ಕೆನಡಾದಲ್ಲಿ ರಸ್ತೆಗೆ ಭಾರತೀಯರ ಹೆಸರು
Team Udayavani, Feb 6, 2023, 6:45 AM IST
ಟೊರಾಂಟೋ: ಭಾರತದಿಂದ ಕೆನಡಾಕ್ಕೆ 1914ರಲ್ಲಿ ತೆರಳಿದ್ದ 376 ಭಾರತೀಯರ ಸ್ಮರಣಾರ್ಥ, ಕೆನಡಾ ಸರಕಾರ ಬ್ರಿಟಿಷ್ ಕೊಲಂಬಿಯಾದಲ್ಲಿರುವ ಅಬಾಟ್ಸ್ ಫೋರ್ಡ್ ನಗರದ ಒಂದು ರಸ್ತೆಗೆ “ಕೊಮಗಟ ಮಾರು ವೇ’ ಹೆಸರಿಡಲು ನಿರ್ಧರಿಸಲಾಗಿದೆ.
ಜಪಾನಿನ ಹಡಗು “ಕೊಮಗಟ ಮಾರು’ ಮೂಲಕ 376 ಮಂದಿ ಭಾರತೀಯರು ಕೆನಡಾಕ್ಕೆ ಆಶ್ರಯ ಬಯಸಿ ಬಂದಿದ್ದರು. ಆದರೆ ಜನಾಂಗೀಯ ನೀತಿ ಹಿನ್ನೆಲೆ ಅವರನ್ನು ವಾಪಸ್ ಕಳುಹಿಸಿದ ಅಮಾನವೀಯ ಘಟನೆ ನಡೆದಿತ್ತು. ಆ ಸಂದರ್ಭದಲ್ಲಿ ಹಡಗಿನಲ್ಲಿದ್ದ ಭಾರತೀಯರಿಗೆ ಆಹಾರ ಒದಗಿಸಿ, ನೆಲೆ ಕಲ್ಪಿಸುವಂತೆ ಬಾಟ್ಸ್ಫೋರ್ಡ್ನ ದಕ್ಷಿಣ ಏಷ್ಯಾದ ಸ್ಥಳೀಯ ಸಮುದಾಯಗಳು ಸಹಾಯಸ್ತ ಚಾಚಿದ್ದವು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.