ಪದ್ಮಶ್ರೀ ಪುರಸ್ಕಾರಗೊಂಡ ಹಾಜಬ್ಬ ಕಟ್ಟಿ ಬೆಳೆಸಿದ ಶಾಲೆ ಹಾಗೂ ಮನೆಯಲ್ಲಿ ಸಂಭ್ರಮ
Team Udayavani, Nov 8, 2021, 7:20 PM IST
ಉಳ್ಳಾಲ : ಅಕ್ಷರ ಸಂತ ಹರೇಕಳ ಹಾಜಬ್ಬ ಅವರು ದೆಹಲಿಯಲ್ಲಿ ದೇಶದ ಅತ್ಯುನ್ನತ ನಾಲ್ಕನೇಯ ಪ್ರತಿಷ್ಠಿತ ಪದ್ಮಶ್ರೀ ಪುರಸ್ಕಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಪಡೆಯುತ್ತಿದ್ದಂತೆ ಹಾಜಬ್ಬ ಅವರ ಶ್ರಮದಿಂದ ಅಭಿವೃದ್ಧಿಯಾದ ನ್ಯೂಪಡು³ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳು ಹಾಜಬ್ಬ ಪ್ರಶಸ್ತಿ ಪಡೆಯುತ್ತಿರುವ ವಿಡಿಯೋ ಚಿತ್ರಣವನ್ನು ಡಿಜಿಟಲ್ ಪರದೆಯಲ್ಲಿ ವೀಕ್ಷಿಸಿ ಸಂಭ್ರಮಿಸಿದರೆ, ಹಾಜಬ್ಬ ಅವರ ಮನೆಯಲ್ಲಿ ಮೊಬೈಲ್ ಮೂಲಕ ಪತ್ನಿ ಅವರು ಪ್ರಶಸ್ತಿ ಸ್ವೀಕರಿಸುವ ಚಿತ್ರಣವನ್ನು ವೀಕ್ಷಣೆ ಮಾಡಿದರು.
ಸರಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಶಾಲಾ ಶಿಕ್ಷಕರು, ಹರೇಕಳ ಗ್ರಾಮದ ಅಧ್ಯಕ್ಷ ಬದ್ರುದ್ದೀನ್, ಸತ್ತಾರ್ ಸೇರಿದಂತೆ ಸ್ಥಳೀಯರು ಪ್ರಶಸ್ತಿ ಪ್ರಧಾನ ನಡೆಯುವ ವೇಳೆ ಬ್ಯಾಂಡ್ ಹಾಗೂ ಚಪ್ಪಾಳೆ ಮೂಲಕ ಹಾಜಬ್ಬರನ್ನು ಹಾಡಿ ಹೊಗಳುವ ಮೂಲಕ ಗೌರವ ಸಮರ್ಪಿಸಿದರು. ಮನೆಯಲ್ಲಿ ಪತ್ನಿ , ಮೂವರು ಮಕ್ಕಳು ಹಾಗೂ ಸಂಬಂಧಿಕರು ಮೊಬೈಲ್ ಮೂಲಕ ಮನೆ ಯಜಮಾನ ಪದ್ಮಶ್ರೀ ಪುರಸ್ಕಾರ ಪಡೆಯುವುದನ್ನು ನೋಡಿ ಸಂಭ್ರಮಿಸಿದರು.
ಶಾಲಾ ವಿದ್ಯಾರ್ಥಿಗಳಿಗೆ ಹರೇಕಳ ಹಾಜಬ್ಬನವರು ಪದ್ಮಶ್ರೀ ಪುರಸ್ಕಾರ ಪಡೆಯುವ ವೀಡಿಯೋವನ್ನು ಪ್ರಾಜೆಕ್ಟರ್ ಮೂಲಕ ವೀಕ್ಷಿಸಲು ಅವಕಾಶ ಮಾಡಿಕೊಡಲಾಯಿತು. ಪತ್ನಿ ಮೈಮುನಾ , ಪುತ್ರ ಇಸ್ಮಾಯಿಲ್ ಹಾಗೂ ಸಂಬಂಧಿ ನಾಸಿರ್ ಹಾಗೂ ಇಬ್ಬರು ಪುತ್ರಿಯರು ದೇಶದ ಅತ್ಯುನ್ನತ ಪ್ರಶಸ್ತಿಯನ್ನು ಪಡೆಯುವುದನ್ನು ನೋಡಿ ಆನಂದಿಸಿದರು.
ಇದನ್ನೂ ಓದಿ : ಅಪ್ಪು ಪುಟ್ಟ ಅಭಿಮಾನಿಯಿಂದ ನೇತ್ರದಾನ ಮಾಡುವ ಸಂದೇಶ ಮತ್ತು ಶಪಥ
ಶಾಲಾ ಮುಖ್ಯ ಶಿಕ್ಷಕ ಲಕ್ಷ್ಮಣ್ ಪೊದುವಾಳ್ ಮಾತನಾಡಿ ಹಾಜಬ್ಬರವರು ಪದ್ಮಶ್ರೀ ಪುರಸ್ಕಾರ ಪಡೆದಿರುವುದು ಈ ನಾಡಿಗೆ ಸಂದ ಗೌರವ ಇದರಿಂದ ಶಾಲೆಯೊಂದಿಗೆ ಇಲ್ಲಿ ಕಲಿತ ವಿದ್ಯಾರ್ಥಿಗಳು, ಮತ್ತು ಇಲ್ಲಿ ಕಾರ್ಯ ನಿರ್ವಹಿಸಿದ ಶಿಕ್ಷಕರಿಗೆ ಒಂದು ಹೆಮ್ಮೆಯ ಸಂಗತಿ ಎಂದರು.
ಹರೇಕಳ ಗ್ರಾಮ ಪಂಚಾಯತ್ ಅಧ್ಯಕ್ಷ ಬದ್ರುದ್ದೀನ್ ಮಾತನಾಡಿ ಶಾಲೆಯನ್ನೇ ಆಸ್ತಿಯನ್ನಾಗಿ ಮಾಡಿರುವ ಹಾಜಬ್ಬ ಅವರಿಗೆ ಪ್ರಶಸ್ತಿ ಸಂದಿರುವುದು ಹರೇಕಳ ಗ್ರಾಮದ ಹೆಸರನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪಸರಿಸುವಂತೆ ಮಾಡಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.