ಇತ್ಯರ್ಥ ಕಾಣದ ಪ್ಯಾಲೆಸ್ತೀನ್ ಬಿಕ್ಕಟ್ಟಿಗೆ ಮತ್ತೆ ಕಿಚ್ಚು
Team Udayavani, May 17, 2021, 7:05 AM IST
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ನೇತೃತ್ವದಲ್ಲಿಯೇ ನಾಲ್ಕು ಒಪ್ಪಂದಗಳೂ ಬಿಕ್ಕಟ್ಟು ಬಗೆಹರಿಸಲು ವಿಫಲವಾಗಿವೆ. ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ 2017ರಲ್ಲಿ ಕಗ್ಗಂಟು ಇತ್ಯರ್ಥಕ್ಕೆ ಪ್ರಯತ್ನಿಸಿ ಸೋತಿದ್ದರು. ಹಾಗಿದ್ದರೆ ಅದಕ್ಕೆ ಶಾಂತಿಯೇ ಇಲ್ಲವೇ?
ಮಧ್ಯಪ್ರಾಚ್ಯದ ಪ್ಯಾಲೆಸ್ತೀನ್ ವಿವಾದ ಈಗಿನದ್ದಲ್ಲ; 200 ವರ್ಷಗಳು ದಾಟಿದ್ದು, ಒಂದಲ್ಲ ಒಂದು ಸ್ವರೂಪ ಪಡೆದು ಕೊಂಡು ಬೆಳೆದುಕೊಂಡೇ ಇದೆ. ಈಗ ಮತ್ತೆ ಸಂಘರ್ಷ ಭುಗಿ ಲೆದ್ದಿದೆ. ಇದುವರೆಗೆ 150ಕ್ಕೂ ಅಧಿಕ ಮಂದಿ ಈ ತಿಂಗಳ ಆರಂಭದಿಂದ ಉಂಟಾಗಿರುವ ಸಂಘರ್ಷದಲ್ಲಿ ಜೀವ ತೆತ್ತಿ ದ್ದಾರೆ. ಇದುವರೆಗಿನ ಹಿಂಸಾಚಾರದಲ್ಲಿ 41 ಮಕ್ಕಳು ಸಾವನ್ನಪ್ಪಿ ದ್ದಾರೆ. ಅಂದರೆ ಇದುವರೆಗಿನ ಸಾವು ನೋವಿನಲ್ಲಿ ಅಸುನೀಗಿ ರುವ ಮಕ್ಕಳ ಪ್ರಮಾಣ ಶೇ.30! ಎಂಥಾ ದುರಂತ?
ಎಪ್ರಿಲ್ ತಿಂಗಳ ಮಧ್ಯಭಾಗದಲ್ಲಿ ಹೊತ್ತಿಕೊಂಡ ಸಣ್ಣ ಕಿಡಿ ಈಗ ಬಾಂಬ್ ದಾಳಿ ತನಕ ತಲುಪಿದೆ. ಜೆರುಸಲೇಂನ ಪೂರ್ವ ಭಾಗದ ಶೇಖ್ ಜರಾ ಎಂಬಲ್ಲಿಂದ ಪ್ಯಾಲೆಸ್ತೀನ್ ಸಮುದಾಯಕ್ಕೆ ಸೇರಿದ ಕುಟುಂಬಗಳನ್ನು ತೆರವುಗೊಳಿಸುವ ವಿಚಾರಕ್ಕೆ ಬೂದಿಮುಚ್ಚಿದ ಕೆಂಡದಂತೆ ಇದ್ದ ಬಿಕ್ಕಟ್ಟು ಮತ್ತೆ ಸ್ಫೋಟಗೊಂಡಿದೆ. ಈ ವಿಚಾರ ಸಂಬಂಧ ಅಲ್-ಅಸ್ಕಾ ಮಸೀದಿಯ ಆವರಣದಲ್ಲಿದ್ದವರ ಮೇಲೆ ಇಸ್ರೇಲಿ ಯೋಧರು ರಬ್ಬರ್ ಬುಲೆಟ್, ಟಿಯರ್ ಗ್ಯಾಸ್ ಸಿಡಿಸಿದರು. ಮೊದಲೇ ಇಸ್ರೇಲಿಗರು ಎಂದರೆ ದ್ವೇಷ ಸಾಧಿಸುತ್ತಿದ್ದ ಹಮಸ್ ಉಗ್ರರಿಗೆ ಈ ಅಂಶ ಪ್ರಚೋದನೆ ನೀಡಿದಂತಾಯಿತು.
ಜೆರುಸಲೇಂ ಎಂಬ ಪಟ್ಟಣ ಕ್ರೈಸ್ತರಿಗೆ, ಮುಸ್ಲಿಮರಿಗೆ ಮತ್ತು ಯಹೂದಿಯರಿಗೆ ಅತ್ಯಂತ ಪವಿತ್ರ ಸ್ಥಳ. ಯೇಸು ಕ್ರಿಸ್ತರ ಸಮಾಧಿ ಈ ಪಟ್ಟಣದಲ್ಲಿಯೇ ಇದೆ. ಅದಕ್ಕೆ ಹೊಂದಿಕೊಂಡಂತೆ ಯಹೂದಿಗಳ ಮೂಲ ಧಾರ್ಮಿಕ ಕೇಂದ್ರ ಮಹಾಗೋಡೆ ಇದೆ. ಅವಕ್ಕೆ ಹೊಂದಿಕೊಂಡೇ ಅಲ್-ಅಕ್ಸಾ ಮಸೀದಿ ಇದೆ. ಇದು ಮೊಹಮ್ಮದ್ ಪೈಗಂಬರ್ ನಿಧನರಾದ ಸ್ಥಳವೂ ಹೌದು. ಅತ್ಯಂತ ಧರ್ಮಸೂಕ್ಷ್ಮ ಸ್ಥಳವಾಗಿರುವ ಈ ಪಟ್ಟಣ ಮತ್ತು ಅದರ ಸುತ್ತಮುತ್ತಲು ಇರುವ ಪ್ರದೇಶ ಯಾರಿಗೆ ಸೇರಬೇಕು ಎಂದು ತೀರ್ಮಾನ ಮಾಡುವುದು ಕಠಿನದಲ್ಲಿ ಕಠಿನದ ಕೆಲಸವಾದೀತು.
1917ರಲ್ಲಿ ಒಟ್ಟೋಮನ್ ಸಾಮ್ರಾಜ್ಯದ ಹಿಡಿತದಲ್ಲಿದ್ದ ಪ್ಯಾಲೆಸ್ತೀನ್ ಅನ್ನು ಬ್ರಿಟಿಷರು ವಶಪಡಿಸಿಕೊಂಡಿದ್ದರು. ಅವರು “ಬಾಲ್‌ಫೋರ್ ಡೆಕ್ಲರೇಶನ್’ ಅನ್ವಯ ಪ್ಯಾಲೆಸ್ತೀನ್‌ನಲ್ಲಿ ಯಹೂದಿಯರಿಗೆ ಅವಕಾಶ ಕಲ್ಪಿಸಿಕೊಟ್ಟರು. 1948- 1949ರಲ್ಲಿ ಅರಬ್ ಮತ್ತು ಇಸ್ರೇಲ್ ನಡುವೆ ಮೊದಲ ಯುದ್ಧ ನಡೆಯಿತು. ಈ ಕಾಳಗದಲ್ಲಿ ಜೋರ್ಡನ್, ಪಶ್ಚಿಮ ದಂಡೆ ಮತ್ತು ಪಶ್ಚಿಮ ಜೆರುಸಲೇಂ, ಈಜಿಪ್ಟ್ ಗಾಜಾವನ್ನು ಆಕ್ರಮಿಸಿಕೊಂಡಿತು. 1967ರಲ್ಲಿ ನಡೆದಿದ್ದ ಮತ್ತೂಂದು ಕಾಳಗದಲ್ಲಿ ಜೋರ್ಡನ್ ವಶದಲ್ಲಿದ್ದ ಜೆರುಸಲೇಂ ಭಾಗವನ್ನು ವಶಪಡಿಸಿಕೊಂಡಿತ್ತು. ಪಶ್ಚಿಮ ದಂಡೆಯಲ್ಲಿ ಅರಬರ ಪ್ರಾಬಲ್ಯವಿದ್ದುದರಿಂದ ಕಾಳಗ ಹೆಚ್ಚಿನ ಫಲಬೀರಲಿಲ್ಲ.
ಭೌಗೋಳಿಕ ಮತ್ತು ರಾಜಕೀಯವಾಗಿ ಕೂಡ ಜೆರುಸಲೇಂ ತನಗೇ ಸೇರಿದ್ದು ಎಂದು ಇಸ್ರೇಲ್, ಪ್ಯಾಲೆಸ್ತೀನ್ ವಾದಿಸುತ್ತಿವೆ. ಇಸ್ರೇಲ್ ವಾದಿಸುವಂತೆ ಪೂರ್ಣ ಪ್ರಮಾಣದ ಜೆರುಸಲೇಂ ತನಗೇ ಸೇರಿದ್ದು. ಅದುವೇ ರಾಜಧಾನಿ ಎಂದು ಪ್ರತಿಪಾದಿಸುತ್ತಿದೆ. ಆದರೆ ಪ್ಯಾಲೆಸ್ತೀನ್ ಸರಕಾರ ಪೂರ್ವ ಜೆರುಸಲೇಂ ಎನ್ನುವುದು ಮುಂದೊಂದು ದಿನ ರಚನೆಯಾಗಲಿರುವ “ಪ್ಯಾಲೆಸ್ತೀನ್ ರಾಷ್ಟ್ರ’ದ ರಾಜಧಾನಿಯೇ ಅದು ಎಂದು ಲಾಗಾಯ್ತಿನಿಂದ ಹೇಳಿಕೊಳ್ಳುತ್ತಾ ಬಂದಿದೆ. ಐವತ್ತು ವರ್ಷಗಳ ಅವಧಿಯಲ್ಲಿ ಇಸ್ರೇಲ್ ತನ್ನ ಹಿಡಿತ ಬಲಪಡಿಸುತ್ತಾ ಬಂದಿದೆ ಮತ್ತು ಅಲ್ಲಿ 6 ಲಕ್ಷ ಯಹೂದಿಯರು ಈಗ ವಾಸಿಸುತ್ತಿದ್ದಾರೆ.
1948ರಲ್ಲಿ ಇಸ್ರೇಲ್ ಎಂಬ ಹೊಸ ರಾಷ್ಟ್ರ ಉದಯವಾಯಿತು. ಅಂದಿನಿಂದಲೇ ಈ ಜೆರುಸಲೇಂ ಮೇಲೆ ಹಕ್ಕುಸಾಧಿಸುವ ಕಾಳಗ ಆರಂಭವಾಗಿತ್ತು. ಆ ಸಂದರ್ಭದಲ್ಲಿ ಬ್ರಿಟಿಷ್ ಆಡಳಿತ ಇದ್ದ ಕಾರಣ ಆ ಸಮಯದಲ್ಲಿ ದೇಶದ ಅಧಿಕಾರ ಸೂತ್ರ ಹಿಡಿದಿದ್ದವರು ಪ್ಯಾಲೆಸ್ತೀನ್ ಅನ್ನು ವಿಭಜಿ ಸುವ ಪ್ರಸ್ತಾವಕ್ಕೆ ವಿರೋಧ ವ್ಯಕ್ತಪಡಿಸಿದ್ದರು.
ಈಚೆಗಿನ ಘರ್ಷಣೆಯಲ್ಲಿ ಕೇರಳ ಮೂಲದ ಯುವತಿ ಸಾವನಪ್ಪಿ ಭಾರತದಲ್ಲೂ ಆತಂಕಛಾಯೆ ಕಾಣತೊಡಗಿದೆ. ಇಸ್ರೇಲ್‌ನಲ್ಲಿರುವ ಭಾರತದ ರಾಯಭಾರ ಕಚೇರಿ ಮಾಹಿತಿ ಪ್ರಕಾರ ಆ ದೇಶದಲ್ಲಿ ಭಾರತೀಯ ಮೂಲದ 85 ಸಾವಿರ ಯೆಹೂದಿಗಳಿದ್ದಾರೆ. 1950-1960ರ ಅವಧಿಯಲ್ಲಿ ಭಾರತ ದಿಂದ ಇಸ್ರೇಲ್‌ಗೆ ವಲಸೆ ಹೋಗಿದ್ದರು. ಮಹಾರಾಷ್ಟ್ರ, ಕೇರಳ, ಪಶ್ಚಿಮ ಬಂಗಾಲ ರಾಜಧಾನಿ ಕೋಲ್ಕತಾದಿಂದ ಅಲ್ಲಿಗೆ ಹೋಗಿದ್ದರು. ಇತ್ತೀಚಿನ ವರ್ಷಗಳಲ್ಲಿ ಮಿಜೋರಾಂ, ಮಣಿಪುರದಿಂದ ವಲಸೆ ಹೋಗಿದ್ದುಂಟು. 12,500 ಭಾರತೀಯ ಪ್ರಜೆಗಳು ಅಲ್ಲಿದ್ದಾರೆ. ಈ ಪೈಕಿ 11,500 ಮಂದಿ ಸಣ್ಣ ಪುಟ್ಟ ಉದ್ಯೋಗದಲ್ಲಿದ್ದಾರೆ. ಸಣ್ಣ ಪ್ರಮಾಣದಲ್ಲಿ ಐ.ಟಿ.ಉದ್ಯೋಗಿಗಳು, ವಜ್ರದ ಉದ್ದಿಮೆ ಯಲ್ಲಿ ನಿರತರಾಗಿರುವವರು, ವಿದ್ಯಾರ್ಥಿಗಳಿದ್ದಾರೆ. ಯಾವುದೇ ದೇಶದವರಿರಲಿ, ಯಾರಧ್ದೋ ಕಾರಣಕ್ಕೆ ಯಾರೋ ಬಲಿಯಾಗಬೇಕು ಎಂಬ ವಾದ ಒಪ್ಪತಕ್ಕದ್ದಲ್ಲ. ಇಸ್ರೇಲ್ ಪ್ರಧಾನಿ ನೆತನ್ಯಾಹು, ಯಾವುದೇ ಕಾರಣಕ್ಕೂ ಕಾರ್ಯಾಚರಣೆ ನಿಲ್ಲಿಸುವುದಿಲ್ಲ ಎಂದಿದ್ದಾರೆ. ಹಾಗಿದ್ದರೆ ಅಲ್ಲಿ ಮೂಲ ಸಮಸ್ಯೆ ಏನು? ಈ ಪ್ರಶ್ನೆಗೆ ಹಾಲಿ ಸಂದರ್ಭ ದಲ್ಲಿ ಉತ್ತರಿಸುವುದು ಕಷ್ಟವೇ. ಏಕೆಂದರೆ 2 ಶತಮಾನ ಗಳಿಗಿಂತ ಅಧಿಕ ಸಮಯದ ಬಿಕ್ಕಟ್ಟು ಇದು. ಇಸ್ರೇಲ್ ಮತ್ತು ಪ್ಯಾಲೆಸ್ತೀನಿಯರು ಒಟ್ಟಾಗಿ ಒಪ್ಪದೇ ಇರುವ ಹಲವಾರು ವಿಚಾರಗಳಿವೆ. ಪ್ಯಾಲೆಸ್ತೀನಿ ನಿರಾಶ್ರಿತರ ಭವಿಷ್ಯ, ಪಶ್ಚಿಮ ದಂಡೆಯಲ್ಲಿ ಇರುವ ಯಹೂದಿಯರನ್ನು ಒಕ್ಕಲೆ ಬ್ಬಿಸಬೇಕೇ, ಜೆರುಸಲೇಂ ಅನ್ನು ಇಸ್ರೇಲ್-ಪ್ಯಾಲೆಸ್ತೀನ್ ಅಧಿಕಾರಸ್ಥರು ಹಂಚಿಕೊಳ್ಳಬೇಕೇ ಎಂಬ ವಿಚಾರಗಳು ಸೇರಿದಂತೆ ಈ ಪ್ರದೇಶದಲ್ಲಿರುವ ತೆÌàಷಮಯ ವಾತಾವರಣ ತಿಳಿಗೊಳಿಸಲು 25 ವರ್ಷಗಳಿಂದ ಶಾಂತಿ-ಸಂಧಾನ ಮಾತುಕತೆಗಳು ನಡೆಯುತ್ತಲೇ ಇವೆ. ಅದರ ಫಲಿತಾಂಶ ಮಾತ್ರ ಶೂನ್ಯವೇ ಎನ್ನುವುದು ಹಗಲಿನಷ್ಟೇ ಸತ್ಯ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ನೇತೃತ್ವದಲ್ಲಿ ಏರ್ಪಟ್ಟ ನಾಲ್ಕು ಒಪ್ಪಂದಗಳೂ ಬಿಕ್ಕಟ್ಟು ಬಗೆಹರಿಸಲು ವಿಫಲವಾಗಿವೆ. ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ 2017ರಲ್ಲಿ ಕಗ್ಗಂಟು ಇತ್ಯರ್ಥಕ್ಕೆ ಪ್ರಯತ್ನಿಸಿ ಸೋತಿದ್ದರು. ಹಾಗಿದ್ದರೆ ಅದಕ್ಕೆ ಶಾಂತಿಯೇ ಇಲ್ಲವೇ? ಅದಕ್ಕೆ ಸಮಯವೇ ಉತ್ತರಕೊಟ್ಟಿàತು.
– ಸದಾಶಿವ ಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Malpe: ಕಿನ್ನಿಮೂಲ್ಕಿ; ನಿಲ್ಲಿಸಲಾಗಿದ್ದ ಬುಲೆಟ್ ಕಳವು
Maharashtra: ಬಿಜೆಪಿ ನಾಯಕಿ ನವನೀತ್ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್ ದಾಖಲು
Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್ ನೀಡಿದ ಬೋಯಿಂಗ್
Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು
Kanguva ಕುರಿತು ಭಾರೀ ನೆಗೆಟಿವ್ ವಿಮರ್ಶೆ: ನಟ ಸೂರ್ಯ ಪತ್ನಿ ಜ್ಯೋತಿಕಾ ಆಕ್ರೋಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.