗ್‌ನ್ನು ಎದುರಿಸಿ ಗೆದ್ದ “ರೇಜಿಂಗ್‌ ಬುಲ್‌’ನ ಕಥೆಯೇ “ಓಝೀ, ದಿ ಬುಲ್‌’ ಹೇಳುತ್ತಿರುವಂತೆ ಭಾಸವಾಗುತ್ತದೆ. 75 ವರ್ಷದ ಈತ ಈಗಲೂ ಬದುಕಿದ್ದಾನೆ. ಕೆಲವು ನರದೋಷದ ಖಾಯಿಲೆಗಳ ಕಾರಣ ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ. ಈ ಗೂಳಿಯನ್ನು ಆತನ ಹೆಂಡತಿ ಶಾರನ್‌ ಓಸ್ಬಾರ್ನ್ ಉದ್ಘಾಟನೆ ಮಾಡಿ, ಜೀವಿತಾವಧಿಯಲ್ಲಿ ಆತನಿಗೆ ದೊರೆತ ಪ್ರೀತಿ ಮತ್ತು ಗೌರವದ ಪ್ರತೀಕ ಇದೆಂಬ ಹೇಳಿಕೆ ನೀಡಿದಳು.

*ಡಾ| ಪ್ರೇಮಲತಾ ಬಿ., ಲಿಂಕನ್‌

ಟಾಪ್ ನ್ಯೂಸ್

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ

ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ

Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ

Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ

ಕ್ಲೀವ್‌ ಲ್ಯಾಂಡ್‌: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ

ಕ್ಲೀವ್‌ ಲ್ಯಾಂಡ್‌: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ

Baharain1

ಮೊಗವೀರ್ಸ್‌ ಬಹ್ರೈನ್‌ ಪ್ರೊ ಕಬಡ್ಡಿ;ತುಳುನಾಡ್‌ ತಂಡ ಪ್ರಥಮ,ಪುನಿತ್‌ ಬೆಸ್ಟ್‌ All ರೌಂಡರ್‌

ಕ್ಯಾಲಿಫೋರ್ನಿಯ: ನಾಡೋತ್ಸವದಲ್ಲಿ ಚಿಣ್ಣರ ಚಿಲಿಪಿಲಿ, ಸಾಂಸ್ಕೃತಿಕ ಪ್ರದರ್ಶನ

ಕ್ಯಾಲಿಫೋರ್ನಿಯ: ನಾಡೋತ್ಸವದಲ್ಲಿ ಚಿಣ್ಣರ ಚಿಲಿಪಿಲಿ, ಸಾಂಸ್ಕೃತಿಕ ಪ್ರದರ್ಶನ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.