ಹಾಡಲ್ಲಿ ಪಂಪ ಗುಣಗಾನ! ಸೆಪ್ಟೆಂಬರ್ 9ಕ್ಕೆ ಬಿಡುಗಡೆಗೆ ಸಿದ್ಧತೆ
ನಾನು ಸಂಗೀತ ನಿರ್ದೇಶಕ ಹಂಸಲೇಖ ಅಭಿಮಾನಿ.
Team Udayavani, Aug 18, 2022, 2:30 PM IST
ಲವ್ ಕಂ ಸಸ್ಪೆನ್ಸ್-ಥ್ರಿಲ್ಲರ್ ಕಥಾಹಂದರ ಹೊಂದಿರುವ “ಪಂಪ’ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. “ಕೀ ಕ್ರಿಯೆಶನ್ಸ್’ ಬ್ಯಾನರ್‌ನಲ್ಲಿ ಲಕ್ಷ್ಮೀಕಾಂತ್ ವಿ. ನಿರ್ಮಿಸಿರುವ ಈ ಚಿತ್ರಕ್ಕೆ ಹಿರಿಯ ನಿರ್ದೇಶಕ ಎಸ್. ಮಹೇಂದರ್ ನಿರ್ದೇಶನವಿದೆ. ಸದ್ಯ “ಪಂಪ’ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇತ್ತೀಚೆಗೆ ಚಿತ್ರದ ಹಾಡುಗಳನ್ನು ಹೊರತಂದಿದೆ.
ಹಂಸಲೇಖ ಸಾಹಿತ್ಯ ಮತ್ತು ಸಂಗೀತ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ “ಪಂಪ’ ಚಿತ್ರದ ಹಾಡುಗಳನ್ನು ಹಿರಿಯ ನಿರ್ದೇಶಕ ಟಿ. ಎಸ್ ನಾಗಾ ಭರಣ, ಪತ್ರಕರ್ತ ಜೋಗಿ, ಕನ್ನಡಪರ ಹೋರಾಟಗಾರ ಬಸವರಾಜ್ ಪಡುಕೋಟೆ, ಬಾಲಾಜಿ ಬಿಡುಗಡೆ ಮಾಡಿದರು.
ನಿರ್ದೇಶಕ ಎಸ್. ಮಹೇಂದರ್ ಮಾತನಾಡಿ, “ಸಿನಿಮಾ ಟೈಟಲ್ ಕೇಳಿದಾಕ್ಷಣ ಬಹುತೇಕರಿಗೆ ಆದಿಕವಿ ಪಂಪ ನೆನಪಾಗುತ್ತಾನೆ. ಆದ್ರೆ ಇದು ಖಂಡಿತವಾಗಿಯೂ ಆದಿಕವಿ ಪಂಪನ ಕುರಿತಾದ ಸಿನಿಮಾವಲ್ಲ. ಬದಲಿಗೆ ಆದಿಕವಿ ಪಂಪನ ಮೇಲೆ ಅಪಾರ ಅಭಿಮಾನ ಹೊಂದಿರುವ ಪ್ರೊಫೆಸರ್ ಪಂಚಳ್ಳಿ ಪರಶಿವಮೂರ್ತಿಯ ಕಥೆ. ಆ ಹೆಸರನ್ನು ಶಾರ್ಟ್ ಆಗಿ “ಪಂಪ’ ಅಂತ ಸಿನಿಮಾದ ಟೈಟಲ್ ಆಗಿ ಇಡಲಾಗಿದೆ’ ಎಂದರು.
ಚಿತ್ರದ ಬಗ್ಗೆ ಮಾತನಾಡಿದ ನಿರ್ಮಾಪಕ ಲಕ್ಷ್ಮೀಕಾಂತ ವಿ, “ಚಿಕ್ಕ ವಯಸ್ಸಿನಿಂದಲೂ ಇದ್ದ ಸಿನಿಮಾ ಮಾಡಬೇಕು ಎಂಬ ಕನಸು ನನಸಾಗುತ್ತಿದೆ. ನಾನು ಸಂಗೀತ ನಿರ್ದೇಶಕ ಹಂಸಲೇಖ ಅಭಿಮಾನಿ. ಅವರ ಬಳಿ ಸಿನಿಮಾ ಮಾಡುವ ಆಸೆ ಹೇಳಿದಾಗ, ಕಥೆ ಕೇಳಿ ಮೆಚ್ಚಿದ ಹಂಸಲೇಖ, ನಿರ್ದೇಶಕ ಎಸ್. ಮಹೇಂದರ್ ಅವರನ್ನು ಪರಿಚಯಿಸಿದರು. ಅವರಿಬ್ಬರು ಜೊತೆಯಾದ ಮೇಲೆ ಕಥೆ ಮತ್ತಷ್ಟು ವಿಸ್ತಾರವಾಗಿ ಕಮರ್ಷಿಯಲ್ ಆಗಿ ತೆರೆಮೇಲೆ ತರುವ ಯೋಜನೆ ಮಾಡಿದೆವು’ ಎಂದರು.
ನಟರಾದ ಅರವಿಂದ ರಾವ್, ಆದಿತ್ಯ ಶೆಟ್ಟಿ ಇದೇ ವೇಳೆ ಮಾತನಾಡಿದರು. “ಪಂಪ’ ಚಿತ್ರದಲ್ಲಿ ಕೀರ್ತಿ ಭಾನು, ಸಂಗೀತಾ ಶೃಂಗೇರಿ, ರಾಘವ್ ನಾಯಕ್, ಕೃಷ್ಣ ಭಟ್, ರೇಣುಕಾ, ರವಿ ಭಟ್, ಶ್ರೀನಿವಾಸ ಪ್ರಭು, ಪೃಥ್ವಿರಾಜ್, ಚಿಕ್ಕ ಹೆಜ್ಜಾಜಿ ಮಹದೇವ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾ ರೆ. ಬೆಂಗಳೂರು, ತೀರ್ಥಹಳ್ಳಿ, ಆಗುಂಬೆ ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಅಂದಹಾಗೆ, ಇದೇ ಸೆಪ್ಟೆಂಬರ್ 9ಕ್ಕೆ “ಪಂಪ’ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ ಚಿತ್ರತಂಡ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.