ಭಾರತಕ್ಕೆ ಐತಿಹಾಸಿಕ ಗೆಲುವು : ಟೇಬಲ್ ಟೆನಿಸ್ ನಲ್ಲಿ ಬೆಳ್ಳಿ ಗೆದ್ದ ಭವೀನಾ
Team Udayavani, Aug 29, 2021, 8:34 AM IST
ಟೊಕಿಯೊ: ಟೊಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಟೇಬಲ್ ಟೆನಿಸ್ ಆಟಗಾರ್ತಿ ಭವೀನಾಬೆನ್ ಪಟೇಲ್ ಬೆಳ್ಳಿ ಪದಕ ಗೆದ್ದಿದ್ದಾರೆ. ಇದು ದೇಶಕ್ಕೆ ಐತಿಹಾಸಿಕ ಗೆಲುವಾಗಿದ್ದು ಪ್ಯಾರಾಒಲಿಂಪಿಕ್ಸ್ ಟೇಬಲ್ ಟೆನಿಸ್ ನಲ್ಲಿ ಮೊದಲ ಪದಕ ಇದಾಗಿದೆ.
ಜಪಾನಿನಲ್ಲಿ ನಡೆಯುತ್ತಿರುವ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ಚೀನಾದ ಯಿಂಗ್ ಜೂ ವಿರುದ್ಧ ಸೋಲುವ ಮೂಲಕ ಭವೀನಾಬೆನ್ ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದಾರೆ.
ನಿನ್ನೆ ಫೈನಲ್ ಪ್ರವೇಶಿದ ಹಿನ್ನೆಲೆಯಲ್ಲಿ ಮೋದಿ ಶುಭ ಕೋರಿದ್ದು, ಚಿನ್ನದ ಪದಕಕ್ಕಾಗಿ ನಡೆಯಲಿರುವ ಫೈನಲ್ ಪಂದ್ಯದ ಗೆಲುವಿಗೆ ಹಾರೈಸಿದ್ದರು. ಅಭಿನಂದನೆಗಳು ಭವಿನಾ ಪಟೇಲ್. ನೀವು ತುಂಬಾ ಚೆನ್ನಾಗಿ ಆಡಿದಿರಿ. ನಾಳಿನ ಫೈನಲ್‌ನಲ್ಲಿ ನೀವು ಗೆಲುವು ಸಾಧಿಸಲು ಇಡೀ ದೇಶ ಪ್ರಾರ್ಥಿಸುತ್ತಿದೆ. ನಿಮ್ಮ ಗೆಲುವಿಗೆ ಚಿಯರ್ ಮಾಡಲಿದೆ. ಯಾವುದೇ ಒತ್ತಡಕ್ಕೆ ಒಳಗಾಗದೇ ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತಹ ಪ್ರದರ್ಶನ ತೋರಿ. ನಿಮ್ಮ ಸಾಧನೆ ಇಡೀ ದೇಶಕ್ಕೆ ಸ್ಪೂರ್ತಿ ಎಂದು ಟ್ವೀಟ್ ಮಾಡಿದ್ದಾರೆ.
#TokyoParalympics | Indian Para table tennis player Bhavina Patel brings home silver medal, loses to China’s Zhou Ying in Women’s Single’s class 4 final pic.twitter.com/GfGDS0gnkm
— ANI (@ANI) August 29, 2021
Indian Para table tennis player Bhavina Patel brings home silver medal at #TokyoParaolympics
“She has made us proud, we will give her a grand welcome on her return,” says her father Hasmukhbhai Patel in Mehsana, Gujarat pic.twitter.com/nn6uZIQWu8
— ANI (@ANI) August 29, 2021
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.