

Team Udayavani, Jul 17, 2021, 8:05 PM IST
ಬೆಂಗಳೂರು: ಕಳೆದ 15 ವರ್ಷಗಳಲ್ಲಿ ಬೆಂಗಳೂರು ಕೇಂದ್ರ ಪರಪ್ಪನ ಅಗ್ರಹಾರ ಕಾರಗೃಹದಲ್ಲಿದ್ದ ಸುಮಾರು 11 ಮಂದಿ ಕೈದಿಗಳು ಪೆರೋಲ್ ನೆಪದಲ್ಲಿ ಹೊರಹೋದವರು ಇದುವರೆಗೂ ಪತ್ತೆಯಾಗಿಲ್ಲ ಎಂಬ ಮಾಹಿತಿ ಬಹಿರಂಗವಾಗಿದೆ. ಈ ಸಂಬಂಧ ಪ್ರಕರಣ ಪ್ರಕರಣ ದಾಖಲಾಗಿದ್ದು, ಅವರಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಜೈಲಿನ ಮೂಲಗಳು ತಿಳಿಸಿವೆ.
ಕೊಲೆ, ಸುಲಿಗೆ, ಕೊಲೆ ಯತ್ನ, ದರೋಡೆ ಸೇರಿ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಶಿಕ್ಷೆ ಅನುಭವಿಸುತ್ತಿದ್ದ 11 ಮಂದಿ ಕೈದಿಗಳು ಪೆರೋಲ್ ಮೇಲೆ ಹೊರ ಹೋಗಿ ಜೈಲಿಗೆ ವಾಪಸ್ ಬಾರದೆ, ಪೊಲೀಸರಿಗೂ ಸಿಗದೆ ತಲೆಮರೆಸಿಕೊಂಡಿದ್ದಾರೆ.
ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ತುಮಕೂರು ಜಿಲ್ಲಾ ವ್ಯಾಪ್ತಿಗಳಲ್ಲಿ ವಿವಿಧ ಅಪರಾಧಗಳಲ್ಲಿ ಭಾಗಿಯಾಗಿ ಶಿಕ್ಷೆ ಅನುಭವಿಸುವ ಸಾವಿರಾರು ಕೈದಿಗಳಿದ್ದಾರೆ. ಈ ಪೈಕಿ 2004 ರಿಂದ 2019ರವರೆಗೆ ಪೆರೋಲ್ ಮೇಲೆ ಹೊರ ಹೋಗಿದ್ದ 11 ಮಂದಿ ಕೈದಿಗಳು ಪರಾರಿಯಾಗಿದ್ದಾರೆ. ಈ ಸಂಬಂಧ ಜೈಲಿನ ಅಧಿಕಾರಿಗಳು ಸಂಬಂಧಿಸಿದ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಿದರೂ ಪತ್ತೆ ಕಾರ್ಯದಲ್ಲಿ ಪ್ರಗತಿ ಕಂಡಿಲ್ಲ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ :ಭಾರಿ ಮಳೆ ಸಾಧ್ಯತೆ : ಕರಾವಳಿ ಜಿಲ್ಲೆಗಳಿಗೆ ನಾಲ್ಕು ದಿನ ಆರೆಂಜ್ ಅಲರ್ಟ್
ವರ್ಷಕ್ಕೆ 3 ಬಾರಿ ಪೆರೋಲ್:
ಸಜಾಬಂಧಿಗಳಿಗೆ ವರ್ಷಕ್ಕೆ 3 ತಿಂಗಳು ಪೆರೋಲ್ ಮೇಲೆ ಜೈಲಿನಿಂದ ಹೊರ ಹೋಗಲು ಅವಕಾಶವಿದೆ. ವರ್ಷಕ್ಕೆ 90ದಿನಗಳು ಹೊರಗೆ ಇರಬಹುದು. ಒಂದೇ ಬಾರಿ ಮೂರು ತಿಂಗಳು ಸಿಗದಿದ್ದರೂ ಹಂತ-ಹಂತವಾಗಿ ಪೆರೋಲ್ ರಜೆ ಪಡೆಯಬಹುದು. ಅದೇ ರೀತಿ ಪರಾರಿಯಾಗಿರುವ 11 ಮಂದಿಗೆ ಪೆರೋಲ್ ಗೆ ಕಾರಾಗೃಹ ಇಲಾಖೆ ಅನುಮತಿ ನೀಡಿತ್ತು. ಅದೇ ಅವಕಾಶವನ್ನು ದುರ್ಬಳಕೆ ಮಾಡಿಕೊಂಡ ಅವರು ಪೆರೋಲ್ ಪಡೆದು ಪರಾರಿಯಾಗಿದ್ದಾರೆ.
ಪರಾರಿಯಾಗಿರುವ ಕೈದಿಗಳ ಶಿಕ್ಷೆ ಅವಧಿ ಮುಗಿದರೂ ಪೆರೋಲ್ ನಿಯಮ ಉಲ್ಲಂಘನೆ ಆರೋಪದ ಮೇಲೆ ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಹೀಗಾಗಿ ಒಂದು ವೇಳೆ ಅವರು ಸಿಕ್ಕಿಬಿದ್ದರೆ ಕಾರಾಗೃಹ ಇಲಾಖೆಯಿಂದ ಸಿಗಬಹುದಾದ ಎಲ್ಲ ಸೌಲಭ್ಯಗಳು ರದ್ದಾಗಲಿವೆ ಎಂದು ಮೂಲಗಳು ತಿಳಿಸಿವೆ.
MUDA ಸೈಟ್ ಹಿಂದಿರುಗಿಸಿದ ನಂತರ ಇ.ಡಿ ನೋಟಿಸ್ ಕೊಡಲಾಗದು: ಪಾರ್ವತಿ ಪರ ವಕೀಲ ಸಂದೇಶ ಚೌಟ
Davanagere: ಹೆಬ್ಬಾಳ್ಕರ್- ರವಿ ಪ್ರಕರಣದ ಬಗ್ಗೆ ನಾನೇನು ಹೇಳಲಾರೆ: ಸ್ಪೀಕರ್ ಖಾದರ್
Gadag: ಸಾಲ ನೀಡುವಾಗ ಗಿರವಿ, ಶ್ಯೂರಿಟಿ ಇಟ್ಟುಕೊಳ್ಳುವುದು ಅಪರಾಧ: ಡಿಸಿ ಸಿ.ಎನ್. ಶ್ರೀಧರ
Chikkamagaluru: ಕಾಫಿನಾಡಿನಲ್ಲಿ ಬೆಂಗಳೂರು ಮೂಲದ ಯುವಕ-ಯುವತಿ ನಿಗೂಢ ಸಾವು
ಅನ್ನಭಾಗ್ಯದಡಿ ಇನ್ನು ಅಕ್ಕಿ ಭಾಗ್ಯ; ಕೇಂದ್ರದಿಂದ ಅಕ್ಕಿ ಪೂರೈಕೆ ಕಾರಣ ರಾಜ್ಯದ ಈ ನಿರ್ಧಾರ
ಪರಶುರಾಮ ಮೂರ್ತಿ ವಿವಾದ; ಅಷ್ಟಮಂಗಲ ಪ್ರಶ್ನೆ ನಡೆಸಲು ಸಲಹೆ: ಮುನಿಯಾಲು ಉದಯ ಕುಮಾರ್ ಶೆಟ್ಟಿ
Amaravathi Police Station Movie: ಅಮರಾವತಿಯಿಂದ ಟೀಸರ್ ಬಂತು
ನಾಗಾ ಸಾಧುಗಳ ನಾಯಕ ಅವಧೇಶಾನಂದ ಗಿರಿ ಮಹಾರಾಜರಿಗೆ ಆದಿಚುಂಚನಗಿರಿ ವಿಜ್ಞಾತಂ ಪುರಸ್ಕಾರ
Delhi; ರೇಖಾ ಗುಪ್ತಾ ಪ್ರಮಾಣವಚನ ಸಮಾರಂಭದಲ್ಲಿ ಭಾಗಿಯಾದ ಸ್ವಾತಿ ಮಲಿವಾಲ್
Kundapura: ಶಿಥಿಲಗೊಂಡ ಕರ್ಕಿ ಅಂಗನವಾಡಿ ಕಟ್ಟಡ
You seem to have an Ad Blocker on.
To continue reading, please turn it off or whitelist Udayavani.