ಕೋವಿಡ್‌-19 ಕಾಲದಲ್ಲೂ ಕಪಟತನ ಬಿಡದ ಪಾಕ್‌ !

ಗಲ್ಫ್ ದೇಶಗಳಲ್ಲಿ ಭಾರತದ ವಿರುದ್ಧ ಟ್ವಿಟರ್‌ ಅಪಪ್ರಚಾರ ನಡೆಸುತ್ತಿರುವ ನೆರೆರಾಷ್ಟ್ರ

Team Udayavani, May 4, 2020, 6:15 AM IST

ಕೋವಿಡ್‌-19 ಕಾಲದಲ್ಲೂ ಕಪಟತನ ಬಿಡದ ಪಾಕ್‌ !

ಸಾಂದರ್ಭಿಕ ಚಿತ್ರ.

ಹೊಸದಿಲ್ಲಿ: ಕೋವಿಡ್‌-19 ದಂಥ ಕಷ್ಟಕಾಲದಲ್ಲೂ ತನ್ನ ಕುತ್ಸಿತ ಬುದ್ಧಿ ಬಿಡದ ಪಾಕಿಸ್ಥಾನವು ಗಲ್ಫ್ ದೇಶಗಳಲ್ಲಿ ಭಾರತದ ವಿರುದ್ಧ ಅಪಪ್ರಚಾರಕ್ಕೆ ನಕಲಿ ಟ್ವಿಟರ್‌ ಖಾತೆಗಳನ್ನು ಬಳಸಿಕೊಳ್ಳುತ್ತಿದೆ.

ಗಲ್ಫ್ ನ ಬಹುತೇಕ ರಾಷ್ಟ್ರಗಳು ಭಾರತದ ಜತೆಗಿದ್ದು, ಉತ್ತಮ ಸಂಬಂಧ ಹೊಂದಿವೆ. ಜತೆಗೆ ಕಾಶ್ಮೀರದ ವಿಚಾರದಲ್ಲಿ ಬಹುತೇಕ ದೇಶಗಳು ಭಾರತದ ಬೆನ್ನಿಗಿವೆ. ಹೀಗಾಗಿ ಭಾರತದ ವಿರುದ್ಧ ಹೊಸ ಮಾದರಿಯ ಅಪಪ್ರಚಾರಕ್ಕೆ ಮುಂದಾಗಿರುವ ಪಾಕ್‌ ಇದಕ್ಕಾಗಿ ಏಳು ಸಾವಿರ ನಕಲಿ ಟ್ವಿಟರ್‌ ಖಾತೆಗಳನ್ನು ಬಳಸಿಕೊಳ್ಳುತ್ತಿದೆ.

ಭಾರತೀಯ ಭದ್ರತಾ ಪಡೆಗಳು ಈ ನಕಲಿ ಖಾತೆಗಳ ಬಗ್ಗೆ ಕೇಂದ್ರ ಸರಕಾರಕ್ಕೆ ಮಾಹಿತಿ ನೀಡಿವೆ. ಈ ಎಲ್ಲ ಖಾತೆಗಳನ್ನು 2020ರ ಎಪ್ರಿಲ್‌ನಲ್ಲಿ ಪಾಕ್‌ನಲ್ಲಿ ತೆರೆಯಲಾಗಿದ್ದು, ಅಲ್ಲಿಂದಲೇ ನಿರ್ವಹಿಸಲಾಗುತ್ತಿದೆ ಎಂಬ ಆಘಾತಕಾರಿ ಅಂಶವೂ ಬಯಲಾಗಿದೆ.

ಉಗ್ರರ ಫೋಟೋ ಬಳಕೆ
ಭಾರತದಲ್ಲಿ ಮುಸ್ಲಿಮರನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ ಎಂಬ ಬಗ್ಗೆ ಸುಳ್ಳು ಸುದ್ದಿಯನ್ನು ಗಲ್ಫ್ ದೇಶಗಳಲ್ಲಿ ಹಂಚುವುದು ಈ ಟ್ವಿಟರ್‌ ಖಾತೆಗಳ ಉದ್ದೇಶ. ಇದಕ್ಕಾಗಿ ಕಾಶ್ಮೀರದಲ್ಲಿ ಹತ ಉಗ್ರರ ಫೋಟೋ ಹಾಕಿ, ತಪ್ಪು ಮಾಹಿತಿ ನೀಡಲಾಗುತ್ತಿದೆ. ಕಳೆದ ಆಗಸ್ಟ್‌ನಲ್ಲಿ ನಡೆದ ವಿಶ್ವಸಂಸ್ಥೆ ಸಭೆಯಲ್ಲಿ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಭಾರತದಲ್ಲಿ ಮುಸ್ಲಿಮರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ದೂರಿದ್ದರು. ಭಾರತದ ವಿರುದ್ಧ ಗಲ್ಫ್ ದೇಶಗಳನ್ನು ಎತ್ತಿಕಟ್ಟುವುದೇ ಅವರ ಉದ್ದೇಶ. ಅದರ ಭಾಗವಾಗಿಯೇ ಈ ಟ್ವಿಟರ್‌ ಅಭಿಯಾನ ನಡೆಯುತ್ತಿದೆ ಎಂದು ವಿದೇಶಾಂಗ ಇಲಾಖೆಯ ವಕ್ತಾರ ಅನುರಾಗ್‌ ಶ್ರೀವಾಸ್ತವ ಹೇಳಿದ್ದಾರೆ. ಇದರಿಂದ ಗಲ್ಫ್ ಮತ್ತು ಭಾರತದ ನಡುವಿನ ಸಂಬಂಧ ಹಳಸುವುದಿಲ್ಲ, ಗಟ್ಟಿಯಾಗಿದೆ ಎಂದಿದ್ದಾರೆ.

ಮೋದಿ ವಿರುದ್ಧ ಅಪಪ್ರಚಾರ
ಕೆಲವು ದಿನಗಳ ಹಿಂದೆ ಭಾರತೀಯ ಗುಪ್ತಚರ ಇಲಾಖೆಯು ಭಾರತ ಸರಕಾರಕ್ಕೆ ಈ ಬಗ್ಗೆ ವರದಿ ಸಲ್ಲಿಸಿತ್ತು. ಅದರಲ್ಲಿ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಪಾಕಿಸ್ಥಾನವು ಕೊಲ್ಲಿ ರಾಷ್ಟ್ರಗಳಲ್ಲಿ ಪ್ರಧಾನಿ ಮೋದಿ ವಿರುದ್ಧ ಅಪಪ್ರಚಾರ ಮಾಡುತ್ತಿದೆ. ಭಾರತವನ್ನು ಮುಸ್ಲಿಂ ವಿರೋಧಿ ರಾಷ್ಟ್ರವೆಂದು ಬಿಂಬಿಸುವ ಪ್ರಯತ್ನವನ್ನೂ ಮಾಡಲಾಗುತ್ತಿದೆ. ಈ ವರ್ಷದ ಜನವರಿ-ಮಾರ್ಚ್‌ ನಡುವೆ ಸೃಷ್ಟಿಸಲಾದ ಟ್ವಿಟರ್‌ ಖಾತೆಗಳ ಮೂಲಕ ಈ ಅಪಪ್ರಚಾರ ನಡೆಸಲಾಗುತ್ತಿದ್ದು, ಕೊಲ್ಲಿ ರಾಷ್ಟ್ರಗಳ ಬಹುತೇಕ ಜನರು ಇದನ್ನು ನಂಬತೊಡಗಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿತ್ತು.

ಟಾಪ್ ನ್ಯೂಸ್

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Sambhal

Mosque survey: ಸಂಭಲ್‌ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Adani

Adani Group: ಸಾಲ ಅಗತ್ಯವಿಲ್ಲ: ಅದಾನಿ “ಆರ್ಥಿಕ ಶಕ್ತಿ’ ಪ್ರದರ್ಶನ

CM DCM

Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್‌?

1-bbbbb

Karnataka BJP; ಬಣ ಸಂಘರ್ಷ ತೀವ್ರ…;ಶಿಸ್ತುಕ್ರಮಕ್ಕೆ ವಿಜಯೇಂದ್ರ ಪಟ್ಟು?

DCM-Fadnavis

Assembly Election: ಮಹಾರಾಷ್ಟ್ರಕ್ಕೆ ಫ‌ಡ್ನವೀಸ್‌ ಸಿಎಂ?: 2-3 ದಿನಗಳಲ್ಲೇ ಪ್ರಮಾಣವಚನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sambhal

Mosque survey: ಸಂಭಲ್‌ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು

Adani

Adani Group: ಸಾಲ ಅಗತ್ಯವಿಲ್ಲ: ಅದಾನಿ “ಆರ್ಥಿಕ ಶಕ್ತಿ’ ಪ್ರದರ್ಶನ

DCM-Fadnavis

Assembly Election: ಮಹಾರಾಷ್ಟ್ರಕ್ಕೆ ಫ‌ಡ್ನವೀಸ್‌ ಸಿಎಂ?: 2-3 ದಿನಗಳಲ್ಲೇ ಪ್ರಮಾಣವಚನ

Supriya-Sule

Maha Election: ಡಿಕೆಶಿ ಸೇರಿ ಕಾಂಗ್ರೆಸ್‌ ಜತೆ ಇವಿಎಂ ಬಗ್ಗೆ ಚರ್ಚೆ: ಸಂಸದೆ ಸುಪ್ರಿಯಾ

Ashwini-vaishnav

Cabinet Decision: 7 ಕೃಷಿ ಯೋಜನೆಗಳ ಅನುಷ್ಠಾನಕ್ಕೆ ಕೇಂದ್ರ ಸಚಿವ ಸಂಪುಟ ಅನುಮತಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

1

Sullia: ರಬ್ಬರ್‌ ಸ್ಮೋಕ್‌ ಹೌಸ್‌ಗೆ ಬೆಂಕಿ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Sambhal

Mosque survey: ಸಂಭಲ್‌ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು

car-parkala

ಕಾಸರಗೋಡು: ಬೈಕ್‌ ಢಿಕ್ಕಿ; ವಿದ್ಯಾರ್ಥಿಗೆ ಗಂಭೀರ ಗಾಯ

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.