Paris Olympics: ಕೈಗೆ ಬಂದ 6 ಪದಕ ಕುತ್ತಿಗೆ ಏರಲಿಲ್ಲ!


Team Udayavani, Aug 12, 2024, 6:31 AM IST

Manu

ಒಲಿಂಪಿಕ್ಸ್‌ನಂಥ ಪ್ರತಿಷ್ಠಿತ ಕ್ರೀಡಾಕೂಟಗಳಲ್ಲಿ 5, 10 ಹೀಗೆ ಕೆಳ ಸ್ಥಾನದಲ್ಲಿ ಸ್ಪರ್ಧೆ ಮುಗಿಸಿದಾಗ ನಿರಾಸೆ ಕಾಡುವುದು ಸಹಜ. ಆದರೆ ಕೈಗೆ ತಾಕಿದ ಪದಕ ಕೈಜಾರಿ ದಿಗ್ಭ್ರಮೆಗೊಳಿಸಿದರೆ ಆಗ ಆಗುವ ನೋವು, ಹತಾಶೆ ಅಷ್ಟಿಷ್ಟಲ್ಲ. ವಿಪರ್ಯಾಸವೆಂದರೆ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಇಂಥದ್ದೇ 6 ನಿದರ್ಶನಗಳಿಗೆ ಭಾರತ ಸಾಕ್ಷಿಯಾಗಿದೆ. ಸಿಕ್ಕೇಬಿಟ್ಟಿತು ಎಂದುಕೊಳ್ಳುವಷ್ಟರಲ್ಲಿ 6 ಪದಕಗಳು ಭಾರತದ ಕೈತಪ್ಪಿ ಹೋಗಿವೆ. ಹೀಗೆ ಕೈ ಜಾರಿದ ಆ 6 ಪದಕಗಳ ಚುಟುಕು ವಿವರ ಇಲ್ಲಿವೆ..

1.4 ಅಂಕ ಕಡಿಮೆಯಾಗಿ ಕಂಚು ಕೈಚೆಲ್ಲಿದ ಅರ್ಜುನ್‌ ಬಬುತ
ಪ್ಯಾರಿಸ್‌ ಒಲಿಂಪಿಕ್ಸ್‌ ಆರಂಭದಲ್ಲಿ ಶೂಟರ್‌ ಅರ್ಜುನ್‌ ಬಬುತ ಪದಕದಾಸೆ ಮೂಡಿಸಿದ್ದರು. ಪುರುಷರ 10 ಮೀ. ಏರ್‌ ರೈಫ‌ಲ್‌ನಲ್ಲಿ ಫೈನಲ್‌ಗೇರಿದ್ದ ಅವರ ಬಗ್ಗೆ ಪದಕ ನಿರೀಕ್ಷೆ ಹೆಚ್ಚಾಗಿತ್ತು. ಆದರೆ ಅಂತಿಮವಾಗಿ 208.4 ಅಂಕ ಗಳಿಸಿದ 25 ವರ್ಷದ ಅರ್ಜುನ್‌, 4ನೇ ಸ್ಥಾನ ಗಳಿಸಿ ನಿರಾಸೆಗೀಡಾ­ಗಿದ್ದರು. ಇನ್ನು ಕೇವಲ 1.4 ಅಂಕ ಗಳಿಸಿದ್ದರೆ ಅರ್ಜುನ್‌ ತೃತೀಯ ಸ್ಥಾನಿಯಾಗಿ ಕಂಚಿನ ಪದಕಕ್ಕೆ ಮುತ್ತಿಕ್ಕಬಹುದಿತ್ತು. ಆದರೆ ಫೈನಲ್‌ನಲ್ಲಿ 209.4 ಅಂಕ ಗಳಿಸಿದ ಕ್ರೊವೇಶಿಯಾದ ಮಾರಿಸಿಸ್‌ಗೆ ಕಂಚು ಒಲಿಯಿತು. ಇತ್ತ ನಿರೀಕ್ಷೆ ಯಲ್ಲಿದ್ದ ಭಾರತೀಯರು ನಿರಾಸೆ ಅನುಭವಿಸುವಂತಾಯಿತು.

ಬಿಲ್ಗಾರಿಕೆಯಲ್ಲಿ ಅಂಕಿತಾ, ಧೀರಜ್‌ ಮಿಶ್ರ ಜೋಡಿಗೆ ನಿರಾಸೆ

ಈ ಒಲಿಂಪಿಕ್ಸ್‌ನಲ್ಲಿ ಬಿಲ್ಗಾರಿಕೆ ವಿಭಾಗದಲ್ಲಿ ಮೊದಲ ಬಾರಿ ಭಾರತಕ್ಕೆ ಪದಕ ಸಿಗುವುದರಲ್ಲಿತ್ತು. ಆರ್ಚರಿ ಮಿಶ್ರ ತಂಡ ಸ್ಪರ್ಧೆಯಲ್ಲಿ ಅಂಕಿತಾ ಭಕತ್‌ ಮತ್ತು ಧೀರಜ್‌ ಬೊಮ್ಮದೇವರ ಪದಕ ಗೆಲುವಿಗೆ ಬಹಳ ಹತ್ತಿರಕ್ಕೆ ಬಂದಿದ್ದರು. ಆದರೆ ಕಂಚಿನ ಪದಕಕ್ಕಾಗಿ ನಡೆದ ಸ್ಪರ್ಧೆಯಲ್ಲಿ ಈ ಜೋಡಿ ಅಮೆರಿಕದ ಬ್ರ್ಯಾಡಿ ಎಲಿಸನ್‌ ಮತ್ತು ಕೇಸಿ ಕಾಫ್ಹೋಲ್ಡ್‌ ಜೋಡಿ ವಿರುದ್ಧ 6-2 ಅಂತರಿಂದ ಸೋತು ಕಂಚಿನ ಪದಕ ಕೈಚೆಲ್ಲಿತ್ತು. ಸ್ಪರ್ಧೆಗೂ ಮುನ್ನ ನಿರೀಕ್ಷೆ ಹುಟ್ಟಿಸಿರದ ಅಂಕಿತಾ-ಧೀರಜ್‌ ಜೋಡಿ ಕಂಚಿನ ಪದಕದ ಸ್ಪರ್ಧೆ ಪ್ರವೇಶಿಸಿದಾಗ ನಿರೀಕ್ಷೆ ಮೂಡಿಸಿತ್ತು. ಆದರೆ ಈ ನಿರೀಕ್ಷೆ ಹುಸಿಯಾಗಿದೆ.

ಐತಿಹಾಸಿಕ ಸಾಧನೆ ತಪ್ಪಿಸಿ­ಕೊಂಡ ಶೂಟರ್‌ ಭಾಕರ್‌
ಮಹಿಳೆಯರ ವೈಯಕ್ತಿಕ ವಿಭಾಗದ 10 ಮೀ. ಏರ್‌ ಪಿಸ್ತೂಲ್‌ ಮತ್ತು ಸರಬೊjàತ್‌ ಸಿಂಗ್‌ ಜತೆ ಸೇರಿ 10 ಮೀ. ಏರ್‌ ಪಿಸ್ತೂಲ್‌ ಮಿಶ್ರ ತಂಡ ಸ್ಪರ್ಧೆಯಲ್ಲಿ 2 ಕಂಚಿನ ಪದಕಗಳನ್ನು ಗೆದ್ದಿದ್ದ ಮನು ಭಾಕರ್‌ಗೆ ಮತ್ತೂಂದು ಕಂಚು ಗೆಲ್ಲುವ ಅವಕಾಶವಿತ್ತು. ಆದರೆ ಮಹಿಳೆಯರ 25 ಮೀ. ಪಿಸ್ತೂಲ್‌ ವಿಭಾಗದಲ್ಲಿ ಫೈನಲ್‌ಗೇರಿದ್ದ ಭಾಕರ್‌, ಕಂಚು ಗೆಲ್ಲುವಲ್ಲಿ ವಿಫ‌ಲರಾದರು. 28 ಅಂಕ ಗಳಿಸಿ 4ನೇ ಸ್ಥಾನದಲ್ಲಿ ಸ್ಪರ್ಧೆ ಮುಗಿಸಿದರು. 31 ಅಂಕ ಗಳಿಸಿದ ಹಂಗೆರಿಯ ವೆರೋನಿಕಾಗೆ ಕಂಚು ಲಭಿಸಿತು. ಭಾಕರ್‌ ಈ ಪದಕ ಗೆದ್ದಿದ್ದರೆ ಒಂದೇ ಒಲಿಂಪಿಕ್ಸ್‌ನಲ್ಲಿ 3 ಪದಕಗಳನ್ನು ಗೆದ್ದ ಭಾರತದ ಮೊದಲ ಆ್ಯತ್ಲೀಟ್‌ ಆಗುತ್ತಿದ್ದರು.

1 ಅಂಕದಿಂದ ಶೂಟಿಂಗ್‌ನ ಮತ್ತೂಂದು ಪದಕ ಜಸ್ಟ್‌ ಮಿಸ್‌!
ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಭಾರತದ ಶೂಟಿಂಗ್‌ ವಿಭಾಗದಲ್ಲಿ ಭಾರತಕ್ಕೆ 3 ಕಂಚಿನ ಪದಕಗಳು ಕೈತಪ್ಪಿ ಹೋಗಿವೆ. ಅದೂ ಕೂಡ ಗೆಲುವಿಗೆ ಒಂದು ಹೆಜ್ಜೆ ಬಾಕಿಯಿರುವಾಗ ಪದಕ ಕೈಜಾರಿರುವುದು ವಿಪರ್ಯಾಸ. ಈ ಸೋಲಿನ ಸಾಲಿಗೆ ಶೂಟಿಂಗ್‌ ಸ್ಕೀಟ್‌ ಮಿಶ್ರ ತಂಡ ವಿಭಾಗದಲ್ಲಿ ಮಹೇಶ್ವರಿ ಚೌಹಾಣ್‌, ಅನಂತ್‌ಜೀತ್‌ ನರುಕ ಕಳೆದುಕೊಂಡ ಕಂಚೂ ಸೇರಿದೆ. ಆರಂಭದಲ್ಲಿ ಅಗ್ರ 3ರೊಳಗೆ ಸ್ಥಾನ ಕಾಯ್ದುಕೊಂಡಿದ್ದ ಭಾರತ ಜೋಡಿ ಅಂತಿಮವಾಗಿ 43 ಅಂಕ ಗಳಿಸಿ ನಾಲ್ಕನೇ ಸ್ಥಾನಕ್ಕೇ ಜಾರಿತು. ಮಹೇಶ್ವರಿ-ಅನಂತ್‌ಜೀತ್‌ಗಿಂತ 1 ಹೆಚ್ಚಿಗೆ ಅಂಕ, ಅಂದರೆ 44 ಅಂಕ ಗಳಿಸಿದ ಚೀನ ಜೋಡಿ ಕಂಚು ಜಯಿಸಿತು.

ಇದ್ದರೂ ನಿರಾಸೆ ಮೂಡಿಸಿದ ಲಕ್ಷ್ಯ ಸೇನ್‌
ಬ್ಯಾಡ್ಮಿಂಟನ್‌ ತಾರೆ ಪಿವಿ ಸಿಂಧು ಕೂಟದಿಂದ ಹೊರ ಬಿದ್ದ ಬಳಿಕ ಭಾರತಕ್ಕೆ ಪದಕದ ಆಸೆ ಮೂಡಿಸಿದ್ದವರೆಂದರೆ ಅದು 22 ವರ್ಷದ ಲಕ್ಷ್ಯ ಸೇನ್‌. ಸೆಮಿಫೈನಲ್‌ನಲ್ಲಿ ಡೆನ್ಮಾರ್ಕ್‌ನ ವಿಕ್ಟರ್‌ ಆಕ್ಸೆಲ್‌ಸನ್‌ ವಿರುದ್ಧ 22-20, 21-14 ಅಂತರದಿಂದ ಸೋತರೂ ಕೂಡ ಅವರು ಕಂಚು ಗೆಲ್ಲುವ ಭರವಸೆ ಮೂಡಿಸಿದ್ದರು. ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಮಲೇಷ್ಯಾದ ಲೀ ಜೀ ಜಿಯಾ ವಿರುದ್ಧ ಲಕ್ಷ್ಯಆರಂಭಿಕ ಸೆಟ್‌ ಅನ್ನು 13-21ರಿಂದ ಗೆದ್ದರು. ಆದರೆ ಎರಡನೇ ಸೆಟ್‌ನಲ್ಲಿ ಆರಂಭಿಕ ಮುನ್ನಡೆ ಸಾಧಿಸಿದ್ದರೂ ಕೂಡ ಅಂತಿಮವಾಗಿ 21-16ರಿಂದ ಸೋತು ಆಘಾತ ಮೂಡಿಸಿದರು.

ವೇಟ್‌ಲಿಫ್ಟರ್‌ ಮೀರಾಗೆ 1 ಕೆ.ಜಿ.ಯಿಂದ ಕೈಜಾರಿದ ಕಂಚು
ಕಳೆದ ಟೋಕಿಯೊ ಒಲಿಂಪಿಕ್ಸ್‌ನ ವೇಟ್‌ ಲಿಫ್ಟಿಂಗ್‌ನಲ್ಲಿ ಭಾರತಕ್ಕೆ ಬೆಳ್ಳಿಯ ಮೆರಗು ತಂದಿದ್ದ ಮೀರಾಬಾಯಿ ಚಾನು ಕೂಡ ಈ ಒಲಿಂಪಿಕ್ಸ್‌ನಲ್ಲಿ ಪದಕ ತರುವ ನಿರೀಕ್ಷೆಯಿತ್ತು. ಆದರೆ ಕಂಚಿನ ಪದಕಕ್ಕೆ ಸನಿಹ ತೆರಳಿದ್ದ ಮೀರಾಬಾಯಿ, ಕೇವಲ 1 ಕೆಜಿ ಕಡಿಮೆ ಭಾರ ಎತ್ತಿ ಪದಕ ಕೈತಪ್ಪಿಸಿಕೊಂಡರು. ಮಹಿಳೆಯರ 49 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಮೀರಾ, ಸ್ನ್ಯಾಚ್‌ 88 ಕೆಜಿ ಮತ್ತು ಕ್ಲೀನ್‌ ಆ್ಯಂಡ್‌ ಜರ್ಕ್‌ 111 ಕೆಜಿ ಸೇರಿ ಒಟ್ಟು 199 ಕೆಜಿ ಭಾರ ಎತ್ತಿ 4ನೇ ಸ್ಥಾನ ಪಡೆದರು. ಈ ವಿಭಾಗದಲ್ಲಿ ಒಟ್ಟು 200 ಕೆಜಿ ತೂಕ ಎತ್ತಿದ ಥಾಯ್ಲೆಂಡ್‌ನ‌ ಸುರೋಚನಾ ಕಾಂಬಾವೊ ಕಂಚು ತನ್ನದಾಗಿಸಿಕೊಂಡರು.

ಟಾಪ್ ನ್ಯೂಸ್

MU-Univerasity

Virtual Meeting: ಮಂಗಳೂರು ವಿಶ್ವವಿದ್ಯಾನಿಲಯ ಶೈಕ್ಷಣಿಕ ಮಂಡಳಿ ಸಭೆ

Kapu2

ISPRL Programme: ಪಾದೂರು ಜಲ್ಲಿ ಕ್ರಷರ್‌: ಸರ್ವೆಗೆ ಬಂದ ಅಧಿಕಾರಿಗಳಿಗೆ ತಡೆ

THIRU

MAHE University: ವಾಗ್ಶಾ ವಿದ್ಯಾರ್ಥಿಗೆ ವಿಶ್ವ ಪಾಕಶಾಲೆ ಶ್ರೇಷ್ಠತೆ ಗರಿ

Tarpana

Konkani Movie: “ತರ್ಪಣ’ ಚಲನಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ

Shourya

Dharmasthala: ಶೌರ್ಯ ಯೋಧರು ಆಪತ್ಕಾಲದ ಆಪ್ತ ರಕ್ಷಕರು: ಡಾ.ಡಿ.ವೀರೇಂದ್ರ ಹೆಗ್ಗಡೆ

Kapu-Kalahasti

Chaturmasya: ವಿಶ್ವಕರ್ಮ ಮ್ಯೂಸಿಯಂ ಸ್ಥಾಪನೆ ಗುರಿ: ಶ್ರೀ ಕಾಳಹಸ್ತೇಂದ್ರ ಸ್ವಾಮೀಜಿ

DC-CHILD

Child safety: ಮಕ್ಕಳ ರಕ್ಷಣ ಕಾಯ್ದೆಗಳ ಪರಿಣಾಮಕಾರಿ ಅನುಷ್ಠಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Duleep Trophy Cricket: ಇಂದಿನಿಂದ 3ನೇ ಸುತ್ತಿನ ಸ್ಪರ್ಧೆ

Duleep Trophy Cricket: ಇಂದಿನಿಂದ 3ನೇ ಸುತ್ತಿನ ಸ್ಪರ್ಧೆ

Athletics: ದ.ಕ. ಜಿಲ್ಲೆ ಸಮಗ್ರ ಚಾಂಪಿಯನ್‌

Athletics: ದ.ಕ. ಜಿಲ್ಲೆ ಸಮಗ್ರ ಚಾಂಪಿಯನ್‌

Cricket: ಒಂದೇ ಫ್ರೇಮ್‌ನಲ್ಲಿ ಗಂಭೀರ್‌- ಕೊಹ್ಲಿ; ಹಳೆ ದಿನಗಳನ್ನು ಸ್ಮರಿಸಿದ ಸ್ನೇಹಿತರು

Cricket: ಒಂದೇ ಫ್ರೇಮ್‌ನಲ್ಲಿ ಗಂಭೀರ್‌- ಕೊಹ್ಲಿ; ಹಳೆ ದಿನಗಳನ್ನು ಸ್ಮರಿಸಿದ ಸ್ನೇಹಿತರು

T20 world cup 2024; ವನಿತೆಯರ ವಿಶ್ವಕಪ್‌ ನಿಧಿಯಲ್ಲಿ ಭಾರೀ ಏರಿಕೆ, ಸಮಾನ ಬಹುಮಾನ: ಐಸಿಸಿ

T20 world cup 2024; ವನಿತೆಯರ ವಿಶ್ವಕಪ್‌ ನಿಧಿಯಲ್ಲಿ ಭಾರೀ ಏರಿಕೆ, ಸಮಾನ ಬಹುಮಾನ: ಐಸಿಸಿ

Ranji Trophy: Samit Dravid in possible squad

Ranji Trophy: ಸಂಭಾವ್ಯ ತಂಡದಲ್ಲಿ ಸಮಿತ್‌ ದ್ರಾವಿಡ್‌

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

MU-Univerasity

Virtual Meeting: ಮಂಗಳೂರು ವಿಶ್ವವಿದ್ಯಾನಿಲಯ ಶೈಕ್ಷಣಿಕ ಮಂಡಳಿ ಸಭೆ

Kapu2

ISPRL Programme: ಪಾದೂರು ಜಲ್ಲಿ ಕ್ರಷರ್‌: ಸರ್ವೆಗೆ ಬಂದ ಅಧಿಕಾರಿಗಳಿಗೆ ತಡೆ

THIRU

MAHE University: ವಾಗ್ಶಾ ವಿದ್ಯಾರ್ಥಿಗೆ ವಿಶ್ವ ಪಾಕಶಾಲೆ ಶ್ರೇಷ್ಠತೆ ಗರಿ

Tarpana

Konkani Movie: “ತರ್ಪಣ’ ಚಲನಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ

Shourya

Dharmasthala: ಶೌರ್ಯ ಯೋಧರು ಆಪತ್ಕಾಲದ ಆಪ್ತ ರಕ್ಷಕರು: ಡಾ.ಡಿ.ವೀರೇಂದ್ರ ಹೆಗ್ಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.