Padyatra in Delhi: ದಿಲ್ಲಿ ಮಾಜಿ ಸಿಎಂ ಕೇಜ್ರಿ ಮೇಲೆ ದ್ರವ ಎರಚಿ ವ್ಯಕ್ತಿಯ ದಾಳಿ, ಸೆರೆ
ಪಕ್ಷದ ಪರ ಪಾದಯಾತ್ರೆ ವೇಳೆ ನಡೆ ಘಟನೆಯ ವಿಡಿಯೋ ನೋಡಿ, ಬಿಜೆಪಿ ಕಾರ್ಯಕರ್ತನಿಂದ ಕೃತ್ಯ: ಆಪ್
Team Udayavani, Dec 1, 2024, 7:25 AM IST
ಹೊಸದಿಲ್ಲಿ: ಪಕ್ಷದ ಪರವಾಗಿ ಪಾದಯಾತ್ರೆ ನಡೆಸುತ್ತಿದ್ದ ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಮೇಲೆ ವ್ಯಕ್ತಿಯೊಬ್ಬ ದ್ರವವೊಂದನ್ನು ಎರಚಿರುವ ಘಟನೆ ದಕ್ಷಿಣ ದೆಹಲಿಯ ಮಾಳವೀಯ ನಗರದಲ್ಲಿ ನಡೆದಿದೆ.
ಆರೋಪಿಯನ್ನು ಅಶೋಕ್ ಝಾ ಎಂದು ಗುರುತಿಸಲಾಗಿದ್ದು ಆತನ್ನು ಕೇಜ್ರಿವಾಲ್ ಬೆಂಬಲಿಗರು ಥಳಿಸಿ ಪೊಲೀಸರ ವಶಕ್ಕೊಪ್ಪಿಸಿದ್ದಾರೆ. ಘಟನೆಯನ್ನು ಖಂಡಿಸಿರುವ ಆಪ್, “ಬಿಜೆಪಿ ಆಡಳಿತಾವಧಿಯಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ. ರಾಷ್ಟ್ರ ರಾಜಧಾನಿಯಲ್ಲಿ ಮಾಜಿ ಸಿಎಂ ಸುರಕ್ಷಿತವಾಗಿಲ್ಲ ಎಂದಾದರೆ ಶ್ರೀ ಸಾಮಾನ್ಯರ ಪಾಡೇನು ಎಂದು ಪ್ರಶ್ನಿಸಿದೆ.
ಏತನ್ಮಧ್ಯೆ ದೆಹಲಿ ಸಿಎಂ ಅತಿಶಿ, ಬಂಧಿತ ಆರೋಪಿಯು ಬಿಜೆಪಿ ಕಾರ್ಯಕರ್ತ ಎಂದು ಆರೋಪಿಸಿದ್ದಾರೆ. ಮತ್ತು ಸಚಿವ ಸೌರಭ್ ಭಾರದ್ವಾಜ್, ಆರೋಪಿಯು ಕೇಜ್ರಿವಾಲ್ ಮೇಲೆ ಸ್ಪಿರಿಟ್ ಎಸೆದಿದ್ದು ಅವರನ್ನು ಜೀವಂತ ಸುಡಲು ಮುಂದಾಗಿದ್ದ ಎಂದು ಗಂಭೀರ ಆರೋಪ ಮಾಡಿದ್ದಾರೆ.
Blame game begins between AAP and BJP as man throws liquid at Arvind Kejriwal in Delhi pic.twitter.com/kWe7vPBN97
— NDTV (@ndtv) November 30, 2024
ಕಳೆದೊಂದು ತಿಂಗಳಿನಲ್ಲಿ ಕೇಜ್ರಿವಾಲ್ ವಿರುದ್ಧ ಅ.25ರಂದು ವಿಕಾಸ್‌ಪುರಿಯಲ್ಲಿ, ನ.27ರಂದು ನಂಗ್ಲೋಯಿಯಲ್ಲಿ, ಮತ್ತು ನ.30ರಂದು ಮಾಳವೀಯನಗರದಲ್ಲಿ ಒಟ್ಟು 3 ಬಾರಿ ದಾಳಿ ನಡೆದಿದೆ ಎಂದು ಆಪ್ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra; ಯಾರು ಮಹಾ ಸಿಎಂ? ಮಹತ್ವದ ಮಾಹಿತಿ ನೀಡಿದ ಅಜಿತ್ ಪವಾರ್
Kerala: ಶಬರಿಮಲೆಯ ಮಾಳಿಗಪುರದಲ್ಲಿ ತೆಂಗಿನ ಕಾಯಿ ಒಡೆಯುವಂತಿಲ್ಲ: ಹೈಕೋರ್ಟ್
Insult Flag: ಬಾಂಗ್ಲಾದೇಶಿಯರಿಗೆ ಚಿಕಿತ್ಸೆ ನೀಡಲ್ಲ: ಭಾರತದ ಹಲವು ಆಸ್ಪತ್ರೆಗಳ ನಿರ್ಧಾರ
Provident Fund: ಎಟಿಎಂನಿಂದಲೂ ಭವಿಷ್ಯ ನಿಧಿ ಮೊತ್ತ ವಿಥ್‌ಡ್ರಾ ಮಾಡಲು ಅವಕಾಶ?
Thirupathi: ದೇಗುಲದಲ್ಲಿ ಇನ್ನು ದ್ವೇಷಪೂರಿತ ಹೇಳಿಕೆ ನೀಡುವಂತಿಲ್ಲ: ಟಿಟಿಡಿ
MUST WATCH
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಹೊಸ ಸೇರ್ಪಡೆ
Gundlupete: ಆರು ಜೀವಂತ ಆಮೆ, ಶ್ರೀಗಂಧದ ತುಂಡು ಸಾಗಿಸುತ್ತಿದ್ದ ಆರೋಪಿ ಬಂಧನ
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
Champions Trophy: ಹೈಬ್ರಿಡ್ ಮಾದರಿ ಕೂಟ ಆಯೋಜನೆಗೆ ಮೂರು ಷರತ್ತು ಹಾಕಿದ ಪಾಕ್: ಏನದು?
Sandalwood: ಇಂದು ಮೇರು ನಿರ್ದೇಶಕ ಪುಟ್ಟಣ್ಣ ಕಣಗಾಲ್ ಹುಟ್ಟುಹಬ್ಬ
Bellary; ಕರ್ನಾಟಕ- ಆಂಧ್ರ ಗಡಿಯಲ್ಲಿ ಭೀಕರ ಅಪಘಾತ: ವೈದ್ಯರು ಸೇರಿ ಮೂವರು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.