![Plane flips: ಲ್ಯಾಂಡಿಂಗ್ ವೇಳೆ ಪಲ್ಟಿ ಹೊಡೆದ ವಿಮಾನ… ಹಲವರಿಗೆ ಗಾಯ](https://www.udayavani.com/wp-content/uploads/2025/02/delta-plane-415x234.jpg)
![Plane flips: ಲ್ಯಾಂಡಿಂಗ್ ವೇಳೆ ಪಲ್ಟಿ ಹೊಡೆದ ವಿಮಾನ… ಹಲವರಿಗೆ ಗಾಯ](https://www.udayavani.com/wp-content/uploads/2025/02/delta-plane-415x234.jpg)
Team Udayavani, Jan 30, 2025, 2:58 AM IST
ಪಡುಬಿದ್ರಿ: ತೆಂಕ ಎರ್ಮಾಳು ರಾಷ್ಟ್ರೀಯ ಹೆದ್ದಾರಿ 66ರ ಸಂದು ದಾಂತಿ ಗರಡಿ ಎದುರು ಎರಡು ಕಾರು ಮತ್ತು ಶಾಲಾ ವಾಹನದ ನಡುವೆ ಸಂಭವಿಸಿದ ಸರಣಿ ಅಪಘಾತದಲ್ಲಿ ಶಾಲಾ ಬಸ್ ಮಗುಚಿ ಬಿದ್ದ ಘಟನೆ ಬುಧವಾರ ಸಂಜೆ ಸಂಭವಿಸಿದೆ. ಶಾಲಾ ವಾಹನದಲ್ಲಿ ವಿದ್ಯಾರ್ಥಿಗಳು ಇಲ್ಲದ ಕಾರಣ ಹೆಚ್ಚಿನ ಅನಾಹುತ ಸಂಭವಿಸಿಲ್ಲ.
ಉಡುಪಿಯಿಂದ ಮಂಗಳೂರು ಕಡೆ ಸಾಗುತ್ತಿದ್ದ ರಿಟ್ಜ್ ಕಾರೊಂದು ಸಂಜೆಯ ವೇಳೆ ರಸ್ತೆ ಬದಿ ನಡೆದು ಹೋಗುತ್ತಿದ್ದ ಬಿಜಾಪುರ ಮೂಲದ ಮಹಿಳೆ ಮಹಾದೇವಿ ಅವರಿಗೆ ಢಿಕ್ಕಿ ಹೊಡೆದಿತ್ತು. ಬಳಿಕ ಡಿವೈಡರ್ ದಾಟಿದ್ದ ಕಾರು ಮಂಗಳೂರು-ಉಡುಪಿ ಕಡೆ ಸಾಗುವ ಹೆದ್ದಾರಿ ಮಧ್ಯೆ ಪಲ್ಟಿಯಾಗಿತ್ತು.
ಇದೇ ಸಂದರ್ಭ ಶಾಲಾ ವಿದ್ಯಾರ್ಥಿಗಳನ್ನು ಮನೆಗೆ ತಲುಪಿಸಿ ಕಾಪು ಚಂದ್ರನಗರ ಕಡೆ ಸಾಗುತ್ತಿದ್ದ ಕ್ರೆಸೆಂಟ್ ಇಂಟರ್‌ನ್ಯಾಷನಲ್ ಶಾಲಾ ವಾಹನಕ್ಕೆ ಕಾರು ಢಿಕ್ಕಿಯಾಗಿತ್ತು. ಶಾಲಾ ವಾಹನದ ಚಾಲಕ ತತ್‌ಕ್ಷಣ ಬ್ರೇಕ್ ಹಾಕಿದ್ದು, ಈ ವೇಳೆಗೆ ನಿಯಂತ್ರಣ ತಪ್ಪಿದ ಶಾಲಾ ವಾಹನ ಡಿವೈಡರ್ ದಾಟಿ ಉಡುಪಿ-ಮಂಗಳೂರು ಕಡೆ ಸಾಗುವ ಹೆದ್ದಾರಿಯಲ್ಲಿ ಮುಗುಚಿದೆ. ಇದೇ ಸಂದರ್ಭ ಮಂಗಳೂರು ಕಡೆಯಿಂದ ಉಡುಪಿಯತ್ತ ಸಾಗುತ್ತಿದ್ದ ಇನ್ನೊಂದು ಹ್ಯುಂಡೈ ಅಲ್ಕಜಾರ್ ಕಾರೂ ಕೂಡಾ ಎದುರಲ್ಲಿದ್ದ ಶಾಲಾ ವಾಹನದಿಂದಾಗಿ ಅಪಘಾತಕ್ಕೀಡಾಗಿದೆ.
ಅಪಘಾತದಲ್ಲಿ ಮಹಿಳೆಯ ಕೈಗೆ ಗಾಯಗಳಾಗಿವೆ. ಅವರು ಪಡುಬಿದ್ರಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ರಿಟ್ಜ್ ಕಾರಿನ ಚಾಲಕನ ಕಾಲಿಗೆ ತೀವ್ರತರ ಗಾಯವಾಗಿದ್ದು, ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಾಲಾ ವಾಹನದ ನಿರ್ವಾಹಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ಪಡುಬಿದ್ರಿ ಠಾಣಾ ಎಎಸ್‌ಐ ಸುದೇಶ್ ಶೆಟ್ಟಿ ಘಟನ ಸ್ಥಳಕ್ಕೆ ಭೇಟಿಯಿತ್ತು ಪರಿಶೀಲಿಸಿದ್ದಾರೆ. ಸಾರ್ವಜನಿಕರು ಸುಗಮ ವಾಹನ ಸಂಚಾರಕ್ಕೆ ಪೊಲೀಸರೊಂದಿಗೆ ಸಹಕರಿಸಿದರು. ಟೋಲ್‌ಗೇಟ್‌ನಲ್ಲಿನ ಕ್ರೇನ್ ಮೂಲಕ ಬಸ್ಸನ್ನು ಮೇಲಕ್ಕೆತ್ತಲಾಗಿದೆ.
Udupi: ಗ್ರಾಮೀಣ ಭಾಗದ ಕಾಲುಸಂಕ 3 ವರ್ಷಗಳಲ್ಲಿ ಪೂರ್ಣ: ಸಚಿವ ಸತೀಶ್ ಜಾರಕಿಹೊಳಿ
Udupi: ಸರಕಾರಿ ಶಾಲೆಗಳ ಅಭಿವೃದ್ಧಿಗೆ ಮುಂದಾಗಿ: ಯಶ್‌ಪಾಲ್
ಸಿಎಸ್‌ಟಿ – ಮಂಗಳೂರು ಎಕ್ಸ್‌ಪ್ರೆಸ್ ರೈಲಲ್ಲಿ ಕಳವು ಪ್ರಕರಣ ಮತ್ತೆ ಕಾಪುವಿಗೆ ವರ್ಗಾವಣೆ
Udupi: ಗೀತಾರ್ಥ ಚಿಂತನೆ-190: ಎಲ್ಲ ತಿಳಿದಿದೆ ಎಂಬ ಪ್ರಜ್ಞೆ ಅಪಾಯಕಾರಿ
Manipal: ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ: ಫೆ. 22-26: “ಶಿವಪಾಡಿ ವೈಭವ’
Plane flips: ಲ್ಯಾಂಡಿಂಗ್ ವೇಳೆ ಪಲ್ಟಿ ಹೊಡೆದ ವಿಮಾನ… ಹಲವರಿಗೆ ಗಾಯ
Social Media Virals: ಸೋಶಿಯಲ್ ಮೀಡಿಯಾ ತಂದುಕೊಟ್ಟ “ಸ್ಟಾರ್ ಪಟ್ಟ’
Congress Talk Fight: ಡಿಸಿಎಂ ಡಿ.ಕೆ.ಶಿವಕುಮಾರ್‌ಗೇ ಸಚಿವ ಕೆ.ಎನ್.ರಾಜಣ್ಣ ಸಡ್ಡು!
ನಾವು ಕಾನ್ವೆಂಟ್‌ನಲ್ಲಿ ಓದಿದವರು ಕನ್ನಡದ ಬಗ್ಗೆ ತಿಳಿವಳಿಕೆ ಇಲ್ಲ: ಶಿಕ್ಷಣ ಸಚಿವ ಮಧು
Tragedy: ಡೆ *ತ್‌ನೋಟ್ ಬರೆದಿಟ್ಟು ಪುತ್ರಿಯ ಕೊ*ದು ಗ್ರಾ.ಪಂ.ಅಧ್ಯಕ್ಷೆಯೂ ಆತ್ಮಹ*ತ್ಯೆ!
You seem to have an Ad Blocker on.
To continue reading, please turn it off or whitelist Udayavani.