26/11 ಮಾಸ್ಟರ್ ಮೈಂಡ್ ಲಖ್ವಿ ಹಾಗೂ 1,800 ಮಂದಿ ಹೆಸರನ್ನು ಉಗ್ರರ ಪಟ್ಟಿಯಿಂದ ಕೈಬಿಟ್ಟ ಪಾಕ್
2018ರ ಈ ಪಟ್ಟಿಯ ಪ್ರಕಾರ 7600 ಮಂದಿ ಹೆಸರಿತ್ತು. ಇದರಲ್ಲಿ ಕಳೆದ 18 ತಿಂಗಳುಗಳಲ್ಲಿ ಆ ಸಂಖ್ಯೆಯನ್ನು 3,800ಕ್ಕೆ ಇಳಿಸಲಾಗಿದೆ.
Team Udayavani, Apr 21, 2020, 4:40 PM IST
ನ್ಯೂಯಾರ್ಕ್:2008ರ ಮುಂಬೈ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್, ಲಷ್ಕರ್ ಎ ತೊಯ್ಬಾದ ಕಮಾಂಡರ್ ಜಾಕಿ ಉರ್ ರೆಹಮಾನ್ ಲಖ್ವಿ ಹಾಗೂ 1800 ಇತರ ವ್ಯಕ್ತಿಗಳನ್ನು ಭಯೋತ್ಪಾದಕರ ಪಟ್ಟಿಯಿಂದ ಪಾಕಿಸ್ತಾನ ಕೈಬಿಟ್ಟಿರುವುದಾಗಿ ವರದಿ ತಿಳಿಸಿದೆ.
ಜಾಗತಿಕ ಹಣಕಾಸು ನಿಗ್ರಹ ವಾಚ್ ಡಾಗ್ ನ ಅಂತಾರಾಷ್ಟ್ರೀಯ ಹಣಕಾಸು ನಿಗಾ ಪಡೆಯ(ಎಫ್ ಎಟಿಎಫ್) ಮೌಲ್ಯಮಾಪನದಲ್ಲಿ ಪಾಕಿಸ್ತಾನ ಇವರನ್ನೆಲ್ಲಾ ಪಟ್ಟಿಯಿಂದ ಕೈಬಿಟ್ಟಿರುವುದು ತಿಳಿದು ಬಂದಿರುವುದಾಗಿ ವರದಿ ಹೇಳಿದೆ.
2018ರ ಈ ಪಟ್ಟಿಯ ಪ್ರಕಾರ 7600 ಮಂದಿ ಹೆಸರಿತ್ತು. ಇದರಲ್ಲಿ ಕಳೆದ 18 ತಿಂಗಳುಗಳಲ್ಲಿ ಆ ಸಂಖ್ಯೆಯನ್ನು 3,800ಕ್ಕೆ ಇಳಿಸಲಾಗಿದೆ. ಇದರಲ್ಲಿ ಕಳೆದ ಮಾರ್ಚ್ ತಿಂಗಳಿನಲ್ಲಿ 1,800 ಮಂದಿ ಹೆಸರನ್ನು ತೆಗೆದುಹಾಕಿರುವುದಾಗಿ ಕ್ಯಾಸ್ಟಿಲ್ಯೂಮ್ ಅಂಕಿಅಂಶ ಬಹಿರಂಗಗೊಳಿಸಿದೆ.
ಉಗ್ರರ ವಿರುದ್ಧ ಸಮರ್ಪಕವಾದ ಕ್ರಮ ತೆಗೆದುಕೊಳ್ಳದಿದ್ದರೆ ಹಣಕಾಸು ನಿರ್ಬಂಧ ವಿಧಿಸುವ ನೀತಿಯೊಂದಿಗೆ ಪ್ಯಾರಿಸ್ ಮೂಲದ ಹಣಕಾಸು ಕಾರ್ಯಪಡೆ ಟಾಸ್ಕ್ ಪಡೆ(ಎಫ್ ಎಟಿಎಫ್) ಜತೆ ಪಾಕಿಸ್ತಾನ ಸಹಮತದ ಒಪ್ಪಿಗೆ ಸೂಚಿಸಿತ್ತು ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!
New York: ಅಮೆರಿಕದಲ್ಲಿ ಶೂಟೌಟ್: ಇಬ್ಬರ ಕೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ
Moscow: ಕೆಮಿಕಲ್ ಅಸ್ತ್ರ ಬಳಸಿದ್ದ ರಷ್ಯಾ ಪರಮಾಣು ರಕ್ಷಣಾಪಡೆ ಮುಖ್ಯಸ್ಥನ ಹತ್ಯೆ
Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.