ಪಚ್ಚನಾಡಿ: ಸಹಜ ಸ್ಥಿತಿಗೆ ಬರಲು ಬೇಕು ನಾಲ್ಕೈದು ದಿನ
ಅಗ್ನಿಶಾಮಕ ದಳದಿಂದ ಮುಂದುವರಿದ ಕಾರ್ಯಾಚರಣೆ
Team Udayavani, Jan 9, 2023, 7:00 AM IST
ಪಚ್ಚನಾಡಿ: ಇಲ್ಲಿನ ತ್ಯಾಜ್ಯ ವಿಲೇವಾರಿ ಪ್ರದೇಶದಲ್ಲಿ ಬೆಂಕಿ ಬಿದ್ದ ಪರಿಣಾಮ ತ್ಯಾಜ್ಯದ ಒಳಗೆ ಹೊಗೆಯಾ ಡುತ್ತಿರುವ ಕೆಂಡವನ್ನು ನಂದಿಸುವ ನಿಟ್ಟಿನಲ್ಲಿ ಆಗ್ನಿಶಾಮಕ ದಳದ ಕಾರ್ಯಾಚರಣೆ ರವಿವಾರವೂ ಮುಂದುವರಿದಿದೆ. ಏಳುತ್ತಿ ರುವ ಹೊಗೆ ಸಂಪೂರ್ಣವಾಗಿ ಸಹಜ ಸ್ಥಿತಿಗೆ ಬರಲು ಇನ್ನೂ ಕನಿಷ್ಠ ನಾಲ್ಕೈದು ದಿನ ಬೇಕಾಗಬಹುದು ಎನ್ನುತ್ತಾರೆ ಅಗ್ನಿಶಾಮಕ ದಳದ ಸಿಬಂದಿ.
ಕದ್ರಿ ಮತ್ತು ಪಾಂಡೇಶ್ವರ ಅಗ್ನಿ ಶಾಮಕ ದಳದ ವಾಹನದೊಂದಿಗೆ ಇತರ ಸಂಸ್ಥೆಗಳಿಗೆ ಸೇರಿದ ಮೂರು ಅಗ್ನಿ ಶಾಮಕ ವಾಹನಗಳು, ಸಿಬಂದಿ ಬೆಂಕಿ ನಂದಿಸುವಲ್ಲಿ ತೊಡಗಿಸಿಕೊಂಡಿದ್ದಾರೆ. ಆಗಾಗ್ಗೆ ಆವರಿಸುತ್ತಿರುವ ದಟ್ಟವಾದ ಹೊಗೆ ಕಾರ್ಯಾಚರಣೆಗೆ ಅಡ್ಡಿ ಪಡಿಸುತ್ತಿದೆ. ಬೆಳಗ್ಗಿನ ಹೊತ್ತು ಹೊಗೆ ಪಶ್ಚಿಮ ದಿಕ್ಕಿನತ್ತ ಚಲಿಸಿದರೆ, ಮಧ್ಯಾಹ್ನ ಬಳಿಕ ಪೂರ್ವಕ್ಕೆ ಬರುತ್ತದೆ. ಇದರಿಂದ ಕಾರ್ಯಾಚರಣೆ ನಡೆಸಲು ಸಾಧ್ಯವಾಗುತ್ತಿಲ್ಲ.
ಸ್ಥಳೀಯ ನೀರಿನ ಮೂಲಕಗಳಿಂದ ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಮುಂದುವರಿಸಲಾಗಿದ್ದು, ಈಗಾಗಲೇ ಹಲವು ಲಕ್ಷ ಲೀಟರ್‌ಗಳನ್ನು ನೀರನ್ನು ವ್ಯಯಿಸಲಾಗಿದೆ.
ಸುತ್ತಮುತ್ತಲಿನ ಪ್ರದೇಶದಲ್ಲಿ ಹೊಗೆಯ ವಾತಾವರಣ ರವಿವಾರವೂ ಕಂಡು ಬಂದಿದ್ದು, ನಿರಂತರವಾಗಿ ಈ ಕಲುಷಿತ ಹೊಗೆ ಸೇವನೆ ಸ್ಥಳೀಯರಲ್ಲಿ ಆತಂತಕ್ಕೆ ಕಾರಣವಾಗಿದೆ. ಶೀಘ್ರ ಬೆಂಕಿಯನ್ನು ನಂದಿಸುವ ನಿಟ್ಟಿನಲ್ಲಿ ಸಂಬಂಧಪಟ್ಟವರು ಮುಂದಾಗಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಮಂಗಳೂರು ಪಾಲಿಕೆ ವಲಯ ಆಯುಕ್ತ ಶಬರಿನಾಥ್ ರೈ, ಆರೋಗ್ಯ ಅಧಿಕಾರಿ ಡಾ| ಮಂಜಯ್ಯ ಶೆಟ್ಟಿ,, ಆರೋಗ್ಯ ವಿಭಾಗದ ಅಧಿಕಾರಿಗಳು ರವಿವಾರ ಭೇಟಿ ನೀಡಿ ಪರಿಶೀಲಿಸಿದರು.
ಕಣ್ಣುರಿ, ಕಫ, ಚರ್ಮದಲ್ಲಿ ತುರಿಕೆ
ಮಾಸ್ಕ್ ಧರಿಸಿ ಕಾರ್ಯಾಚರಣೆ ಮಾಡಲೂ ಸಾಧ್ಯವಾಗುತ್ತಿಲ್ಲ. ಹೊಗೆ ಯೊಂದ ಕಣ್ಣು ಉರಿ ಬರು ತ್ತಿದ್ದು, ಕಪ್ಪು ಕಫ ಹೊರಬರುತ್ತದೆ. ಚರ್ಮ ದಲ್ಲಿಯೂ ತುರಿಕೆ ಕಂಡು ಬರುತ್ತಿದೆ. ಹೊಗೆಯೊಂದಿಗೆ ಬರುವ ಘಾಟು ವಾಸನೆಯಿಂದ ಊಟ ಮಾಡಲೂ ಸಾಧ್ಯವಾಗುತ್ತಿಲ್ಲ. ಡ್ನೂಟಿ ಮುಗಿಸಿ ಹೋದರೂ ವಾಸನೆಯೇ ಮೂಗಿಗೆ ಬಡಿಯುತ್ತಿದೆ. ಕೆಲವು ದಿನ ಇಲ್ಲಿಯೇ ಇದ್ದರೆ ಕಾಯಿಲೆ ಬೀಳುವುದು ಖಚಿತ ಎನ್ನುವುದು ಅಗ್ನಿಶಾಮಕ ದಳದ ಸಿಬಂದಿಯ ಮಾತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ
ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು
Gurupura: ನಾಡಕಚೇರಿ ಕಟ್ಟಡ ಉದ್ಘಾಟನೆಗೆ ಸಿದ್ಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.