ಆನ್‌ಲೈನ್‌ನಲ್ಲಿ ಪ್ಯಾನ್ ಕಾರ್ಡ್ ವಿವರ ಬದಲಾಯಿಸೋದು ಹೇಗೆ?: ಇಲ್ಲಿದೆ ಮಾಹಿತಿ
Team Udayavani, Oct 28, 2020, 6:41 PM IST
ಮಣಿಪಾಲ್: ಬ್ಯಾಂಕ್ ಆಧಾರಿತ ವಿವಿಧ ವ್ಯವಹಾರಗಳಿಗೆ ಬಳಕೆ ಮಾಡುವ ಶಾಶ್ವತ ಖಾತೆ ಸಂಖ್ಯೆ (PAN) ಕಾರ್ಡ್ ಈಗ ಇ ಪ್ಯಾನ್ ಕಾರ್ಡ್ ಆಗಿ ಬದಲಾಗಿದೆ. ಆಧಾರ್ ಕಾರ್ಡ್ ಮಾಹಿತಿಯನ್ನು ಒದಗಿಸಿ ಇ-ಪ್ಯಾನ್ ಕಾರ್ಡ್ ಪಡೆಯುವ ಯೋಜನೆಯಂತೆ ಹಲವಾರು ಮಂದಿ ಹೊಸ ಕಾರ್ಡ್ ಪಡೆದುಕೊಂಡಿದ್ದಾರೆ. ಆದರೆ, ಆನ್‌ಲೈನ್‌ನಲ್ಲಿ ಪ್ಯಾನ್ ಕಾರ್ಡ್ ವಿವರ ಬದಲಾಯಿಸೋದು ಹೇಗೆ? ಎಂಬುದರ ವಿವರ ಇಲ್ಲಿದೆ.
ಏನಿದು ಇ ಪ್ಯಾನ್?
ಎಲೆಕ್ಟ್ರಾನಿಕ್-ಪ್ಯಾನ್ ಕಾರ್ಡ್ ಇದರ ವಿಸ್ತೃತ ರೂಪ. ಇ ಪ್ಯಾನ್ ಸೌಲಭ್ಯ ಸಂಪೂರ್ಣವಾಗಿ ಉಚಿತವಾಗಿದೆ. ಪ್ಯಾನ್ ಕಾರ್ಡ್ ಕಳೆದುಕೊಂಡವರು ಕೂಡಾ ಸುಲಭವಾಗಿ ಕೆಲ ನಿಮಿಷಗಳಲ್ಲಿ ಬದಲಿ ಪ್ಯಾನ್ ಕಾರ್ಡ್ ಪಡೆದುಕೊಳ್ಳಬಹುದು. ಹಾಲಿ ಪ್ಯಾನ್ ಕಾರ್ಡ್ ಹೊಂದಿರುವವರು ಹಾಗೂ ಹೊಸ ಪ್ಯಾನ್ ಕಾರ್ಡ್‌ದಾರರು ಇ ಪ್ಯಾನ್ ಪಡೆದುಕೊಳ್ಳಬಹುದು.
ಪ್ಯಾನ್ ಕಾರ್ಡ್ ವಿವರ ಬದಲಾಯಿಸೋದು ಹೇಗೆ?
– Tin & NSDL ಹಾಗೂ UTIITSL ಅಧಿಕೃತ ವೆಬ್ ತಾಣಕ್ಕೆ ಭೇಟಿ ನೀಡಿ.
– ಮುಖ್ಯಪುಟದ ಸರ್ವೀಸ್ ಆಯ್ಕೆಯಲ್ಲಿ ‘PAN’ ಆರಿಸಿಕೊಳ್ಳಿ
– ಹೊಸ ಪುಟದಲ್ಲಿ ಡೇಟಾ ಆಯ್ಕೆಯಲ್ಲಿ ಬದಲಾವಣೆ/ತಿದ್ದುಪಡಿ ಆಯ್ಕೆ ಮೇಲೆ Apply ಮಾಡಿ
– PAN ಸಂಖ್ಯೆ, ಮತ್ತೆ ಪ್ರಿಂಟ್ ಮಾಡುವ ಪ್ಯಾನ್ ಕಾರ್ಡ್ ಆಯ್ಕೆ ಮಾಡಿಕೊಳ್ಳಿ.
– Correct ಕೆಟಗೆರಿಯಲ್ಲಿ ಬೇರೆ ಆಯ್ಕೆ ಮಾಡಿಕೊಳ್ಳಿ.
– ಹೆಸರು, ಹುಟ್ಟಿದ ದಿನಾಂಕ, ಇಮೇಲ್ ಐಡಿ ಬದಲಾವಣೆ ಮಾಡಿ ಸಬ್ಮಿಟ್ ಮಾಡಿ.
– PAN ಅಪ್ಲಿಕೇಷನ್ ಅರ್ಜಿ ಮೇಲೆ ಕ್ಲಿಕ್ ಮಾಡಿ
– ಇ ಕೆವೈಸಿ ಸ್ಕ್ಯಾನ್ ಪ್ರತಿ ಸಲ್ಲಿಸಬೇಕಾಗುತ್ತದೆ
– ಹೆಸರು, ವಿಳಾಸ, ವಯಸ್ಸು ದೃಢೀಕರಣ ಪತ್ರ, ಐಡಿ ದಾಖಲೆ, ಇತ್ಯಾದಿ ದಾಖಲೆ ಸಲ್ಲಿಸಬೇಕಾಗುತ್ತದೆ.
– NSDL ಆನ್ ಲೈನ್ ಕಚೇರಿ ಮೂಲಕವೇ ದಾಖಲೆ ಸಲ್ಲಿಸಿ, ಇ ಪೇಮೆಂಟ್ ಮಾಡಿ ರಸಿತಿ ಪಡೆಯಬಹುದು. ಇದಾದ ಬಳಿಕ ತಿದ್ದುಪಡಿಯನ್ನು ಮಾಡಲಾಗುತ್ತದೆ.
ಇ ಪ್ಯಾನ್ ಕಾರ್ಡ್ ಪಡೆಯುವುದು ಹೇಗೆ?
– UTI & ITSL ಮೂಲಕ ಹೊಸ ಪ್ಯಾನ್ ಪಡೆಯಲು ಬಯಸುವವರು ಹಾಗೂ ಪ್ಯಾನ್ ಕಾರ್ಡಿನಲ್ಲಿ ಬದಲಾವಣೆ ಬಯಸುವವರು ಆನ್ ಲೈನ್ ನಲ್ಲಿ ಇ-ಪ್ಯಾನ್ ಕಾರ್ಡ್ NSDL ಹಾಗೂ UTIITSL ಅಧಿಕೃತ ವೆಬ್ ತಾಣಕ್ಕೆ ಭೇಟಿ ನೀಡಿ
– ಡೌನ್ ಲೋಡ್ ಇ ಪ್ಯಾನ್ ಕಾರ್ಡ್ ಕ್ಲಿಕ್ ಮಾಡಿ
– ಚಾಲ್ತಿ ಪ್ಯಾನ್ ಬದಲಾವಣೆ ಬಯಸುವವರು PAN, ಆಧಾರ್, ಹುಟ್ಟಿದ ದಿನಾಂಕ. ಇತ್ಯಾದಿ ಪ್ರಮುಖ ಮಾಹಿತಿ ನೀಡಿ.
– ನಿಗದಿತ ಶುಲ್ಕವನ್ನು ಡೆಬಿಟ್/ ಕ್ರೆಡಿಟ್, ಡಿಡಿ ಅಥವಾ ನೆಟ್ ಬ್ಯಾಕಿಂಗ್ ಮೂಲಕ ಪಾವತಿಸಿ.
– 15 ಅಂಕಿಗಳ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಕಳಿಸಲಾಗುತ್ತದೆ.
– ಪರಿಶೀಲನೆ ನಂತರ ನಿಮ್ಮ ಪ್ಯಾನ್ ಕಾರ್ಡ್ ನಿಮ್ಮ ಅಧಿಕೃತ ವಿಳಾಸವನ್ನು ತಲುಪಲಿದೆ. ಆದರೆ,ಇ ಪ್ಯಾನ್ ತತ್‌ಕ್ಷಣವೇ ಸಿಗುವುದರಿಂದ ಆದಾಯ ತೆರಿಗೆ ಇಲಾಖೆಯು ಕಾರ್ಡ್‌ಗಳನ್ನು ಮನೆ ವಿಳಾಸಕ್ಕೆ ಕಳಿಸುವ ಅಗತ್ಯವಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Video: ವೇದಿಕೆ ಮೇಲಿಂದ ಕೆಳಗೆ ಬಿದ್ದ ಕೇರಳ ಶಾಸಕಿ ಉಮಾ ಥಾಮಸ್… ಸ್ಥಿತಿ ಗಂಭೀರ
Kundapura: ಗ್ರಾಮ ಸಹಾಯಕಿಗೆ ಕಿರುಕುಳ; ಆರೋಪಿಗಳಿಗೆ ನಿರೀಕ್ಷಣ ಜಾಮೀನು
Fraud; ಯುವಕರು, ಸ್ತ್ರೀಯರನ್ನು ಗುರಿಯಾಗಿಸಿ ಹೂಡಿಕೆ ವಂಚನೆ: ಕೇಂದ್ರ ಎಚ್ಚರಿಕೆ
Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ
Kasaragod: ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊಲೆ; ಇಂದು ಶಿಕ್ಷೆ ಪ್ರಮಾಣ ಘೋಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.